ಪ್ಯಾಷನ್‌ಗಾಗಿ 54 ಲಕ್ಷ ರೂ. ವಾರ್ಷಿಕ ಸಂಬಳ ತ್ಯಜಿಸಿದ ಬೆಂಗಳೂರಿನ ಈ ವ್ಯಕ್ತಿ ಯಾರು?

ಸಂಬಳಕ್ಕಾಗಿ ಎಷ್ಟೋ ಜನ ತಮ್ಮ ಪ್ಯಾಷನ್‌ಗಳನ್ನ ತ್ಯಜಿಸಿ ಊರಿಂದ ಊರಿಗೆ ಹೋಗಿ ಕೆಲಸ ಮಾಡ್ತಿರ್ತಾರೆ. ಪ್ಯಾಷನ್‌ ಫಾಲೋ ಮಾಡಿದ್ರೆ ಆದಾಯ ಹೆಚ್ಚಿರುವುದಿಲ್ಲ ಎಂದು ತಮ್ಮನ್ನು ಹತ್ತು ಹಲವು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದ್ರೆ ಇಲ್ಲೊಬ್ಬರು ಬೆಂಗಳೂರಿನ ವ್ಯಕ್ತಿ ತಮ್ಮ 54 ಲಕ್ಷ ರೂ. ವಾರ್ಷಿಕ ಆದಾಯವನ್ನೇ ತ್ಯಜಿಸಿ ಈಗ ಮಾರಾಟ ಮಾಡುವುದು ಹೇಗೆ ಎಂದು ಮಾರ್ಗದರ್ಶನ ಮಾಡ್ತಿದ್ದಾರೆ.

ಬೆಂಗಳೂರು ಮೂಲದ ಪರಾಂತಪ್ ಚೌಧುರಿ ಅವರು ಆರು ತಿಂಗಳು ಹಿಂದೆ, ತಮ್ಮ ₹54 ಲಕ್ಷ ರೂ. ವಾರ್ಷಿಕ ಸಂಬಳದ ಹುದ್ದೆಯಾದ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಉದ್ಯೋಗವನ್ನ ತ್ಯಜಿಸಿ ಹೊಸ ವೃತ್ತಿ ದಾರಿಯ ಕಡೆ ಮುಖ ಮಾಡಿದ್ದಾರೆ. ಅವರು ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡು, ನಂತರ ತಮ್ಮ ಅನುಭವಗಳನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡು ಇತರರಿಗೆ ಮಾರ್ಗದರ್ಶನ ನೀಡಲು ಆರಂಭಿಸಿದರು.

ಪ್ಯಾಷನ್‌ಗಾಗಿ ಉದ್ಯೋಗ ತ್ಯಜಿಸಿದ ಈ ವ್ಯಕ್ತಿ ಯಾರು?

ನಂತರ ಈ ಕುರಿತು ಆಲೋಚಿಸಿದ ಅವರಿಗೆ ಒಂದು ಸಲಹಾ ವ್ಯವಹಾರದ ಕಲ್ಪನೆ ಬಂದಿತು. ಚೌಧುರಿಯವರು ಹಣ ಕೊಟ್ಟು ಜಾಹೀರಾತುಗಳನ್ನು ಬಳಸದೆ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಾರಾಟದ ಕಲೆ ಕಲಿಸಲು ನಿರ್ಧರಿಸಿದರು.

ಚೌಧರಿಯವರು ತಮ್ಮ 32 ವರ್ಷ ವಯಸ್ಸಿನಲ್ಲಿ 250ಕ್ಕೂ ಹೆಚ್ಚು ಸದಸ್ಯರ ಮಾರಾಟ ತಂಡವನ್ನು ಮುನ್ನಡೆಸಿದ್ದರು ಮತ್ತು ಸ್ಕ್ವೇರ್ ಯಾರ್ಡ್ಸ್ ಮತ್ತು ಬೈಜುಸ್‌ನಲ್ಲಿ ತಮ್ಮ ಏಳು ವರ್ಷಗಳ ವೃತ್ತಿಜೀವನದಲ್ಲಿ 5,000 ಕ್ಕೂ ಹೆಚ್ಚು ಮಾರಾಟಗಾರರಿಗೆ ತರಬೇತಿ ನೀಡಿದ ಅನುಭವ ಇವರಿಗಿದೆ. ಈ ಪರಿಣತಿ ಹೊಂದಿದ್ದ ಚೌಧರಿ ತಮ್ಮ ಡಿಜಿಟಲ್ ವ್ಯವಹಾರ ಮಾದರಿಯನ್ನೇ ಬಳಸಿಕೊಂಡು ಇದರ ಲಾಭ ಪಡೆಯಲು ಪ್ರಾರಂಭಿಸಿದರು.

ಅಲ್ಲದೆ ಈಗ ಗಂಟೆಗೆ 6,000 ರೂ. ಶುಲ್ಕ ವಿಧಿಸುವ ಮೂಲಕ, ಚೌಧರಿ ಅವರು ಈಗಾಗಲೇ ಹಲವಾರು ಕ್ಲೈಂಟ್‌ಗಳಿಗೆ ಸಹಿ ಹಾಕಿದ್ದಾರೆ ಮತ್ತು ಕಳೆದ ತಿಂಗಳು 1 ಲಕ್ಷಕ್ಕೂ ಹೆಚ್ಚು ಮಾಸಿಕ ರನ್ ರೇಟ್‌ ಕೂಡ ಇದೆ. ಅವರು ಒಬ್ಬರೇ ವ್ಯವಹಾರದ ಪ್ರತಿಯೊಂದು ಅಂಶವನ್ನು ನಿರ್ವಹಿಸುವುದರಿಂದ ಹೆಚ್ಚಿನ ಮಾರ್ಜಿನ್ ಹೊಂದಿಸಲಾಗಿದೆ.

ಮನಿಕಂಟ್ರೋಲ್ ಚೌಧರಿ ಅವರೊಂದಿಗೆ ಅವರ ಸ್ಥಾಪಿತ ವ್ಯಾಪಾರ ಮಾದರಿ, ಬೆಳವಣಿಗೆಯ ತಂತ್ರ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಖುದ್ದು ಅವರೇ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಚೌಧರಿ ನೀಡುತ್ತಿರುವ ಮೂರು ಪ್ರಮುಖ ಸೇವೆಗಳು: ವ್ಯಕ್ತಿಗಳಿಗೆ ಮಾರಾಟ ತರಬೇತಿ, ಕಂಪನಿಗಳಿಗೆ ತರಬೇತಿ ಮತ್ತು ಅವರ ಮಾರಾಟ ನಿರ್ವಹಣಾ ಕಾರ್ಯಕ್ರಮ ಅಡಿಯಲ್ಲಿ ಕಂಪನಿಗಳಿಗೆ ವ್ಯಾಪಾರದ ಕುರಿತು ಸಲಹೆಗಳನ್ನ ನೀಡುತ್ತಿದ್ದಾರೆ. ಇನ್ನು ಕಿಕ್ಕಿರಿದ ಕೋಚಿಂಗ್ ಉದ್ಯಮದ ಹೊರತಾಗಿಯೂ, ಚೌಧರಿ ಭಾರತದಲ್ಲಿ ಮಾರಾಟ ತರಬೇತಿಯ ಮೇಲೆ ಕೇಂದ್ರೀಕರಿಸುವ ಕೆಲವರಲ್ಲಿ ಒಬ್ಬರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಭಾರತದಲ್ಲಿ ನಾನು ಒಬ್ಬನೇ ಒಬ್ಬನೇ 1:1 ಮಾರಾಟದ ತರಬೇತಿಯನ್ನು ಲೈವ್ ಆಗಿ ಆರು ವಾರಗಳವರೆಗೆ ನೀಡುತ್ತಿದ್ದೇನೆ, ಇದು ಮೂಲ 0-1 ಮಾರಾಟವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಹೈವ್ ಸ್ಕೂಲ್ ಹೋಲಿದರೆ, ಚೌಧುರಿಯ ಸೇವೆಗಳು ವೈಯಕ್ತಿಕ ಬದ್ಧತೆ ಮತ್ತು ತಕ್ಕಮಟ್ಟಿನ ಗಮನವನ್ನು ನೀಡುವ ಮೂಲಕ ವ್ಯತ್ಯಾಸವನ್ನು ತರುತ್ತವೆ. ಹೈವ್ ಸ್ಕೂಲ್ ಮತ್ತು ಇತರ ಗುಂಪು-ಆಧಾರಿತ ಕಾರ್ಯಕ್ರಮಗಳು ಸಾಮಾನ್ಯವಾಗಿ ಗೌರವ ವಿಧಾನದಲ್ಲಿ ನಡೆಯುತ್ತವೆ ಮತ್ತು ಹೆಚ್ಚಿನ ವೆಚ್ಚವನ್ನು ಒಳಗೊಂಡಿರುತ್ತವೆ. ಆದರೆ, ಚೌಧುರಿ ತನ್ನ ಪರಿಹಾರಗಳಲ್ಲಿ ಪ್ರತಿಯೊಬ್ಬ ಗ್ರಾಹಕನ ಅಗತ್ಯಗಳನ್ನು ವಿಭಿನ್ನವಾಗಿ ಗಮನಿಸಿ, ತರಗತಿಗಳು ಮತ್ತು ಸಲಹೆಗಳು ನೀಡುತ್ತಾರೆ, ಇದರಿಂದ ಗ್ರಾಹಕರು ಇನ್ನಷ್ಟು ವೈಯಕ್ತಿಕ ಅನುಭವವನ್ನು ಪಡೆಯಲು ಸಹಾಯಕವಾಗಿದೆ.

ಕ್ಲೈಂಟ್‌ಗಳನ್ನು ಹುಡುಕುವ ಅವರ ವಿಧಾನ ಕೂಡ ಅವರ ವೃತ್ತಿಜೀವನದಂತೆ . ಅವರು ಸಂಪೂರ್ಣವಿಭಿನ್ನವಾಗಿದೆ. ಲಿಂಕ್ಡ್‌ಇನ್‌ನಿಂದ ಲೀಡ್‌ಗಳನ್ನು ಮತ್ತು ಅವರ ಸ್ಥಾಪಿತ ವ್ಯಾಪಾರ ಮಾದರಿಗಾಗಿ ವೈಯಕ್ತಿಕ ಉಲ್ಲೇಖಗಳನ್ನು ಹೊಂದಿದ್ದಾರೆ. ಅಲ್ಲದೆ ನಾನು ಜಾಹೀರಾತುಗಳನ್ನು ಪ್ರದರ್ಶಿಸುವುದಿಲ್ಲ. ಲಿಂಕ್ಡ್‌ಇನ್‌ನಲ್ಲಿ ಬರೆಯುವುದು ನನ್ನ ವ್ಯವಹಾರಕ್ಕೆ ಚಾಲನೆ ನೀಡುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅವರ ವ್ಯವಹಾರದ 80% ಲಿಂಕ್ಡ್‌ಇನ್‌ನಿಂದ ಮತ್ತು ಉಳಿದವು ರೆಫರಲ್‌ಗಳಿಂದ ಬರುತ್ತಿದೆ. ಹೀಗಾಗಿ ಚೌಧರಿ ಅವರು ಭವಿಷ್ಯದಲ್ಲಿ ಜಾಹೀರಾತುಗಳನ್ನು ಪ್ರಯೋಗಿಸುವ ಬಗ್ಗೆ ಆಲೋಚಿಸಿದ್ದಾರೆ. ನಾನು ನಂತರ ಇಂತಹ ಪ್ರಯೋಗಗಳ ಬಗ್ಗೆ ಗಮನ ಹರಿಸಬಹುದು, ಆದರೆ ಜಾಹೀರಾತುಗಳ ಮೂಲಕ ಸ್ಕೇಲಿಂಗ್ ಮಾಡಲು ನಾನು ಬಯಸುವುದಿಲ್ಲ. ಸರಿಯಾದ ರೀತಿಯಲ್ಲಿ ಬೆಳೆಯುವುದು ಮತ್ತು ಈ ಹೆಚ್ಚು ಕಾರ್ಯಗತನಾಗುವುದು ನನ್ನ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇನ್ನು ಅವರು ತಮ್ಮ ವೃತ್ತಿಜೀವನದಲ್ಲಿ ಹೊಸ ಬದಲಾವಣೆಯನ್ನು ಸ್ವಾಗತಿಸುತ್ತಾರೆಯೇ ಎಂಬುದರ ಕುರಿತು ಸಹ ಅವರು ಹೇಳಿದ್ದಾರೆ. ಇನ್ನು ಅದನ್ನು ನಿಜವಾಗಿಯೂ ಇಷ್ಟಪಡುತ್ತಾರೆ ಮತ್ತು ಅವರ ಸ್ವಂತ ಸಮಯವನ್ನು ಹೊಂದುವುದು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ನನ್ನ ಸಮಯವನ್ನು ನಾನೇ ಹೊಂದುವ ಸ್ವಾತಂತ್ರ್ಯ ನನಗೆ ಬೇಕಿತ್ತು. ಇದು ನನ್ನ ಕಾರ್ಪೊರೇಟ್ ಕೆಲಸವನ್ನು ಬಿಡಲು ಏಕೈಕ ಕಾರಣವಾಗಿತ್ತು. ಈಗ, ನಾನು ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನನಗಾಗಿ ಅಥವಾ ನನ್ನ ಗ್ರಾಹಕರಿಗಾಗಿ ನಾನು ಪ್ರತಿ ಸವಾಲುಗಳನ್ನು ಹೊಸ ಸಾಹಸದಂತೆ ಎದುರಿಸುತ್ತೇನೆ ಎಂದು ಚೌಧರಿ ಹೇಳಿದರು.

ಗ್ರಾಹಕರು

ಅವರು ತಮ್ಮ ಕ್ಲೈಂಟ್‌ಗಳ ಬಗ್ಗೆ ನಿರ್ದಿಷ್ಟ ನಿಲುವನ್ನ ಹೊಂದಿದ್ದಾರೆ.ಮತ್ತು ಕ್ಲೈಂಟ್‌ಗಳು ಅಥವಾ ಸರಿಯಲ್ಲದ ವಿದ್ಯಾರ್ಥಿಗಳೊಂದಿಗೆ ಅವರು ಕೆಲಸ ಮಾಡುವುದಿಲ್ಲ. ಅಂದರೆ ಕಡಿಮೆ ವ್ಯಾಪಾರ ಮಾಡುವುದರ ಮೂಲಕ ಉತ್ತಮ ವಿಮರ್ಶೆಗಳನ್ನು ಅವರು ಹಂಚಿಕೊಳ್ಳಲು ಬಯಸುತ್ತಾರೆ.

ಇನ್ನು ಅವರ 1:1 ಕೋಚಿಂಗ್ ಸ್ಲಾಟ್‌ಗಳು ನವೆಂಬರ್‌ಗೆ ವೇಗವಾಗಿ ಭರ್ತಿಯಾಗುತ್ತಿವೆ. ಇದಕ್ಕೆ ಕಾರಣ ಲಿಂಕ್ಡ್‌ಇನ್‌ನ ಶಕ್ತಿ ಮತ್ತು ಸ್ಥಿರವಾದ ಮೌಲ್ಯ ಿದಕ್ಕೆ ಸೇರ್ಪಡೆಯಾಗಿದೆ ಎಂದು ಅವರು ಹೇಳುತ್ತಾರೆ.

ಭವಿಷ್ಯದ ಯೋಜನೆಗಳು

ಚೌಧರಿ ಅವರಿಗೆ, ಉದ್ಯಮಶೀಲತೆ ಎನ್ನುವುದು ಬಹು ಬೇಗ ಹಣಗಳಿಸುವುದಕ್ಕಾಗಿ ಅಲ್ಲ ಆದರೆ ಸುಸ್ಥಿರ ಬೆಳವಣಿಗೆ ಇದಾಗಿದೆ. ಅವರು ಎಲ್ಲಾ ಸನ್ನೀವೇಶಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಾರೆ. ಅವರ ಮಾರ್ಕೆಟಿಂಗ್ ಶೈಲಿ, ವಿಷಯ ರಚನೆ ಮತ್ತು ಕೋರ್ಸ್ ವಿನ್ಯಾಸ-ಕನಿಷ್ಠ ನಿರ್ವಹಣಾ ವೆಚ್ಚವನ್ನು ಸೂಚಿಸುತ್ತದೆ. ಗುರಿಗಳ ಆಧಾರದ ಮೇಲೆ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ನಾನು ಕಲಿತಿದ್ದೇನೆ ಎಂದು ಲೇಖಕ ಜೇಮ್ಸ್ ಕ್ಲಿಯರ್ ಅವರನ್ನ ಉಲ್ಲೇಖಿಸಿ ಅವರು ಹೇಳಿದ್ದಾರೆ.

ಬೆಂಗಳೂರಿನ ಹೆಚ್ಚಿನ ಜೀವನ ವೆಚ್ಚವು ತಮ್ಮ ಉಳಿತಾಯದಲ್ಲೇ ಕಳೆದುಹೋಯಿತು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಇನ್ನು ಈ ವಿಚಾರ ಮುಂದಿನ ಒಂದು ವರ್ಷದಲ್ಲಿ ಬದಲಾಗಲಿದೆ ಎಂಬ ವಿಶ್ವಾಸ ಅವರದು. ನನಗೆ ಏಳು ವರ್ಷಗಳ ಆರ್ಥಿಕ ರನ್‌ವೇ ಇದೆ. ಕಡಿಮೆ ವ್ಯಾಪಾರವಾಗಿದ್ದರೂ ಕೂಡ ಸರಿಯಾದ ಗ್ರಾಹಕರೊಂದಿಗೆ ಕೆಲಸ ಮಾಡುವುದರ ಮೇಲೆ ನನ್ನ ಪೂರ್ಣ ಗಮನವಿದೆ. ಹಾಗೆ ಇಲ್ಲಿ ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯವಾಗಿದೆ ಎಂದು ಅಭಿಪ್ರಯಾ ಪಟ್ಟಿದ್ದಾರೆ.

ಚೌಧರಿ ಅವರಿಗರ ಯುನಿಕಾರ್ನ್ ನಿರ್ಮಿಸುವ ಅಥವಾ ಲಕ್ಷಾಂತರ ಹಣವನ್ನು ಸಂಗ್ರಹಿಸುವ ಉದ್ದೇಶ ಇಲ್ಲ. ಅವರ ಗುರಿ ಬಹಳ ಸರಳವಾದದ್ದು, ಡಿಜಿಟಲ್ ಮತ್ತು ಲಾಭದಾಯಕ ವ್ಯಾಪಾರ. ನನ್ನ ಸಮಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾನು ಪ್ರೀತಿಸುತ್ತೇನೆ. ಕೋಚಿಂಗ್ ಸೆಷನ್‌ನಲ್ಲಿ ಕ್ಲೈಂಟ್‌ನ ಮುಖದಲ್ಲಿ ಸಂತೋಷವನ್ನು ಕಾಣುವುದು ನನಗೆ ಖುಷಿಕೊಡುತ್ತದೆ.

ಚೌಧರಿ ಅವರ ಕಾರ್ಪೊರೇಟ್ ಜೀವನ

ಸ್ಟಾರ್ಟ್‌ಅಪ್‌ಗಳಲ್ಲಿ ಏಳು ವರ್ಷಗಳ ಕಾಲ ಹೆಚ್ಚಿನ ಒತ್ತಡದ ನಿರ್ವ್ಲೇ ಕಾರ್ಯ ನಿರ್ವಹಿಸಿದ ಚೌಧರಿ ಅವರಿಗೆ ಮೊದಲು ಬಹಳ ಕಷ್ಟವಾಗುತ್ತಿತ್ತು. ಅಲ್ಲದೆ ಇವರು ಮೂಲತಃ ಕೋಲ್ಕತ್ತಾದವರು. ಸಂಪೂರ್ಣ ವೃತ್ತಿ ಜೀವನದಲ್ಲೇ ಮುಳುಗಿ ಹೋಗಿದ್ದ ಇವರಿಗೆ ವೈಯಕ್ತಿಕ ಬೆಳವಣಿಗೆಗೆ ಅಥವಾ ಪ್ರೀತಿಪಾತ್ರರೊಂದಿಗಿನ ಸಮಯಕ್ಕೆ ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ.

ಆರು ತಿಂಗಳ ಹಿಂದೆ, ನಾನು ಉತ್ತಮ ಸಂಬಳ ನೀಡುವ ಕೆಲಸವನ್ನು ತ್ಯಜಿಸಿದೆ. ಆದರೆ ಇಂದು ನಾನು ನನಗೆ ಸ್ವಾತಂತ್ರ್ಯ ಮತ್ತು ಸ್ಥಿರವಾದ ಪ್ರಗತಿಯನ್ನು ನೀಡುವ ವ್ಯಾಪಾರವನ್ನು ನಾನು ನಿರ್ಮಿಸಿದ್ದೇನೆ ಎಂದು ಅವರು ಹೇಳಿದರು.

ನಾನು ನನ್ನ ಕೆಲಸದಲ್ಲೇ ಉಳಿದುಕೊಂಡಿದ್ದರೆ ಕಳೆದ 90 ದಿನಗಳಲ್ಲಿ ನಾನು 9.81 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದೆ. ಆದರೆ ನಾನು ಈ ಮೂರು ತಿಂಗಳುಗಳಲ್ಲಿ ಹಿಂದಿನ ಮೂರು ವರ್ಷಗಳಲ್ಲಿ ಹೆಚ್ಚು ಬದುಕಿದ್ದೇನೆ. ಹಾಗೆ ಹಣದಿಂದ ಹೆಚ್ಚಿನ ವಸ್ತುಗಳನ್ನು ಖರೀದಿಸಬಹುದು, ಆದರೆ ಎಲ್ಲವೂ ಅಲ್ಲ ಎಂದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+