ಸಿನಿಮಾ ನೋಡಿ ಮನರಂಜನೆ ಪಡೆಯಬೇಕು ಎಂದು ನಾವು ಸಿನಿಮಾ ಥಿಯೇಟರ್ ಗೆ ಹೋಗುತ್ತೇವೆ. ಐಷರಾಮಿ ಮಲ್ಟಿಫೆಕ್ಸ್ ನಲ್ಲಿ ಟಿಕೆಟ್ ದರವೂ ದುಬಾರಿ. ಆದರೆ ಸಿನಿಮಾ ಶುರು ಆಗೋ ಮುಂಚೆನೇ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವಂತೆ ಜಾಹಿರಾತುಗಳು ದೊಡ್ಡ ಪರದೆಯಲ್ಲಿ ಪ್ರದರ್ಶನವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿತ್ರ ಆರಂಭವಾಗದೇ ಮನಸ್ಸಿಗೆ ಕಿರಿಕಿರಿ ಅನಿಸಿದ್ರು ಸಿನಿಮಾ ಕಂಡ ಜೋಶ್ ನಲ್ಲಿ ನಮ್ಮ ಸಮಯ ವ್ಯರ್ಥವಾಗಿದ್ದು, ಕಿರಿಕಿರಿ ಉಂಟಾಗಿದ್ದು ಮರೆತುಹೋಗಿರುತ್ತೇವೆ. ಆದರೆ ಸಮಯದ ಲೆಕ್ಕಚಾರ ಹಾಕಿಕೊಂಡು ಬಂದು ಸಿನಿಮಾ ಥಿಯೇಟರ್ ನಲ್ಲಿ ಕುಳಿತು ಸರಿಯಾದ ಅವಧಿಗೆ ಪ್ರದರ್ಶನ ಆರಂಭವಾಗದಿದ್ರೆ ಅದರಿಂದ ಆಗುವ ಸಮಸ್ಯೆ ಹೇಳೋದು ಯಾರಲ್ಲಿ ? ಆದರೆ ಇಂತಹ ಸಮಸ್ಯೆಯನ್ನು ಎದುರಿಸಿದ ಬೆಂಗಳೂರಿನ ಯುವಕನೋರ್ವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಬುಕ್‌ಮೈಶೋ ವಿರುದ್ಧ ಪ್ರಕರಣ ದಾಖಲಿಸಿ ಗೆಲುವು ಸಾಧಿಸಿದ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.
ಬೆಂಗಳೂರಿನ 30 ವರ್ಷದ ಅಭಿಷೇಕ್ ಎಂಆರ್ ಎಂಬವರು ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಿದ ಹಾಗೂ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ದೀರ್ಘ ಜಾಹೀರಾತುಗಳನ್ನು ಪ್ರದರ್ಶಿಸಿ "ಮಾನಸಿಕ ನೋವು" ನೀಡಿದ್ದು ಮಾತ್ರವಲ್ಲದೇ ಸರಿಯಾದ ಸಮಯಕ್ಕೆ ಸಿನಿಮಾ ಆರಂಭ ಮಾಡದೇ ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿದರು ಆರೋಪಿಸಿ ಪಿವಿಆರ್ ಸಿನಿಮಾಸ್-ಐನಾಕ್ಸ್ ವಿರುದ್ದ ಬೆಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪಿ.ವಿ.ಆರ್ ಸಿನಿಮಾಸ್ ಗೆ ದಂಡ ವಿಧಿಸಿದೆ. ಅಭಿಷೇಕ್ ಅವರ 25 ನಿಮಿಷಗಳ ಸಮಯವನ್ನು "ವ್ಯರ್ಥ" ಮಾಡಿದ್ದಕ್ಕಾಗಿ ಮೊಕದ್ದಮೆ ಹೂಡಿದ ನಂತರ ಪರಿಹಾರದ ರೂಪದಲ್ಲಿ 65,000 ರೂ.ಗಳನ್ನು ಪಡೆದುಕೊಂಡಿದ್ದಾರೆ.

2023 ರ ಡಿ. 26ರಂದು 'ಸ್ಯಾಮ್ ಬಹದ್ದೂರ್' ಚಿತ್ರಕ್ಕಾಗಿ ಸಂಜೆ 4.05 ರ ಪ್ರದರ್ಶನಕ್ಕಾಗಿ ಮೂರು ಟಿಕೆಟ್‌ಗಳನ್ನು ಬುಕ್ ಮಾಡಿದ್ದಾಗಿ ಅಭಿಷೇಕ್ ಎಂಆರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಸಿನಿಮಾ ಸಂಜೆ 6.30 ಕ್ಕೆ ಮುಗಿಯಬೇಕಿತ್ತು ಇದಾದ ಬಳಿಕ ನಾನು ತನ್ನ ಕೆಲಸಕ್ಕೆ ಹೋಗಬೇಕು ಎಂದು ಯೋಚಿಸಿದ್ದೆ. ಆದರೆ ಸಿನಿಮಾಗಳ ಜಾಹೀರಾತುಗಳು ಮತ್ತು ಟ್ರೇಲರ್‌ಗಳನ್ನು ಸ್ಟ್ರೀಮ್ ಮಾಡಿದ ನಂತರ ಸಂಜೆ 4.30 ಕ್ಕೆ ಸಿನಿಮಾ ಪ್ರಾರಂಭವಾಯಿತು. ಇದರಿಂದಾಗಿ ನನ್ನ "ಸುಮಾರು 30 ನಿಮಿಷಗಳ ಸಮಯವನ್ನು ವ್ಯರ್ಥವಾಯಿತು. ಸಿನಿಮಾ ತಡವಾಗಿ ಮುಗಿದ ಪರಿಣಾಮ ನನಗೆ ಸರಿಯಾದ ಸಮಯಕ್ಕೆ ಕಚೇರಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರುದಾರರು ಹೇಳುವ ಪ್ರಕಾರ, ಅವರಿಗೆ ಅಂದು ಬೇರೆ ಬೇರೆ ಅಪಾಯಿಂಟ್ಮೆಂಟ್ ಇದ್ದು ಅವುಗಳನ್ನು ಪೂರ್ಣಗೊಳಿಸಬೇಕಿತ್ತು. ಸಿನಿಮಾ ಸರಿಯಾದ ಸಮಯಕ್ಕೆ ಆರಂಭವಾಗದೇ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡರು. ಅಲ್ಲದೆ, ಸಿನೆಮಾ ಪ್ರದರ್ಶನದ ಸಮಯವನ್ನು ಸರಿಯಾಗಿ ತಿಳಿಸದ ಕಾರಣ, ಅವರು ಆರ್ಥಿಕವಾಗಿ ಅಳೆಯಲಾಗದ ನಷ್ಟವನ್ನು ಅನುಭವಿಸಿದ್ದಾರೆ.
4.05 ರಿಂದ 4.28 ಕೇವಲ ಜಾಹಿರಾತು ಮಾತ್ರ ಪ್ರದರ್ಶನ ಆಗುತ್ತಿತ್ತು. ಈ ಹಿಂದೆಯೂ ಈ ಸಮಸ್ಯೆಯನ್ನು ಎದುರಿಸಿದ್ದರಿಂದ ತಮ್ಮ ಪೋನ್ ನಲ್ಲಿ ಆ ಎಲ್ಲಾ ಜಾಹೀರಾಟಿ ತಮ್ಮ ಪೋನ್ ರೆಕಾರ್ಡ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಥಿಯೇಟರ್ ಆಡಳಿತ ಮಂಡಳಿ ಸಿನಿಮಾ ಪ್ರದರ್ಶನ ತಪ್ಪು ಸಮಯವನ್ನು ನೀಡುವ ಮೂಲಕ ಗ್ರಾಹಕರ ದಾರಿ ತಪ್ಪಿಸಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಹಕ ನ್ಯಾಯಾಲಯವು, ದೂರುದಾರರ ಸಮಯ ವ್ಯರ್ಥ ಮತ್ತು ಅನ್ಯಾಯದ ವ್ಯಾಪಾರಕ್ಕಾಗಿ ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ಸಂಸ್ಥೆಗಳಿಗೆ 50,000 ರೂ. ದಂಡ ವಿಧಿಸಿದೆ. ಜೊತೆಗೆ, ಮಾನಸಿಕ ಯಾತನೆಗಾಗಿ 5,000 ರೂ. ಮತ್ತು ದೂರು ದಾಖಲಿಸಿದ್ದಕ್ಕಾಗಿ ಹಾಗೂ ಇತರ ಪರಿಹಾರಗಳಿಗಾಗಿ 10,000 ರೂ. ಸೇರಿ ಒಟ್ಟು ಒಂದು ಲಕ್ಷ ರೂ. ದಂಡವನ್ನು ವಿಧಿಸಿದೆ.
ಇನ್ನುಬುಕ್‌ಮೈಶೋ ಟಿಕೆಟ್ ಬುಕಿಂಗ್ ವೇದಿಕೆಯಾಗಿರುವುದರಿಂದ ಮತ್ತು ಜಾಹೀರಾತುಗಳ ಸ್ಟ್ರೀಮಿಂಗ್ ಸಮಯದ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರದ ಕಾರಣ ಯಾವುದೇ ಕ್ಲೈಮ್‌ಗಳನ್ನು ಪಾವತಿಸಲು ಅದು ಹೊಣೆಗಾರನಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಗ್ರಾಹಕ ನ್ಯಾಯಾಲಯ ಹೇಳಿದ್ದೇನು?
"ಇತರರ ಸಮಯ ಮತ್ತು ಹಣದಿಂದ ಲಾಭ ಪಡೆಯುವ ಹಕ್ಕು ಯಾರಿಗೂ ಇಲ್ಲ" ಎಂದು ಫೆಬ್ರವರಿ 15 ರ ಆದೇಶದಲ್ಲಿ ನ್ಯಾಯಾಲಯ ಹೇಳಿದ್ದು, "25-30 ನಿಮಿಷ ಥಿಯೇಟರ್ ನಲ್ಲಿ ಸುಮ್ಮನೆ ಕುಳಿತು ಪ್ರಸಾರವಾಗುವ ಎಲ್ಲವನ್ನೂ ನೋಡುವುದು ಮಾನಸಿಕವಾಗಿ ಕಿರಿಕಿರಿಯುಂಟುಮಾಡುತ್ತದೆ. ಟೈಟ್ ಶೆಡ್ಯೂಲ್ ಹೊಂದಿರುವ ಕೆಲಸದ ಒತ್ತಡವಿರುವ ಜನರಿಗೆ ಅನಗತ್ಯ ಜಾಹೀರಾತುಗಳನ್ನು ವೀಕ್ಷಿಸುವುದು ತುಂಬಾ ಕಷ್ಟ" ಎಂದು ಅದು ಹೇಳಿದೆ.
PVR-INOX ಪ್ರತಿವಾದ ಏನು?
ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ತಮ್ಮ ವಾದದಲ್ಲಿ, ಅವರು ಕಾನೂನಿನ ಅಡಿಯಲ್ಲಿ ಕೆಲವು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು (ಪಿಎಸ್‌ಎ) ಪ್ರದರ್ಶಿಸಲು ಬದ್ಧರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿದೆ. ಏಕೆಂದರೆ, ನ್ಯಾಯಾಲಯದ ಪ್ರಕಾರ, ಪಿಎಸ್‌ಎಗಳನ್ನು ಚಲನಚಿತ್ರ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಮತ್ತು ಚಲನಚಿತ್ರದ ದ್ವಿತೀಯಾರ್ಧದ ಪ್ರಾರಂಭದ ಮೊದಲು ಮಧ್ಯಂತರ ಅವಧಿಯಲ್ಲಿ ಪ್ರದರ್ಶಿಸಬೇಕು.
ಈ ಪ್ರಕರಣದಲ್ಲಿ, ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ, ನ್ಯಾಯಾಲಯವು ಅವರಿಗೆ ದಂಡ ವಿಧಿಸಿದೆ. ಅಲ್ಲದೆ, ಗ್ರಾಹಕರ ಕಲ್ಯಾಣ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುವಂತೆ ನಿರ್ದೇಶಿಸಿದೆ. ಈ ಮೊತ್ತವನ್ನು ಆದೇಶ ನೀಡಿದ ದಿನಾಂಕದಿಂದ 30 ದಿನಗಳಲ್ಲಿ ಪಾವತಿಸಬೇಕೆಂದು ಸೂಚಿಸಿದೆ.


Click it and Unblock the Notifications