ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೊನೆಗೂ ಪರಿಶ್ರಮಕ್ಕೆ ತಕ್ಕ ಗೆಲುವು ಸಿಕ್ಕಿದೆ. ಅದೇನೆಂದರೆ ವೈದ್ಯಕೀಯ ಮರುಪಾವತಿಯನ್ನು ಪ್ರಕ್ರಿಯೆಗೊಳಿಸದ ವಿಮಾ ಕಂಪನಿಯೊಂದು, ಬೆಂಗಳೂರಿನ ನಿವಾಸಿ ಉಮೇಶ್.ಸಿ ಎಂಬುವರನ್ನು ಅಲೆದಾಡಿಸಿಬಿಟ್ಟಿತ್ತು. ಆದರೆ ವೈದ್ಯಕೀಯ ಮರುಪಾವತಿಗಾಗಿ ಪಟ್ಟು ಹಿಡಿದಿದ್ದ ಆ ವ್ಯಕ್ತಿ ಕೊನೆಗೂ ತನ್ನ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ. ಅದು ಹೇಗೆ ಎಂದರೆ ಬೆಂಗಳೂರಿನ ನಿವಾಸಿ ಉಮೇಶ್.ಸಿ ತನ್ನ ಪಾಲಿನ ಹಣವನ್ನು ಪಡೆಯಲು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಅಲ್ಲಿ ಎಲ್ಲಾ ಸಾಕ್ಷ್ಯಗಳು ಅವರ ಪರವಾಗಿದ್ದರಿಂದ, ಅವರಿಗೆ ನ್ಯಾಯ ದೊರಕಿದೆ.
ಉಮೇಶ್ ಎಂಬುವರು ರೆಡ್ಕೆಂಕೊ ಹೆಲ್ತ್ ಟೆಕ್ ಪ್ರೈವೇಟ್ ಲಿಮಿಟೆಡ್‌ನಿಂದ ಕುಟುಂಬ ವಿಮಾ ಪಾಲಿಸಿಯನ್ನು ಖರೀದಿಸಿದ್ದರು. ವಿಮಾ ಕಂಪನಿಯೊಂದು ಉಮೇಶ್ ಅವರ 71,000 ರೂ. ವೈದ್ಯಕೀಯ ಮರುಪಾವತಿಯನ್ನು ನೀಡಲು ನಿರಾಕರಿಸಿತ್ತು. ಜೊತೆಗೆ ವ್ಯಕ್ತಿ ಸಲ್ಲಿಸಿದ್ದ ಮತ್ತೊಂದು ಪಾಲಿಸಿ (ಶಾಶ್ವತ ಕುಟುಂಬ ಯೋಜನೆ)ಯನ್ನೂ ವಿಮಾ ಕಂಪನಿ ನಿರಾಕರಿಸಿತ್ತು. ಇದರಿಂದ ಬೇಸರಗೊಂಡ ಅವರು ಬೆಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ಆಯೋಗಕ್ಕೆ ಭೇಟಿ ನೀಡಿದರು. ಅಲ್ಲಿ ಗ್ರಾಹಕ ಆಯೋಗ ಕೂಡ ಈ ಮೊತ್ತವನ್ನು ಮರುಪಾವತಿಸಲು ಆದೇಶ ನೀಡಿತ್ತು. ಆದರೆ ಅದನ್ನು ಕೂಡ ಹಿಂದಿರುಗಿಸಲು ನಿರಾಕರಣೆ ಕೇಳಿ ಬಂತು.

ಹೀಗಾಗಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಉಮೇಶ್ ಅವರು, ಕಂಪನಿಯ ಅಕ್ರಮದ ವಿರುದ್ಧ ಹಲವು ಅಧಿಕಾರಿಗಳ ಮೊರೆ ಹೋದರು. ಅಂದರೆ ರಾಷ್ಟ್ರೀಯ ಗ್ರಾಹಕ ವೇದಿಕೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಆರ್‍ಬಿಐ ಒಂಬುಡ್ಸ್‌ಮನ್, ಜೆಸಿ ನಗರ ಪೊಲೀಸ್ ಠಾಣೆ ಮೊರೆ ಹೋದರು. ಅವರು ಕಂಪನಿಯ ಬೆಂಗಳೂರು ಕಚೇರಿಗೆ ಭೇಟಿ ನೀಡಿದಾಗ ಅದು ಮುಚ್ಚಲ್ಪಟ್ಟಿತ್ತು. ನಂತರ ಅವರು ಜೂನ್ 10, 2024 ರಂದು ಮುಂಬೈನ ಕೇಂದ್ರ ಕಚೇರಿ ಮತ್ತು ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಕಾನೂನು ನೋಟಿಸ್ ಕಳುಹಿಸಿದರ. ಆದರೆ ಅಲ್ಲೂ ಯಾವುದೇ ಉತ್ತರ ಸಿಗಲಿಲ್ಲ. ಕೊನೆಗೆ ಗ್ರಾಹಕ ಯೋಜನೆಯಿಂದ ತೀರ್ಪು ಸಿಕ್ಕಿತು.
ಹೌದು, ಗ್ರಾಹಕ ವೇದಿಕೆಯಲ್ಲಿ ಉಮೇಶ್ ಅವರಿಗೆ ತೀರ್ಪು ಸಿಕ್ಕಿತು. ಅದೇನೆಂದರೆ ಉಮೇಶ್ ಜುಲೈ 11, 2024 ರಂದು ಗ್ರಾಹಕ ವೇದಿಕೆಯಲ್ಲಿ ನಿರಾಶೆಯಿಂದ ದೂರು ದಾಖಲಿಸಿದರು. ಇದು ಅವರು ಪಡೆದ ಸೇವೆಯಿಂದಾದ ನ್ಯೂನ್ಯತೆ ಎಂದು ಗುರುತಿಸಲಾಯಿತು. ಅಲ್ಲದೇ ರೆಡೆನ್‌ಕೋ ಕಂಪನಿ ಹಲವಾರು ನೋಟಿಸ್‌ಗಳನ್ನು ಪಡೆದರೂ, ಗ್ರಾಹಕ ಆಯೋಗದ ಮುಂದೆ ಹಾಜರಾಗಲಿಲ್ಲ. ಎಲ್ಲಾ ದಾಖಲೆಗಳು, ವಿವರಗಳು, ಆಸ್ಪತ್ರೆ ಬಿಲ್‌ಗಳು ಮತ್ತು ಪಾಲಿಸಿ ಮಾಹಿತಿಯನ್ನು ಪರಿಶೀಲಿಸಿದ ನಂತರ, ಆಯೋಗವು ಉಮೇಶ್ ಅವರ ಹಕ್ಕುಗಳು ಪ್ರಶ್ನಿಸದಂತೆ ಸ್ಪಷ್ಟ ದಾಖಲೆಗಳಿವೆ ಎಂದು ತೀರ್ಮಾನಿಸಿತು.
ಕೊನೆಗೆ ಗ್ರಾಹಕ ಆಯೋಗವು ರೆಡೆನ್‌ಕೋ ಕಂಪನಿಗೆ ಆದೇಶ ನೀಡಿತು. ಅದೇನೆಂದರೆ ಉಮೇಶ್ ಅವರಿಗೆ ₹71,000 + ₹15,972 ಸೇರಿ ಒಟ್ಟು 86,972 ರೂ. ಪಾವತಿಸಬೇಕು. ಅಲ್ಲದೇ ದೂರು ದಾಖಲಾಗಿದ ದಿನಾಂಕದಿಂದ ಲೆಕ್ಕ ಹಾಕಿ 6% ಬಡ್ಡಿ ದರವನ್ನೂ ನೀಡಬೇಕು. ಜೊತೆಗೆ ಮಾನಸಿಕ ಯಾತನೆ ಅನುಭವಿಸಿದ ಕಾರಣ ಹೆಚ್ಚುವರಿಯಾಇ 10,000 ರೂ. ಮತ್ತು ಕಾನೂನು ವೆಚ್ಚಗಳಿಗೆ ಪಾವತಿಸಬೇಕು ಎಂದು ಆದೇಶಿಸಿತು. ಅಲ್ಲದೇ ಗ್ರಾಹಕ ಆಯೋಗ ಗಮನಿಸಿದ ಪ್ರಕಾರ ಈ ರೆಡೆನ್‌ಕೋ ಸಂಸ್ಥೆ ತನ್ನ ಸುಳ್ಳು ಜಾಹೀರಾತು ಮತ್ತು ಸುಳ್ಳು ಭರವಸೆಗಳ ಮೂಲಕ ಅನೇಕ ಜನರನ್ನು ವಂಚನೆಗೊಳಿಸಿದೆ ಎಂದು ತಿಳಿದುಬಂದಿದೆ.
ಇನ್ನು ಈ ರೆಡೆನ್‌ಕೋ ಹೆಲ್ತ್ ಟೆಕ್ ಪ್ರೈವೇಟ್ ಲಿಮಿಟೆಡ್ ಕುಟುಂಬ ಆರೋಗ್ಯ ವಿಮಾ ಪಾಲಿಸಿ ನೀಡಿತ್ತು. ಉಮೇಶ್ ಅವರು ಇದರಲ್ಲಿ ಪಾಲಿಸಿ ಖರೀದಿಸಿದ್ದರು. ಪಾಲಿಸಿ ಪ್ರಕಾರ 10 ದಿನಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ 50% OPD ಕವರೇಜ್ ಅನ್ನು ಒದಗಿಸುವ ಭರವಸೆಯನ್ನು ಕಂಪನಿ ನೀಡಿತ್ತು. ಆದರೂ ಕೂಡ ವಿಮೆ ಕಂಪನಿಯು ತನ್ನ ವೈದ್ಯಕೀಯ ಮರುಪಾವತಿಯನ್ನು ನೀಡುವಲ್ಲಿ ಹಿಂಜರಿಯಿತು. ಇದರಿಂದ ಉಮೇಶ್ ಅಂತಾ ಎಷ್ಟೋ ಜನರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಆರೋಗ್ಯ ವಿಮೆ ಖರೀದಿಸುವ ಮುನ್ನ ಗ್ರಾಹಕರು ಎಚ್ಚರದಿಂದ ಆಯ್ಕೆ ಮಾಡಿಕೊಳ್ಳಬೇಕು.


Click it and Unblock the Notifications