ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನದ ತೀವ್ರತೆ ಹೆಚ್ಚಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರೋದಕ್ಕೂ ಕಷ್ಟ ಸಾಧ್ಯವಾಗಿದೆ. ಕಾಲಿಟ್ಟಲ್ಲೆಲ್ಲಾ ಕೆಂಡದಂತ ಬಿಸಿ, ಬಿಸಿಲಿಗೆ ಮೈ ಕೊಟ್ಟರೆ ಸುಡುವಂತ ಅನುಭವ..ಬೆಂಗಳೂರಿನ ಜನರು ಸುಮಾರು ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ತೀವ್ರ ತಾಪಮಾನದ ನಡುವೆ ಈ ವಾರ, ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೌದು, ಕಳೆದೆರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಬಿಸಿಲಿನ ವಾತಾವರಣ ಹೆಚ್ಚಾಗಿದೆ. ಈ ತೀವ್ರ ಬರಗಾಲದ ನಡುವೆಯೂ ಮಾರ್ಚ್‌ನಲ್ಲಿ ಗುಡುಗು ಸಹಿತ ಮಳೆಯಾದರೆ, ಬೆಂಗಳೂರಿಗೆ ತಂಪೆರೆದಂತಾಗುತ್ತದೆ. ಮಾರ್ಚ್ 12, ಮಾರ್ಚ್ 13 ಮತ್ತು ಮಾರ್ಚ್ 14ರಂದ, ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಬಿರುಸು ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಸಣ್ಣ ಪ್ರಮಾಣದ ಮಳೆಯಾಗಬಹುದು ಎನ್ನಲಾಗುತ್ತಿದೆ. ಆದರೆ ಕರ್ನಾಟಕದ ಉಳಿದ ಭಾಗಗಳಾದ.. ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಹವಾಮಾನ ಧಗೆಯನ್ನೇ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೇಶದ ಇತರ ಮಹಾನಗರಗಳ ಹವಾಮಾನ ಮಾಹಿತಿ:
1. ದೆಹಲಿ:
ದೆಹಲಿಯಲ್ಲಿ ಮಂಗಳವಾದ ಆಕಾಶ ಸ್ವಚ್ಛವಾಗಿ ಕಾಣುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗೂ ಹವಾಮಾನವು ತಂಗಾಳಿಯಿಂದ ಕೂಡಿರುತ್ತದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ: 17°C, ಗರಿಷ್ಠ ತಾಪಮಾನ: 33°C ಇರಲಿದ್ದು, ಹವಾಮಾನ ಸ್ಥಿತಿ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ ಎನ್ನಲಾಗುತ್ತಿದೆ. ಹಾಗೆಯೇ ದೆಹಲಿಯಲ್ಲಿ ಮಳೆಯ ನಿರೀಕ್ಷೆಯಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳುತ್ತಿದೆ.
2. ಮುಂಬೈ:
ಮಂಗಳವಾರ ಮುಂಬೈದಲ್ಲಿ ಬಿಸಿಲು ಹೆಚ್ಚಾಗಿರಲಿದೆ. ಹಾಗೂ ತೀವ್ರ ಉಷ್ಣತೆಯೂ ಅನುಭವವೂ ಆಗುತ್ತದೆ. ಮುಂಬೈನಲ್ಲಿ ಕನಿಷ್ಠ ತಾಪಮಾನ: 23°C, ಗರಿಷ್ಠ ತಾಪಮಾನ: 37°C ಇರುತ್ತಿದೆ. ಹವಾಮಾನ ಸ್ಥಿತಿ ಹೆಚ್ಚಿನ ಆರ್ದ್ರತೆ ಇರುವುದರಿಂದ ಬಿಸಿಯ ಹೊತ್ತಿನಲ್ಲಿ ಹೊರಗಡೆ ಇರುವವರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ಮುಂಬೈನಲ್ಲಿ ಸದ್ಯಕ್ಕೆ ಮಳೆಯ ನಿರೀಕ್ಷೆ ಇಲ್ಲ.
3. ಹೈದರಾಬಾದ್:
ಹೈದರಾಬಾದ್‌ನಲ್ಲಿ ಹಗಲು ವೇಳೆಯಲ್ಲಿ ತಾಪಮಾನ ಹೆಚ್ಚಾಗಲಿದೆ, ಆದರೆ ತಂಪಾದ ಗಾಳಿ ಅನುಭವಿಸಬಹುದು. ಕನಿಷ್ಠ ತಾಪಮಾನ: 21°C, ಗರಿಷ್ಠ ತಾಪಮಾನ: 34°C ಇರಲಿದೆ. ಹವಾಮಾನ ಸ್ಥಿತಿಯನ್ನು ನೋಡುವುದಾದರೆ ಇಲ್ಲಿ ದಿನವಿಡೀ ಸಮಶೀತೋಷ್ಣ ವಾತಾವರಣ ಇರಲಿದೆ. ಮಳೆಯ ನಿರೀಕ್ಷೆಯೂ ಕಂಡುಬಂದಿಲ್ಲ.
4. ಚೆನ್ನೈ:
ಇನ್ನು ಚೆನ್ನೈನಲ್ಲಿ ಬೆಚ್ಚಗಿನ ತಂಗಾಳಿಯ ಅನುಭವ ಸಿಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.. ಬೆಳಗ್ಗೆ ಮಂಜು ಕವಿದ ವಾತಾವರಣ ಇರುತ್ತದೆ, ನಂತರ ಮೋಡ ಕವಿದ ವಾತಾವರಣವಾಗಲಿದೆ. ಮಧ್ಯಮ ಮಟ್ಟದ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ: 24°C, ಗರಿಷ್ಠ ತಾಪಮಾನ: 33°C ಇರಲಿದೆ. ಹವಾಮಾನ ಸ್ಥಿತಿ ನೋಡುವುದಾದರೆ ಇಲ್ಲಿ, ಬಲವಾದ ಗಾಳಿ ಬೀಸಲಿದೆ ಎನ್ನಲಾಗುತ್ತಿದೆ. ಹಾಗೆಯೇ ಇಲ್ಲಿ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಕಳೆದೆರಡು ತಿಂಗಳ ಕಾಲ ಬಿಸಿಲಿನ ವಾತಾವರಣ, ಧಗೆಯಂತಹ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದ ಬೆಂಗಳೂರಿಗೆ ಮಳೆ ಬಂದರೆ, ನಿಜಕ್ಕೂ ಜನರಿಗೆ ಸ್ವಲ್ಪ ಸಮಾಧಾನ ಸಿಗುವ ಸಾಧ್ಯತೆ ಇದೆ. ಅದರಲ್ಲೂ ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗೆ ಬರಲೂ ಕಷ್ಟವಾಗಿದೆ. ಅಲ್ಲದೇ ಅನಾರೋಗ್ಯ ಕೂಡ ಈ ವಾತಾವರಣದಿಂದ ಎದುರಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅನಿವಾರ್ಯವಾಗಿದೆ.
ಇನ್ನು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದರೂ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕ ಭಾಗಗಳಲ್ಲಿ ಬಿಸಿಯೇ ಮುಂದುವರಿಯಲಿದೆ. ಇನ್ನು ಮುಂಬೈ, ದೆಹಲಿ, ಹೈದರಾಬಾದ್‌ನಲ್ಲಿ ಉಷ್ಣತೆ ಹೆಚ್ಚಾಗಲಿದ್ದು, ಚೆನ್ನೈನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಅನುಭವವಾಗಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.


Click it and Unblock the Notifications