Bengaluru Metro-3: ಜೆ.ಪಿ ನಗರ-ಹೆಬ್ಬಾಳ.. 777 ಭೂಸ್ವಾಧೀನ, 100 ಕಟ್ಟಡಗಳ ತೆರವು! 32 ಕಿಮೀ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳು?

ಬೆಂಗಳೂರು ಮೆಟ್ರೋ ಹಂತ-3: ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತಾರಗೊಳಿಸುವ ಕಾರ್ಯ ದಿನೇ ದಿನೆ ಚುರುಕುಗೊಳ್ಳುತ್ತಿದೆ. ಮೂರನೇ ಹಂತದ ಮೆಟ್ರೋ ಯೋಜನೆಯಡಿ ಮತ್ತೊಂದು ಮಹತ್ತರ ಹೆಜ್ಜೆ ಇಡಲಾಗಿದೆ. ಅದೇನೆಂದರೆ ಜೆ.ಪಿ ನಗರ 4ನೇ ಹಂತದಿಂದ ಆರಂಭವಾಗಿ ಹೆಬ್ಬಾಳದ ಕೆಂಪಾಪುರದವರೆಗೆ, ಹೊಸ 32.15 ಕಿಲೋಮೀಟರ್ ಉದ್ದದ ಮಾರ್ಗ ನಿರ್ಮಾಣಕ್ಕೆ, ಬಿಎಂಆರ್‍‌ಸಿಎಲ್ ನಿರ್ಧರಿಸಿದೆ.

ಜೆ.ಪಿ ನಗರ-ಹೆಬ್ಬಾಳ.. 777 ಭೂಸ್ವಾಧೀನ, 100 ಕಟ್ಟಡಗಳ ತೆರವು!

ಹೌದು, ಇದೇ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಇದರ ಪ್ರಾಥಮಿಕ ಹಂತವಾಗಿ ಜೆ.ಪಿ ನಗರ 4ನೇ ಹಂತದಿಂದ, ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದವರೆಗೆ 25,180.61 ಚದರ ಮೀಟರ್ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತಿದೆ. ಈಗ ಈ ಭಾಗದ ಭೂಸ್ವಾಧೀನ ಪ್ರಕ್ರಿಯೆ ನೈನಪ್ಪಶೆಟ್ಟಿಪಾಳ್ಯದಿಂದ, ನಾಯಂಡಹಳ್ಳಿವರೆಗೆ ಹರಡಿರುವ ಹತ್ತು ಗ್ರಾಮಗಳಲ್ಲಿ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ವಿವಿಧ ಖಾಸಗಿ ಆಸ್ತಿಗಳನ್ನು ಗುರುತಿಸಲಾಗಿದೆ.

ಎರಡು ಕಾರಿಡಾರ್ ಗಳ ನಿರ್ಮಾಣ:

ನಮ್ಮ ಮೆಟ್ರೋ 3 ಹಂತ ಯೋಜನೆಯ ಅಡಿಯಲ್ಲಿ, ಎರಡು ವಿಭಿನ್ನ ಕಾರಿಡಾರ್‍‌ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ಪ್ರಕ್ರಿಯೆ ಈ ಕೆಳಗಿನಂತಿದೆ.

ಕಾರಿಡಾರ್-1: ಜೆ.ಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ, 32.15 ಕಿ.ಮೀ ಉದ್ದದ ಮಾರ್ಗ ನಿರ್ಮಿಸಲಾಗುತ್ತದೆ. ಈ ಮಾರ್ಗದಲ್ಲಿ 23 ನಿಲ್ದಾಣಗಳು ಸೇರಿವೆ.

ಕಾರಿಡಾರ್-2: ಹೊಸಹಳ್ಳಿಯಿಂದ-ಕಡಬಗೆರೆವರೆಗೆ 12.5 ಕಿ.ಮೀ ಉದ್ದದ ಮಾರ್ಗ ನಿರ್ಮಿಸಲಾಗುತ್ತದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳನ್ನು ಸೇರಿಸಲಾಗುತ್ತದೆ.

Take a Poll

777 ಖಾಸಗಿ ಆಸ್ತಿಗಳ ಗುರುತು.. ₹1,900 ಕೋಟಿ ವೆಚ್ಚ:

ಅಂದಹಾಗೆ ಈ ಯೋಜನೆಯ ನಿರ್ಮಾಣಕ್ಕಾಗಿ ಒಟ್ಟಿ 1,29,743 ಚದರ ಮೀಟರ್ ಭೂಮಿ ಅಗತ್ಯವಿದೆ. ಇದರಲ್ಲಿ 777 ಖಾಸಗಿ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಭೂಸ್ವಾಧೀನಕ್ಕೆಂದೇ ಸುಮಾರು ₹1,900 ಕೋಟಿ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಬೃಹತ್ ಆರ್ಥಿಕ ಚಿತ್ರಣ:

ಇನ್ನು ಈ ಬೃಹತ್ ಯೋಜನೆಯ ಆರ್ಥಿಕ ಚಿತ್ರಣ ಹೇಗಿದೆ ಎಂದರೆ, ಈ ಯೋಜನೆಗೆ ದೊಡ್ಡ ಪ್ರಮಾಣದ ಬಂಡವಾಳ ವಿನಿಯೋಗ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಅಂದರೆ..

1. ಮೆಟ್ರೋ ಹಂತ-3 ಯೋಜನೆಗೆ ತಗಲುವ ಒಟ್ಟು ವೆಚ್ಚ, ₹15,611 ಕೋಟಿ
2. ಸಾಲದ ರೂಪದಲ್ಲಿ ₹7,577 ಕೋಟಿ ಸಂಗ್ರಹ
3. ಜಾಹೀರಾತು ಹಾಗೂ ಇತರೆ ಮೂಲಗಳಿಂದ, ₹450 ಕೋಟಿ ನಿರೀಕ್ಷೆ
4. ಈ ಯೋಜನೆಗಾಗಿ ಸದ್ಯ 252 ಕೋಚ್‌ಗಳು ಅಗತ್ಯವಿದೆ.
5. 2028ರ ವೇಳೆಗೆ ನಿತ್ಯ ಪ್ರಯಾಣಿಕರ ಸಂಖ್ಯೆ 7.28 ಲಕ್ಷ ಎಂದು ನಿರೀಕ್ಷೆ

ಅಂದಹಾಗೆ ಜೆ.ಪಿ ನಗರ 4ನೇ ಹಂತದಿಂದ ಮೈಸೂರು ರಸ್ತೆಯವರೆಗೆ, ಇರುವ 10.93 ಕಿ.ಮೀ ಉದ್ದದ ಮಾರ್ಗದಲ್ಲಿ 8 ನಿಲ್ದಾಣಗಳನ್ನು ನಿರ್ಮಿಸಲು ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಯಾವ್ಯಾವ ನಿಲ್ದಾಣಗಳು, ಯಾವ್ಯಾವ ಪ್ರದೇಶಗಳಲ್ಲಿ ನಿರ್ಮಾಣವಾಗಲಿವೆ ಎಂದು ನೋಡುವುದಾದರೆ...

ಎಂಟು ನಿಲ್ದಾಣಗಳು:

ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಜೆ.ಪಿ.ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್ ನಿಲ್ದಾಣ, ಹೊಸಕೆರೆಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ

100 ಕಟ್ಟಡಗಳ ನೆಲಸಮ:

ಮೆಟ್ರೋ ಹಂತ-3ರ ಈ ಹೊಸ ಮಾರ್ಗದಲ್ಲಿ ಈ ಯೋಜನೆಗಾಗಿ, ಬಹುತೇಕ 100ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ. ಅಂದರೆ ಹೊಸಕರೆರೆಹಳ್ಳಿ ಪ್ರದೇಶದ ಭೂಸ್ವಾಧೀನವು ಸಮೀಕ್ಷೆಯ ಪ್ರಕಾರ ಕಡಿಮೆ ಮಟ್ಟದಲ್ಲಿದೆ ಎನ್ನಬಹುದು. ಕಟ್ಟಡಗಳ ಕಾಂಪೌಂಡ್ ಹಾಗೂ ಮರಗಳಷ್ಟೇ ಹೆಚ್ಚಿನ ಪ್ರಮಾಣದಲ್ಲಿಯೇ ತೆರವುಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ನಿರ್ವಹಣಾ ಸಮಸ್ಯೆ ಕೂಡ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಡಬಲ್ ಡೆಕ್ಕರ್ ಮಾರ್ಗ:

ನಮ್ಮ ಮೆಟ್ರೋ 3ನೇ ಹಂತದಲ್ಲಿ ಡಬಲ್ ಡೆಕ್ಕರ್ ಮಾರ್ಗದ ನಿರ್ಮಾಣ ಮಾಡುವ ಯೋಜನೆ ಕೂಡ ಕೇಳಿಬಂದಿದೆ. ಈ ಯೋಜನೆ ಸದ್ಯದಲ್ಲಿಯೇ ಪೂರ್ಣಗೊಂಡಿರುವ ವಿಸ್ತೃತ ಯೋಜನಾ ವರದಿಯ ಆಧಾರದಲ್ಲಿ ಸಾಗುತ್ತಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮೇಲ್ಸೇತುಬೆಗಳು ಹಾಗೂ ಕೆಳಸೇತುವೆಗಳ ಮೇಲೆ ಯಾವುದೇ ರೀತಿಯ ಹಾನಿ ಸಂಭವಿಸದ ರೀತಿಯಲ್ಲಿ ಈ ಮೆಟ್ರೋ ಮಾರ್ಗಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಇಂಟರ್‌ಚೇಂಜ್ ನಿಲ್ದಾಣಗಳ ಚಕ್ರವ್ಯೂಹ:

ಇನ್ನು ಈ ಹಂತದಲ್ಲಿ ವಿವಿಧ ಮಾರ್ಗಗಳೊಂದಿಗೆ ಸಂಪರ್ಕ ಹೊಂದುವಂತಹ, ಪ್ರಮುಖ ಇಂಟರ್‍‌ಚೇಂಜ್ ನಿಲ್ದಾಣಗಳು ನಿರ್ಮಾಣವಾಗಲಿವೆ. ಅವು ಯಾವುವು..ಯಾವ ಮಾರ್ಗದಲ್ಲಿ ಎಂದು ನೋಡುವುದಾದರೆ..

1. ಪೀಣ್ಯ ನಿಲ್ದಾಣ - ಹಸಿರು ಮಾರ್ಗ (ತುಮಕೂರು ರಸ್ತೆ)
2. ಜೆ.ಪಿ.ನಗರ ನಿಲ್ದಾಣ - ಹಸಿರು ಮಾರ್ಗ
3. ಮೈಸೂರು ರಸ್ತೆ ನಿಲ್ದಾಣ - ನೇರಳೆ ಮಾರ್ಗ
4. ಸುಮನಹಳ್ಳಿ ನಿಲ್ದಾಣ - ಹೊಸಹಳ್ಳಿ-ಕಡಬಗೆರೆ ಮಾರ್ಗ

ಇನ್ನು ಇದರ ಹೊರತಾಗಿಯೂ ಹೆಬ್ಬಾಳದಲ್ಲಿ ಈ ಮಾರ್ಗವು ನೀಲಿ ಮಾರ್ಗ ಮತ್ತು ಕೆಂಪು ಮಾರ್ಗಕ್ಕೆ ಸಂಪರ್ಕ ಸಾಧಿಸುವ ಪ್ರಮುಖ ಕೇಂದ್ರೀಯ ನಿಲ್ದಾಣವಾಗಲಿವೆ. ಈ ನೀಲಿ ಮಾರ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಕೆಂಪು ಮಾರ್ಗವು ಹೆಬ್ಬಾಳ-ಸರ್ಜಾಪುರಕ್ಕೆ ಸಂಪರ್ಕ ಸಾಧಿಸುವ ಪ್ರಮುಖ ಕೇಂದ್ರೀಯ ನಿಲ್ದಾಣವಾಗಲಿದೆ.

ಗ್ರಾಮವಾರು ಜಾಗದ ವಿವರಗಳು:

ಈ ಯೋಜನೆಗಾಗಿ ನಡೆಯಬೇಕಿರುವ ಭೂಸ್ವಾಧೀನ ಪ್ರಕ್ರಿಯೆಗೆ, ಗ್ರಾಮವಾರು ಪ್ರದೇಶದ ವಿಸ್ತೀರ್ಣವನ್ನು ನೋಡುವುದಾದರೆ..

ನೈನಪ್ಪಶೆಟ್ಟಿಪಾಳ್ಯ-1116.38 ಚದರ ಮೀಟರ್
ಬಿಳೇಕಹಳ್ಳಿ - 1499.32 ಚದರ ಮೀಟರ್
ಸಾರಕ್ಕಿ - 4993.33 ಚದರ ಮೀಟರ್
ಜರಗನಹಳ್ಳಿ- 4556.46 ಚದರ ಮೀಟರ್
ಕದಿರೇನಹಳ್ಳಿ- 82.38 ಚದರ ಮೀಟರ್
ಕರೀಸಂದ್ರ - 787.04 ಚದರ ಮೀಟರ್
ಕತ್ರಿಗುಪ್ಪೆ - 1549.82 ಚದರ ಮೀಟರ್
ಹೊಸಕೆರೆಹಳ್ಳಿ - 3452.19 ಚದರ ಮೀಟರ್
ಪಂತರಪಾಳ್ಯ - 1872.31 ಚದರ ಮೀಟರ್
ನಾಯಂಡಹಳ್ಳಿ - 5271.38 ಚದರ ಮೀಟರ್

ಮೆಟ್ರೋ ಹಂತ-3 ಕಾಮಗಾರಿಯು, ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ದಿಟ್ಟ ಹೆಜ್ಜೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಯೊಂದು ಯಶಸ್ವಿಯಾಗಿ ನಡೆದರೆ, 2028ರೊಳಗೆ ಬೆಂಗಳೂರು ಮತ್ತೊಂದು ತಂತ್ರಜ್ಞಾನದ ನೆಲೆಗೊಂಡ ಸಂಚಾರ ದಾರಿಗೆ ಹೆಜ್ಜೆ ಹಾಕಲಿದೆ ಎನ್ನಬಹುದು. ಆದರೆ ಈ ಮಾರ್ಗದಲ್ಲಿ ಖಾಸಗಿ ಆಸ್ತಿಗಳ ಸಂಖ್ಯೆಯು, ಅಧಿಕವಾಗಿದೆ. ಇದರಿಂದ ಜನತೆಯ ಸಹಕಾರ ಹಾಗೂ ನ್ಯಾಯಸಮ್ಮತವಾಗಿ ಪರಿಹಾರ ನೀಡುವುದೇ ಬಿಎಂಆರ್‍‌ಸಿಎಲ್‌ಗೆ ಅತಿದೊಡ್ಡ ಸವಾಲಾಗಿದೆ.

ಅಂದಹಾಗೆ ಈ ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಯು, ನಗರ ಸಾರಿಗೆ ವ್ಯವಸ್ಥೆಯಲ್ಲಿ ಒಂದು ಪರಿಣಾಮಕಾರಿ ಬದಲಾವಣೆ ತರಲಿದೆ ಎಂದರೆ ತಪ್ಪಾಗಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಅಭಿವೃದ್ಧಿ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದೆ. ಉದ್ಯೋಗವಕಾಶಗಳಿಗಾಗಿ ಬೆಂಗಳೂರಿಗೆ ಸಾವಿರಾರು ಜನರು ಹರಿದುಬರುತ್ತಾರೆ. ಕಟ್ಟಡಗಳ ಕಾಡಾಗಿರುವ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಯು ಒಂದು ದೊಡ್ಡ ಸವಾಲು. ಎಷ್ಟೇ ಸಾರಿಗೆ ವ್ಯವಸ್ಥೆ ಇದ್ದರೂ ಸಾಕು ಎನ್ನಿಸುವುದೇ ಇಲ್ಲ. ಹೀಗಾಗಿ ಬೆಂಗಳೂರಿಗೆ ಮೆಟ್ರೋ ವಿಸ್ತರಣೆ ಸಾಕಷ್ಟು ಅಗತ್ಯವಾಗಿದೆ. ಅತಿಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಪ್ರದೇಶಗಳಿಗೆ ಈ ಮೆಟ್ರೋ 3ನೇ ಹಂತ ಸಾಕಷ್ಟು ಉಪಯೋಗವಾಗಲಿದೆ.

ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ 32.15 ಕಿಲೋಮೀಟರ್ ಉದ್ದದ ಮಾರ್ಗ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀ ಉದ್ದದ ಎರಡೂ ಕಾರಿಡಾರ್‌ಗಳಲ್ಲಿ ಭೂಸ್ವಾಧೀನ ಮತ್ತು ನಿರ್ಮಾಣ ಕಾಮಗಾರಿ ಸಕ್ರಿಯವಾಗಿದೆ. ಈ ಯೋಜನೆಯಡಿ 1900 ಕೋಟಿ ರೂ. ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಮತ್ತು ಸುಮಾರು 100 ಕಟ್ಟಡಗಳು ನೆಲಸಮಗೊಳ್ಳಲಿವೆ. ಯೋಜನೆಯ ಪೂರ್ಣಗೊಳಿಸುವಿಕೆಯ ನಂತರ 2028 ರವರೆಗೆ ಪ್ರತಿದಿನ 7.28 ಲಕ್ಷ ಪ್ರಯಾಣಿಕರು ಈ ಮೆಟ್ರೋ ಮಾರ್ಗಗಳನ್ನು ಬಳಸುವ ನಿರೀಕ್ಷೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+