ಬೆಂಗಳೂರು ಮೆಟ್ರೋ ( BMRCL) ಜೊತೆ ಪ್ರೆಸ್ಟೀಜ್ ಗ್ರೂಪ್ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಹೊಸ ಒಪ್ಪಂದ ಮೆಟ್ರೋ ಜಾಲದ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶವೂ ಆಗಿದೆ. ಅಂದಹಾಗೆ ಈ ಒಪ್ಪಂದದ ಪ್ರಕಾರ ಹಂತ-2ಎ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನಲ್ಲಿ ಸ್ಥಿತಿಯಲ್ಲಿರುವ ಬೆಳ್ಳಂದೂರು ಮೆಟ್ರೋ ನಿಲ್ದಾಣದ ಹಕ್ಕು ಪ್ರೆಸ್ಟೀಜ್ ಕಂಪನಿಗೆ ಸಿಗೋದಾಗಿದೆ.

ಹೌದು, ಪ್ರತಿಷ್ಟಿತ ಖಾಸಗಿ ಸಂಸ್ಥೆಯಾದ ಪ್ರೆಸ್ಟೀಜ್ ಹಾಗೂ ಬಿಎಂಆರ್‍ಸಿಎಲ್ ನಡುವೆ ಆಗಿರುವ ಒಪ್ಪಂದೆ ಇದೇ ಆಗಿದೆ. ಅಂದರೆ ಮೆಟ್ರೋದ ವಾಣಿಜ್ಯ ಕಾರ್ಯಾಚರಣೆ ಆರಂಭವಾದ ದಿನಾಂಕದಿಂದ, ಮುಂದಿನ 30 ವರ್ಷಗಳ ಕಾಲ ಬೆಳ್ಳಂದೂರು ನಿಲ್ದಾಣದ ನಾಮಕರಣದ ಹಕ್ಕು ಪ್ರೆಸ್ಟಿಜ್ ಅಂಗಳದಲ್ಲಿ ಇರುತ್ತೆ. ಅಂದರೆ ಅದನ್ನು ಪ್ರೆಸ್ಟೀಹ್ ಬೆಳ್ಳಂದೂರು ಮೆಟ್ರೋ ನಿಲ್ದಾಣ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಒಟ್ಟು ₹80 ಕೋಟಿ ಮೌಲ್ಯದ ಒಪ್ಪಂದವನ್ನು ಸ್ವೀಕರಿಸಲಾಗಿದೆ.
ಇನ್ನು BMRCL ವತಿಯಿಂದ ನೀಡಲಾದ ಹಕ್ಕುಗಳಲ್ಲಿ ಏನೆಲ್ಲಾ ಇದೆ ಗೊತ್ತಾ? ನಿಲ್ದಾಣದ ಒಳಾಂಗಣ ಜಾಹೀರಾತುಗಳಿಗಾಗಿ ಜಾಹೀರಾತುಗಳಿಗಾಗಿ 1,000 ಚದರ ಅಡಿ ಮತ್ತು 3,000 ಚದರ ಅಡಿ ವಾಣಿಜ್ಯ ಸ್ಥಳ ಹಂಚಿಕೆಯು ಒಳಗೊಂಡಿದೆ. ಇದರ ಜೊತೆಗೆ ಮೆಟ್ರೋ ನಿಲ್ದಾಣದ ಒಳಾಂಗಣ ಗುಣಮಟ್ಟ, ವಿನ್ಯಾಸ ಮಾನದಂಡಗಳನ್ನು ಪಾಲಿಸುವ ಮೂಲಕ, ಮೆಟ್ರೋ ಜಾಲವನ್ನು ಮೇಲ್ದರ್ಜೆಗೆ ತರುವುದು ಪ್ರೆಸ್ಟೀಜ್ ಗ್ರೂಪ್ ಜವಾಬ್ದಾರಿಯಾಗಿದೆ. ಈ ಎಲ್ಲಾ ಹಕ್ಕುಗಳು ಪ್ರೆಸ್ಟೀಜ್ ಗ್ರೂಪ್‌ಗಿದ್ದರೂ, ಬೆಳ್ಳಂದೂರು ನಿಲ್ದಾಣವು BMRCL ನ ಸ್ವಾಮ್ಯದಲ್ಲೇ ಉಳಿಯುತ್ತದೆ ಮತ್ತು ಕಾರ್ಯಾಚರಣೆ ಹಾಗೂ ನಿಯಂತ್ರಣ ಸಂಪೂರ್ಣವಾಗಿ ನಿಗಮದ ವ್ಯಾಪ್ತಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನು ಬೆಳ್ಳಂದೂರು ಮೆಟ್ರೋ ನಿಲ್ದಾಣವು ಐಟಿ ಕಾರಿಡಾರ್‍ನ ಪ್ರಮುಖ ನಿಲ್ದಾಣವಾಗಿದ್ದು, ಬೆಂಗಳೂರಿನ ಐಟಿ ಕಂಪನಿಗಳು ಮತ್ತು ಕಮರ್ಷಿಯಲ್ ಕ್ಷೇತ್ರಗಳು ಸಮೀಪದಲ್ಲಿವೆ. ಅಷ್ಟೇ ಅಲ್ಲ ಈ ಇದರಿಂದ, ಈ ನಿಲ್ದಾಣದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಈ ಮೂಲಕ ನಗರ ಸಾರಿಗೆ ವ್ಯವಸ್ಥೆಗೆ ಉತ್ತಮ ಸೇವೆ ಒದಗಿಸಿ, ಪ್ರಯಾಣಿಕರ ಅನುಭವವನ್ನು ಸುಧಾರಿಸಲಾಗುತ್ತದೆ.
ಈ ಬಗ್ಗೆ ಪ್ರೆಸ್ಟೀಜ್ ಗ್ರೂಪ್ ಪ್ರತಿನಿಧಿಯಾದಂತಹ ಜಗ್ಗಿ ಮರ್ವಾಹ ಅವರು ಹೇಳಿದ್ದೇನೆಂದರೆ, ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಸಾರಿಗೆ ಆಧಾರಿತ ಅಭಿವೃದ್ಧಿ ಪ್ರದೇಶಗಳಿಗೆ ಬೆಂಬಲ ನೀಡುವುದು ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸುವುದು ನಮ್ಮ ಪ್ರಮುಖ ಗುರಿ ಎಂದಿದ್ದಾರೆ.
ಅಂದಹಾಗೆ BMRCL ಅಧಿಕಾರಿಗಳು ಈ ಒಪ್ಪಂದವನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಯಶಸ್ವಿ ಸಹಕಾರದ ಮಹತ್ವದ ಮೈಲಿಗಲ್ಲು ಎಂದು ವರ್ಣಿಸಿದ್ದಾರೆ. ಹೀಗಾಗಿ, ನಾಮಕರಣ ಹಕ್ಕುಗಳ ಮೂಲಕ ಮೆಟ್ರೋ ನಿಲ್ದಾಣದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಮತ್ತು ನಗರ ಮೆಟ್ರೋ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಹೊಸ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಒಪ್ಪಂದವು ನಗರದಲ್ಲಿನ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೇ ಹೊಸ ಹಾದಿಯನ್ನು ತೆರೆಯಲಿದೆ. ನಿಲ್ದಾಣದ ನಾಮಕರಣದ ಜೊತೆಗೆ, ಒಳಾಂಗಣ ಜಾಹೀರಾತುಗಳು ಮತ್ತು ವಾಣಿಜ್ಯ ಸ್ಥಳ ಹಂಚಿಕೆಯು ಪ್ರಯಾಣಿಕರಿಗೆ ಸುಲಭತೆ, ವೈಯಕ್ತಿಕ ಅನುಭವ ಮತ್ತು ಸೇವೆಗಳ ಲಭ್ಯತೆ ಹೆಚ್ಚಿಸುವಲ್ಲಿ ಸಹಕಾರಿ ಆಗಲಿದೆ.


Click it and Unblock the Notifications