ಬೆಂಗಳೂರು: ಬೆಂಗಳೂರು ಮೆಟ್ರೋ ಬೆಂಗಳೂರು ನಿವಾಸಿಗಳ ಅಗತ್ಯ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರೀ ಅಗ್ಗದಲ್ಲಿದ್ದ ಬೆಂಗಳೂರು ಮೆಟ್ರೋ (Bengaluru Metro) ಸೇವೆ, ಕಳೆದ ವರ್ಷದಿಂದ ಭಾರೀ ದುಬಾರಿಯಾಗಿದೆ. ಅತ್ತ ಪ್ರಯಾಣಿಕರು ಕೂಡಾ ಮೆಟ್ರೋ ದರ ಏರಿಕೆಗೆ (Metro Price Hike) ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಮೆಟ್ರೋದಲ್ಲಿ ರೀಲ್ಸ್ ಮಾಡಬಾರದು, ಊಟ, ತಿಂಡಿ ಸೇವಿಸಬಾರದು, ಆಲ್ಕೋಹಾಲ್ ಅಂಶಗಳನ್ನು ಕೊಂಡೊಯ್ಯಬಾರದು ಹೀಗೆ ಹಲವು ನಿಯಮಗಳು ಜಾರಿಯಲ್ಲಿದೆ. ಆದ್ರೆ ಇದೀಗ ನಮ್ಮ ಮೆಟ್ರೋ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಲು ಪ್ಲಾನ್ ಮಾಡಿದೆ.

ಹೌದು, ಇದುವರೆಗೆ ಬೆಂಗಳೂರು ಮೆಟ್ರೋ ಮಾರ್ಗಗಳಲ್ಲಿ ಮದ್ಯದ ಬಾಟಲಿಗಳನ್ನು ಕೊಂಡೊಯ್ಯುವಂತಿಲ್ಲ. ಆದ್ರೆ ಇನ್ಮುಂದೆ ಮೆಟ್ರೋದಲ್ಲೂ ಮದ್ಯ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಏನಿದು ಹೊಸ ನಿಯಮ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಮೆಟ್ರೋದಲ್ಲಿ ಲಿಕ್ಕರ್ ಬಾಟಲ್‌ಗೆ ಅನುಮತಿ?
ಇದುವರೆಗೆ ಬೆಂಗಳೂರು ಮೆಟ್ರೋ ರೈಲುಗಳಲ್ಲಿ ಲಿಕ್ಕರ್ ಬಾಟಲ್‌ಗಳನ್ನು ಕೊಂಡೊಯ್ಯಲು ಯಾವುದೇ ಅನುಮತಿ ಇರಲಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಸೀಲ್ಡ್ ಲಿಕ್ಕರ್ ಬಾಟಲ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಲು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಲಿಕ್ಕರ್ ಬಾಟಲ್‌ಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯುವ ಬಗ್ಗೆ ಹಲವು ಬಾರಿ ಚರ್ಚಿಸಲಾಗಿದೆ. ಇದೀಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಇದೀಗ ಈ ಬಗ್ಗೆ ಪರಿಗಣನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ದೆಹಲಿ ಮೆಟ್ರೋದಲ್ಲಿ ಈ ಬಗ್ಗೆ ಅನುಮತಿ ನೀಡಲಾಗಿದ್ದು, ಪ್ರಸ್ತುತ ದೆಹಲಿ ಮೆಟ್ರೋಗಳಲ್ಲಿ ಸೀಲ್ ಮಾಡಿದ ಲಿಕ್ಕರ್ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಅದೇ ನಿಯಮದಂತೆ ಇದೀಗ ಬೆಂಗಳೂರು ಮೆಟ್ರೋದಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಂತೆ ಬೆಂಗಳೂರಿನಲ್ಲೂ ನಿಯಮ!
ಪ್ರಸ್ತುತ ದೆಹಲಿ ಮೆಟ್ರೋಗಳ ಏರ್‌ಪೋರ್ಟ್ ಮಾರ್ಗಗಳಲ್ಲಿ ಮದ್ಯ ಕೊಂಡೊಯ್ಯಲು ಅನುಮತಿ ಇದೆ. ಇದೀಗ ದೆಹಲಿ ಮಾದರಿಯನ್ನೇ ಅನುಸರಿಸಿಕೊಂಡು, ಬೆಂಗಳೂರಿನಲ್ಲೂ ಮದ್ಯ ಬಾಟಲ್ ಕೊಂಡೊತ್ಯುವ ನಿಯಮ ಜಾರಿಗೆ ತರಲು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ನಮ್ಮ ಮೆಟ್ರೋ ಏರ್‌ಪೋರ್ಟ್ ಸಂಪರ್ಕಿಸುವ ಮಾರ್ಗಗಳಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ಮೆಟ್ರೋ ರೈಲಿನಲ್ಲಿ ಮದ್ಯ ಸಾಗಿಸಲು ಅನುಮತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಮೆಟ್ರೋದಲ್ಲಿ ಮದ್ಯ ಕೊಂಡೊಯ್ಯಲು ಏಕೆ ಅನುಮತಿ ಇಲ್ಲ ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ. ಆದರೂ ಅವುಗಳು ಹಾನಿಕಾರಕ ಎಂಬುದು ಅರ್ಥಮಾಡಿಕೊಳ್ಳಬೇಕಾದ ವಿಷಯ. ಅದೇ ರೀತಿ ಮದ್ಯದ ಬಾಟಲಿಗಳ ಜೊತೆಗೆ ಹಲವು ವಸ್ತುಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯುವಂತಿಲ್ಲ. ಆದ್ರೆ ಇದೀಗ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆಯೇ ಹೊರತು, ಇನ್ನೂ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಬಿಎಂಆರ್‌ಸಿಎಲ್, ಸರ್ಕಾರದಿಂದ ಒಮ್ಮೆ ಅನುಮೋದನೆ ಸಿಕ್ಕರೆ, ನಂತರ ಅನುಮತಿ ನೀಡಲಾಗುತ್ತದೆ.


Click it and Unblock the Notifications