ಬೆಂಗಳೂರಿಗೆ ಜೀವಾಳ ಆಗಿರುವ ನಮ್ಮ ಮೆಟ್ರೋ ವಿಚಾರವಾಗಿ ಒಂದಲ್ಲ ಒಂದು ರೀತಿಯ ಗುಡ್‌ನ್ಯೂಸ್ ಸಿಗ್ತಿರುತ್ತೆ. ಆದರೆ ಈ ಒಂದು ಮಾರ್ಗದ ಮೆಟ್ರೋ ಮಾತ್ರ ಭಾರಿ ನಿರಾಸೆ ಉಂಟು ಮಾಡಿದೆ. ಕಾರಿಡಾರ್-1:- ಜೆಪಿ ನಗರ ಟು ಕೆಂಪಾಪುರ ಹಾಗೂ ಕಾರಿಡಾರ್-2:- ಹೊಸಹಳ್ಳಿ ಟು ಕಡಬಗೆರೆಗೆ ಮಾರ್ಗದಲ್ಲಿ ನಿರ್ಮಾಣವಾಗಬೇಕಿರುವ ಆರೆಂಜ್ ಲೈನ್ ಮೆಟ್ರೋದಿಂದ, ಭಾರಿ ನಷ್ಟ ಉಂಟಾಗಿದೆ. ಅದು ಹೇಗೆ ಅಂತೀರಾ ಮುಂದೆ ಓದಿ ತಿಳಿಯಿರಿ.

ಕಾಮಗಾರಿ ವಿಳಂಬ, ನೂರಾರು ಕೋಟಿ ನಷ್ಟ:
ಹೌದು, ಆರೆಂಜ್ ಲೈನ್ ಮೆಟ್ರೋ ಬೆಂಗಳೂರಿನ ಬಹು ನಿರೀಕ್ಷಿತವಾಗ ಮೆಟ್ರೋ ಮಾರ್ಗ. ಈ ಮೆಟ್ರೋಗೆ ಕೇಂದ್ರ ಸರ್ಕಾರವೇ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷವಾಯ್ತು. ಪ್ರಧಾನಿ ಮೋದಿಯವರೇ ಇದಕ್ಕೆ ಶಂಕುಸ್ಥಾಪನೆ ಕೂಡ ಮಾಡಿದ್ರು. ಆದ್ರೆ ಕಾಮಗಾರಿ ಮಾತ್ರ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಕಾಮಗಾರಿ ಆರಂಭಿಸೋಕೆ ಬಿಎಂಆರ್‌ಸಿಎಲ್ ಕೂಡ ಮುಂದಾಗ್ತಿಲ್ಲ. ಕಾಮಗಾರಿ ವಿಳಂಬ ಆಗಿ ಆಗಿ ಆಗಿರೋ ನಷ್ಟವೆಷ್ಟು ಗೊತ್ತಾ? ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ಅನ್ನೋ ಮಾಹಿತಿ ತಿಳಿದುಬಂದಿದೆ.
974 ಕೋಟಿ ರೂ. ಹೆಚ್ಚುವರಿ ಹೊರೆ ಸಾಧ್ಯತೆ:
ಇನ್ನು ನಮ್ಮ ಮೆಟ್ರೋ ಕೂಡ ಟೆಂಡರ್ ಕರೆಯಲು ಮುಂದಾಗಿಲ್ಲ. ಕೇಂದ್ರ ಸರ್ಕಾರವೇ ಅನುಮತಿ ನೀಡಿದ್ರೂ, ಕ್ಯಾರೆ ದಾಸಯ್ಯ ಅನ್ನುವಂತಿಲ್ಲ. ಅನುಮತಿ ಸಿಕ್ಕಿ ಒಂದು ವರ್ಷದ ಮೇಲೆ 123 ದಿನಗಳು ಕಳೆದಿದ್ರೂ, ಕೆಲಸ ಮುಂದಕ್ಕೆ ಸಾಗ್ತಿಲ್ಲ. ಅಂದಹಾಗೆ ನಷ್ಟ ಹೇಗೆ ಎಂದು ಕೇಳಬಹುದು. ಒಂದೇ ಒಂದು ದಿನ ಮೆಟ್ರೋ ಕಾಮಗಾರಿ ವಿಳಂಬ ಆದ್ರೆ, ನಷ್ಟ ಹೆಚ್ಚುವರಿ ಹೊರೆ ಆಗೋದು ಬರೋಬ್ಬರಿ 2 ಕೋಟಿ ರೂ. ಆದ್ರೆ ಇಲ್ಲಿ ಮೆಟ್ರೋ ಕಾಮಗಾರಿ ವಿಳಂಬ ಆಗಿ, ಸುಮಾರು 487 ದಿನಗಳು ಕಳೆದಿವೆ. ಅಂದ್ರೆ ಮಾಹಿತಿ ಪ್ರಕಾರ 974 ಕೋಟಿ ರೂ. ಹೆಚ್ಚುವರಿ ಹೊರೆಯಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
2024ರ ಆಗಸ್ಟ್‌ನಲ್ಲೇ ಕೇಂದ್ರ ಸರ್ಕಾರ, ಈ ಮೂರನೇ ಹಂತದ ಆರೆಂಜ್ ಲೈನ್ ಮೆಟ್ರೋಗೆ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ರಾಜ್ಯ ಸರ್ಕಾರ ನೋಡಿದ್ರೆ ಈ ಇಡೀ ಮಾರ್ಗವನ್ನ ಡಬಲ್ ಡೆಕ್ಕರ್ ಮಾಡಬೇಕು ಎಂಬ ತೀರ್ಮಾನ ಮಾಡಿದೆ. ಈ ಯೋಜನೆಗಾಗಿಯೇ ಕಾಮಗಾರಿಗಾಗಿ ಹೆಚ್ಚುವರಿ 9 ಸಾವಿರ ಕೋಟಿ ಬೇಕು. ಈ ಕಾರಣಕ್ಕೋಸ್ಕರವೇ ಟೆಂಡರ್ ಪ್ರಕ್ರಿಯೆ ವಿಳಂಬ ಆಗ್ತಿರೋದು ಎಂಬ ಆರೋಪವೂ ಕೇಳಿ ಬರ್ತಿದೆ. ಹೀಗಿರುವಾಗ ಯೋಜನೆಯನ್ನ ದಿನದಿಂದ ದಿನಕ್ಕೆ ಎಗರಿಸ್ತಿದ್ದಾರೆ. ಕಾಮಗಾರಿ ಮಾತ್ರ ಶುರು ಮಾಡಿಲ್ಲ.
ಒಟ್ಟಿನಲ್ಲಿ ಹಲವು ಕಾರಣಗಳಿಂದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ವಿಳಂಬ ಆಗ್ತಿದೆ. ಅದರ ಜೊತೆಗೆ ಸಾವಿರಾರು ಕೋಟಿ ಟೆಂಡರ್ ಕಾಸ್ಟ್ ಆದರೆ, ವಿಳಂಬದ ಕಾರಣದಿಂದಲೇ ಹೆಚ್ಚುವರಿ ನಷ್ಟ ಎದುರಾಗ್ತಿದೆ. ಎಲ್ಲ ಸೇರಿದರೆ ಬರೋಬ್ಬರಿ ವೆಚ್ಚ 15,611 ಕೋಟಿ ರೂ.. ಇದರ ಜೊತೆಗೆ 500 ಕೋಟಿ. ರೂ. ಹೊರೆ. ಅಂದರೆ 16 ಕೋಟಿಗೂ ಹೆಚ್ಚು ಹೊರೆಯಾಗುತ್ತಾ ಎಂಬ ಭೀತಿ ಶುರುವಾಗಿದೆ.


Click it and Unblock the Notifications