ಬರ್ತಿದೆ ರೆಡ್‌ಲೈನ್ ಮೆಟ್ರೋ..ಹೌದು ರಾಜಧಾನಿ ಬೆಂಗಳೂರಿನ ಮೆಟ್ರೋ ವಿಸ್ತರಣೆ ಕಣ್ಣು ಕುಕ್ಕುವಂತಿದೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪರ್ಪಲ್ ಲೈನ್ ಹಾಗೂ ಗ್ರೀನ್ ಲೈನ್ ಮೆಟ್ರೋ ಜೊತೆಗೆ ಇನ್ನೇನು ಯೆಲ್ಲೋ ಲೈನ್ ಮೆಟ್ರೋ ಸೇರಿಕೊಳ್ಳುತ್ತದೆ. ಈ ಎಲ್ಲಾ ಮೆಟ್ರೋ ಲೈನ್‌ಗಳು ಬೆಂಗಳೂರಿನ ಟ್ರಾಫಿಕ್ ಚಾಲೆಂಜ್‌ನ ಕಮ್ಮಿ ಮಾಡುವ ನಿರೀಕ್ಷೆ ಇದೆ. ಈಗ ಇದೇ ಗುಂಪಿಗೆ ಮೆಟ್ರೋ 3A ಹಂತ ಸೇರಿಕೊಳ್ಳಲಿದೆ. ಅಂದರೆ..ರೆಡ್‌ಲೈನ್ ಮೆಟ್ರೋ..ಹಾಗಾದ್ರೆ ಈ ಮೆಟ್ರೋದಲ್ಲಿ ಯಾವೆಲ್ಲಾ ನಿಲ್ದಾಣಗಳು ಬರಲಿವೆ, ಈ ಹಂತ ಯಾವಾಗ ಶುರು ಅನ್ನೋದ್ರ ಕಂಪ್ಲೀಟ್ ಅಪ್ಡೇಟ್ ತಿಳಿಯಿರಿ.

ಬೆಂಗಳೂರು ಭಾರತದ ತಂತ್ರಜ್ಞಾನ ಹೃದಯಭಾಗವಾಗಿ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಕೂಡ ತೀವ್ರವಾಗಿ ಹೆಚ್ಚುತ್ತಿದೆ. ಈ ಸವಾಲಿಗೆ ಉತ್ತರವಾಗಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವ ಒಂದು ಪ್ರಮುಖ ಹೆಜ್ಜೆ ಎಂದು ಬಿಟಿಎಂ ಮೆಟ್ರೋ..ಅಂದ್ರೆ ಮೆಟ್ರೋ ಯೋಜನೆಯ ಹಂತ 3A (ರೆಡ್ ಲೈನ್) ಪರಿಗಣಿಸಬಹುದು.
37 ಕಿಲೋಮೀಟರ್ ಉದ್ದ:
ಈ ಹೊಸ ಮಾರ್ಗವು ಹೆಬ್ಬಾಳದಿಂದ ಸರ್ಜಾಪುರದವರೆಗೆ ಸುಮಾರು 37 ಕಿಲೋಮೀಟರ್ ಉದ್ದವಿದ್ದು, 28 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಈ ಮಾರ್ಗವು ಕೋರಮಂಗಲ, ಬೆಳ್ಳಂದೂರು, ಮಾರತ್ತಹಳ್ಳಿ ಮುಂತಾದ ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರದೇಶಗಳ ಮೂಲಕ ಸಾಗುತ್ತದೆ. ಇವುಗಳಲ್ಲಿ ಹಲವಾರು ಐಟಿ ಕಂಪನಿಗಳು, ಕಚೇರಿ ಸಂಕೀರ್ಣಗಳು ಹಾಗೂ ಜನಸಾಂದ್ರ ವಸತಿ ಪ್ರದೇಶಗಳಿದ್ದು, ಪ್ರತಿದಿನವೂ ಸಾವಿರಾರು ಉದ್ಯೋಗಸ್ಥರು ಮತ್ತು ನಾಗರಿಕರು ಈ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಮಾರ್ಗದ ಪ್ರಮುಖ ನಿಲ್ದಾಣಗಳು:
ಸರ್ಜಾಪುರ, ಕಡ ಅಗ್ರಹಾರ ರಸ್ತೆ, ಸೋಂಪುರ, ದೊಮ್ಮಸಂದ್ರ, ಮುತ್ತನಲ್ಲೂರ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲಾರಾಮ್, ದೊಡ್ಡಕನ್ನಳ್ಳಿ, ಕೈಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿ ನಗರ, ಟೌನ್ ಹಾಲ್, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ, ಗಾಲ್ಫ್ ಕ್ಲಬ್, ಅರಮನೆ ಗುಟ್ಟಹಳ್ಳಿ, ಮೇಖ್ರಿ ವೃತ್ತ, ಪಶುವೈದ್ಯಕೀಯ ಕಾಲೇಜು, ಗಂಗಾನಗರ, ಹೆಬ್ಬಾಳ
ಈ ಮಾರ್ಗವು ಬೆಂಗಳೂರು ಮೆಟ್ರೋ ರೆಡ್ ಲೈನ್‌ನ ಭಾಗವಾಗಿದ್ದು, ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆದಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಅನುಮೋದನೆಗಾಗಿ ನಿರೀಕ್ಷೆಯಲ್ಲಿದೆ. ಅನುಮೋದನೆ ದೊರೆತ ಕೂಡಲೇ ಈ ಯೋಜನೆ ಜಾರಿಯಲ್ಲಿಗೆ ಬರಲಿದೆ.
ನಗರದಲ್ಲಿ ಸಾರ್ವಜನಿಕ ಸಾರಿಗೆಗೆ ಉತ್ತೇಜನ:
ಈ ಯೋಜನೆಯು ನಗರದಲ್ಲಿ ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ನೆರವಾಗಲಿದೆ. ಇದೇ ವೇಳೆ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ. ಹೆಚ್ಚು ಜನರು ಮೆಟ್ರೋಗೆ ತಿರುಗಿದರೆ, ಕಾರ್ಬನ್ ಉತ್ಸರ್ಜನೆ ಕಡಿಮೆಯಾಗುವುದರ ಜೊತೆಗೆ, ರಸ್ತೆಗಳ ಮೇಲಿನ ಒತ್ತಡವೂ ಇಳಿಯುವುದು.
ಬೆಂಗಳೂರು ಮೆಟ್ರೋ ಹಂತ 3A ಕೇವಲ ಸಾರಿಗೆ ಯೋಜನೆಯಲ್ಲ, ಇದು ನಗರದ ಭವಿಷ್ಯದ ಸಂಚಾರ ದಿಕ್ಕನ್ನು ರೂಪಿಸುವ ಮಹತ್ವದ ಯೋಜನೆ. ಪ್ರತಿ ದೈನಂದಿನ ಪ್ರಯಾಣಿಕನಿಗೂ ಇದು ಒಂದು ನಿಜವಾದ ಪರಿಹಾರವಾಗಲಿದ್ದು, ನಗರದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ.


Click it and Unblock the Notifications