ಜನವರಿ 26 ಭಾನುವಾರದಂದು ಗಣರಾಜ್ಯೋತ್ಸವ ಇರುವುದರಿಂದ ನಮ್ಮ ಮೆಟ್ರೋ ಒಂದು ಗಂಟೆ ಮುಂಚಿತವಾಗಿ ಕಾರ್ಯಾಚರಣೆಯನ್ನ ಆರಂಭ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ಹೀಗಾಗಿ ನಮ್ಮ ಮೆಟ್ರೋ ಕಾರ್ಯಾಚರಣೆಯ ವೇಳಪಟ್ಟಿಯನ್ನ ಬಿಎಂಆರ್‌ಸಿಎಲ್ ಪರಿಸ್ಕರಿಸಿದೆ. ಈ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ನಮ್ಮ ಮೆಟ್ರೋ ಸೇವೆ ಸಲ್ಲಿಸಲಿದೆ. ನಾಡಪ್ರಭು ಕೆಂಪೇಗೌಡಾ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ಎಲ್ಲಾ ಮಾರ್ಗ ಮೆಟ್ರೋ ಸೇವೆಗಳ ಸಮಯ ಬದಲಾವಣೆಯಾಗಲಿದೆ. ಇನ್ನು ಈ ಬದಲಾವಣೆ ಪ್ರಕಾರ ಎಲ್ಲಾ ಮಾರ್ಗ ಮೆಟ್ರೋಗಳು ಕೂಡ 7:00 AM ಬದಲಿಗೆ 06:00 AM ಗೆ ಕಾರ್ಯನಿರ್ವಹಿಸಲಿವೆ.
ಬೆಂಗಳೂರಿನಲ್ಲಿ ದಿನನಿತ್ಯ ಹೆಚ್ಚಿನ ಭಾಗದ ಜನರು ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಅದರಲ್ಲೂ ಸಂಚಾರ ದಟ್ಟಣೆಯಿಂದಾಗಿ ಜನರು ಬಸ್‌ಗಳಲ್ಲಿ ಹೋಗಲು ಹಿಂದೇಟು ಹಾಕ್ತಿದ್ದಾರೆ. ಈ ವಿಚಾರದಲ್ಲಿ ಎಲ್ಲರೂ ಮೆಟ್ರೋ ಸೇವೆಯನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ. ಜನವರಿ 26 ಭಾನುವಾರ ಹಾಗು ಗಣರಾಜ್ಯೋತ್ಸವ ಇರುವುದರಿಂದ ಹೆಚ್ಚಿನ ಜನರು ಗಣರಾಜ್ಯೋತ್ಸವ ಜೊತೆಗೆ ಲಾಲ್ ಬಾಗ್ ಪ್ರದರ್ಶನವನ್ನ ವೀಕ್ಷಿಸಲು ಹೆಚ್ಚಿನ ಜನರು ತೆರಳುತ್ತಾರೆ. ಈ ಹಿನ್ನೆಲೆ ಜನರಿಗೆ ಯಾವುದೇ ರೀತಿಯ ತೊಂದರೆಯಾಗದೇ ಇರಲಿ ಎಂಬ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ಕಾರ್ಯಚರಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜನವರಿ 26ರಂದು ಭಾನುವಾರ ಮೆಟ್ರೋ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ 20 ಟ್ರಿಪ್‌ಗಳನ್ನ ನಿರ್ವಹಿಸಲಿದೆ ಎಂದು BMRCL ತಿಳಿಸಿದೆ. ಲಾಲ್‌ಬಾಗ್ ಪುಷ್ಪ ಪ್ರದರ್ಶನ ಜೊತೆಗೆ ಮಾದಾವರದ BIEC ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಹೋಗುವವರಿಗೆ ಸಹಾಯವಾಗಲಿ ಎಂದು ನಮ್ಮ ಮೆಟ್ರೋ ಸಮಯದ ಬದಲಾವಣೆಯನ್ನ ಮಾಡ್ತಿದೆ.
ಭಾನುವಾರ ಗಣರಾಜ್ಯೋತ್ಸವ ಇರುವುದರಿಂದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಹಿಡಿದು ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ಸೇವೆಗಳು 7 ಗಂಟೆ ಬದಲಿಗೆ 6 ಗಂಟೆಗೆ ಕಾರ್ಯಾಚರಣೆಯನ್ನ ಆರಂಭಿಸಲಿವೆ. ಇದರ ಜೊತೆಗೆ ನಮ್ಮ ಮೆಟ್ರೋ ಸಹ 20 ಟ್ರಿಪ್ ಚಲಿಸಲಿದೆ ಎಂದು BMRCL ತಿಳಿಸಿದೆ. ಅಂದು ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ ಇರುವುದರಿಂದ ಲಾಲ್‌ಬಾಗ್‌ಗೆ ಹೋಗುವ ಜನರು ಹೆಚ್ಚಿರುತ್ತಾರೆ. ಹೀಗಾಗಿ ಆ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ದಿನದಂದು ಮೆಟ್ರೋ ಕಾರ್ಯಾಚರಣೆಯನ್ನ ಬೇಗ ಆರಂಭಿಸಲಿದೆ. ಜೊತೆಗೆ ಇತ್ತ ಮಾದಾವರದ ಬಿಐಇಸಿಯಲ್ಲಿ ಇರುವ ಕಾರ್ಯಕ್ರಮಕ್ಕೆ ಹೋಗುವವರಿಗೆ ಪ್ರಯಾಣಿಸುವವರಿಗೆ ಸಹಾಯವಾಗಲೆಂದು ಈ ಭಾಗದಲ್ಲಿ ಅಮಯವನ್ನ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದೆ. ಈ ಹಿನ್ನೆಲೆ ಮೆಟ್ರೋ ಸಮಯ ಪರಿಷ್ಕರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಸೂಚನೆಯಲ್ಲಿ ತಿಳಿಸಿದೆ.
ಇದಲ್ಲದೆ ಪ್ರಯಾಣಿಕರಿಗೆ ಮತ್ತಷ್ಟು ಸೇವೆಗಳನ್ನ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿಶೇಷ ಟೋಕನ್‌ಗಳ ವ್ಯವಸ್ಥೆಯನ್ನ ಕೂಡ ಬಿಎಂಆರ್‌ಸಿಎಲ್ ಮಾಡಲಿದೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾದ ಸ್ಮಾರ್ಟ್ಕಾರ್ಡ್ ಹಾಗೂ ಟೋಕನ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್, QR ಟಿಕೆಟ್‌ಗಳನ್ನ ನೀಡಲಿದೆ. ಹೌದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ, ಪ್ರಯಾಣಿಕರಿಗೆ 30 ರೂಗಳ ಪೇಪರ್ ಟಿಕೆಟ್‌ಗಳನ್ನು ನೀಡುವ ಮೂಲಕ ಪ್ರಯಾನೀಕರ ತ್ವರಿತ ಸಂಚಾರಕ್ಕೆ ನೆರವಾಗಲಿದೆ. ಈ ಮೂಲಕ ಪ್ರಯಾಣಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ನಗದು ಮೂಲಕ ಪಾವತಿ ಮಾಡಿದ ಟೋಕನ್‌ಗಳನ್ನ ಇಟ್ಟುಕೊಂಡು ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಪ್ರಯಾಣಿಸಬಹುದು. ಆದ್ರೆ ಈ ಟೋಕನ್‌ಗಳನ್ನ ನೀವು ಮೊದಲೇ ಕರೀದಿ ಮಾಡಬೇಕಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಅಂದರೆ 10 ಗಂಟೆಯಿಂದ ಸಂಜೆ 8 ಗಂಟೆವರೆಗಿನ ಸಮಯದಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ.


Click it and Unblock the Notifications