ಮಂಬರುವ ದಿನಗಳಲ್ಲಿ ನಮ್ಮ ಮೆಟ್ರೋ ಸಂಚಾರ ಬೆಂಗಳೂರಿನಾದ್ಯಂತ ವಿಸ್ತರಿಸಲಿದೆ. ಇನ್ನು ಐದು ವರ್ಷಗಳಲ್ಲಿ ನಮ್ಮ ಮೆಟ್ರೋಗೆ 143 ಕಿಮೀ ಹೊಸ ಮಾರ್ಗ ಸೇರ್ಪಡೆಯಾಗಲಿದ್ದು, ಇದರ ಜೊತೆಗೆ 95 ನಿಲ್ದಾಣಗಳು ಕೂಡ ಸೇರಲಿವೆ. ಸಧ್ಯದಲ್ಲೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಒಟ್ಟು ಆರು ಹೊಸ ಮಾರ್ಗಗಳನ್ನ ತೆರೆಯುವ ಮೂಲಕ ಮೆಟ್ರೋ ಸಂಚಾರವನ್ನ 220 ಕಿಲೋಮೀಟರ್‌ಗಳಷ್ಟು ವಿಸ್ತರಣೆ ಮಾಡಲಿದೆ.
ಅಲ್ಲದೆ 2026ರ ವೇಳೆಗೆ ನೀಲಿ ಮತ್ತು ಗುಲಾಬಿ ಮೆಟ್ರೋ ಮಾರ್ಗಗಳು ವಿಸ್ತರಣೆಯಾಗಲಿವೆ. ಇದರ ಜೊತೆಗೆ ಎಲೆಕ್ರಾನಿಕ್ ಸಿಟಿ ಹಳದಿ ಮಾರ್ಗ ಮೆಟ್ರೋ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನ ವೇಳೆಗೆ ಕಾರ್ಯಾಚರಣೆಯನ್ನ ಆರಂಭಿಸುವ ನಿರೀಕ್ಷೆ ಇದೆ.

ಬೆಂಗಳೂರು ಮೆಟ್ರೋ ಸಂಚಾರ ವೈಟ್‌ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗವು 43.49 ಕಿಮೀ ಹೊಂದಿದೆ. ಹಾಗೆ ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್ ಗ್ರೀನ್ ಲೈನ್ 33.5 ಕಿಮೀ ಹೊಂದಿದೆ. ಈ ಮಾರ್ಗಗಳು ಒಟ್ಟು 77 ಕಿಲೋಮೀಟರ್‌ಗಳನ್ನ ಒಳಗೊಂಡಿದೆ. ಇನ್ನು ಇತ್ತೀಚೆಗೆ ಹೆಬ್ಬಾಳ- ಸರ್ಜಾಪುರ ಮಾರ್ಗ್ ಮೆಟ್ರೋಗು ಕೂಡ ಅನುಮೋದನೆ ನೀಡಿದ್ದು, ಸಧ್ಯದಲ್ಲೇ ಇದರ ಕಾಮಗಾರಿ ಕೂಡ ಆರಂಭವಾಗಲಿದೆ. ಒಟ್ನಲ್ಲಿ 2026 ರ ಅಂತ್ಯದ ವೇಳೆಗೆ, BMRCL ಬ್ಲೂ ಮತ್ತು ಪಿಂಕ್ ಲೈನ್‌ಗಳಲ್ಲಿ ಮೆಟ್ರೊ ಸಂಚಾರ ಆರಂಭವಾಗಲಿದೆ. ಈಗ ಆ ಎರಡೂ ಮಾರ್ಗಗಳು ಕೂಡ ನಿರ್ಮಾಣ ಹಂತದಲ್ಲಿವೆ. ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ಈ ವರ್ಷ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಆರಂಭವಾಗುವ ನಿರೀಕ್ಷೆಯಿದೆ.
ಹಂತ ಎರಡರ 58.19 ಕಿಮೀ ಬ್ಲೂ ಲೈನ್ ಮೆಟ್ರೋ ಮತ್ತು 21.26 ಕಿಮೀ ಪಿಂಕ್ ಲೈನ್ ಮೆಟ್ರೋ ಎರಡೂ ಕೂಡ ನಿರ್ಮಾಣ ಪ್ರಗತಿಯಲ್ಲಿದ್ದು, 2026 ರ ಅಂತ್ಯದ ವೇಳೆಗೆ ಎರಡೂ ಮೆಟ್ರೋ ಮಾರ್ಗಗಳು ಆರಂಭವಾಗುವ ನಿರೀಕ್ಷೆ ಇದೆ ಎಂದು ಸರ್ಕಾರ ತಿಳಿಸಿದೆ. ಇನ್ನು ಇತ್ತ ಬ್ಲೂ ಲೈನ್ ಮೆಟ್ರೋ ಮಾರ್ಗ ಸೆಂಟ್ರಲ್ ಸಿಲ್ಕ್ ಬೋರ್ಡ್, ಕೃಷ್ಣರಾಜಪುರಂ ಮತ್ತು ಕೆಐಎಗೆ ಸಂಪರ್ಕಿಸುವ 2ಎ ಮತ್ತು 2ಬಿ ವಿಭಾಗಗಳ ಕಾಮಗಾರಿ 45% ಪೂರ್ಣಗೊಂಡಿದೆ.
ಬೆಂಗಳೂರು ಮೆಟ್ರೊ ರೈಲು ಕರ್ಪೋರೇಷನ್ ಲಿಮಿಟೆಡ್ (BMRCL) ನಗರದಾದ್ಯಂತ ತನ್ನ ಮೆಟ್ರೊ ಸಂಚಾರವನ್ನ ಹೆಚ್ಚಿಸಲು ಹಾಗೆ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲು ಆರು ಹೊಸ ಮೆಟ್ರೋ ಮಾರ್ಗಗಳನ್ನ ಆರಂಭಿಸಲು ಮುಂದಾಗಿದೆ. 15,611 ಕೋಟಿ ರೂ. ವೆಚ್ಚದ 3 ನೇ ಹಂತದ ಕಿತ್ತಳೆ ಮೆಟ್ರೋ ಮಾರ್ಗ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಇದಕ್ಕಾಗಿ ಈಗಾಗಲೇ ಜೆ.ಪಿ ನಗರ 4 ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿ, ಕಡಬಗೆರೆ ಮೆಟ್ರೋಗಾಗಿ ಜಾಗವನ್ನ ಹುಡುಕಲಾಗಿದೆ. 129,743 ಚದರ ಮೀಟರ್ ಭೂಮಿಯಲ್ಲಿ ಈಗಾಗಲೇ 777 ಖಾಸಗಿ ಆಸ್ತಿಗಳನ್ನು ಮೆಟ್ರೋ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗವು 16 ನಿಲ್ದಾಣಗಳೊಂದಿಗೆ 19.15 ಕಿಲೋಮೀಟರ್‌ಗಳನ್ನು ವಿಸ್ತರಿಸಿದೆ. ಇದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಕಲೇನ ಅಗ್ರಹಾರ-ನಾಗವಾರ ಗುಲಾಬಿ ಮಾರ್ಗವು 18 ನಿಲ್ದಾಣಗಳೊಂದಿಗೆ 21.26 ಕಿಲೋಮೀಟರ್‌ಗಳನ್ನು ಒಳಗೊಂಡಿದೆ. ಈ ಮಾರ್ಗವು ದಕ್ಷಿಣ ಬೆಂಗಳೂರು ಮತ್ತು ಉತ್ತರದ ಉಪನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ಬ್ಲೂ ಲೈನ್-1 ಮೆಟ್ರೋ ಮಾರ್ಗವು 13 ನಿಲ್ದಾಣಗಳನ್ನ ಹೊಂದುವುದರ ಜೊತೆಗೆ 19.75 ಕಿಲೋಮೀಟರ್‌ಗಳನ್ನ ವಿಸ್ತರಿಸಲಿದೆ. KR ಪುರಂ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಬ್ಲೂ ಲೈನ್-2 16 ನಿಲ್ದಾಣಗಳೊಂದಿಗೆ 38.44 ಕಿಲೋಮೀಟರ್ ವಿಸ್ತರಿಸಲಿದೆ. ಇದು ವಿಮಾನ ನಿಲ್ದಾಣಕ್ಕೆ ಸಂಚಾರ ದಟ್ಟಣೆ ಇಲ್ಲದೆ ಸಂಚರಿಸಲು ಸಹಾಯ ಮಾಡುತ್ತದೆ. ಹಾಗೆ, ಜೆಪಿ ನಗರ 4 ನೇ ಹಂತ-ಕೆಂಪಾಪುರ ಆರೆಂಜ್ ಲೈನ್ 23 ನಿಲ್ದಾಣಗಳ ಜೊತೆಗೆ 32.15 ಕಿಲೋಮೀಟರ್ ವಿಸ್ತರಿಸಿದೆ. ಈ ಆರು ಮಾರ್ಗಗಳು 143.25 ಕಿಲೋಮೀಟರ್ ಮೆಟ್ರೋ ಮಾರ್ಗಗಳ ಜೊತೆಗೆ 95 ಹೊಸ ನಿಲ್ದಾಣಗಳನ್ನ ಹೊಂದಲಿವೆ. ಇದು ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಮತ್ತು ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವನ್ನ ವಹಿಸಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications