ಬೆಂಗಳೂರು ಮೆಟ್ರೋ ವ್ಯಾಪ್ತಿಯ ವಿಸ್ತರಣೆ ಅತಿ ಚುರುಕಾಗಿ ನಡೆಯುತ್ತಿದೆ. ಈಗಾಗಲೇ ಇರುವ ಎರಡು ಮಾರ್ಗದ ಮೆಟ್ರೋ ಸದ್ಯದ ಮಟ್ಟಿಗೆ ಸಾಕಾಗುತ್ತಿಲ್ಲ. ಹೀಗಾಗಿ ಹಳದಿ ಮಾರ್ಗ, ಪಿಂಕ್ ಮಾರ್ಗ, ನೀಲಿ ಮಾರ್ಗದ ಮೆಟ್ರೋಗಳ ಬಗ್ಗೆ ನವೀಕರಣ ನಡೆಯುತ್ತಿದೆ. ಇನ್ನು ಈಗ ಬಹುಮುಖ್ಯವಾಗಿರುವ ಹಳದಿ ಮಾರ್ಗದ ಮೆಟ್ರೋ ಕಾಮಗಾರಿ, 2017 ರಲ್ಲಿಯೇ ಆರಂಭಿಸಲಾಗಿತ್ತು. 2025ರ ಅಂತ್ಯದೊಳಗೆ ಈ ನಿಲ್ದಾಣದಲ್ಲಿ ಪ್ರಯಾಣಿಕರು ಸವಾರಿ ಮಾಡಬಹುದು ಎನ್ನಲಾಗಿದೆ.

ಹೌದು, ಈ ಹಳದಿ ಮಾರ್ಗವು 2025ರ ಅಂತ್ಯದ ವೇಳೆಗೆ ಸಾರ್ವಜನಿಕ ಸೇವೆಗಾಗಿ ಲಭ್ಯವಾಗುವ ಸಾಧ್ಯತೆ ಇದೆ. ಹಳದಿ ಮಾರ್ಗದ ಉದ್ದ 18.82 ಕಿ.ಮೀ, ಇದು ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಪರ್ಕ ಸೇವೆ ಒದಗಿಸಲಿದೆ. ಈ ಮೂಲಕ ಮೆಟ್ರೋ ಜಾಲವು ಬೆಂಗಳೂರಿನ ದಕ್ಷಿಣ ಭಾಗದ ಪ್ರಮುಖ ವಾಣಿಜ್ಯ ಹಾಗೂ ನಿವಾಸಿ ಪ್ರದೇಶಗಳಿಗೆ ತಲುಪಲಿದೆ.
ಬದಲಾವಣೆ ತರುವ ಚಾಲಕರಿಲ್ಲದ ರೈಲುಗಳು:
ಇನ್ನು ಈ ಹಳದಿ ಮಾರ್ಗದಲ್ಲಿ ನಾಲ್ಕು ಚಾಲಕರಿಲ್ಲದ ಮೆಟ್ರೋ ರೈಲುಗಳು ಕಾರ್ಯಾರಂಭಗೊಳ್ಳಲಿವೆ. ಈ ಹೊಸ ತಂತ್ರಜ್ಞಾನ ನವೀನತೆಯಲ್ಲದೆ ಸುರಕ್ಷತೆ ಮತ್ತು ನಿಖರತೆಯಲ್ಲೂ ಮುಂದೆ ಇರಲಿದೆ. ಚಾಲಕರಿಲ್ಲದ ರೈಲುಗಳು ಇಡೀ ಮೆಟ್ರೋ ವ್ಯವಸ್ಥೆಯ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದ್ದು, ಸಂಚಾರದ ಸಮಯ ನಿರ್ವಹಣೆಯಲ್ಲಿಯೂ ಉನ್ನತ ಮಟ್ಟವನ್ನು ತಲುಪಲಿದೆ.
ಹಳದಿ ಮಾರ್ಗದಲ್ಲಿ ಇರುವ ನಿಲ್ದಾಣಗಳ ಸಂಪೂರ್ಣ ಪಟ್ಟಿ:
ಈ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಅವು ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಕೇಂದ್ರ ರೇಷ್ಮೆ ಮಂಡಳಿ, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲು ಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರತೇನ ಅಗ್ರಹಾರ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ಆಗಿಎ.
ಈ ನಿಲ್ದಾಣಗಳು ಬೆಂಗಳೂರಿನ ಪ್ರಮುಖ ಐಟಿ ಹಬ್‌ಗಳು, ವ್ಯಾಪಾರ ಕೇಂದ್ರಗಳು ಮತ್ತು ನಿವಾಸಿ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಇದು ಸಾವಿರಾರು ಜನ ಪ್ರಯಾಣಿಕರಿಗೆ ದೈನಂದಿನ ಜೀವನದಲ್ಲಿ ಬಹುಮಟ್ಟಿಗೆ ಸುಧಾರಣೆ ತರುತ್ತದೆ.
ಪಿಂಕ್ ಲೈನ್ ಅಭಿವೃದ್ಧಿಯಲ್ಲಿ ವಿಳಂಬ:
ಹಳದಿ ಮಾರ್ಗದ ಜೊತೆಗೆ, ಪಿಂಕ್ ಲೈನ್‌ಗೂ ಅಪಾರ ನಿರೀಕ್ಷೆಯಿದೆ. ಆದಾಗ್ಯೂ, ಈ ಮಾರ್ಗದ ಕಾಮಗಾರಿ ನಿರಂತರವಾಗಿ ವಿಳಂಬವಾಗುತ್ತಲೇ ಇದೆ. ಮೊದಲು ಈ ಮಾರ್ಗವನ್ನು 2020ರಲ್ಲಿಯೇ ತೆರೆದಿರಬೇಕಿತ್ತು, ಆದರೆ ಯೋಜನೆ ಮುಂದೂಡುತ್ತಾ ಡಿಸೆಂಬರ್ 2025 ರವರೆಗೆ ತಲುಪಿದೆ. ಇತ್ತೀಚೆಗೆ ಬಿಎಂಆರ್‌ಸಿಎಲ್ ಈ ಮಾರ್ಗವನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.
ಮೆಟ್ರೋ ಪಿಂಕ್ ಲೈನ್‌ನ ಹಂತ 1 ಎಂದರೆ ಕಲೇನಾ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿಮೀ ಎತ್ತರಿಸಿದ ಮಾರ್ಗ, ಇದು 2026ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹಂತ 2 ಎಂದರೆ ಡೈರಿ ಸರ್ಕಲ್‌ನಿಂದ ನಾಗವಾರವರೆಗೆ ಇರುವ 13.8 ಕಿಮೀ ಭೂಗತ ಮಾರ್ಗ, ಇದು ಸೆಪ್ಟೆಂಬರ್ 2026 ರ ವೇಳೆಗೆ ಪೂರ್ಣಗೊಳ್ಳಬಹುದು ಎಂದು ಬಿಎಂಆರ್‌ಸಿಎಲ್ ಮೂಲಗಳಿಂದ ತಿಳಿದುಬಂದಿದೆ.
ಮೆಟ್ರೋ ಯೋಜನೆಯಿಂದ ಜನತೆಗೆ ಲಾಭವೇನು?
ಬೆಂಗಳೂರು ನಗರ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವಂತೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಗಟ್ಟಿಯಾದ ಬದಲಾವಣೆ ಅಗತ್ಯವಾಗಿದೆ. ಈ ಹಳದಿ ಹಾಗೂ ಪಿಂಕ್ ಲೈನ್‌ಗಳ ಕಾರ್ಯಾರಂಭದೊಂದಿಗೆ, ನಗರದ ಪ್ರಮುಖ ಭಾಗಗಳನ್ನು ತ್ವರಿತವಾಗಿ ಸಂಪರ್ಕಿಸುವ ವ್ಯವಸ್ಥೆ ದೊರೆಯಲಿದೆ. ಇದರಿಂದ ಟ್ರಾಫಿಕ್ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ಕೆಲಸದ ಸ್ಥಳಗಳಿಗೆ ತಲುಪುವ ಸಮಯವೂ ಸಂಕ್ಷಿಪ್ತವಾಗಲಿದೆ. ಇದಲ್ಲದೆ, ಪರಿಸರ ಸ್ನೇಹಿಯಾದ ಸಾರಿಗೆ ವಿಧಾನವಾಗಿ ಮೆಟ್ರೋ ಯೋಜನೆ ಶ್ಲಾಘನೀಯವಾಗಿದೆ.
ಹಳದಿ ಮಾರ್ಗವು ನವೀನತೆ, ತಂತ್ರಜ್ಞಾನ, ವೇಗ ಮತ್ತು ಸಮಗ್ರತೆಯೊಂದಿಗೆ ನಗರ ಸಾರಿಗೆಯ ಭವಿಷ್ಯವನ್ನು ರೂಪಿಸುತ್ತಿದೆ. ಬೆಂಗಳೂರಿನ ಸಾರಿಗೆ ನಕ್ಷೆಗೆ ಈ ಮಾರ್ಗ ಹೊಸ ಚೈತನ್ಯ ತುಂಬುವಂತಿದ್ದು, ಸಾಮಾನ್ಯ ನಾಗರಿಕರಿಂದ ಐಟಿ ಉದ್ಯೋಗಿಗಳವರೆಗೆ ಎಲ್ಲರಿಗೂ ಅನುಕೂಲವಾಗಲಿದೆ. ಇತ್ತೀಚಿನ ಮೆಟ್ರೋ ಅಭಿವೃದ್ಧಿಗಳ ಹಾದಿಯಲ್ಲಿ ಬಿಎಸ್‌ಆರ್‌ಸಿಎಲ್ ಹೆಜ್ಜೆ ಹೆಜ್ಜೆಯಾಗಿ ಮುನ್ನಡೆಯುತ್ತಿರುವುದು ಸ್ಪಷ್ಟವಾಗಿದೆ.


Click it and Unblock the Notifications