ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಅಗ್ಗಾಗ್ಗೆ ಹಲವು ವಿಚಾರಗಳಿಗೆ ಚರ್ಚೆಯಲ್ಲಿರುತ್ತದೆ. 119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ವೇ ಆರಂಭವಾಯಿತೆಂದೆರೆ ಸಾಕು ಕಾರಿನ ಆಕ್ಸಲರೇಟರ್ ಮೇಲೆ ಕಾಲಿಟ್ಟರೆ ಸಾಕು ಫುಲ್ ಜೋಷ್‌ನಿಂದ ಬೆಂಗಳೂರಿಗೋ -ಮೈಸೂರಿಗೋ ತಲುಪಿರುತ್ತೇವೆ. ಎಕ್ಸ್‌ಪ್ರೆಸ್ ವೇಯಲ್ಲಿ ಬೈಕ್, ಆಟೋ, ಎತ್ತಿನಗಾಡಿ ಸೇರಿ ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಇತರ ಸಣ್ಣ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಅಲ್ಲದೇ 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆಟೋ ರಿಕ್ಷಾದಂತಹ ವಾಹನಗಳ ವೇಗ ಇನ್ನೂ ಕಡಿಮೆ ಇರುತ್ತದೆ. ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಹೀಗಿದ್ರೂ ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹಣೆ ಆರಂಭವಾದ ಮೊದಲ ವರ್ಷದಲ್ಲೇ ಭರ್ಜರಿ ಟೋಲ್ ಶುಲ್ಕ ಸಂಗ್ರಹಿಸಿದೆ.

ಹೌದು ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ, ಟೋಲ್ ಸಂಗ್ರಹಣೆಯ ವಿಚಾರದಲ್ಲೂ ಸೂಪರ್ ಫಾಸ್ಟ್ ಎನಿಸಿದ್ದು, ಟೋಲ್ ಸಂಗ್ರಹಣೆ ಆರಂಭವಾದ ಮೊದಲ ವರ್ಷದಲ್ಲೇ ಬರೋಬ್ಬರಿ 438.28 ಕೋಟಿ ರೂ. ಟೋಲ್ ಶುಲ್ಕವನ್ನು ಸಂಗ್ರಹಿಸಿದೆ.
ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಹೆದ್ದಾರಿ ಪ್ರಾಧಿಕಾರ ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿ ರೂ.8172 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿಯನ್ನು ನಿರ್ಮಿಸಿದೆ. ಈಎಕ್ಸ್‌ಪ್ರೆಸ್ ವೇ ಆಗಿರುವ ದೊಡ್ಡ ಅನುಕೂಲವೆಂದರೆ ಪ್ರಯಾಣದ ಅವಧಿ ಕಡಿಮೆಯಾಗುವುದು. ಈ ಮೊದಲು ಬೆಂಗಳೂರಿಂದ ಮೈಸೂರು ತಲುಪಲು 150 ನಿಮಿಷ ಸಮಯ ಹಿಡಿಯುತ್ತಿತ್ತು. ಆದರೆ ಅದು 90 ನಿಮಿಷಕ್ಕೆ ತಗ್ಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ್ದ 118 ಕಿ.ಮೀ ಉದ್ದದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೨೩ರ ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಿದ್ದರು. ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ 21 ತಿಂಗಳುಗಳಾಗಿವೆ. ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯದಲ್ಲಿ 58 ಕಿ.ಮೀ ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ ವ್ಯಾಪಿಸಿದೆ.
ಇದೀಗ ಒಂದೇ ವರ್ಷದಲ್ಲಿ ಎಕ್ಸ್‌ಪ್ರೆಸ್ ವೇ 438.28 ಕೋಟಿ ರೂ. ಶುಲ್ಕ ಸಂಗ್ರಹಿಸಿದ್ದು ಅಲ್ಪ ಅವಧಿಯಲ್ಲೇ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿದ್ದ ಶೇ.10ರಷ್ಟು ಹಣ ಟೋಲ್ ಶುಲ್ಕದ ಮೂಲಕ ಎನ್‌ಎಚ್‌ಎಐಗೆ ಜಮೆಯಾಗಿದೆ. ಈ ಸಂಗತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಖಚಿತಪಡಿಸಿದೆ. ದೇಶದ ಹೆದ್ದಾರಿಯಲ್ಲಿ ಸಂಗ್ರಹವಾಗುತ್ತಿರುವ ಟೋಲ್ ಕುರಿತು ಸಂಸದ ಅಸಾದುದ್ದೀನ್ ಒವೈಸಿ ಅವರು ಲೋಕಸಭೆಗೆ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಹಿತಿಯೂ ಇದೆ.
ಹೆದ್ದಾರಿಯುದ್ದಕ್ಕೂ ಮೂರು ಟೋಲ್ ಸಂಗ್ರಹ ಕೇಂದ್ರಗಳಿವೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಕಣಿಮಿಣಿಕೆ ಬಳಿ, ಮೈಸೂರಿನಿಂದ ಬೆಂಗಳೂರಿನ ಕಡೆಗೆ ಪ್ರಯಾಣಿಸುವವರಿಗೆ ಶೇಷಗಿರಿಹಳ್ಳಿ ಬಳಿ, ಹಾಗೂ ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹಣೆ ಕೇಂದ್ರಗಳಿವೆ. ಕಣಿಮಿಣಿಕೆ , ಶೇಷಗಿರಿಹಳ್ಳಿ ಟೋಲ್ ಗಳಲ್ಲಿ 278.91 ಕೋ.ರೂ. ಹಾಗೂ 159.37 ಕೋ.ರೂ. ಸಂಗ್ರಹವಾಗಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಗಿದ್ದು 2023 ಜು.1ರಿಂದ, 2023-24ನೇ ಸಾಲಿನಲ್ಲಿ 270.96 ಕೋಟಿ ರೂ., 2024-25ನೇ ಸಾಲಿನಲ್ಲಿ 167.32 ಕೋಟಿ ರೂ., ಪ್ರಸಕ್ತ ಹಣಕಾಸಿನ ವರ್ಷ ಪೂರ್ಣಗೊಳ್ಳಲು ಇನ್ನೂ 4 ತಿಂಗಳು ಇದ್ದು, ಟೋಲ್ ಸಂಗ್ರಹಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ .
ಮೂರು ಬಾರಿ ಟೋಲ್ ಶುಲ್ಕ ಪರಿಷ್ಕರಣೆ:
ಕಳೆದ 20 ತಿಂಗಳಲ್ಲಿ ಹೆದ್ದಾರಿಯಲ್ಲಿ ಮೂರು ಬಾರಿ ಟೋಲ್ ಪರಿಷ್ಕರಣೆ ಮಾಡಲಾಗಿದೆ. ಇದೇ ವರ್ಷ ಏಪ್ರಿಲ್ ನಿಂದ ಜಾರಿಗೆ ಬಂದಿರುವ ಸದ್ಯ ಒಂದು ಕಾರಿನ ಏಕಮುಖ ಸಂಚಾರಕ್ಕೆ 170 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 255 ರೂ. ಇದೆ. ಏಳು ಅಥವಾ ಅದಕ್ಕಿಂತ ಆಕ್ಸೆಲ್ ವಾಹನದ ಏಕಮುಖ ಸಂಚಾರಕ್ಕೆ 1362 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 1660 ರೂ. ಟೋಲ್ ನಿಗದಿಪಡಿಸಲಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications