ಸಿಲಿಕಾನ್ ಸಿಟಿ ಜನರಿಗೆ ಮತ್ತೆ ನಮ್ಮ ಮೆಟ್ರೋ ಶಾಕ್ ನೀಡಿದೆ. ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ಅವಲಂಭಿಸಿದ್ದ ಜನರಿಗೆ ಈಗ ಮತ್ತೆ ಮೆಟ್ರೋ ದರ ಏರಿಕೆಯ ಶಾಕ್ ನೀಡಿದೆ. ಈ ಹಿಂದೆ ಸಹ ಈ ವಿಚಾರವಾಗಿ ಹಲವು ಚರ್ಚೆಗಳನ್ನ ನಡೆಸಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಗಮ ಈಗ ಜನರಿಗೆ ದರ ಏರಿಕೆಯ ಬಿಸಿ ಮುಟ್ಟಿಸಲು ಮುಂದಾಗಿದೆ.
ಅಲ್ಲದೆ ರಾಜ್ಯದಲ್ಲಿ ಮೆಟ್ರೋ ಸೇವೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಜನರಿಗೆ ಅನುಕೂಲವಾಗುವಂತೆ ಮೆಟ್ರೋ ದರವನ್ನ ನಿಗದಿಪಡಿಸಿದ್ದ "ನಮ್ಮ ಮೆಟ್ರೋ" ಈಗ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಲು ಹೊರಟಿದೆ. ವರ್ಷಾಂತ್ಯಕ್ಕೆ ರಾಜಧಾನಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಲು ನಮ್ಮ ಮೆಟ್ರೋ ಸಜ್ಜಾಗಿದೆ. ಹಾಗೆ ಡಿಸೆಂಬರ್ ಅಂತ್ಯಕ್ಕೆ ಮೆಟ್ರೋ ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಈ ವಿಚಾರವಾಗಿ ನಮ್ಮ ಮೆಟ್ರೋ ಸಭೆ ನಡೆಸಿದೆ. ಅದರಲ್ಲಿ ಬಿಎಂಆರ್‌ಸಿಎಲ್ ಒಳಗೊಂಡತೆ ಅಕ್ಟೋಬರ್ 28ರ ವರೆಗೂ ಸಾರ್ವಜನಿಕರ ಅಭಿಪ್ರಾಯಗಳನ್ನ ಸಂಗ್ರಹಿಸಿತ್ತು. ಆದ್ರೀಗ ಇದೇ ವಿಷಯವಾಗಿ ಮತ್ತೆ ಕಮಿಟಿ ಮತ್ತೊಂದು ಸಭೆ ಕರೆದಿದೆ. ನಂತರ ಟಿಕೆಟ್ ದರ ಹೆಚ್ಚಳದ ಕುರಿತು ಮತ್ತೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದೆ.
ಮೆಟ್ರೋ ದರ ಹಚ್ಚಳದ ಕುರಿತು ಈಗಾಗಲೇ 2 ಬಾರಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಈ ಮಧ್ಯೆ ಮತ್ತೆ ಬಿಎಂಆರ್‌ಸಿಎಲ್ ನಿಗಮ ಸಭೆ ಕರೆದಿದೆ. ಈ ವಾರದಲ್ಲೇ ಈ ಸಭೆ ನಡೆಯಲಿದ್ದು,ಸಾರ್ವಜನಿಕರು, ಹಾಗು ಕಮಿಟಿ ಸದಸ್ಯರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಕಳೆದ ಕೆಲವು ವರ್ಷಗಳಿಂದ ಬಿಎಂಆರ್‌ಸಿಎಲ್ ದರ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಸದ್ಯಕ್ಕೆ ಎಷ್ಟು ದರ ಹೆಚ್ಚಳ ಮಾಡಬೇಕು ಎನ್ನುವುದೊಂದೆ ಬಾಕಿ ಉಳಿದಿದೆ. ಈ ಕುರಿತಾಗಿಯೆ ಮೆಟ್ರೋ ಅಧಿಕಾರಿಗಳೀಗ ಚರ್ಚೆಗೆ ಮುಂದಾಗಿದ್ದಾರೆ.
ಮೆಟ್ರೋ ದರ ಎಷ್ಟು ಹೆಚ್ಚಳವಾಗಬಹುದು?
ಈಗ ನೋಡೋದಾದ್ರೆ ನಮ್ಮ ಮೆಟ್ರೋ ಸದ್ಯಕ್ಕೆ 10ರಿಂದ 60 ರೂಪಾಯಿಗಳ ವರೆಗೆ ಚಾರ್ಜ್ ಮಾಡ್ತಿದೆ. ನಂತರ ದಿನಗಳಲ್ಲಿ ಕನಿಷ್ಠ ಬೆಲೆಯನ್ನ ಹಾಗೆ ಉಳಿಸಿಕೊಂಡು ಗರಿಷ್ಠ ದೆವನ್ನ ಮಾತ್ರ ಏರಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ.
ಮೆಟ್ರೋದಲ್ಲಿ ಈಗಾಗಲೇ ನಿಗದಿಯಾಗಿರುವ ಕನಿಷ್ಠ ಬೆಲೆ ಅಂದರೆ 10 ರೂಪಾಯಿ ಏರಿಕೆಯಾಗಿ 15 ರೂಪಾಯಿ ಆಗಬಹುದು. ಹಾಗೆ ಗರಿಷ್ಠ ಬೆಲೆ 60 ರೂಪಾಯಿ ಇರುವುದು 75 ರೂಪಾಯಿ ಆಗಬಹುದು ಎನ್ನಲಾಗ್ತಿದೆ. ಇದರಿಂದಾಗಿ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪ್ರಯಾಣಿಸುವ ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
2025 ರಿಂದ ಹಳದಿ ಮಾರ್ಗ ಮೆಟ್ರೋ ಸೇವೆ!
ಈ ದರ ಎರಿಕೆಯ ಶಾಕ್ ಮಧ್ಯೆಯೆ ಜನವರಿಯಲ್ಲಿ ಬೆಂಗಲೂರು ಮೆಟ್ರೋ ಹಳಿದಿ ಮಾರ್ಗ ಸಂಚಾರ ಆರಂಭವಾಗಲಿದೆ. ಇದಾದ ನಂತರ ಮೆಟ್ರೋ ಬೆಲೆ ಏರಿಕೆಯಿಂದ ಸಾಕಷ್ಟು ಜನರ ಜೇಬಿಗೆ ಕತ್ತರಿ ಬೀಳಲಿದೆ. ಈಗಾಗಲೇ ಮೆಟ್ರೋ ಹಳದಿ ಮಾರ್ಗವು ತನ್ನ ಕಾರ್ಯಾಚರಣೆಯನ್ನ ಪ್ರಾರಂಭಿಸಿದೆ. ಮೆಟ್ರೋ ಮಾರ್ಗದ ಹಳಿಗಳು ಈಗಾಗಲೇ ತಯಾರಾಗಿವೆ ಆದರೆ ಮೆಟ್ರೋ ರೈಲುಗಳ ಕೊರತೆಯಿಂದಾಗಿ ಹಳದಿ ಮೆಟ್ರೋ ಸಂಚಾರ ವಿಳಂಬವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮೆಟ್ರೋ ರೈಲಿನ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಜನವರಿ ಆರಂಭದಲ್ಲಿ ಹಳದಿ ಮೆಟ್ರೋ ಸೇವೆಯನ್ನ ಜನರು ಪಡೆಯಬಹುದಾಗಿದೆ.
ಈ ಮೆಟ್ರೋ ಸಂಚಾರವು ದಕ್ಷಿಣದ ತುದಿಯಿಂದ ಪ್ರಾರಂಭವಾಗಲಿದ್ದು, RV ರಸ್ತೆ ಇದರ ಮೊದಲ ನಿಲ್ದಾಣವಾಗಲಿದೆ. ಇದು ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತು ಬುಲ್ ಟೆಂಪಲ್‌ನಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ನಂತರ ಆಗ್ನೇಯ ಕಡೆ ಚಲಿಸುವ ಮೆಟ್ರೋ ಜಯದೇವ ಆಸ್ಪತ್ರೆ, BTM ಲೇಔಟ್, HSR ಲೇಔಟ್ ಮತ್ತು ಬೆಂಗಳೂರಿನ ಐಟಿ ಸಿಟಿಯಾಗಿರುವ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಗಳ ಮೂಲಕ ಹಾದುಹೋಗಲಿದೆ. ಈ ನಿಲ್ದಾಣಗಳು ವಾಣಿಜ್ಯ ಮತ್ತು ವಸತಿ ಪ್ರದೇಶಗಳಿಗೆ ಹತ್ತಿರದಲ್ಲಿವೆ. ಇದರಿಂದಾಗಿ ದಿನನಿತ್ಯ ಕೆಲಸಕ್ಕೆ ಹೋಗುವ ಉದ್ಯೋಗಿಗಳು, ವ್ಯಾಪಾರಿಗಳು ಹಾಗು ಇತರರಿಗೆ ಸಹಾಯಕವಾಗಲಿದೆ.
ಒಟ್ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಒಂದರ ನಂತರ ಒಂದರಂತೆ ಹೊಡೆತಗಳು ಬೀಳ್ತಾನೆ ಇವೆ. ಈ ಹಿಂದೆ ಮಳೆರಾಯನಿಂದಾಗಿ ನಷ್ಟ ಅನುಭವಿಸಿದ್ದ ಬೆಂಗಳೂರಿಗರು ಈಗ ಮತ್ತೆ ಮಟ್ರೋ ಬೆಲೆ ಏರಿಕೆಯ ಪೆಟ್ಟು ತಿನ್ನುವಂತಾಗಿದೆ. ಬೆಂಗಳೂರಿನ ಬೃಹತ್ ಟ್ರಾಫಿಕ್‌ನಿಂದ ಪಾರಾಗಲು ಮೆಟ್ರೋ ಸೇವೆ ಇದೆ ಎಂದು ನಿಟ್ಟುಸಿರು ಬಿಟ್ಟಿದ್ದ ಸಿಲಿಕಾನ್ ಸಿಟಿ ಮಂದಿಗೆ ನಮ್ಮ ಮೆಟ್ರೋ ಬೆಲೆ ಏರಿಕೆ ಈಗ ಬಿಸಿ ತುಪ್ಪದಂತಾಗಿದೆ. ಅಲ್ಲದೆ ಮೆಟ್ರೋ ದರ ಏರಿಕೆ ಮಾಡಿ ಸಾರ್ವಜನಿಕರ ಮುಂದಿಟ್ಟಾಗ ಮೆಟ್ರೋ ಪ್ರಾಯಣಿಕರು ಬಿಎಂಆರ್‌ಸಿಎಲ್ ಪ್ರಕಟಣೆಯನ್ನ ಸ್ವಾಗತ ಮಾಡುತ್ತಾ ಅಥವಾ ಮತ್ತೆ ಬಸ್, ಕ್ಯಾಬ್‌ಗಳ ಮೊರೆ ಹೋಗುತ್ತಾ ಎಂಬುದು ಪ್ರಶ್ನೆಯಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications