ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜನತೆಗೆ ಅತಿ ಅವಶ್ಯಕವಾಗಿರುವ ಸಾರಿಗೆ ಸೌಕರ್ಯ. ಈಗಾಗ್ಲೇ ಹಸಿರು, ನೇರಳೆ ಹಾಗೂ ಹಳದಿ ಮಾರ್ಗದ ಮೆಟ್ರೋ ಸಂಚಾರ ಕಾರ್ಯ ನಿರ್ವಹಿಸುತ್ತಿದ್ದು, ಟ್ರಾಫಿಕ್ ಜಾಮ್ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸ್ತಿವೆ. ಇದರ ಜೊತೆಗೆ ಈಗ ರೆಡ್‌ಲೈನ್ ಮೆಟ್ರೋ ಕೂಡ ಆದಷ್ಟು ಬೇಗ ಸೇರಿಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ವಲಯಗಳ ನಡುವಿನ ಪ್ರಯಾಣದ ಆಯಾಸ ಕಡಿಮೆ ಮಾಡಿ, ಟ್ರಾಫಿಕ್ ಜಾಮ್‌ಗೆ ನಿವಾರಿಸೋ ಈ ರೆಡ್ ಲೂನ್ ಕಾರಿಡಾರ್ ಈಗ ಅಧಿಕೃತವಾಗಿ ಆರಂಭವಾಗಿದೆ.

ಹೌದು, ಬೆಂಗಳೂರಿನ ಮೆಟ್ರೋ ಹಂತ 3 ಯೋಜನೆಯು ನಗರ ಸಂಚಾರದಲ್ಲಿ ಹೊಸ ಯುಗಕ್ಕೆ ಪ್ರವೇಶಿಸಿದೆ. ಈ ಲೈನ್ ಪೂರ್ವ ಮತ್ತು ದಕ್ಷಿಣ ಭಾಗಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸಿ, ಪ್ರಮುಖ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಿಎಂಆರ್‌ಸಿಎಲ್ ಭೂತಾಂತ್ರಿಕ ಸಮೀಕ್ಷೆ:
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ರೆಡ್ ಲೈನ್ ಹಂತ 3A ನ ಭೂತಾಂತ್ರಿಕ ಸಮೀಕ್ಷೆಗೆ 6.86 ಕೋಟಿ ರೂ. ಮೌಲ್ಯದ ಟೆಂಡರ್ ಪ್ರಕಟಿಸಿದೆ. ಟೆಂಡರ್ ಸಲ್ಲಿಕೆ ಕೊನೆಯ ದಿನಾಂಕ ನವೆಂಬರ್ 3 ಆಗಿದ್ದು, ಆಯ್ಕೆಯಾದ ಗುತ್ತಿಗೆದಾರರು 150 ದಿನಗಳಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಬೇಕಾಗಿದೆ.
ಭೂತಾಂತ್ರಿಕ ಅಧ್ಯಯನವು ಮೆಟ್ರೋ ನಿರ್ಮಾಣದ ಮೊದಲು ಅತ್ಯಂತ ಮುಖ್ಯ ಹಂತವಾಗಿದೆ. ಈ ಅಧ್ಯಯನದಲ್ಲಿ ಎತ್ತರದ ಕಂಬಗಳ ಅಡಿಪಾಯ, ಭೂಗತ ಸುರಂಗಗಳ ರಚನೆ, ಮಣ್ಣು ಮತ್ತು ಕಲ್ಲಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದರಿಂದ ಸುರಂಗ ಖೋಡನೆ ಯಂತ್ರಗಳು (ಟಿಬಿಎಂ) ಯಾವ ರೀತಿಯವಾಗಿರಬೇಕು ಮತ್ತು ನಿಖರ ವೆಚ್ಚ ಅಂದಾಜು ಹೇಗೆ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ನಗರದಲ್ಲಿ ಮೆಟ್ರೋ ಮಾರ್ಗಗಳು:
ಪ್ರಸ್ತುತ, ಬೆಂಗಳೂರಿನಲ್ಲಿ ಹಸಿರು, ನೇರಳೆ ಮತ್ತು ಹಳದಿ ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ. ಪಿಂಕ್ ಲೈನ್ (ಕಲೇನಾ ಅಗ್ರಹಾರದಿಂದ ನಾಗವಾರ) 2026 ರ ವೇಳೆಗೆ ಪೂರ್ಣಗೊಳ್ಳಲಿದೆ, ಮತ್ತು ಬ್ಲೂ ಲೈನ್ (ಸಿಲ್ಕ್ ಬೋರ್ಡ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) 2027 ರ ವೇಳೆಗೆ ಸಿದ್ಧವಾಗಲಿದೆ.
ರೆಡ್ ಲೈನ್ ಹಂತ 3A ನಗರದ ವಲಯಗಳಿಗೆ ಮೆಟ್ರೋ ಜಾಲವನ್ನು ವಿಸ್ತರಿಸುವ ಪ್ರಮುಖ ಹಂತವಾಗಿದೆ. ಇದರಿಂದ ನಗರದ ಹೊಸ ಪ್ರದೇಶಗಳು ವೇಗವಾಗಿ, ಸುಗಮವಾಗಿ ಮೆಟ್ರೋ ಸಂಪರ್ಕವನ್ನು ಹೊಂದುತ್ತವೆ.
ಪ್ರಯಾಣದ ಸುಗಮತೆ ಮತ್ತು ಸಮಯ ಉಳಿತಾಯ:
ರೆಡ್ ಲೈನ್ ಪೂರ್ಣಗೊಂಡ ನಂತರ, ಬೆಂಗಳೂರು ನಗರದಲ್ಲಿ ಉತ್ತರ ಮತ್ತು ದಕ್ಷಿಣ ವಲಯಗಳ ನಡುವಿನ ಪ್ರಯಾಣದ ಸಮಯವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಪ್ರಮುಖ ರಸ್ತೆ ದಟ್ಟಣೆ ತಗ್ಗಿ, ನಗರಾದ್ಯಂತ ಕೊನೆಯ ಹಂತದ ಸಂಪರ್ಕ ಸುಧಾರಿಸುತ್ತದೆ.
ನಗರದ ನಿವಾಸಿಗಳಿಗೆ ವೇಗವಾಗಿ ಮತ್ತು ಸುಲಭವಾಗಿ ಸಂಚಾರದ ಅವಕಾಶ ನೀಡುವ ಈ ಲೈನ್, ದೈನಂದಿನ ಪ್ರಯಾಣವನ್ನು ಸುಗಮಗೊಳಿಸುತ್ತಾ, ಬೆಂಗಳೂರು ಮೆಟ್ರೋ ವ್ಯವಸ್ಥೆಯನ್ನು ಮತ್ತಷ್ಟು ಸಮೃದ್ಧಗೊಳಿಸುತ್ತದೆ.


Click it and Unblock the Notifications