ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ನಮ್ಮ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಉದ್ಯೋಗಿಗಳು ಗಂಟೆಗಟ್ಟಲೆ, ಸಾರ್ವಜನಿಕರಿಗೆ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನರಳುವುದು ತಪ್ಪುತ್ತದೆ. ಹಳದಿ ಮತ್ತು ಪಿಂಕ್ ಮಾರ್ಗಗಳು ಕಾರ್ಯಾರಂಭ ಮಾಡಿದರೆ ನಗರದ ಐಟಿ ಉದ್ಯೋಗಿಗಳಿಗೆ ಭಾರಿ ಅನುಕೂಲವಾಗಲಿದೆ. ಆದರೆ ಪಿಂಕ್ ಮಾರ್ಗದ ಕಾಮಗಾರಿ ನಿಗದಿಗಿಂತ ತಡವಾಗಲಿದ್ದು, ಮತ್ತಷ್ಟು ದೀರ್ಘಕಾಲ ಕಾಯಬೇಕಾಗಿದೆ.
ನಮ್ಮ ಮೆಟ್ರೋ ಮಾರ್ಗದಲ್ಲಿ ಅತಿ ಹೆಚ್ಚು ಉದ್ದದ ಸುರಂಗ ಮಾರ್ಗವನ್ನು ಹೊಂದಿರುವ ಪಿಂಕ್ ಮಾರ್ಗದ ಕಾಮಗಾರಿ 2025ರ ಡಿಸೆಂಬರ್ ವೇಳೆಗೆ ಮುಗಿಯುವ ನಿರೀಕ್ಷೆ ಮಾಡಲಾಗಿತ್ತು, ಆದರೆ ಇದೀಗ ಕಾಮಗಾರಿ ಇನ್ನೊಂದು ವರ್ಷ ತಡವಾಗಲಿದ್ದು, 2026ರ ಡಿಸೆಂಬರ್ ವೇಳೆಗೆ ಉದ್ಘಾಟನೆಯಾಗುವ ಸಾಧ್ಯತೆ ಇದೆ. 21.26 ಕಿ.ಮೀ ಉದ್ದದ ಈ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗಾವರವನ್ನು ಸಂಪರ್ಕಿಸುತ್ತದೆ. 12 ನಿಲ್ದಾಣಗಳು ಸುರಂಗ ಮಾರ್ಗದಲ್ಲಿ ನಿರ್ಮಾಣವಾಗುತ್ತಿದ್ದು, ಆರು ಎಲಿವೇಟೆಡ್ ನಿಲ್ದಾಣಗಳು ಬರಲಿವೆ.

ಪಿಂಕ್ ಲೈನ್ ಎರಡು ಹಂತಗಳಲ್ಲಿ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಲಾಗಿದೆ. ಡಿಸೆಂಬರ್ 2025ರ ವೇಳೆಗೆ ಕಾಳೇನ ಅಗ್ರಹಾರದಿಂದ-ತಾವರೆಕೆರೆವರೆಗೆ 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗ ಉದ್ಘಾಟನೆಯಾಗಲಿದ್ದು, 2026ರ ಡಿಸೆಂಬರ್ ವೇಳೆಗೆ ಡೈರಿ ಸರ್ಕಲ್-ನಾಗಾವರದವರೆಗೆ 13.76 ಕಿ.ಮೀ ಉದ್ದದ ಭೂಗತ ಮಾರ್ಗ ಉದ್ಘಾಟನೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡಿಎಚ್ ವರದಿ ಮಾಡಿದೆ.
ಪಿಂಕ್ ಲೈನ್ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಪೂರ್ಣವಾಗಿದೆ. ಒಂಬತ್ತನೇ ಮತ್ತು ಕೊನೆಯ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ) ಭದ್ರಾ, ನಾಗವಾರ ಮೆಟ್ರೋ ನಿಲ್ದಾಣದ ಬಳಿ ಹೊರಬಂದಿದ್ದು, ಒಂದು ಹಂತದ ಕೆಲಸ ಮುಗಿದಂತಾಗಿದೆ.
ಅಕ್ಟೋಬರ್ 2025ರ ವೇಳೆಗೆ ಹಳಿ ಜೋಡಣಾ ಕಾರ್ಯ ಮುಗಿಸಲು ಯೋಜನೆ ಮಾಡಲಾಗಿದೆ. ಬಳಿಕ ಸಿಗ್ನಲಿಂಗ್ ಮತ್ತು ಸಿಸ್ಟಂ ಕೆಲಸಗಳನ್ನು ಮುಗಿಸಲು ಇನ್ನೂ ಆರು ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
521.76 ಕೋಟಿ ರೂಪಾಯಿ ಗುತ್ತಿಗೆ
ಟೆಕ್ಸ್‌ಮ್ಯಾಕೋ ರೈಲ್ ಅಂಡ್ ಇಂಜಿನಿಯರಿಂಗ್ ಲಿಮಿಟೆಡ್ ನಮ್ಮ ಮೆಟ್ರೋದ 2 ನೇ ಹಂತಕ್ಕಾಗಿ ಟ್ರ್ಯಾಕ್‌ಗಳನ್ನು ಹಾಕಲು 521.76 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದುಕೊಂಡಿದೆ, ಪಿಂಕ್ ಲೈನ್ ಕೂಡ ಇದರಲ್ಲಿ ಸೇರಿದೆ. ಈಗಾಗಲೇ ಡೈರಿ ಸರ್ಕಲ್ ಮತ್ತು ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣಗಳ ನಡುವೆ ಹಳಿ ಜೋಡಣಾ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಿಇಎಂಎಲ್ ಲಿಮಿಟೆಡ್ ಪಿಂಕ್ ಲೈನ್‌ಗಾಗಿ 16 ಚಾಲಕ ರಹಿತ ರೈಲುಗಳನ್ನು ತಯಾರಿಸುತ್ತಿದೆ. ಜೂನ್ 2025 ರ ವೇಳೆಗೆ ರೈಲನ್ನು ಪೂರೈಸುವ ನಿರೀಕ್ಷೆ ಇದೆ. ಅಗತ್ಯವಿರುವ ಅನುಮೋದನೆಗಳು ಸಿಕ್ಕ ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳನ್ನು ಪೂರೈಕೆ ಮಾಡುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications