ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಎರಡು ಲೈನ್‌ಗಳಲ್ಲಿ ಮೆಟ್ರೋ ಸಂಚಾರ ಮಾಡುತ್ತಿದೆ. ಮೆಟ್ರೋ ವ್ಯಾಪ್ತಿಯನ್ನು ವಿಸ್ತೀರ್ಣಗೊಳಿಸುವ ನಿಟ್ಟಿನಲ್ಲಿ BMRCL ಹಳದಿ ಮತ್ತು ಪಿಂಕ್ ಲೈನ್ ಮೆಟ್ರೋ ಕಾಮಗಾರಿ ನಡೆಸುತ್ತಿದೆ. ಸದ್ಯ ಬೆಂಗಳೂರಿನ ಜನನಿಬಿಡ ರಸ್ತೆಯಾದ ಕಾಮರಾಜ ರಸ್ತೆಯ ಅರವತ್ತು ಅಡಿಯ ಕೆಳಗೆ, ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಎಂಜಿ ರಸ್ತೆಯ ಅಂಡರ್ ಗ್ರೌಂಡ್ ನಿಲ್ದಾಣವು ಸದ್ಯ ರೂಪುಗೊಳ್ಳುತ್ತಿದ್ದು ಸಿವಿಲ್ ಕೆಲಸ ಮುಂದುವರೆದಿದೆ. ಈ ಪಿಂಕ್ ಲೈನ್ ಮೆಟ್ರೋ ಉತ್ತರದಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿರುವ ನಾಗವಾರದಿಂದ, ದಕ್ಷಿಣದ ಮಾರ್ಗದಲ್ಲಿರುವ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರಕ್ಕೆ ಸಂಪರ್ಕ ಒದಗಿಸುತ್ತದೆ.

ಎಂಜಿ ರೋಡ್ ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್‌ನಲ್ಲಿ ಮಾದ್ಯಮದೊಂದಿಗೆ ಮಾತನಾಡಿದ, ಭೂಗತ ವಿಭಾಗದ BMRCL ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ಮೆಟ್ರೋ ಅಂಡರ್ ಗ್ರೌಂಡ್ ಮಾರ್ಗ ನಿಜಕ್ಕೂ ದೊಡ್ಡ ಸವಾಲಿನದ್ದಾಗಿದೆ. ಈ ಸುರಂಗ ಮಾರ್ಗದಲ್ಲಿ ಬಂಡೆ ಕಲ್ಲುಗಳಿರುವುದರಿಂದ ಕೊರೆಯಲು ಬಹಳ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸಾಮಾನ್ಯವಾಗಿ ಬಂಡೆ ಕಲ್ಲುಗಳು ಗಟ್ಟಿಯಾಗಿರುತ್ತವೆ. ಹೀಗಿರುವಾಗ 150 ಮೆಗಾ ಪಾಸ್ಕಲ್‌ಗಳು (MPA) ಹೊಂದಿರುವ ಯುನಿ ಆಕ್ಸಿಯಲ್ ಕಂಪ್ರೆಸಿವ್ ಸ್ಟ್ರೆಂತ್ (UCS)ನೊಂದಿಗೆ ಡೋಲರೈಟ್ ಬಂಡೆಗಳು ಮತ್ತಷ್ಟು ಗಟ್ಟಿಯಾಗಿರುತ್ತವೆ. ಈ ಬಂಡೆಗಳು ಎಷ್ಟು ಗಟ್ಟಿಯಾಗಿರುತ್ತವೆ ಎಂದರೆ, ಸುರಂಗ ಕೊರೆಯುವ ಯಂತ್ರದ ಕಟ್ಟರ್ ಹೆಡ್‌ಗಿಂತ ಚಿಕ್ಕದಾಗಿದ್ದರು ಕತ್ತರಿಸುವ ಉಪಕರಣಗಳನ್ನು ಹಾನಿಗೊಳಿಸುತ್ತವೆ. ಇದರಿಂದ ಉಪಕರಣಗಳಿಗೆ ಹಾನಿಯಾಗುವುದಲ್ಲದೇ ಬಂಡೆಗಳನ್ನು ಸಂಗ್ರಹಿಸುವ ಮೂಲಕ ಮತ್ತಷ್ಟು ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಇನ್ನು ಶಿವಾಜಿ ನಗರದಿಂದ ವೆಲ್ಲರಾ ನಡುವೆ ನಿರ್ಮಾಣವಾಗುತ್ತಿರುವ ಈ ಸುರಂಗ ಮಾರ್ಗವು, ಮೆಟ್ರೋ ಎರಡನೇ ಹಂತದ ಕಾಮಗಾರಿಗೆ..ಅದರಲ್ಲೂ ಭೂಗತ ವಿಭಾಗಕ್ಕೆ ದೊಡ್ಡ ಸವಾಲಾಗಿದೆ. ಈ ಭೂಗತ ವಿಭಾಗದಲ್ಲಿ ಸವಾಲಾಗಿರುವ ಭೌಗೋಳೀಕ ಪರಿಸ್ಥಿತಿಗಳು 799 ಕಟ್ಟರ್ ಡಿಸ್ಕ್‌ಗಳನ್ನು ಬದಲಾಯಿಸುವಂತೆ ಒತ್ತಾಯಿಸುತ್ತವೆ. ಈ ಡಿಸ್ಕ್‌ಗಳು ಸವೆದುಹೋದಾಗ ಅಥವಾ ಕಲ್ಲಿನ ಮೂಲಕ ಕತ್ತರಿಸಲು ಇದು ಅಗತ್ಯವಾಗಿರುತ್ತದೆ. ಈ ಸುರಂಗ ಮಾರ್ಗದ ಕಲ್ಲು ಮತ್ತು ಮಣ್ಣಿನ ಮಿಶ್ರಣ ಆಗಾಗ ಡಿಸ್ಕ್ ಬದಲಿಸುವ ಪರಿಸ್ಥಿತಿ ಉಂಟುಮಾಡುತ್ತವೆ. ಏಕೆಂದರೆ ಟನಲ್ ಬೋರಿಂಗ್ ಮಷಿನ್‌ಗಳಲ್ಲಿ ಅಳವಡಿಸಲಾದ ಈ ಡಿಸ್ಕ್‌ಗಳು ಗಟ್ಟಿಯಾದ ಬಂಡೆಗಳಿಂದ ಹಾನಿಗೆ ಒಳಗಾಗುತ್ತವೆ. ಪ್ರತಿ ಕಟ್ಟರ್ ಡಿಸ್ಕ್ ಒಂದೂವರೆ ಲಕ್ಷದಿಂದ ಮೂರು 3 ಲಕ್ಷದವರೆಗೆ ವೆಚ್ಚೆವಾಗುತ್ತದೆ ಎಂದು ಗುಡ್ಜ್ ಹೇಳಿಕೆ ನೀಡಿದ್ದಾರೆ.
ಸವಾಲಿನ ಭೌಗೋಳಿಕ ಪರಿಸ್ಥಿತಿಗಳು ಈ ವಿಭಾಗದಲ್ಲಿ 799 ಕಟ್ಟರ್ ಡಿಸ್ಕ್‌ಗಳನ್ನು ಬದಲಾಯಿಸಲು ನಮ್ಮನ್ನು ಒತ್ತಾಯಿಸಿದವು. ಡಿಸ್ಕ್ಗಳು ಸವೆದುಹೋದಾಗ ಅಥವಾ ಕಲ್ಲಿನ ಮಣ್ಣಿನ ಮೂಲಕ ಕತ್ತರಿಸಲು ಇದು ಅಗತ್ಯವಾಗಿರುತ್ತದೆ. ಮಾರ್ಗದ ಕಲ್ಲು ಮತ್ತು ಮಣ್ಣಿನ ಮಿಶ್ರಣವು ಆಗಾಗ್ಗೆ ಡಿಸ್ಕ್ ಬದಲಿಗಳನ್ನು ಉಂಟುಮಾಡುತ್ತದೆ, ಏಕೆಂದರೆ ಟನಲ್ ಬೋರಿಂಗ್ ಮೆಷಿನ್‌ಗಳಲ್ಲಿ ಅಳವಡಿಸಲಾದ ಡಿಸ್ಕ್‌ಗಳು ಗಟ್ಟಿಯಾದ ಬಂಡೆ ಅಥವಾ ಬಂಡೆಗಳಿಂದ ಹಾನಿಗೊಳಗಾಗುತ್ತವೆ. ಪ್ರತಿ ಕಟ್ಟರ್ ಡಿಸ್ಕ್ 1.5 ಲಕ್ಷದಿಂದ 3 ಲಕ್ಷದವರೆಗೆ ವೆಚ್ಚವಾಗುತ್ತದೆ ಮತ್ತು ಹೆಚ್ಚಿನವು ದುರಸ್ತಿಗೆ ಮೀರಿವೆ" ಎಂದು ಗುಡ್ಜ್ ಹೇಳಿದರು.
ಇನ್ನು ಶೇಕಡ 90ಕ್ಕೂ ಹೆಚ್ಚು ಸಿವಿಲ್ ಹಾಗೂ ಹಳಿಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕೆಲವೊಂದಷ್ಟು ಕೆಲಸಗಳು ಮಾತ್ರ ಬಾಕಿ ಇವೆ. ಅಂದರೆ ಸಿಗ್ನಲಿಂಗ್, ದೂರ ಸಂಪರ್ಕ, ವಿದ್ಯುತ್ ಸರಬರಾಜು, ನಿಲ್ದಾಣದ ನಿರ್ಮಾಣ, ಹವಾ ನಿಯಂತ್ರಿತ ವ್ಯವಸ್ಥೆಗಳು, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‍ಗಳನ್ನು ಅಳವಡಿಸುವಂತಹ ಒಂದಷ್ಟು ಕೆಲಸಗಳು ಬಾಕಿ ಇವೆ.
ಅಂದಹಾಗೆ ಭೂಗತ ವಿಭಾಗದ ಸುರಂಗದ ವಿಸ್ತೀರ್ಣ 14 ಕಿಲೋಮೀಟರ್ ಉದ್ದ ಆಗಿದೆ. ಅವಳಿ ಸುರಂಗದ ಮಾರ್ಗವೂ ಸೇರಿ ಒಟ್ಟು 21 ಕಿಲೋಮೀಟರ್‍ಗಳನ್ನು ಒಳಗೊಂಡಿದೆ. ಈ 21 ಕಿಮೀ ಪಿಂಕ್ ಲೈನ್‌ನ ಮಾರ್ಗವಾಗಿದೆ. ಇದು ಇದು 13.8 ಕಿಮೀ ಭೂಗತ ಮತ್ತು 7.5 ಕಿಮೀ ಎತ್ತರದ ವಿಭಾಗಗಳ ಸಂಯೋಜನೆಯಾಗಿದೆ.
ಇನ್ನು ಪಿಂಕ್ ಲೈನ್ ಮಾರ್ಗದ ಮೆಟ್ರೋ ಎರಡು ಹಂತದಲ್ಲಿ ತೆರೆಯಲು ಯೋಜಿಸಲಾಗಿದೆ. ಮೊದಲ ಹಂತವು ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ತಾವರೆಕೆರೆ (ಸ್ವಾಗತ ಕ್ರಾಸ್) ವರೆಗೆ 7.5 ಕಿಮೀ ಎತ್ತರದ ವಿಭಾಗ ಹೊಂದಿರುವ ಮಾರ್ಗವನ್ನು 2025ರ ಡಿಸೆಂಬರ್ ವೇಳೆಗೆ ತೆರೆಯಲು ಸಿದ್ಧಗೊಳಿಸಲಾಗುತ್ತಿದೆ. ಡೈರಿ ವೃತ್ತದಿಂದ ನಾಗವಾರಕ್ಕೆ ಸಂಪರ್ಕಿಸುವ 13.8 ಕಿಮೀ ಭೂಗತ ಭಾಗವಾಗಿರುವ ಎರಡನೇ ಹಂತವು ಡಿಸೆಂಬರ್ 2026 ರ ವೇಳೆಗೆ ತೆರೆಯುವ ನಿರೀಕ್ಷೆಯಿದೆ.


Click it and Unblock the Notifications