ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಯಾವುದಾದರೂ ಸಮಸ್ಯೆಗಳಿದ್ದಾಗ ಮೊದಲೇ ಸೂಚನೆ ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರೂ ಕೂಡಾ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು. ಇದೀಗ ಬೆಸ್ಕಾಂ ಇಲಾಖೆಯಿಂದ ಇಂದಿನ ವಿದ್ಯುತ್ ವ್ಯತ್ಯಯದ ಬಗ್ಗೆ ಸೂಚನೆ ಹೊರಡಿಸಿದ್ದು, ಬೆಂಗಳೂರಿನ ಈ ಭಾಗಗಳಲ್ಲಿ ಇಂದು (ನ.18) ಪವರ್ ಕಟ್ ಇರಲಿದೆ ಎಂದು ಸೂಚನೆ ಹೊರಡಿಸಲಾಗಿದೆ.

ಹೌದು, ಬೆಂಗಳೂರಿನ ಹಲವು ನಗರಗಳಲ್ಲಿ ಇಂದು (ನ.18) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ಹೊರಡಿಸಿದೆ.
6 ಗಂಟೆ ನೋ ಕರೆಂಟ್!
ಬೆಸ್ಕಾಂ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ ಶೋಭಾ ಸಿಟಿ ಮತ್ತು ಆರ್.ಕೆ. ಹೆಗ್ಗಡೆ ನಗರ ಸೇರಿದಂತೆ ಹಲವಾರು ನಗರಗಳಲ್ಲಿ ಇಂದು ಕರೆಂಟ್ ಇರಲ್ಲ ಎನ್ನಲಾಗಿದೆ. ಆದ್ದರಿಂದ ಈ ನಗರಗಳ ನಿವಾಸಿಗಳು ತಮ್ಮ ಕೆಲಸಗಳನ್ನು ಮೊದಲೇ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಅದೇ ರೀತಿ ನಿರ್ವಹಣಾ ಕಾಮಗಾರಿ ನಡೆಸುವ ಉದ್ದೇಶದಿಂದ ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ವಿದ್ಯುತ್ ಕಟ್ ಮಾಡಲಾಗುತ್ತದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.
ಶೋಭಾ ಸಿಟಿಯಲ್ಲಿ ಎಲ್ಲೆಲ್ಲಾ ಪವರ್‌ಕಟ್?
ಇಂದು ಆಡುಗೋಡಿಯಲ್ಲಿ ಮಾತ್ರವಲ್ಲದೇ, ಶೋಭಾ ಸಿಟಿ, ಚೊಕ್ಕನಹಳ್ಳಿ, ಡೊಮಿನೋಸ್ ಪಿಜ್ಜಾ, ಪ್ಯಾರಡೈಸ್ ನೂರ್ ನಗರ, ಶಬರಿ ನಗರ, ಹೊಸ ಶಾಂತಿನಗರಮ, ಕೆಂಪೇಗೌಡ ಲೇಔಟ್, ಪೊಲೀಸ್ ಕ್ವಾರ್ಟರ್ಸ್‌ಮ ಆರ್‌ಕೆ ಹೆಗ್ಗಡೆ ನಗರ, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್ ಸ್ಲಮ್, ಬರ್ಡ್ ಬೆಂಚ್ ಮತ್ತು ರಾಯಲ್ ವುಡ್, ಅರ್ಕಾವತು ಲೇಔಟ್, ಥಣಿಸಂದ್ರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿಟ್ಟಗನಗಳ್ಳಿ, ಕೋಗಿಲು ಗ್ರಾಮದಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಆಡುಗೋಡಿ ವ್ಯಾಪ್ತಿಯಲ್ಲೂ ಇರಲ್ಲ ನೋ ಕರೆಂಟ್!
ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲಾ ಪ್ರದೇಶಗಳೆಂದು ನೋಡುವುದಾದ್ರೆ, ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆಎಂಎಫ್ ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರೋಡ್, ಚಿಕ್ಕಲಕ್ಷ್ಮೀ ಲೇಔಡ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯ ಪಾಳ್ಯ, ಚಂದ್ರಪ್ಪ ನಗರ, ನಿಮ್ಹಾನ್ಸ್ ಅಡ್ಮಿನ್ಸ್ಟ್ರೇಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದ ಕಲ್ಲು, ಬೃಂದಾವನ ಸ್ಲಮ್, ಲಾಲ್ಜಿ ನಗರ, ಶ್ಯಾಮಣ್ಣ ಗಾರ್ಡನ್, ಎನ್‌ಡಿಆರ್‌ಐ ಪೊಲೀಸ್ ಕ್ವಾಟ್ರಸ್ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಈ ವಿದ್ಯುತ್ ವ್ಯತ್ಯಯದ ಹಿನ್ನೆಲೆ ಸಾರ್ವಜನಿಕರು ತಮ್ಮ ಅಗತ್ಯ ಕೆಲಸಗಳನ್ನೆಲ್ಲಾ ಮೊದಲೇ ಮುಗಿಸಿಕೊಳ್ಳುವಂತೆ ಈ ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ವಿದ್ಯುತ್ ಪೂರೈಕೆಯನ್ನು ಮತ್ತಷ್ಟು ಗುಣಮಟ್ಟಗೊಳಿಸುವ ಉದ್ದೇಶದಿಂದ ಈ ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿದೆ. ಆದ್ದರಿಂದ ಇಂದು ಒಂದು ದಿನ ಈ ಸಮಸ್ಯೆ ಜನರಿಗೆ ಎದುರಾಗಲಿದೆ.


Click it and Unblock the Notifications