ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಇತ್ತೀಚೆಗೆ ನಿರಂತರ ವಿದ್ಯುತ್ ವ್ಯತ್ಯಯದ (Power Cut) ಸಮಸ್ಯೆಗಳು ಎದುರಾಗುತ್ತಿದೆ. ದಿನ ಬೆಳಗಾದ್ರೆ ಸಾಕು ಬೆಸ್ಕಾಂ ಇಲಾಖೆಯಿಂದ (BESCOM), ಈ ನಗರದಲ್ಲಿ ಇಂದು, ನಾಳೆ ಕರೆಂಟ್ ಇರಲ್ಲ ಎಂಬ ಸೂಚನೆ ಹೊರಡಿಸಲಾಗುತ್ತದೆ. ಅದೇ ರೀತಿ ಬೆಂಗಳೂರಿನ ಜನರಿಗೆ ಶಾಕಿಂಗ್ ಸುದ್ದಿಯೊಂದಿದೆ. ಮುಂದಿನ 5 ದಿನ ಈ ನಗರಗಳಲ್ಲಿ ಕರೆಂಟ್ ಇರಲ್ಲ ಎಂದು ಹೇಳಲಾಗಿದೆ.

ಹೌದು, ಬೆಂಗಳೂರಿನಲ್ಲಿ ಮುಂದಿನ 5 ದಿನ ಕರೆಂಟ್ ಇರುವುದಿಲ್ಲ ಎಂದು ವರದಿಯಾಗಿದೆ. ಹಾಗಿದ್ರೆ ಯಾವೆಲ್ಲಾ ನಗರಗಳಲ್ಲಿ, ಎಷ್ಟು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಎಷ್ಟು ದಿನ ಇರಲ್ಲ ಕರೆಂಟ್?
ಬೆಸ್ಕಾಂ ಸೂಚನೆಯ ಪ್ರಕಾರ, ಇಂದಿನಿಂದ ಅಂದರೆ ಫೆಬ್ರವರಿ 4 ರಿಂದ 9 ರವರೆಗೆ, ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ಹೆಬ್ಬಾಳ ಮತ್ತು ಉತ್ತರ ಬೆಂಗಳೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಸ್ಕಾಂ ಮಾಹಿತಿ ಪ್ರಕಾರ, 66/11 ಕೆವಿ ಎಚ್‌ಬಿಆರ್ ವಿದ್ಯುತ್ ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಕರೆಂಟ್ ಇರುವುದಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ, ವಿದ್ಯುತ್ ಸೇವೆಯ ಗುಣಮಟ್ಟಕ್ಕಾಗಿ, ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಇನ್ನು ಬೆಸ್ಕಾಂ ಇಲಾಖೆಯ ಈ ಕಾಮಗಾರಿ ಸಂದರ್ಭದಲ್ಲಿ, ಕೆಲವು ಪ್ರದೇಶಗಳಲ್ಲಿ ದಿನವಿಡೀ ವಿದ್ಯುತ್ ಅಡಚಣೆ ಉಂಟಾಗಲಿದೆ ಎನ್ನಲಾಗಿದೆ. ಈ ವಿದ್ಯುತ್ ವ್ಯತ್ಯಯದಿಂದ ನಿವಾಸಿಗಳು, ಸರ್ಕಾರಿ-ಖಾಸಗಿ ಕಚೇರಿಗಳು ಹಾಗೂ ಅಂಗಡಿಗಳಿಗೆ ಸಮಸ್ಯೆಯಾಗಲಿದೆ ಎನ್ನಲಾಗಿದೆ..
ಇಂದು ಇಲ್ಲೆಲ್ಲಾ ಇರಲ್ಲ ಕರೆಂಟ್!
ಇನ್ನು ಹಲವು ಮಾಧ್ಯಮಗಳ ವರದಿ ಪ್ರಕಾರ, ಬೆಸ್ಕಾಂ ಪ್ರಕಟಣೆಯಂತೆ, ಫೆಬ್ರವರಿ 4 ರಂದು ಕಾವಲ್‌ಬೈರಸಂದ್ರ, ಎಲ್.ಆರ್. ಬ್ಯಾಂಡ್ ಮುಖ್ಯ ರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಪ್ರದೇಶ, ಸುಲ್ತಾನ್ ಪಾಳ್ಯ, ರಾಂಕಾ ನಗರ, ಕನಕನಗರ, ಕೆಎಚ್‌ಬಿ ಮುಖ್ಯ ರಸ್ತೆ, ಭುವನೇಶ್ವರಿ ನಗರ, ಡಿ.ಜಿ.ಎ. ಹಳ್ಳಿ, ಕೆ.ಜೆ. ಹಳ್ಳಿ, ಕೆ.ಜೆ. ಕಾಲೋನಿಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಅದೇ ದಿನ ಆದರ್ಶ ನಗರ, ವಿ. ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ವೃತ್ತ, ಶಾಮಪುರ, ಕುಶಾಲ್ ನಗರ, ಮೋದಿ ರಸ್ತೆ, ಮೋದಿ ಗಾರ್ಡನ್, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಶುಗರ್ ಮಂಡಿ, ಸಾಲ್ಟ್ ಮಂಡಿ ಮತ್ತು ಮುನೇಶ್ವರ ನಗರದಲ್ಲೂ ಪವರ್ ಕಟ್ ಇರಲಿದೆ.
ಫೆ. 4 ರಿಂದ 9 ರ ಸಮಯದಲ್ಲಿ ದಿವ್ಯ ಶಾಂತಿ, ಗೋವಿಂದಪುರ, ಕರ್ಳೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಭೈರವಿ ಅಪಾರ್ಟ್‌ಮೆಂಟ್ಸ್, ಹೆಗ್ಗಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications