ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರವಿಡೀ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ (Bengaluru Power Cut). ಸಾಮಾನ್ಯವಾಗಿ ಬೆಂಗಳೂರು, ಮುಂಬೈಯಂತಹ ಮಹಾನಗರಗಳಲ್ಲಿ ವಿದ್ಯುತ್ ಪೂರೈಕೆಯನ್ನು ಗುಣಮಟ್ಟಗೊಳಿಸುವ ಉದ್ದೇಶದಿಂದ, ಏನಾದರು ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪವರ್ ಕಟ್ ಮಾಡಲಾಗುತ್ತದೆ. ಇದೀಗ ಬೆಂಗಳೂರಿನ ಈ ಪ್ರದೇಶದಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಇಲಾಖೆ ಪ್ರಕಟಣೆ ಹೊರಡಿಸಿದೆ.

ಬೆಸ್ಕಾಂ ಇಲಾಖೆ ಪ್ರಕಾರ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಾಗಿದ್ರೆ ಆ ಪ್ರದೇಶಗಳು ಯಾವುದೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
66/11 ಕೆವಿ ಕಂಬೀಪುರ ಸ್ಟೇಷನ್‌ನಲ್ಲಿ ಪ್ರಸ್ತುತ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಆ ಪರಿಣಾಮ ಸುತ್ತಮುತ್ತಲಿನ ನಗರಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ತುರ್ತು ಕಾಮಗಾರಿ ನಿಮಿತ್ತ ಬೆಸ್ಕಾಂ ಇಲಾಖೆ, ಕಂಬೀಪುರ ಸ್ಟೇಷನ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಮಾಡಲಿದೆ ಎಂದು ಸೂಚನೆ ನೀಡಿದೆ. ಆ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 5 ರ ತನಕ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಪವರ್ ಕಟ್ ಹಿನ್ನೆಲೆ, ಕಂಬೀಪುರ, ಕಾರುಬೆಲೆ, ಹೆಚ್ ಗೊಲ್ಲಹಳ್ಳಿ, ಕಾಟನಾಯಕನಪುರ, ವರಹಸಂದ್ರ, ಸ್ವಾಮೀಜಿ ನಗರ, ಅಂಚೆ ಪಾಳ್ಯ, ಅಪ್ರಮೇಯನಗರ, ಕೃಷ್ಣ ಟೆಂಪಲ್ ಸರ್ಕಾರಿ ಶಾಲೆ, ಪ್ರಾವಿಡೆಂಟ್ ಅಪಾರ್ಟ್‌ಮೆಂಟ್, ವಿ.ಬಿ.ಹೆಚ್.ಸಿ ಅವಾಟೋಮೆಂಟೋ, ಇ.ಸಿ. ಎನೋ ಶಾಲಿಜೋ ರೂಡೋ, ಗುಡ್‌ಅರ್ಥ್, ಶ್ರೀನಿಧಿ ಗ್ರೀನ್ ಲೇಔಟ್, ದೇವಗೆರೆ, ಆನೆಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ನಾಳೆಯೂ ಇರಲ್ಲ ಪವರ್ ಕಟ್!
ಡಿಸೆಂಬರ್ 22 ಮಾತ್ರವಲ್ಲ, 23 ರಂದೂ ಬೆಂಗಳೂರಿನ 80 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ. ಪ್ರಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಾಳೆ ಎಲ್ಲೆಲ್ಲಿ ಇರಲ್ಲ ಕರೆಂಟ್!
ಇನ್ನು ಡಿಸೆಂಬರ್ 23ರಂದು ಫೋರಮ್ ಮಾಲ್, ಫ್ರೆಸ್ಟೀಜ್ ಪಾಲ್ಕಾನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮೈನ್ ರೋಡ್, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್‌ಎಸ್ ಶಾಲೆ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿದೆ.
ಜನರಿಗೆ ಸಲಹೆ
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಇದೀಗ ಬೆಸ್ಕಾಂ ಇಲಾಖೆ ಈ ಸೂಚನೆ ನೀಡಿದೆ. ಆದ್ದರಿಂದ ಜನರು ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿ ಮುಗಿಸಿಕೊಳ್ಳುವಂತೆ ಸಲಹೆ ನೀಡಿದೆ. ಅಲ್ಲದೇ ಬೆಸ್ಕಾಂ ಕಾಮಗಾರಿಗೆ ಸಹಕಾರ ನೀಡುವಂತೆ ಮನವಿ ಮಾಡಿದೆ.


Click it and Unblock the Notifications