ಬೆಂಗಳೂರಿನಲ್ಲಿ ಈ ತಿಂಗಳ ಆರಂಭದಿಂದಲೇ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗಿದೆ. ನವೆಂಬರ್ ಆರಂಭದಿಂದಲೂ ಬೆಂಗಳೂರಿನ ಹಲವೆಡೆ ದಿನವಿಡೀ ಪವರ್ ಕಟ್ (Bengaluru Power Cut) ಆಗುತ್ತಿದೆ. ಸಾಮಾನ್ಯವಾಗಿ ಮಳೆ, ಹಾನಿಯಾದ ಸಂದರ್ಭದಲ್ಲಿ ಈ ರೀತಿಯ ವಿದ್ಯುತ್ ವ್ಯತ್ಯಯವಾಗುತ್ತದೆ. ಆದ್ರೆ ಇದೀಗ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ಬೆಸ್ಕಾಂ ಇಲಾಖೆ (BESCOM) ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡುತ್ತಿದೆ. ಇದೀಗ ಇಂದು, ನಾಳೆ (ನ.25, 26) ಬೆಂಗಳೂರಿನ ಹಲವೆಡೆ ಪವರ್ ಕಟ್ ಆಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ಹಿನ್ನೆಲೆ, ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಏಳು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುವ ನಿರೀಕ್ಷೆಯಿದೆ.
ಸಾರ್ವಜನಿಕರಿಗೆ ಸಲಹೆ!
ವಿದ್ಯುತ್ ಕಡಿತದಿಂದಾಗುವ ಅನಾನುಕೂಲತೆಯನ್ನು ತಪ್ಪಿಸಲು ಸಾರ್ವಜನಿಕರು ತಮ್ಮ ಅಗತ್ಯ ಕೆಲಸಗಳನ್ನು ಮಾಡಿ ಮುಗಿಸುವಂಗತೆ ಬೆಸ್ಕಾಂ ಇಲಾಖೆ ಮನವಿ ಮಾಡಿದೆ. ಬೆಸ್ಕಾಂ ಕ್ಯಾತಸಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಲೈನ್ ಕಾಮಗಾರಿಗಳು ನಡೆಯಲಿದೆ. ಆದ್ದರಿಂದ ನವೆಂಬರ್ 25, ಮಂಗಳವಾರ ಮತ್ತು 26, ಬುಧವಾರದಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ಹೊರಡಿಸಿದೆ.
ಗಂಧಮಚನಹಳ್ಳಿಯ ಸುತ್ತಮುತ್ತಲಿನ ಹೆಚ್ಚಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ. ಅಲ್ಲದೇ, ಹುಲ್ಲೇನಹಳ್ಳಿ, ಕಾಲಿಂಗಯ್ಯನಪಾಳ್ಯ, ಹೋಳಕಲ್ಲು, ಸಿಂಗಿಪಾಳ್ಯ, ಬಾಬೂಸಾಬ್ ಪಾಳ್ಯ, ವಿರೂಪಾಪುರ ಮತ್ತು ವೀರನಾಯಕನಹಳ್ಳಿಯಂತಹ ಗ್ರಾಮಗಳು ಕೂಡಾ ಈ ಪಟ್ಟಿಯಲ್ಲಿ ಸೇರಿವೆ.
ಈ ನಡುವೆ, ಕೆ.ವಿ. ವಿದ್ಯಾ ಸಬ್‌ಸ್ಟೇಷನ್‌ನಲ್ಲಿ ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿದ್ದರಿಂದ ನಿನ್ನೆ (ನ.23) ಬೆಂಗಳೂರಿನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮೂರು ಗಂಟೆಗಳ ಕಾಲ ವಿದ್ಯುತ್ ಕಡಿತವಾಗಿತ್ತು.
ಇಲ್ಲೆಲ್ಲಾ ಇರಲ್ಲ ಕರೆಂಟ್
ತಿಮ್ಮಯ್ಯ ರಸ್ತೆ, ಮಹಾಗಣಪತಿ ನಗರ, ಶಿವನಹಳ್ಳಿ ಪಾರ್ಕ್, ಆದರ್ಶ ಲೇಔಟ್, ಇಂದಿರಾ ನಗರ, ಲಕ್ಷ್ಮೀ ನಗರ, ಕರ್ನಾಟಕ ಲೇಔಟ್, ವಿ.ಜೆ.ಎಸ್.ಎಸ್.ಲೇಔಟ್, ನಾಗಾಪುರ, ಮೋದಿ ಆಸ್ಪತ್ರೆ ರಸ್ತೆ, ಹಂಸಲೇಖಾ ಹೋಮ್ ಸುತ್ತಮುತ್ತ, ಪೈಪ್ ಲೈನ್ ರಸ್ತೆ, ಕುರುಬರಹಳ್ಳಿ, ಇ.ಎಸ್.ಐ.ಹೋಸ್ಪಿಟ್, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಗೆಳೆಯರ ಬಳಗ, ಜಿ.ಡಿ. ನಾಯ್ದು ಹಾಲ್ ಮಹಾಲಕ್ಷ್ಮಿ ಲೇಔಟ್, ಟೊಯೊಟೊ ಶೋ ರೂಂ, ಮಂಜುನಾಥ ನಗರ, ಭೋವಿ ಕಾಲೊನಿ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಆದರ್ಶ ನಗರ, ಯುನಿಕ್ಸ್ ಕಾಲೊನಿ, ಕಮಲಾ ನಗರ, ವಾರ್ಡ್ ಕಚೇರಿ ಸುತ್ತಮುತ್ತ, ಮಹಾಲಕ್ಷ್ಮಿ ಪುರಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಜೆಸಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ನಗರಗಳಲ್ಲಿ ಮಾತ್ರವಲ್ಲದೇ ಇನ್ನೂ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications