ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಿರಂತರವಾಗಿ ಪವರ್ ಕಟ್ (Power Cut) ಸಮಸ್ಯೆ ಎದುರಾಗುತ್ತಲೇ ಇದೆ. ಆದ್ರೆ ಮುಂದಾಲೋಚನೆಯಿಂದಾಘಿ ಬೆಸ್ಕಾಂ (BESCOM) ಇಲಾಖೆ ಈ ಕ್ರಮ ಕೈಗೊಂಡಿದೆ ಎಂಬುದನ್ನು ನಾವಿಲ್ಲಿ ಅರಿತುಕೊಳ್ಳಬೇಕಾದ ಸಂಗತಿ. ಕಳೆದೆರಡು ದಿನಗಳಿಂದ ಬೆಂಗಳೂರಿನ ಅಲ್ಲಲ್ಲಿ ಪವರ್ ಕಟ್ ಆಗುತ್ತಲೇ ಇದೆ. ಇದೀಗ ಇಂದೂ (ಫೆ.22, ಭಾನುವಾರ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಫೆಬ್ರವರಿ 22, 2026 ರ ಭಾನುವಾರ ವಿದ್ಯುತ್ ಕಡಿತ ಎದುರಾಗಲಿದೆ ಎಂದು ವರದಿಯಾಗಿದೆ. ಪೀಣ್ಯ ವಿಭಾಗದ 220/66/11KV SRS ಪೀಣ್ಯ ಉಪಕೇಂದ್ರದಲ್ಲಿನ ತುರ್ತು ನಿರ್ವಹಣೆ ಕಾರ್ಯ ಕೈಗೊಂಡಿರುವ ಹಿನ್ನೆಲೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಈ ಕ್ರಮ ಕೈಗೊಂಡಿದೆ.
ಬೆಸ್ಕಾಂ ಇಲಾಖೆ, ವಿದ್ಯುತ್ ಕಡಿತವು ಬೆಳಗ್ಗೆ 09:00 ರಿಂದ ಸಂಜೆ 05:00 ರವರೆಗೆ, ಅಂದಾಜು 8 ಗಂಟೆಗಳ ಕಾಲ ಪವರ್ ಕಟ್ ಸಮಸ್ಯೆ ಇರಲಿದೆ ಎಂದು ಹೇಳಲಾಗಿದೆ. ಕೆಲಸದ ಪ್ರಗತಿಗೆ ಅನುಗುಣವಾಗಿ ಈ ಸಮಯದಲ್ಲಿ ಬದಲಾವಣೆಯಾಗಬಹುದು ಎಂದು ಬೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ಇರಲ್ಲ ಕರೆಂಟ್?
ಈ ವಿದ್ಯುತ್ ಕಡಿತ ಪೀಣ್ಯ ಸುತ್ತಮುತ್ತಲಿನ ಹಲವು ವಸತಿ, ವಾಣಿಜ್ಯ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ಪ್ರಕಾರ, ಎಚ್‌ಎಂಟಿ ರಸ್ತೆ, ಆರ್‌ಎನ್‌ಎಸ್ ಅಪಾರ್ಟ್ಮೆಂಟ್, ಸಿಎಂಟಿಐ, ಬೋರಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್, 6ನೇ ಕ್ರಾಸ್ ಸುತ್ತಮುತ್ತ, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿ ನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ವರದಿಯಾಗಿದೆ.
ಅಲ್ಲದೇ, ಎಂಸಿ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿ ನಗರ, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ, ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯುಸಿಒ ಬ್ಯಾಂಕ್ ರಸ್ತೆ, ಥಾರ್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, ರಾಜಗೋಪಾಲ ನಗರ (3ನೇ ಹಂತ), ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಇಎಸ್‌ಐಸಿ ಆಸ್ಪತ್ರೆ ಪ್ರದೇಶ ಹಾಗೂ ಸಂಪರ್ಕಿತ ಸ್ಥಳಗಳಲ್ಲಿಯೂ ವಿದ್ಯುತ್ ಕಡಿತ ಎದುರಾಗಲಿದೆ.
ಪೀಣ್ಯ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ (KPTCL) ನಿಂದ ಕೈಗೊಂಡಿರುವ ಈ ಕಾರ್ಯ, ಮುಂದಿನ ಹಲವು ಸಮಸ್ಯೆಗಳನ್ನು ಸರಿಮಾಡಲಿದೆ. ಬೆಸ್ಕಾಂ ಇದೇ ರೀತಿ ಬೆಂಗಳೂರಿನ ಹಲವು ಕಡೆಗಳಲ್ಲಿ ಈಗಾಗಲೇ ನಿರ್ವಹಣಾ ಕಾರ್ಯ ಕೈಗೊಂಡಿದೆ. ಆದ್ದರಿಂದ ಜನರೂ ತಮಗೆ ಬೇಕಾದ ಅಗತ್ಯ ಸಾಧನಗಳನ್ನು ಮೊದಲೇ ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಬೆಸ್ಕಾ ಸಲಹೆ ನೀಡಿದೆ. ದಿನವಿಡೀ ವಿದ್ಯುತ್ ಸಮಸ್ಯೆ ಎದುರಾಗುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮೊದಲೇ ಈ ಸೂಚನೆ ಹೊರಡಿಸಲಾಗಿದೆ.


Click it and Unblock the Notifications