ಬೆಂಗಳೂರು ನಗರದಲ್ಲಿ ಈ ವಾರವಿಡೀ ಅಲ್ಲಲ್ಲಿ ವಿದ್ಯುತ್ ಕಡಿತವಾಗುತ್ತಲೇ ಇದೆ. ಇದೀಗ ಇಂದು ಮತ್ತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಘೋಷಣೆ ಮಾಡಿದೆ. ಡಿಸೆಂಬರ್ 27 ಮತ್ತು 28 ರಂದು ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಪವರ್ ಕಟ್ (Power Cut) ಇರಲಿದೆ. ಇನ್ನು ಈ ಪವರ್ ಕಟ್ ಆಗುವ ಸಂದರ್ಭದಲ್ಲಿ ಸುಮಾರು 7 ರಿಂದ 8 ಗಂಟೆಗಳ ಕಾಲ ಕರೆಂಟ್ ಇರುವುದಿಲ್ಲ.

ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪ ಅಡಚಣೆ ಉಂಟಾಗಲಿದೆ ಎಂದು ಹೇಳಲಾಗಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್!
ಡಿಸೆಂಬರ್ 27, ಶನಿವಾರದಂದು ಕೆಪಿಟಿಸಿಎಲ್ ಪ್ರಮುಖ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೀಣ್ಯದಲ್ಲಿರುವ 220/66/11 kV ಎಸ್‍ಆರ್‌ಎಸ್ ಸಬ್‌ಸ್ಟೇಷನ್‌ನಲ್ಲಿ ಕಾಮಗಾರಿ ಶುರುವಾಗಲಿದೆ. ಈ ಪರಿಣಾಮ ಬೆಂಗಳೂರಿನ ಹಲವು ಕಡೆಗಳಲ್ಲಿ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ.
ಕಾಮಗಾರಿ ನಡೆಯುವ ಪರಿಣಾಮ, ಗೃಹಲಕ್ಷ್ಮಿ ಅಪಾರ್ಟ್‌ಮೆಂಟ್, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್‌ಟಿಟಿಎಫ್ ಸರ್ಕಲ್, ಗಣಪತಿನಗರ ಮುಖ್ಯರಸ್ತೆ ಹಾಗೂ ಪೊಲೀಸ್ ಸ್ಟೇಷನ್ ರಸ್ತೆ, ಚಾಮುಂಡಿಪುರ, ರಾಜೇಶ್ವರಿ ನಗರ, ಆಕಾಶ್ ಥಿಯೇಟರ್ ರಸ್ತೆ, ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4ನೇ ಬ್ಲಾಕ್, 2ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಅಲ್ಲದೇ ಜಿ.ಕೆ.ಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಪೀಣ್ಯ ಕೈಗಾರಿಕಾ ಪ್ರದೇಶ ಹಂತ 1, 3ನೇ ಕ್ರಾಸ್, 4ನೇ ಕ್ರಾಸ್, ಸ್ಲಂ ರಸ್ತೆ, ಅನು ಸೋಲಾರ್ ರಸ್ತೆ, ಚೇರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಜನರಲ್ ಮೆಟಲ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, ವೈಷ್ಣವಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಕಡಿತವಾಗಲಿದೆ.
ಡಿಸೆಂಬರ್ 28 ರಂದೂ ಇರಲ್ಲ ಕರೆಂಟ್!
ಡಿಸೆಂಬರ್ 28, ಭಾನುವಾರವೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಸ್ಕಾಂನ 66/11 ಕೆವಿ ಬೈಯಾದ್ರಹಳ್ಳಿ ಮತ್ತು 66/11 ಕೆವಿ ಶ್ರೀಗಂಧಕಾವಲ್ ಸಬ್‌ಸ್ಟೇಷನ್‌ಗಳಲ್ಲಿ ಪವರ್ ಕಟ್ ಉಂಟಾಗಲಿದೆ. ನಿರ್ವಹಣಾ ಕಾರ್ಯದಿಂದಾಗಿ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದ್ದು, ಈ ಪ್ರದೇಶಗಳಲ್ಲಿ ಒಟ್ಟು 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಅಡೆತಡೆ ಉಂಟಾಗಲಿದೆ.
66/11 ಕೆವಿ ಬೈಯಾದ್ರಹಳ್ಳಿ ಸಬ್‌ಸ್ಟೇಷನ್‌ನಲ್ಲಿ ಎಲ್ಲೆಲ್ಲಿ ಇರಲ್ಲ ಕರೆಂಟ್?
ಮಹಾದೇಶ್ವರನಗರ, ಪ್ರಸನ್ನ ಲೇಔಟ್, ಹೋಶಹಳ್ಳಿ, ಕೆಂಪೇಗೌಡನಗರ, ಗೊಲ್ಲರಹಳ್ಳಿ, ನೆಡಕರಪ್ಪ ಕೈಗಾರಿಕಾ ಪ್ರದೇಶ, ಹೇರೋಹಳ್ಳಿ, ತುಂಗನಗರ, ವಿಘ್ನೇಶ್ವರನಗರ, ಅನ್ನಪೂರ್ಣೇಶ್ವರಿ ನಗರ, ಅಂಜನಾನಗರ, ಸುಂಕದಕಟ್ಟೆ, ನೀಲಗಿರಿತೋಪು, ಹೆಗ್ಗನಹಳ್ಳಿ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
66/11 ಕೆವಿ ಶ್ರೀಗಂಧಕಾವಲ್ ಸಬ್‌ಸ್ಟೇಷನ್ ವ್ಯಾಪ್ತಿಯಲ್ಲೂ ಪವರ್ ಕಟ್!
ಎನ್‌ಜಿಇಎಫ್ ಲೇಔಟ್, ಬಾಲಾಜಿ ಲೇಔಟ್, ಎಂಪಿಎಂ ಲೇಔಟ್, ಸರ್ ಎಂವಿ 9ನೇ ಬ್ಲಾಕ್, ಮಲ್ಲತ್ತಹಳ್ಳಿ, ಕೆಂಗುಂಟೆ, ಉಳ್ಳಾಲ ಮುಖ್ಯರಸ್ತೆ, ಲಕ್ಷ್ಮಿ ಆಸ್ಪತ್ರೆ, ಚನ್ನಿಗಪ್ಪ ಕೈಗಾರಿಕಾ ಪ್ರದೇಶ, ಕವಿತಾ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಅಲ್ಲದೇ ಒಕ್ಕಲಿಗರ ಸಂಘ ಹಾಸ್ಟೆಲ್, ಅನ್ನಪೂರ್ಣೇಶ್ವರಿ ನಗರ, ಆರ್ಕಿಡ್ ಶಾಲೆ, ಕೊಟ್ಟಿಗೆಪಾಳ್ಯ, ಸುಮನಾಹಳ್ಳಿ, ಸುಂಕದಕಟ್ಟೆ ಮುಖ್ಯರಸ್ತೆ, ಹೊಯ್ಸಳನಗರ, ಮೋಹನ್ ಥಿಯೇಟರ್, ಶಿವ ಫಾರ್ಮ್, ಮಾರುತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಪವರ್ ಕಟ್ ಆಗಲಿದೆ.


Click it and Unblock the Notifications