ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಹಲವು ಪ್ರದೇಶಗಳು ಕರೆಂಟ್ (Bengaluru Power Cut) ಇಲ್ಲದೆ ಪರದಾಡುವಂತಾಗಿದೆ. ಈ ವರ್ಷದ ಆರಂಭದಲ್ಲೇ ಶುರವಾದ ಪವರ್ ಕಟ್ ಸಮಸ್ಯೆ, ಇದೀಗ ಮತ್ತೆ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬೆಸ್ಕಾಂ (BESCOM) ನಿರ್ವಹಣಾ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಹಲವು ಸಮಸ್ಯೆಗಳಾಗಿದೆ.

ಇದೀಗ, ಈ ವಾರವೂ ಬೆಂಗಳೂರಿನ ಹಲವು ಕಡೆಗಳಲ್ಲಿ ಪವರ್ ಕಟ್ (Power Cut) ಇರಲಿದೆ ಎಂದು ಬೆಸ್ಕಾಂ ಸೂಚನೆ ಹೊರಡಿಸಿದೆ. ಹಾಗಿದ್ರೆ ಎಲ್ಲೆಲ್ಲಾ ಇಂದು ಕರೆಂಟ್ (No Electricity) ಇರುವುದಿಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪವರ್ ಕಟ್‌ಗೆ ಕಾರಣವೇನು?
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಫೆಬ್ರವರಿ 10 ಮತ್ತು 11 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೊದಲೇ ಬೆಸ್ಕಾಂ ಇಲಾಖೆ ಸೂಚನೆ ನೀಡಿತ್ತು. ಇದೀಗ ಬೇಸಿಗೆ ಸಮೀಪಿಸುತ್ತಿದ್ದು, ನಗರದ ವಿದ್ಯುತ್ ಲೈನ್‌ನ ನಿರ್ವಹಣೆ ಮತ್ತು ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ವಿದ್ಯುತ್ ವಿತರಣಾ ಕಂಪನಿ (ESCOM) ಪವರ್ ಕಟ್ ಘೋಷಿಸಿದೆ.
ಇಂದು ಎಲ್ಲೆಲ್ಲಾ ಇರಲ್ಲ ಕರೆಂಟ್?
ಫೆಬ್ರವರಿ 10ರಂದು ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಪೀಣ್ಯಾದ ಕೆಲ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಬೆಳಿಗ್ಗೆಯಿಂದಲೇ ಪವರ್ ಕಟ್ ಆಗುವ ಸಾಧ್ಯತೆ ಇದ್ದು, ಸಂಜೆವರೆಗೂ ಇದು ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆದರೆ, ಕಾಮಗಾರಿ ಬೇಗ ಮುಗಿದರೆ, ಸಂಜೆಯ ಒಳಗಡೆ ಕರೆಂಟ್ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 11 ರಂದು ಇಲ್ಲೆಲ್ಲಾ ಇರಲ್ಲ ಕರೆಂಟ್!
ಫೆಬ್ರವರಿ 11ರಂದು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಜಯನಗರ ಹಾಗೂ ಬನ್ನೇರುಘಟ್ಟ ರಸ್ತೆಯುದ್ದಕ್ಕೂ ಇರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ.
ಈ ಪವರ್ ಕಟ್, ವಿದ್ಯುತ್ ಸೇವೆಯಲ್ಲಾಗುತ್ತಿರುವ ಸಮಸ್ಯೆಯನ್ನು ತಪ್ಪಿಸಲು, ಹಳೆಯ ಉಪಕರಣಗಳನ್ನು ಬದಲಾಯಿಸಲು ಮತ್ತು ಮೂಲಸೌಕರ್ಯವನ್ನು ನವೀಕರಿಸಲು ಅಗತ್ಯವಾಗಿವೆ. ಕೇಬಲ್ ದುರಸ್ತಿ, ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗಳ ಮೂಲಕ ವಿದ್ಯುತ್ ಪೂರೈಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಇದರ ಉದ್ದೇಶವಾಗಿದೆ.
ಫೆಬ್ರವರಿ 10ರ ವಿದ್ಯುತ್ ಕಡಿತವು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.
ಜಾಲಹಳ್ಳಿ ಸಬ್‌ಸ್ಟೇಷನ್‌ನಲ್ಲಿ ಪವರ್ ಕಟ್!
ಕೆಪಿಟಿಸಿಎಲ್‌ನಿಜಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎಂ.ಇ.ಐ ಸಬ್‌ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿದೆ. ಆದ್ದರಿಂ ಇಂದು (ಫೆ.10) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರುವುದಿಲ್ಲ ಎನ್ನಲಾಗಿದೆ.
ಎಜಿಬಿಟಿ ಲೇಔಟ್, ಭೈರವೇಶ್ವರ ಹೋಟೆಲ್, ಶೆಟ್ಟಿಹಳ್ಳಿ ಗ್ರಾಮ, ಮಲ್ಲಸಂದ್ರ, ಲೇಕ್ ವ್ಯೂ, ಕಾವೇರಿ ಲೇಔಟ್ ಹೀಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


Click it and Unblock the Notifications