ಬೆಂಗಳೂರಿನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಪವರ್ ಕಟ್ (Power Cut) ಅನ್ನೋದು ಸಾಮಾನ್ಯ. ಕಾರಣ ಜನರಿಗೆ ಉತ್ತಮ ಸೇವೆ ನಿಟ್ಟಿನಲ್ಲೇ ಬೆಸ್ಕಾಂ ಇಲಾಖೆ ತಿಂಗಳಿಗೊಮ್ಮೆಯಾದರೂ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತದೆ. ಅದೇ ರೀತಿ ಇಂದೂ ಕೂಡಾ ಬೆಂಗಳೂರಿನ (Bengaluru) ಹಲವೆಡೆ ಪವರ್ ಕಟ್ ಇರಲಿದೆ ಎಂದು ವರದಿಯಾಗಿದೆ. ಹಾಗಿದ್ರೆ ಎಲ್ಲೆಲ್ಲಾ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಡಿಸೆಂಬರ್ 26, ಶುಕ್ರವಾರದಂದು ಬೆಂಗಳೂರಿನ ಪಶ್ಚಿಮ ಹಾಗೂ ವಾಯವ್ಯ ಭಾಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ನಗರದ ವಿದ್ಯುತ್ ಸರಬರಾಜು ಸಂಸ್ಥೆ ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯ ನಡೆಸುವ ಹಿನ್ನೆಲೆ ಈ ಪವರ್ ಕಟ್ ಆಗಲಿದೆ ಎಂದು ವರದಿಯಾಗಿದೆ. ವಸತಿ ಪ್ರದೇಶಗಳು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಿಗೆ ಸುಮಾರು 7 ಗಂಟೆಗಳ ಕಾಲ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಎಷ್ಟು ಗಂಟೆ ಇರಲ್ಲ ಕರೆಂಟ್?
ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಚಂದ್ರ ಲೇಔಟ್‌ನ 66/11 ಕೆ.ವಿ. ಸಬ್‌ಸ್ಟೇಷನ್‌ನಲ್ಲಿ ಕೆಪಿಟಿಸಿಎಲ್ ಕೈಗೊಳ್ಳುವ ತುರ್ತು ಹಾಗೂ ತ್ರೈಮಾಸಿಕ ನಿರ್ವಹಣಾ ಕಾರ್ಯವೇ ಈ ಪವರ್ ಕಟ್ ಆಗಲು ಮುಖ್ಯ ಕಾರಣ.
ಇನ್ನು ವಿದ್ಯುತ್ ಲೈನ್‌ನ ಸುರಕ್ಷತೆ ಮತ್ತು ಗುಣಮಟ್ಟದ ಸೇವೆ ನೀಡುವುದೇ ಬೆಸ್ಕಾಂ ಇಲಾಖೆಯ ಗುರಿಯಾಗಿದ್ದು, ಅದೇ ಕಾರಣದಿಂದ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ವಹಣೆ ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಪೂರೈಕೆಯನ್ನು ಮತ್ತೆ ಹಿಂದಿನಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಕೆಪಿಟಿಸಿಎಲ್ ಎಂಜಿನಿಯರ್‌ಗಳು ಸಬ್‌ಸ್ಟೇಷನ್‌ನಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆ ವಿದ್ಯುತ್ ಕಡಿತ ಉಂಟಾಗುವುದು ಸಾಮಾನ್ಯವಾಗಿದೆ. ಅದೇ ಕಾರಣದಿಂದ ಎಚ್ಚರದಿಂದ ಇರುವಂತೆ ಅಧಿಕಾರಿಗಳು ಮೊದಲೇ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಇರಲ್ಲ ಕರೆಂಟ್?
ಆರ್.ಪಿ.ಸಿ ಲೇಔಟ್, ರೆಮ್ಕೋ ಲೇಔಟ್, ಕಲ್ಯಾಣ ಲೇಔಟ್, ಸುಬ್ಬಣ್ಣ ಗಾರ್ಡನ್, ವಿಡಿಯಾ ಲೇಔಟ್, ಎಂ.ಆರ್.ಸಿ.ಆರ್ ಲೇಔಟ್, ಚಂದ್ರ ಲೇಔಟ್, ಬಾಪೂಜಿ ಲೇಔಟ್, ವಿನಾಯಕ ಲೇಔಟ್, ಮೂಡಲಪಾಳ್ಯ, ಸ್ಕೈಲೈನ್ ಅಪಾರ್ಟ್‌ಮೆಂಟ್, ಕೆನರಾ ಬ್ಯಾಂಕ್ ಕಾಲೋನಿ, ವಿದ್ಯಾಗಿರಿ ಲೇಔಟ್, ಗಂಗೊಂಡನಹಳ್ಳಿ, ಸುವರ್ಣ ಲೇಔಟ್, ಬಿಡಿಎ 13 ಹಾಗೂ 14ನೇ ಬ್ಲಾಕ್, ಕೆಂಗುಂಟೆ, ಭೈರವೇರೇಶ್ವರನಗರ, ನಾಗರಭಾವಿ ಕೋಕೋನಟ್ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ ಉಂಟಾಗಲಿದೆ.
ಆದ್ದರಿಂದ ವರ್ಕ್ ಫ್ರಂ ಹೋಮ್ ಇರುವವರು, ಕಂಪನಿಗಳು, ವಿದ್ಯುತ್ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮಾಡುವವರು ಬೇಗ ಬೇಗ ಅಗತ್ಯ ಸಾಧನಗಳಿಗೆ ಚಾರ್ಜ್ ಮಾಡಿಟ್ಟುಕೊಂಡರೆ ಉತ್ತಮ ಎಂದು ಬೆಸ್ಕಾ ಸಲಹೆ ನೀಡಿದೆ. ಒಮ್ಮೆ ವಿದ್ಯುತ್ ಕಡಿತ ಉಂಟಾದರೆ, ಮತ್ತೆ ದಿನವಿಡೀ ಕರೆಂಟ್ ಇರುವುದಿಲ್ಲ. ಆ ನಂತರ ವಿದ್ಯುತ್ ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ಅಂದರೆ 5 ಗಂಟೆಯ ನಂತರವೇ ವಿದ್ಯುತ್ ಪೂರೈಸಲಾಗುತ್ತದೆ.


Click it and Unblock the Notifications