ಬೆಂಗಳೂರು: ಬೆಸ್ಕಾಂ (BESCOM) ಅಡಿಯಲ್ಲಿ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರೀ ವಿದ್ಯುತ್ ವ್ಯತ್ಯಯದ ಸಮಸ್ಯೆಗಳು ಕಂಡು ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪವರ್ ಕಟ್ (Bengaluru Power Cut) ಅನ್ನೋದು ಸರ್ವೇ ಸಾಮಾನ್ಯವಾಗಿದೆ. ಏಕೆಂದರೆ ತಿಂಗಳಿಗೆ ಒಮ್ಮೆಯಾದರೂ ಪವರ್ ಕಟ್ ಆಗುತ್ತದೆ. ಇದೀಗ ವಾರಾಂತ್ಯ ಬರುತ್ತಿದ್ದಂತೆ ಮತ್ತೆ ಪವರ್ ಕಟ್ ಇರಲಿದೆ ಎಂದು ಸೂಚನೆ ನೀಡಲಾಗಿದೆ. ಆ ಪ್ರಕಾರ ಇಂದು (ಭಾನುವಾರ) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.

ಹೌದು, ವಾರಾಂತ್ಯದಲ್ಲಿ ಎರಡು ದಿನ ಕರೆಂಟ್ ಇರುವುದಿಲ್ಲ ಎಂದು ಮೊದಲೇ ಸೂಚನೆ ನೀಡಲಾಗಿತ್ತು. ಅದರಂತೆ ಇಂದು ಕೆಲವೆಡೆ ಕರೆಂಟ್ ಇರುವುದಿಲ್ಲ. ಹಾಗಿದ್ರೆ ಆ ಪ್ರದೇಶಗಳು ಯಾವುದೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬೆಂಗಳೂರಿನ ಹಲವೆಡೆ ಈ ವಾರಾಂತ್ಯದಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ. ಅಗತ್ಯ ನಿರ್ವಹಣೆಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಟ್ರಾನ್ಸ್‌ಫಾರ್ಮರ್‌ಗಳ ಸೇವೆ, ಫೀಡರ್‌ಗಳ ದುರಸ್ತಿ, ಹಳೆಯ ಕೇಬಲ್‌ಗಳ ಬದಲಾವಣೆ ಮತ್ತು ವಿದ್ಯುತ್ ಲೈನ್‌ಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಾಮಗಾರಿ ಕೈಗೊಂಡಿದ್ದು, ಈ ಹಿನ್ನೆಲೆ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೇಸಿಗೆಯಲ್ಲಿ ಹೆಚ್ಚುವ ವಿದ್ಯುತ್ ಬೇಡಿಕೆಗೆ ಮುನ್ನ ಈ ನಿರ್ವಹಣೆ ಅತ್ಯಂತ ಮುಖ್ಯ ಎಂದು ಪರಿಗಣಿಸಿರುವ ಬೆಸ್ಕಾಂ, ದಿಢೀರ್ ಈ ಕ್ರಮ ಕೈಗೊಂಡಿದೆ..
ಎಲ್ಲೆಲ್ಲಿ ಇರಲ್ಲ ಕರೆಂಟ್?
ವರದಿ ಪ್ರಕಾರ, ಕೆ.ಆರ್. ಪುರಂ, ವೈಟ್‌ಫೀಲ್ಡ್, ಮಾರತಹಳ್ಳಿ, ಯಲಹಂಕ, ಹೆಬ್ಬಾಳ, ಬಿಟಿಎಂ ಲೇಔಟ್, ಮಹದೇವಪುರ, ಜೆ.ಪಿ. ನಗರ, ಎಲೆಕ್ಟ್ರಾನಿಕ್ ಸಿಟಿ, ಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದೆ..
ಇನ್ನು ಈ ಕಾಮಗಾರಿ ಪ್ರಕ್ರಿಯೆ ಹಗಲಿನಲ್ಲೇ ನಡೆಯಲಿದ್ದು, ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆಯಿಂದ ಸಂಚೆ 5 ಗಂಟೆವರೆಗೆ ಅಥವಾ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಅಥವಾ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ. ಇನ್ನು ಕೆಲಗಳು ಬೇಗ ಮುಗಿದರೆ, ಬೇಗನೆ ಕರೆಂಟ್ ಬರಬಹುದು ಎಂದು ಹೇಳಲಾಗಿದೆ.
ಮಂಡ್ಯದಲ್ಲೂ ಇಂದು ನೋ ಕರೆಂಟ್!
ಬೆಂಗಳೂರಿನಲ್ಲಿ ಮಾತ್ರವಲ್ಲದೇ, ಇಂದು ಮಂಡ್ಯದಲ್ಲೂ ಇಡೀ ದಿನ ಕರೆಂಟ್ ಇರುವುದಿಲ್ಲ ಎಂದು ವರದಿಯಾಗಿದೆ. ಅತ್ತ ಬಿಸಿಲು ಹೆಚ್ಚಾಗುತ್ತಿರುವ ನಡುವೆ, ಇತ್ತ ಕರೆಂಟ್ ಇಲ್ಲ ಅನ್ನುವುದು ಸಂಕಟದ ಸಂಗತಿ.
66/11 ಕೆ.ವಿ ಕೆಐಎಡಿಬಿ ಮತ್ತು ಮಂಡ್ಯ ತಾಲೂಕಿನ ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ವರದಿ ಪ್ರಕಾರ, ವಿದ್ಯುತ್ ವಿತರಣಾ ಕೇಂದ್ರದ ನಗರ ಪ್ರದೇಶವಾದ ಗುತ್ತಲು, ಕೈಗಾರಿಕಾ ಬಡಾವಣೆಗಳು, ಫ್ಯಾಕ್ಟರಿ ವೃತ್ತ, ನೆಹರು ನಗರ, ತಾವರೆಕೆರೆ, ಎಂ.ಸಿ.ರೋಡ್, ಸಾದರ್ ಮೊಹಲ್ಲಾ, ಸಿದ್ದಾರ್ಥ ಬಡಾವಣೆ, ಉದಯಗಿರಿ, ಚೆನ್ನಯ್ಯ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದೆ.


Click it and Unblock the Notifications