ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಇತ್ತೀಚೆಗೆ ಪವರ್ ಕಟ್ ಆಗುತ್ತಿರುತ್ತದೆ. ಆದ್ರೆ ಈ ವರ್ಷದ ಆರಂಭದಿಂದಲೇ ಬೆಂಗಳೂರಿನಲ್ಲಿ ಪವರ್ ಕಟ್, ಪವರ್ ಕಟ್ ಎಂಬ ಸುದ್ದಿಗಳು ಬರುತ್ತಲೇ ಇತ್ತು. ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು, ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಸೂಚನೆ ನೀಡಿದೆ.. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಪವರ್ ಕಟ್ ಹಿನ್ನೆಲೆ ನಗರದಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕರೆಂಟ್ ಇರುವುದಿಲ್ಲ. ವಿದ್ಯುತ್ ಲೈನ್‌ನ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ.

ಇಂದು, ನಾಳೆ ಇರಲ್ಲ ಕರೆಂಟ್!
ಜನವರಿ 17 ಮತ್ತು 18 ರಂದು ಶನಿವಾರ ಮತ್ತು ಭಾನುವಾರಗಳಂದು ಹಗಲಿನ ವೇಳೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಜನರು ಸಿದ್ಧರಾಗಿರಬೇಕು ಎಂದು ಬೆಸ್ಕಾಂ ತಿಳಿಸಿದೆ. ವಾರಾಂತ್ಯದಲ್ಲಿ ಕೆಲವು ಕಚೇರಿಗಳು, ಕೆಲಸಗಳು ಕಡಿಮೆ ಇರುವ ಹಿನ್ನೆಲೆ ವಾರಾಂತ್ಯದಲ್ಲಿ ಈ ಪವರ್ ಕಟ್ ಕೈಗೊಂಡಿದೆ. ಈ ನಿರ್ವಹಣಾ ಕಾರ್ಯದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಅಪ್ಡೇಟ್ ಮತ್ತು ಫೀಡರ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದೆ. ಇದರಿಂದ ಭವಿಷ್ಯದಲ್ಲಿ ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯಾಗಲಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್
ಈ ವಾರಾಂತ್ಯದಲ್ಲಿ ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ದಕ್ಷಿಣ ಬೆಂಗಳೂರಿನಲ್ಲಿ ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕುಡ್ಲು, ಜಕ್ಕಸಂದ್ರ, ಬೆಳ್ಳಂದೂರು, ಸರ್ಜಾಪುರ ರಸ್ತೆಗೆ ಸೇರಿದ ಪ್ರದೇಶಗಳು ತೊಂದರೆ ಅನುಭವಿಸಲಿವೆ. ಪೂರ್ವ ಬೆಂಗಳೂರಿನ ಮಾರತಹಳ್ಳಿ, ವೈಟ್‌ಫೀಲ್ಡ್, ಕೆ.ಆರ್. ಪುರಂ, ಮಹದೇವಪುರ, ಬನಸವಾಡಿ ಮತ್ತು ಹೊರಮಾವು ಭಾಗಗಳಲ್ಲೂ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
20, 66/11 ಎಂ.ಯು.ಎಸ್.ಎಸ್ ವ್ಯಾಪ್ತಿಯಲ್ಲಿ ಕಂಬಗಳ ಸ್ಥಳಾಂತರ ನಿರ್ವಹಣೆ ಕಾಮಗಾರಿ ನಿಮಿತ್ತ ಉಪವಿಭಾಗದ ಘಟಕ-1 ಶಾಖಾ ವ್ಯಾಪ್ತಿಯಲ್ಲಿ ಜ.16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಆ ಪ್ರಕಾರ, ಶಿವಮೊಗ್ಗ ರಸ್ತೆ, ಬೈಪಾಸ್, ತರಳಬಾಳು ಬಡಾವಣೆ, ವಿದ್ಯಾನಗರದ ಎ, ಬಿ ಮತ್ತು ಸಿ ಬ್ಲಾಕ್, ಇಂದಿರಾನಗರ, ಪ್ರಶಾಂತನಗರ, ಕಾಳಿದಾಸನಗರ, ಬೆಂಕಿನಗರ, ಜೆ.ಸಿ. ಬಡಾವಣೆ, ದೇವಸ್ಥಾನ ರಸ್ತೆ, ಮುರ್ಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನ, ಬಾಹರ್ ಮಕಾನ್, ವಿ.ಆರ್.ಎಲ್. ರಸ್ತೆ, ರಾಮ ಮಂದಿರ, 1ನೇ ರೈಲ್ವೆ ಗೇಟ್, ಜ್ಯೋತಿರ್ ಮಠ ಏರಿಯಾ, ಎಫ್-1 ಆಂಜನೇಯ ಫೀಡರ್, ಎಫ್-2 ಬಾಲಾಜಿ, ಎಫ್-3 ಹರಿಹರೇಶ್ವರ, ಎಫ್-4 ವಿದ್ಯಾನಗರ ಫೀಡರ್, ಹಳ್ಳದಕೇರಿ, ಕೈಲಾಸನಗರ, ಗಂಗಾನಗರ, ತೆಗ್ಗಿನಕೇರಿ, ಆಂಜನೇಯ ಆಗೋಟೆಕ್, ದೋಸ್ತಾನ ರೈಸ್ ಮಿಲ್, ಟೆಂಪಲ್ ರೋಡ್, ಜಾಮಿಯ ಮಸೀದಿ, ಹಳೆ ಬಂಬುಬಜಾರ್, ಹಳೆ ತಹಶೀಲ್ದಾರ್ ರೋಡ್, ಶಿಬಾರ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications