ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಜಲಸಿರಿ 24x7 ನೀರು ಸರಬರಾಜು ಕಾಮಗಾರಿ, ಯುಜಿ ಕೇಬಲ್ ಹಾನಿ ಸರಿಪಡಿಸುವ ಕೆಲಸ, ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮತ್ತು ಇತರ ಕಾರ್ಪೊರೇಷನ್ ಕಾಮಗಾರಿಗಳಿಂದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಇಂದು ಸೋಮವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳಿಸಿದೆ.
ವಿದ್ಯುತ್ ವ್ಯತ್ಯಯ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದು, " ವಿವಿಧ ಕಾಮಗಾರಿ ನಿಮಿತ್ತ ಡಿಸೆಂಬರ್ 30 ರ ಸೋಮವಾರ ಬೆಳಿಗ್ಗೆ 10.00 ರಿಂದ ಸಂಜೆ 4ರವರೆಗೆ ಗಂಟೆಯವರೆಗೆ ಸುಮಾರು ಆರು ಗಂಟೆಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ " ಎಂದು ತಿಳಿಸಿದ್ದಾರೆ. ನಗರದಲ್ಲಿ ಸ್ಥಳವನ್ನು ಅವಲಂಬಿಸಿ, ವಿದ್ಯುತ್ ಕಡಿತವು ಕೆಲ ಗಂಟೆಗಳವರೆಗೆ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ನಿಮ್ಮ ಪ್ರದೇಶದಲ್ಲಿ ವಿದ್ಯುತ್ ಇದೆಯೇ ಎಂದು ಪರಿಶೀಲಿಸಿ
- ಎಸ್ಎಸ್ ಲೇಔಟ್ ಎ ಬ್ಲಾಕ್
- ಎಸ್ಎಸ್ ಮಾಲ್
- ಗ್ಲಾಸ್ ಹೌಸ್ ಏರಿಯಾ
- ಶಾಮನೂರು ರಸ್ತೆ
- ಲಕ್ಷ್ಮಿ ಫ್ಲೋರ್ ಮಿಲ್
- ಸಿದ್ದವೀರಪ್ಪ ಬಡವಣೆ
- ಕುವೆಂಪು ನಗರ
- ಮಾವಿನ ತೋಪು
- ಜಿಎಚ್-ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಬಡಾವಣೆ ನಿವಾಸಿಗಳು ಮತ್ತು ಇದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರದ ಕಾರಣ ಇಲ್ಲಿನ ನಿವಾಸಿಗಳು ವಿದ್ಯುತ್ ಕಡಿತದಿಂದಾಗಿ ಉಂಟಾಗುವ ಅನಾನುಕೂಲಗಳನ್ನು ತಪ್ಪಿಸಲು ತಮ್ಮ ದೈನಂದಿನ ಯೋಜನೆಗಳನ್ನು ಮಾಡುವಾಗ ವಿದ್ಯುತ್ ವ್ಯತ್ಯಯ ಸಮಯವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.
ಬೆಂಗಳೂರಿನಲ್ಲಿ ಭಾನುವಾರವೂ ವಿದ್ಯುತ್ ಕಡಿತವಿತ್ತು.!
ನಿರ್ವಹಣಾ ಕಾರ್ಯ ಮತ್ತು ರಸ್ತೆ ವಿಸ್ತರಣೆ ಮತ್ತು ಭೂಗತ ಒಳಚರಂಡಿ ಸ್ಥಾವರ ವಿದ್ಯುದ್ದೀಕರಣದ ದೃಷ್ಟಿಯಿಂದ ಬೆಸ್ಕಾಂ ಡಿಸೆಂಬರ್ 29 ರ ಭಾನುವಾರದಂದು ಬಹು ಪ್ರದೇಶಗಳಿಗೆ ನಿಗದಿತ ಸ್ಥಗಿತವನ್ನು ಘೋಷಿಸಿತ್ತು. ಇದು ಭಾನುವಾರದ ಹಗಲಿನಲ್ಲಿ ಒಂಬತ್ತು ಗಂಟೆಗಳವರೆಗೆ ಬೇರೆ ಬೇರೆ ಸಮಯದಲ್ಲಿ ವ್ಯತ್ಯಯಗೊಂಡಿತ್ತು.
ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಬೆಸ್ಕಾಂ ವಾಟ್ಸ್ಆ್ಯಪ್ ಸಹಾಯವಾಣಿಗೆ ಸಂಪರ್ಕ ಮಾಡಬಹುದು. ಬೆಂಗಳೂರು ನಗರ ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ 8277884013, ಉತ್ತರ ವೃತ್ತ 8277884014. ಕೋಲಾರ 8277884015, ಚಿಕ್ಕಬಳ್ಳಾಪುರ 8277884016, ಬಿಆರ್ಸಿ 8277884017, ರಾಮನಗರ 8277884018, ತುಮಕೂರು 8277884019, ಚಿತ್ರದುರ್ಗ 8277884020, ದಾವಣಗೆರೆ 8277884021 ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿದ್ದು, ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ, ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ.


Click it and Unblock the Notifications