ಬೆಂಗಳೂರು ಆಸ್ತಿ ತೆರಿಗೆ ಹೆಚ್ಚಳ..ಬಾಡಿಗೆದಾರರ ಮೇಲೆ ಹೇರುತ್ತಾ ಶುಲ್ಕದ ಹೊರೆ..? ಬಾಡಿಗೆ ಹೆಚ್ಚಿಸ್ತಾರಾ ಮಾಲೀಕರು?

ತ್ಯಾಜ್ಯ ವಿಲೇವಾರಿಗೆ ಹೊಸ ಬಳಕೆದಾರರ ಶುಲ್ಕ ವಿಧಿಸೋದಕ್ಕೆ, ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಏಪ್ರಿಲ್ 1ರಿಂದಲೇ ಹೊಸ ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಬೆಂಗಳೂರಿನಲ್ಲಿ ಮನೆಗಳನ್ನು ಹೊಂದಿರುವ ಮಾಲೀಕರು, ಪಾವತಿಸಬೇಕಾಗುತ್ತದೆ. ಬುಡಕಟ್ಟು ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಈ ಹೊಸ ಶುಲ್ಕವನ್ನು ಪ್ರಸ್ತಾಪಿಸಿದ್ದು, ಇದು ಮನೆ-ಮನೆಗೆ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ಹಣ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಆಸ್ತಿ ತೆರಿಗೆ ಹೆಚ್ಚಳ..ಮನೆ ಬಾಡಿಗೆ ಹೆಚ್ಚಿಸ್ತಾರಾ ಮಾಲೀಕರು?

ಈ ಹೊಸ ಬಳಕೆದಾರರ ಶುಲ್ಕ ನಗರದಲ್ಲಿನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯ ವೆಚ್ಚವನ್ನು ಸರಿದೂಗಿಸಲು ಪರಿಚಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಶುಲ್ಕವನ್ನು ಆಸ್ತಿ ತೆರಿಗೆಯ ಜೊತೆಗೆ ಸೇರಿಸಲಾಗುತ್ತಿದ್ದು, ಇದು ಆಸ್ತಿಯ ಗಾತ್ರದ ಮೇಲೆ ನಿರ್ಧಾರವಾಗಲಿದೆ. 600 ಚದರ ಅಡಿವರೆಗೆ ಹೊಂದಿರುವ ಮನೆಗಳಿಗೆ ಕಡಿಮೆ ಶುಲ್ಕ ವಿಧಿಸಲಾಗುತ್ತದೆ, ಆದರೆ 4,000 ಚದರ ಅಡಿ ಮೀರುತ್ತಿದ್ದರೆ ಗರಿಷ್ಠ ₹400 ಪ್ರತಿ ತಿಂಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಈ ಕ್ರಮವನ್ನು ಕೆಲವು ಜನರು ಅನ್ಯಾಯದಾಯಕ ಮತ್ತು ವೈಜ್ಞಾನಿಕತೆ ಇಲ್ಲದ ನಿರ್ಧಾರ ಎಂದು ಟೀಕಿಸುತ್ತಿದ್ದಾರೆ.

ಏಕೆಂದರೆ ಇದು ಕೇವಲ ಬೆಂಗಳೂರಿನ ಮನೆ ಮಾಲೀಕರಿಗಷ್ಟೇ ಅಲ್ಲ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೂ ಆರ್ಥಿಕ ತೊಂದರೆ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಹೊಸ ನಿಯಮದಿಂದ ಬೆಂಗಳೂರಿನಲ್ಲಿ ಮನೆ ಹೊಂದಿರುವ ಮಾಲೀಕರು, ಬಾಡಿಗೆದಾರರ ಮೇಲೆ ಈ ಹೊರೆಯನ್ನು ಪೂರ್ತಿಯಾಗಿ ಹೇರುತ್ತಾರೆ. ಅಂದರೆ ಪ್ರತಿ ತಿಂಗಳ ಬಾಡಿಗೆಯಲ್ಲಿ ಇದನ್ನು ಸೇರಿಸುವುದು ಸಾಮಾನ್ಯ ಪ್ರಕ್ರಿಯೆಯಾಗಬಹುದು. ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪಾದಿಸುವ ಮನೆಗಳಿಗೆ ಹೆಚ್ಚುವರಿ ಶುಲ್ಕವೂ ಇರಬಹುದು.

Take a Poll

ಬಾಡಿಗೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ:

ಈಗಾಗಲೇ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ದರ ಕೇಳೋದೇ ಬೇಡ. ಬಾಡಿಗೆ ಮನೆ ಮಾಡುವುದಕ್ಕಿ ಲೋನ್ ತೆಗೆದು ಸ್ವಂತ ಮನೆ ಮಾಡಿಕೊಂಡರೆ, ಅದೇ ಹಣವನ್ನು ಇಎಂಐ ಕಟ್ಟಬಹುದು ಅಂದುಕೊಳ್ಳುತ್ತಾರೆ. ಬಾಡಿಗೆ ಬೆಲೆಗೂ ಚಿನ್ನದ ಬೆಲೆಗೂ ಬೆಂಗಳೂರಿನಲ್ಲಿ ವ್ಯತ್ಯಾಸವೇ ಇಲ್ಲದಂತಿರುತ್ತದೆ. ಈಗ ಈ ಹೊಸ ತ್ಯಾಜ್ಯ ವಿಲೇವಾರಿ ಶುಲ್ಕದಿಂದ ಹೆಚ್ಚುತ್ತಿರುವ ಬಾಡಿಗೆ ದರದ ಜೊತೆಗೆ, ಮತ್ತಷ್ಟು ಹೆಚ್ಚಬಹುದು. ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಈ ಹೆಚ್ಚುವರಿ ವೆಚ್ಚವನ್ನು ನಿರ್ವಹಿಸಲು ಕಷ್ಟಪಡುವ ಸಾಧ್ಯತೆ ಇದೆ. ಕೆಲವು ಬಾಡಿಗೆದಾರರು ತಮ್ಮ ಜೀವನ ಶೈಲಿಯಲ್ಲಿ ಕಡಿತ ಮಾಡಬೇಕಾದ ಪರಿಸ್ಥಿತಿ ಉಂಟಾಗಬಹುದು.

ಮನೆಯ ಮಾಲೀಕರು ಹೆಚ್ಚು ಲಾಭ ಪಡೆಯುವ ಸಾಧ್ಯತೆ:

ಬೆಂಗಳೂರಿನಲ್ಲಿ ಮನೆಗಳನ್ನು ಹೊಂದಿರುವ ಮಾಲೀಕರು ತಾವೇ ತೆರಿಗೆ ಪಾವತಿಸುವ ಬದಲು, ಈ ಶುಲ್ಕವನ್ನು ಬಾಡಿಗೆದಾರರ ಮೇಲೆ ತಿರುಗಿಸಬಹುದು. ಸರ್ಕಾರ ಈ ಶುಲ್ಕವನ್ನು ಆಸ್ತಿ ಮಾಲೀಕರಿಂದಲೇ ವಸೂಲಿಸುವಂತೆ ನಿಯಮ ತರುತ್ತದೆ ಆದರೆ ಅನುಷ್ಠಾನ ತಂತ್ರಗಳು ಸ್ಪಷ್ಟವಾಗಿಲ್ಲ.

ವಾಣಿಜ್ಯ ತ್ಯಾಜ್ಯ ಶುಲ್ಕವೂ ಬಾಡಿಗೆದಾರರಿಗೆ ಹೇರಬಹುದು:

ವಾಣಿಜ್ಯ ಗೃಹಗಳ ಮೇಲೆ ಹೆಚ್ಚುವರಿ ತ್ಯಾಜ್ಯ ಶುಲ್ಕ ವಿಧಿಸಲಾಗುತ್ತಿದೆ, ಇದು ಅಂಗಡಿ, ಹೋಟೆಲ್, ಚಿಕ್ಕ ಉದ್ಯಮಗಳಿಗೆ ನೇರ ಹಾನಿ ಮಾಡಬಹುದು.ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕುವ ಸಾಧ್ಯತೆ ಇದ್ದು, ಇದು ಜೀವನಾವಶ್ಯಕ ವಸ್ತುಗಳ ದರ ಏರಿಕೆಗೆ ಕಾರಣವಾಗಬಹುದು.

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಹೆಚ್ಚುವರಿ ವೆಚ್ಚ:

ಇನ್ನು ಬೆಂಗಳೂರಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಅಪಾರ್ಟ್‌ಮೆಂಟ್‌ಗಳೇ ಇವೆ. ಹೀಗಾಗಿ ಸರ್ಕಾರಕ್ಕೆ ಹೊಸ ತ್ಯಾಜ್ಯ ವಿಲೇವಾರಿ ಶುಲ್ಕದಿಂದ, ಬೊಕ್ಕಸ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಈ ತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಾಗುವ ಸಾಧ್ಯತೆ ಇದೆ. ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸದಿದ್ದರೆ, ಪ್ರತಿ ಕೆಜಿ ತ್ಯಾಜ್ಯಕ್ಕೆ ₹12 ಶುಲ್ಕ ವಿಧಿಸಲಾಗುತ್ತದೆ. ಈ ವೆಚ್ಚವನ್ನು ಅಪಾರ್ಟ್‌ಮೆಂಟ್ ಸಂಘಗಳು ಎಲ್ಲ ನಿವಾಸಿಗಳ ಮೇಲೆ ಹಂಚಬಹುದು, ಇದರಿಂದ ಮೇಂಟೆನೆನ್ಸ್ ಶುಲ್ಕ ಹೆಚ್ಚುವ ಸಾಧ್ಯತೆ ಇದೆ.

ಸುಮಾರು ₹600 ಕೋಟಿ ಆದಾಯ ನಿರೀಕ್ಷೆ:

ಇನ್ನು BSWML ಪ್ರಕಾರ, ಈ ಬಳಕೆದಾರರ ಶುಲ್ಕ ವಾರ್ಷಿಕವಾಗಿ ಸುಮಾರು ₹600 ಕೋಟಿ ರೂ. ಗಳಿಸಲು ಸಹಾಯ ಮಾಡಬಹುದು. ಆದರೆ, ಕೆಲವು ಮೂಲಗಳು ಈ ಮೊತ್ತ ಇನ್ನೂ ಹೆಚ್ಚಿರಬಹುದು ಎಂದು ಹೇಳುತ್ತವೆ. ಈ ಶುಲ್ಕವನ್ನು ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ. 600 ಚದರ ಅಡಿವರೆಗೆ ಇರುವ ಮನೆಗಳಿಗೆ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಅಂದರೆ ಪ್ರತಿ ತಿಂಗಳಿಗೆ 10 ರೂ. 4,000 ಚದರ ಅಡಿ ಮೀರುತ್ತಿದ್ದರೆ ಗರಿಷ್ಠ ಶುಲ್ಕ ವಿಧಿಸಲಾಗುತ್ತದೆ. ಅಂದರೆ ಪ್ರತಿ ತಿಂಗಳಿಗೆ ₹400.

ಒಟ್ಟಿನಲ್ಲಿ ಹೊಸ ಬಳಕೆದಾರರ ಶುಲ್ಕ ಬಾಡಿಗೆ ಮನೆಯಲ್ಲಿ ವಾಸಿಸುವವರ ಮೇಲೆ ಪೂರ್ತಿಯಾಗಿ ಹೇರಬಹುದು. ಮನೆ ಮಾಲೀಕರು ಈ ವೆಚ್ಚವನ್ನು ತಮ್ಮ ಬಾಡಿಗೆಯಲ್ಲಿ ಸೇರಿಸಬಹುದು ಅಥವಾ ಹೆಚ್ಚುವರಿ ಶುಲ್ಕವನ್ನು ಬೇಡಬಹುದು. ಈ ನಿಯಮವು ಸಮರ್ಥನೆಯ ಮಟ್ಟದಲ್ಲಿ ವೈಜ್ಞಾನಿಕವಾಗಿದ್ದರೂ, ಸರಿಯಾದ ನಿರ್ವಹಣಾ ಮಾದರಿ ಇಲ್ಲದ ಕಾರಣ, ನಗರ ನಾಗರಿಕರಿಗೆ ವಿಶೇಷವಾಗಿ ಬಾಡಿಗೆ ವಾಸಿಗಳಿಗೆ ಆರ್ಥಿಕ ಒತ್ತಡವನ್ನು ಹೆಚ್ಚಿಸಬಹುದು ಎಂಬ ಸಾಧ್ಯತೆಗಳಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+