ಮೆಟ್ರೋ ಸಿಟಿ, ಸಿಲಿಕಾನ್ ಸಿಟಿ, ಸ್ಮಾರ್ಟ್ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು, ದಿನೇ ದಿನೆ ನಗರ ಕಾಸ್ಟ್ಲಿ ಸಿಟಿಯಾಗ್ತಿದೆ. ಇಲ್ಲಿ ಒಂದು ರೂಮ್ ಬಾಡಿಗೆ ಕೊಳ್ಳುವ ಬದಲು, ಸ್ವಂತ ಮನೆಯನ್ನು ಖರೀದಿಸಿ ಇಎಂಐ ಕಟ್ಟಿಕೊಳ್ಳಬಹುದು. ಅಷ್ಟರಮಟ್ಟಿಗೆ ಕಾಸ್ಟ್ಲಿ ಸಿಟಿ ಆಗಿದೆ ಬೆಂಗಳೂರು. ಹೀಗೆ ದುಬಾರಿ ನಗರವಾಗುತ್ತಿರುವ ಬೆಂಗಳೂರಿನ ಬಗ್ಗೆ, ಹೈದರಾಬಾದ್ ಮೂಲದ ಹಣಕಾಸು ವಿಶ್ಲೇಷಕರೊಬ್ಬರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಅಂದರೆ ಸಿಲಿಕಾನ್ ಸಿಟಿ ಬೆಂಗಳೂರಿನ ಬೆಂಗಳೂರಿನ ವಸತಿ ಮಾರುಕಟ್ಟೆ ಪ್ರಸ್ತುತ ಭಾರಿ ಬದಲಾವಣೆಯನ್ನು ಅನುಭವಿಸುತ್ತಿದೆ. ಬಾಡಿಗೆ ದರಗಳಲ್ಲಿ ಅತಿ ವೇಗದ ಏರಿಕೆ ಕಂಡು ಬರುತ್ತಿದೆ. ಕೇವಲ ಕೆಲವು ವರ್ಷಗಳ ಹಿಂದೆ, ಈ ನಗರ ಕೈಗೆಟುಕುವ ಜೀವನಶೈಲಿಗೆ ಹೆಸರಾಗಿತ್ತು, ಆದರೆ ಈಗ ಅದು ಭಾರತದಲ್ಲೇ ಅತಿ ದುಬಾರಿ ನಗರಗಳಲ್ಲಿ ಒಂದಾಗಿ ರೂಪುಗೊಂಡಿದೆ. ಏರಿದ ಬೇಡಿಕೆ, ವಸತಿ ಪೂರೈಕೆಯ ಕೊರತೆ, ಮತ್ತು ಮೂಲಸೌಕರ್ಯ ಅಭಿವೃದ್ಧಿಯ ದುರುಪಯೋಗಗಳು ಈ ದೊಡ್ಡ ಬದಲಾವಣೆಗೆ ಕಾರಣಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
ಹೈದರಾಬಾದ್ ಮೂಲದ ಹಣಕಾಸು ವಿಶ್ಲೇಷಕರೊಬ್ಬರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಬರೆದಿರುವುದೇನೆಂದರೆ ಬೆಂಗಳೂರಿನ ಕೋರಮಂಗಲದಲ್ಲಿರುವ ಮನೆಗಳ ಬಾಡಿಗೆ ದರವನ್ನು, ನ್ಯೂಯಾರ್ಕ್ ದರದ ಜೊತೆಗೆ ಹೋಲಿಸಿದ್ದಾರೆ. ಅಂದರೆ ಅವರು ನೀಡಿದ ಮಾಹಿತಿ ಪ್ರಕಾರ, ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ 2BHK ಅಪಾರ್ಟ್‌ಮೆಂಟ್ ಬಾಡಿಗೆ ಪ್ರಸ್ತುತ ₹70,000ಕ್ಕೆ ತಲುಪಿದೆ. ನ್ಯೂಯಾರ್ಕ್‌ನ ಉಪನಗರ ಪ್ರದೇಶದಲ್ಲಿ ಇರುವ ಇದೇ ತರಹದ ಅಪಾರ್ಟ್‌ಮೆಂಟ್‌ಗಿಂತ ಕೇವಲ ₹10,000 ಕಡಿಮೆಯಾಗಿದೆ ಅಷ್ಟೇ ಎಂದಿದ್ದಾರೆ. ಈ ಅಚ್ಚರಿಯ ಹೋಲಿಕೆಯಿಂದಾಗಿ, ಬೆಂಗಳೂರಿನ ಜೀವನ ವೆಚ್ಚ ವಿಶ್ವದ ದುಬಾರಿ ನಗರಗಳ ಮಟ್ಟಕ್ಕೆ ತಲುಪುತ್ತಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಇನ್ನು ಈ ಬದಲಾವಣೆಗೆ ಪ್ರಮುಖ ಕಾರಣವೆಂದರೆ, ನಗರದಲ್ಲಿ ಕೆಲಸದ ಅವಕಾಶಗಳು ಹೆಚ್ಚಾಗುತ್ತಿರುವುದು ಒಂದು ಕಾರಣವಾಗಿದೆ. ಅಂದರೆ ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಆದರೆ, ವಸತಿ ಮಾರುಕಟ್ಟೆ ಈ ವೇಗವನ್ನು ಹೊಂದಿಕೊಳ್ಳಲು ವಿಫಲವಾಗಿದೆ. ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ತೀರಾ ನಿಧಾನವಾಗುತ್ತಿರುವುದರಿಂದ, ಪ್ರಸ್ತುತ ಲಭ್ಯವಿರುವ ವಸತಿ ಯೋಜನೆಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.
ಇತ್ತ ದಿನೇ ದಿನೆ ಗಗನಕ್ಕೇರುತ್ತಿರುವ ಈ ಬಾಡಿಗೆ ಏರಿಕೆ ಹಲವು ಬಗೆಯ ಪರಿಣಾಮ ಬೀರುತ್ತಿದೆ. ಒಂದು ಕಡೆ, ಆಸ್ತಿ ಮಾಲೀಕರು ಹೆಚ್ಚಿದ ಬೇಡಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ಆದರೆ, ಬಾಡಿಗೆದಾರರು ತೀವ್ರ ಆರ್ಥಿಕ ಒತ್ತಡ ಅನುಭವಿಸುತ್ತಿದ್ದಾರೆ. ಒಮ್ಮೆ ಬಾಡಿಗೆ ಹೆಚ್ಚಾದರೆ, ಕಡಿಮೆ ಮಾಡುವ ಸಾಧ್ಯತೆ ಕಡಿಮೆ. ಹೀಗಾಗಿ, ಜನರು ಬಾಡಿಗೆ ಬದಲು ತಾವು ಮನೆ ಖರೀದಿ ಮಾಡಬೇಕೆ ಎಂದು ಯೋಚಿಸುತ್ತಿದ್ದಾರೆ. ಆದರೆ, ಆಸ್ತಿ ಬೆಲೆ ಕೂಡಾ ಅತಿಯಾಗಿ ಏರಿಕೆಯಾಗುತ್ತಿರುವುದರಿಂದ, ಈ ಆಯ್ಕೆ ಬಹುತೇಕ ವಾಸ್ತವದಿಂದ ದೂರವಾಗಿದೆ.
ಒಂದು ವೇಳೆ ಇಲ್ಲಿನ ನಿವಾಸಿಗಳು ಉತ್ತಮ ರೀತಿಯ ಬಾಡಿಗೆ ಪಾವತಿ ಮಾಡಿದರೂ, ತಕ್ಷಣವೇ ಸಿಗುವ ಮೂಲಸೌಕರ್ಯ ಸೌಲಭ್ಯಗಳು ಹೆಚ್ಚು ಉತ್ತಮವಾಗಿಲ್ಲ. ಬೆಂಗಳೂರು ನಗರ ಮಾರ್ಗಗಳಲ್ಲಿ ದಟ್ಟಣೆಯ ಸಮಸ್ಯೆ ಏಳುತ್ತಿದೆ. ಸರಿಯಾದ ಸಾರಿಗೆ ವ್ಯವಸ್ಥೆಯ ಕೊರತೆ, ಜನಸಂಖ್ಯೆ ಮತ್ತು ವಾಹನಗಳ ಹೆಚ್ಚಳ ಇದಕ್ಕೆ ಕಾರಣ. ಇದರಿಂದಾಗಿ, ಜನರು ನಿತ್ಯದ ಜೀವನದಲ್ಲಿ ಹೊತ್ತಾಸೆಯಷ್ಟೇ ಸಮಯ ವ್ಯರ್ಥ ಮಾಡಬೇಕಾಗುತ್ತಿದೆ.
ಉತ್ತರ ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವುದರಿಂದ, ಮತ್ತು ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಬಾಡಿಗೆ ದರಗಳು 20-25% ಏರಿಕೆಯಾಗಿವೆ. ವೈಟ್‌ಫೀಲ್ಡ್, ವರ್ತೂರು ರಸ್ತೆಯಲ್ಲಿ ತಾಂತ್ರಿಕ ಉದ್ಯೋಗಿಗಳಿಗೆ ಪ್ರಮುಖ ಸ್ಥಳವಾಗಿರುವುದರಿಂದ ಬಾಡಿಗೆಗಳು 10-20% ಹೆಚ್ಚಾಗಿವೆ. ಸರ್ಜಾಪುರ ರಸ್ತೆ ಐಟಿ ಉದ್ಯಾನಗಳ ಹತ್ತಿರ ಇರುವ ಕಾರಣ, ಬಾಡಿಗೆಗಳ ಏರಿಕೆ ಸಹಜವಾಗಿದೆ. ಕನಕಪುರ ರಸ್ತೆಯಲ್ಲಿ ಹೊಸ ಅಭಿವೃದ್ಧಿ ಯೋಜನೆಗಳ ಕಾರಣ ಬೇಡಿಕೆ ಹೆಚ್ಚುತ್ತಿದೆ. ಈ ಏರಿಕೆಯಿಂದಾಗಿ ಜನರು ಬಾಡಿಗೆ ಮನೆ ಹುಡುಕುವ ವಿಧಾನವನ್ನು ಮರುಪರಿಶೀಲಿಸುತ್ತಿದ್ದಾರೆ. ಕೆಲವರು ನಗರ ಕೇಂದ್ರದಿಂದ ದೂರ ಹೋಗಲು ಪ್ರಾರಂಭಿಸಿದ್ದಾರೆ, ಆದರೆ ಅದು ದಿನನಿತ್ಯದ ಸಂಚಾರ ದಟ್ಟಣೆಯಿಂದಾಗಿ ಸುಲಭ ಆಯ್ಕೆ ಅಲ್ಲ.
ಇನ್ನು ಕಳೆದ ಹತ್ತು ವರ್ಷಗಳ ಹಿಂದೆ ಬೆಂಗಳೂರು ಕೈಗೆಟುಕುವ, ತಂತ್ರಜ್ಞಾನ-ಸ್ನೇಹಿ ಮತ್ತು ವೇಗವಾಗಿ ಬೆಳೆಸಬಹುದಾದ ನಗರವೆಂದು ಕರೆಯಲ್ಪಟ್ಟಿತು. ಆದರೆ, ಈಗ ಅದು ವಾಸಿಸಲು ದುಬಾರಿ ನಗರಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಬಾಡಿಗೆ ದರಗಳು ಮುಂದಿನ ವರ್ಷಗಳಲ್ಲಿಯೂ ಏರಿಕೆಯಾಗುತ್ತವೆ ಎಂಬ ನಿರೀಕ್ಷೆ ಇದೆ. ಇದರಿಂದ ಜನರು ಬಾಡಿಗೆ ಮನೆ ಬದಲಾಯಿಸುವ ಬದಲು, ತಾವು ವಾಸಿಸುವ ಸ್ಥಳದಲ್ಲೇ ಉಳಿಯಲು ಪ್ರಯತ್ನಿಸುತ್ತಿದ್ದಾರೆ.


Click it and Unblock the Notifications