ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ಬದುಕುವುದು ಸಾಮಾನ್ಯವಾದ ಸಂಗತಿಯಲ್ಲ. ಮನೆ ಬಾಡಿಗೆ ದರಗಳು ಗಗನಕ್ಕೇರಿವೆ. ಆದರೂ ಯುವ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬಗಳು ತಮ್ಮ ಕನಸಿನ ಬದುಕಿನೊಂದಿಗೆ ಹೊಂದಿಕೊಳ್ಳಲು ನಿರಂತರವಾಗಿ ಹುಡುಕುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಡಿಗೆ ದರ, ಇತರೆ ಶುಲ್ಕಗಳು ಸೇರಿ ಜನರಿಗೆ ಹೆಚ್ಚಿನ ಹೊರೆಯಾಗಿದೆ. ಇದೂ ಸಾಲದು ಅಂತಾ ಬಾಡಿಗೆ ಮನೆಯಲ್ಲಿರುವವರಿಗೆ ಮತ್ತೊಂದು ತೊಂದರೆ, ನುಂಗಲಾರದ ತುತ್ತಾಗಿದೆ. ಅದೇನೆಂದರೆ, ಮನೆ ಖಾಲಿ ಮಾಡಿದಾಗ, ಬಾಡಿಗೆದಾರರ ಭದ್ರತಾ ಠೇವಣಿಯಿಂದ ಒಂದು ತಿಂಗಳ ಬಾಡಿಗೆಯನ್ನು ಬಣ್ಣ ಬಳಿಕೆ ಮತ್ತು ನಿರ್ವಹಣಾ ಶುಲ್ಕ ಎಂಬ ಹೆಸರಿನಲ್ಲಿ ಕಡಿತಗೊಳಿಸಲಾಗುತ್ತಿದೆ.

HSR ಲೇಔಟ್ ಬಳಿ ಇರುವ 2 ಬಿಎಚ್‌ಕೆ ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದ, ಎಂಡೋನೀಲ್ ಘೋಷ್ ಎಂಬುವವರು ಪ್ರತಿ ತಿಂಗಳು ₹25,000 ಬಾಡಿಗೆ ಪಾವತಿಸುತ್ತಿದ್ದರು. ಈ ದುಬಾರಿ ಬಾಡಿಗೆ ಜೊತೆಗೆ ಅವರಿಗಾದ ಮತ್ತೊಂದು ಹೊರೆ ಏನೆಂದರೆ, ಅವರು ಮುಂಚೆ ವಾಸಿಸುತ್ತಿದ್ದ ಮನೆಯಲ್ಲಿ ₹20,000 ಬಣ್ಣ ಬಳಿಸುವ ನಿರ್ವಹಣಾ ಶುಲ್ಕ ಪಾವತಿಸಿರುವುದಾಗಿದೆ.
ಹೌದು, ಅವರು ಈ ಮುಂದೆ ಬೇಗೂರಿನಲ್ಲಿರುವ ₹20,000 ಬಾಡಿಗೆಯ ಮನೆದಲ್ಲಿ ವಾಸಿಸುತ್ತಿದ್ದರು. ಆದರೆ ಅವರು ಮನೆ ಖಾಲಿ ಮಾಡಿದಾಗ, ಬಣ್ಣ ಬಳಿಯುವ ಮತ್ತು ಸ್ವಚ್ಛಗೊಳಿಸುವ ವೆಚ್ಚದ ಹೆಸರಿನಲ್ಲಿ ಅವರ ಭದ್ರತಾ ಠೇವಣಿಯಿಂದ ಒಂದು ತಿಂಗಳ ಬಾಡಿಗೆಯಷ್ಟು ಮೊತ್ತವನ್ನು ಕಟ್ ಮಾಡಲಾಗಿದೆ. ಈ ಕುರಿತು ಘೋಷ್ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಾಡಿಗೆ ಮನೆಗಳ ಮಾಲೀಕರ ಹಾವಳಿ ಹೆಚ್ಚಾಗುತ್ತಿದೆ. ಬಾಡಿಗೆ ಅಗ್ರಿಮೆಂಟ್‌ನಲ್ಲಿ ಬಣ್ಣ ಬಳಿಯುವ ವೆಚ್ಚ ಅಥವಾ ನಿರ್ವಹಣಾ ವೆಚ್ಚವನ್ನೂ ಕೂಡ ಬಾಡಿಗೆದಾರರ ಹೆಗಲ ಮೇಲೆ ಹೊರಿಸುತ್ತಿದ್ದಾರೆ. ನಾವು ಪರಿಶೀಲಿಸಿದ ಹಲವಾರು ಬಾಡಿಗೆ ಒಪ್ಪಂದಗಳು ಇದೇ ತರಹದ ಷರತ್ತುಗಳನ್ನು ಹೊಂದಿವೆ, ಮತ್ತು ಇದರಿಂದ ಬಾಡಿಗೆದಾರರಿಗೆ ತಮ್ಮ ಭದ್ರತಾ ಠೇವಣಿಯನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಮಾತುಕತೆ ಅಥವಾ ತರ್ಕಕ್ಕೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ ಎಂದು ಬೇಸರವನ್ನು ತೋಡಿಕೊಂಡಿದ್ದಾರೆ.
ಆದರೆ ಈ ಕ್ರಮವನ್ನು ಮನೆ ಮಾಲೀಕರು ಮಾತ್ರ ಸಮರ್ಥನೆ ಮಾಡಿಕೊಂಡಿದ್ದಾರೆ. ಮನೆ ಮಾಲೀಕರು ಹೇಳುವ ಪ್ರಕಾರ, ಮನೆ ಖಾಲಿ ಮಾಡಿದ ನಂತರ ಮತ್ತೆ ಬಣ್ಣ ಬಳಿಸಲೇಬೇಕು. ಇದು ಸಾಮಾನ್ಯ. ಹಾಗೆಯೇ ಸ್ನಾನಗೃಹಗಳಿಗೆ ಆಮ್ಲ ತೊಳೆಯುವುದು, ನೆಲೆವಸ್ತುಗಳ ದುರಸ್ತಿ ಮಾಡುವುದು ಮತ್ತು ಬೀಗಗಳನ್ನು ಬದಲಾಯಿಸುವುದು ಎಲ್ಲವನ್ನು ಬಾಡಿಗೆದಾರರ ಮೇಲೆಯೇ ಹೊರಿಸಲಾಗುತ್ತದೆ. ವಸ್ತುಗಳು ಮತ್ತು ಕಾರ್ಮಿಕರ ದರ ಹೆಚ್ಚುತ್ತಿರುವುದರಿಂದ, ಒಂದು ತಿಂಗಳ ಬಾಡಿಗೆಯಷ್ಟು ಮೊತ್ತವನ್ನು ಕಡಿತಗೊಳಿಸುವುದು ನ್ಯಾಯಸಮ್ಮತವೆಂದು ಅವರು ವಾದಿಸುತ್ತಾರೆ.
ಆದರೆ ಈ ನಿಯಮದ ವಿರುದ್ಧ ಬಾಡಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಣ್ಣ ಬಳಿಯುವ ಮತ್ತು ಸ್ವಚ್ಛಗೊಳಿಸುವ ಕೆಲಸಕ್ಕೆ ಖರ್ಚಾದ, ನಿಖರ ಸ್ವಗಿತಗಳು ಅಥವಾ ಇನ್‌ವಾಯ್ಸ್‌ಗಳನ್ನು ಮನೆ ಮಾಲೀಕರು ಒದಗಿಸುವುದಿಲ್ಲ. ಆದರೂ ಕೆಲವೊಮ್ಮೆ, ಮನೆಯ ಸ್ಥಿತಿಯು ಉತ್ತಮವಾಗಿದ್ದರೂ ಸಹ, ಪೂರ್ಣ ಒಂದು ತಿಂಗಳ ಬಾಡಿಗೆಯನ್ನು ಕಡಿತ ಮಾಡಲಾಗುತ್ತದೆ.
ಬಾಡಿಗೆದಾರರಿಗಿಂತ ಮನೆ ಮಾಲೀಕರಿಗೆ ಹೆಚ್ಚು ಅನುಕೂಲವಾಗುವಂತಹ ವ್ಯವಸ್ಥೆಯಾಗಿ ಇದನ್ನು ಕಾಣಲಾಗುತ್ತಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಮತ್ತು ಹೈ-ಎಂಡ್ ವಸತಿ ಘಟಕಗಳಲ್ಲಿ ಈ ಬಗ್ಗೆ ಸ್ವಲ್ಪ ಪಾರದರ್ಶಕತೆ ಇದ್ದರೂ, ಮಧ್ಯಮ ವರ್ಗದ ಬಾಡಿಗೆ ಮನೆಗಳಲ್ಲಿ ಈ ವಿಷಯ ಮತ್ತಷ್ಟು ಗಂಭೀರವಾಗಿದೆ.
ಒಟ್ಟಿನಲ್ಲಿ ಬೆಂಗಳೂರು ಬಾಡಿಗೆ ಮಾರುಕಟ್ಟೆಯ ಈ ಹೊಸ ರೂಪಾಂತರಿ ತರುವಾಯ, ಬಾಡಿಗೆದಾರರು ತಮ್ಮ ಬಾಡಿಗೆ ಒಪ್ಪಂದಗಳನ್ನು ಮಾಡುವ ಮೊದಲು ಹೆಚ್ಚು ಜಾಗರೂಕರಾಗಬೇಕಿದೆ. ಬಣ್ಣ ಬಳಿಯುವ ವೆಚ್ಚ, ನಿರ್ವಹಣಾ ಶುಲ್ಕ, ಮತ್ತು ಭದ್ರತಾ ಠೇವಣಿಯ ಪುನಃ ಪಾವತಿಯ ಕುರಿತು ನಿಖರವಾಗಿ ಚರ್ಚಿಸಿ, ಎಲ್ಲವೂ ಬರಹದಲ್ಲಿ ಉಲ್ಲೇಖವಾಗಬೇಕೆಂದು ಒತ್ತಾಯಿಸಬೇಕು. ಇಲ್ಲವಾದರೆ, ಮನೆ ಖಾಲಿ ಮಾಡುವ ಸಮಯದಲ್ಲಿ ಒಂದು ತಿಂಗಳ ಬಾಡಿಗೆಯಷ್ಟು ಭಾರಿ ಕಡಿತವನ್ನು ಎದುರಿಸಬೇಕಾಗುತ್ತದೆ.
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications