ತ್ರೈಮಾಸಿಕ ನಿರ್ವಹಣಾ ಕಾರ್ಯ ನಿಮಿತ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ (Power Cut). ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂ ಇಲಾಖೆ (BESCOM) ಸೂಚನೆ ನೀಡಿತ್ತು. ಇದೀಗ ನವೆಂಬರ್ 20 ರಿಂದ 23 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ 30 ಕ್ಕೂ ಅಧಿಕ ಬಡಾವಣೆಗಳಲ್ಲಿ ಮುಂದಿನ 4 ದಿನ ಬೆಳಿಗ್ಗೆಯಿಂದ ರಾತ್ರಿವರೆಗೂ ಕರೆಂಟ್ ಇರಲ್ಲ ಎಂದು ಸೂಚನೆ ಹೊರಡಿಸಲಾಗಿದೆ.
ನಿರ್ವಹಣಾ ಕಾಮಗಾರಿಯನ್ನು ಸೋಲದೇವನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್ ಕೈಗೊಂಡಿದ್ದು, ಈ ಪರಿಣಾಮ ಜಾಲಹಳ್ಳಿ ವಿಭಾಗದ ಎನ್- 9 ಉಪ ವಿಭಾಗದ ಹಲವು ನಗಕಳೆದ ಎರಡು ದಿನಗಳಿಂದ ಬೆಂಗಳೂರಿನ ಹಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂ ಇಲಾಖೆ (BESCOM) ಸೂಚನೆ ನೀಡಿತ್ತು. ಇದೀಗ ನವೆಂಬರ್ 20 ರಿಂದ 23 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.ರಗಳಲ್ಲಿ ನವೆಂಬರ್ 20 ರಿಂದ 23 ರವರೆಗೆ ಬೆಳಗ್ಗೆ 10:30 ಯಿಂದ ರಾತ್ರಿ 8:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆಯಿಂದ ಇಲ್ಲೆಲ್ಲಾ ಇರಲ್ಲ ಕರೆಂಟ್!
ಹುರುಳಿಚಿಕ್ಕನಹಳ್ಳಿ, ತರಬನಹಳ್ಳಿ, ಹೇಸರಘಟ್ಟ, ದ್ವಾರಕಾನಗರ, ಮಾರುತಿನಗರ, ಶಾಂತಿ ನಗರ, ಕೃಷ್ಣಾ ಕಾಲೇಜು ರಸ್ತೆ, ಬಜ್ಜಪ್ಪ ಎಲ್/ಓ, ಗುಡ್ಡದ ಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಸಿಡಿಪಿಒ, ಕೆಎಂಎಫ್, ಸೋಮಶೀತಿಹಳ್ಳಿ, ಕೆ.ಟಿ.ಪುರ, ಮಠಕೂರ್, ಮಾವಳ್ಳಿಪುರ, ಬೈಲಕೆರೆ, ಸೋಲದೇವನಹಳ್ಳಿ, ಬಿಳಿಜಾಜಿ, ಚಿಕ್ಕ ಬಾಣಾವರ, ಗಣಪತಿ ನಗರ, ಬ್ರದರ್ಸ್ ಕಾಲೋನಿ, ದಾಸೇನಹಳ್ಳಿ, ಡ್ಯಾನಿಶ್ ಫಾರ್ಮ್, ಹೊಸಹಳ್ಳಿ ಪಾಳ್ಯ, ಗುಣಿ ಅಗ್ರಹಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ.
ಹೆಬ್ಬಾಳ ವ್ಯಾಪ್ತಿಯಲ್ಲೂ ನೋ ಕರೆಂಟ್:
ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ನವೆಂಬರ್ 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ, ರಾಜನಕುಂಟೆ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ವ್ಯತ್ಯಯವಾಗಲಿದೆ ಸೂಚನೆ ನೀಡಲಾಗಿದೆ. ಈ ಪರಿಣಾಮ ಹೊನ್ನೇನಹಳ್ಳಿ, ರಾಜನಕುಂಟೆ, ಮಾರಸಂದ್ರ, ನೆಲಕುಂಟೆ, ಚೆಲ್ಲಹಳ್ಳಿ, ಕೆಎಂಎಫ್, ಅರ್ಕೇರಿ, ಬೂದಮಹಳ್ಳಿ, ಕಾಕೋಲು, ಸೆಂಚುರ್ ಲೇಔಟ್, ಸಿಂಗನಾಯಕನಹಳ್ಳಿ, ಅಡ್ದೇವಿಶ್ವನಾಥಪುರ, ಸಿಂಗನಾಯಕನಹಳ್ಳಿ, ಶ್ರೀರಾಮನಹಳ್ಳಿ, ಹನಿಯೂರು, ಕರ್ಲಾಪುರ, ಇಟಗಲ್‌ಪುರ, ಬೈರಾಪುರ, ದಿಬ್ಬೂರು, ಸೊನ್ನೇನಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂದು ಹೇಳಲಾಗಿದೆ.
ಬೆಸ್ಕಾಂ ಇಲಾಖೆಯ ಸೂಚನೆಯ ಪ್ರಕಾರ, ಮುಂದಿನ ನಾಲ್ಕು ದಿನ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ಸಂದರ್ಭದಲ್ಲಿ ಸಹಕರಿಸುವಂತೆ ಕೋರಲಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ವಿದ್ಯುತ್ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಇಂತರ ಕಾಮಗಾರಿ ಕ್ರಮಗಳನ್ನು ಆಗಾಗ ನಿರ್ವಹಿಸುತ್ತಿರಬೇಕು. ಇಲ್ಲದಿಂದ್ರೆ ಗುಣಮಟ್ಟದ ಸೇವೆ ನೀಡುವಲ್ಲಿ ವಿಫಲವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ


Click it and Unblock the Notifications