ಬೆಂಗಳೂರಿನ ನೂತನ ವಿಮಾನ ನಿಲ್ದಾಣದ ಕಾರ್ಯದ ತಯಾರಿ ಬಹಳ ದಿನಗಳಿಂದ ನಡೀತಾನೆ ಇದೆ. ಇದರ ಜೊತೆಗೆ ಹೊಸ ಮೂಲಸೌಕರ್ಯ ಯೋಜನೆಯಾದ 'ಪೂರ್ವ ಸಂಪರ್ಕ ಸುರಂಗ'ದಿಂದ ಸಂಚಾರದ ಪ್ರಯೋಜನ ಪಡೆಯಲಿದೆ. ಈ ಸುರಂಗವು ವೈಟ್‌ಫೀಲ್ಡ್, ಮಹದೇವಪುರ ಮತ್ತು ಸರ್ಜಾಪುರ ಸೇರಿದಂತೆ ಪೂರ್ವ ಭಾಗದಲ್ಲಿರುವ ನಗರಗಳಿಗೆ ಹಾಗು ವಿಮಾನ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತದ.
ಹಾಗೆ ಈ ಸುರಂಗ ಮಾರ್ಗದ ಮೂಲಕ ನೀವು ಟ್ರಾಫಿಕ್ ಇಲ್ಲದೇನೆ 30 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ನೀವು ನಗರಗಳನ್ನ ತಲುಪಲು ಈ ಸುರಂಗಗಳು ಸಹಾಯ ಮಾಡುತ್ತದೆ. ಇನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಈ ಪೂರ್ವ ಸುರಂಗ ಯೋಜನೆಯು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) 16,500 ಕೋಟಿ ರೂಪಾಯಿಗಳ ಯೋಜನೆಯ ಭಾಗವಾಗಿದೆ. ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರವನ್ನು ಇದು ಬೆಂಬಲಿಸುತ್ತದೆ ಎಂದು ವರದಿ ಹೇಳಿದೆ.

ಪರ್ಯಾಯ ಮಾರ್ಗವನ್ನು ಒದಗಿಸುವ ಮೂಲಕ ಪೂರ್ವ ರಾಜ್ಯ ಹೆದ್ದಾರಿಯಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಆಗತ್ತಿದ್ದ ಭಾರೀ ದಟ್ಟಣೆಯನ್ನ ನಿವಾರಿಸಲು ಸುರಂಗವನ್ನು ವಿನ್ಯಾಸಗೊಳಿಸಲಾಗಿದೆ. ಶೇಕಡಾ 30ರಷ್ಟು ವಿಮಾನ ನಿಲ್ದಾಣದ ಟ್ರಾಫಿಕ್ ಅನ್ನು ಇದು ಡಿಮೆ ಮಾಡುವ ಮೂಲಕ, ಇದು ಭಾರಿ ಟ್ರಾಫಿಕ್ ಅನ್ನ ಕೂಡ ಕಡಿಮೆ ಮಾಡುತ್ತದೆ ಹಾಗೆ ನಗರದಾದ್ಯಂತ ಆಗುತ್ತಿರುವ ವಾಹಗಳ ಸಂಚಾರ ದಟ್ಟಣೆಯನ್ನು ಸುಧಾರಿಸುತ್ತದೆ ಎಂದು ವರದಿ ಹೇಳಿದೆ.
ಇದ ಜೊತೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳುವ ಪ್ರಕಾರ, ಈಗಾಗಲೇ ರಾಜ್ಯ ಸರ್ಕಾರಕ್ಕೆ ನಾಲ್ಕು ಲೇನ್‌ಗಳನ್ನು ಒಳಗೊಂಡಿರುವ 2.5 ಕಿಮೀ ಸುರಂಗದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ, ಯೋಜನೆ ಮಾತ್ರ ಇನ್ನೂ ಆರಂಭ ವಾಗಿಲ್ಲ.
ಪ್ರಸ್ತುತ, ವಿಮಾನ ನಿಲ್ದಾಣವು ಮೊದಲು ಹೆಬ್ಬಾಳದ ಮೂಲಕ ನಂತರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪಶ್ಚಿಮ ಪ್ರದೇಶದ ಮೂಲಕ ಪ್ರವೇಶಿಸುತ್ತದೆ ಎನ್ನಲಾಗ್ತಿದೆ. ಈಸ್ಟರ್ನ್ ಕನೆಕ್ಟಿವಿಟಿ ಟನಲ್ ಪೂರ್ವ ರಾಜ್ಯ ಹೆದ್ದಾರಿಯಿಂದ ಮತ್ತೊಂದು ಮಾರ್ಗವನ್ನು ನೀಡುತ್ತದೆ, ವೈಟ್‌ಫೀಲ್ಡ್‌ನಿಂದ ಬರುವ ಪ್ರಯಾಣಿಕರಿಗೆ ಸುಮಾರು 30 ನಿಮಿಷಗಳ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಈ ಮಾರ್ಗ ಹೆಚ್ಚು ಬಳಕೆಯಲ್ಲಿರುವ ಹೆಬ್ಬಾಳ ಮೇಲ್ಸೇತುವೆಯಲ್ಲಿನ ವಾಹನ ದಟ್ಟಣೆಯನ್ನು ನಿವಾರಣೆ ಮಾಡುತ್ತದೆ. ಸುಮಾರು 30% ರಷ್ಟು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರನ್ನ ಬೇರೆಡೆಗೆ ತಿರುಗಿಸುತ್ತದೆ.
ಪೂರ್ವ ಸುರಂಗ ಯೋಜನೆಯು ವೈಟ್‌ಫೀಲ್ಡ್‌ನಿಂದ ಪ್ರಯಾಣಿಕರ ಸಂಚಾರ ಸಮಯವನ್ನು ಉಳಿಸುತ್ತದೆ ಮತ್ತು ಹೆಬ್ಬಾಳದಲ್ಲಿ ಆಗುವಂತಹ ಗಣನೀಯ ಟ್ರಾಫಿಕ್ ಅನ್ನು ಬೇೆಡೆಗೆ ತಿರುಗಿಸುತ್ತದೆ. ಈ ಯೋಜನೆಯು ವಿಮಾನ ನಿಲ್ದಾಣದ ಪ್ರವೇಶವನ್ನು ಸುಧಾರಿಸುವುದಲ್ಲದೆ ಒಟ್ಟಾರೆ ಬೆಂಗಳೂರಿನೊಳಗೆ ಆಗುವಂತಹ ಟ್ರಾಫಿಕ್ ಹರಿವನ್ನು ಹೆಚ್ಚಿಸುತ್ತದೆ ಎಂದು ಬಿಐಎಎಲ್ ಸಿಇಒ ಹರಿ ಅವರು ಮರಾರ್ಪತ್ರಕರ್ತೆ ಮತ್ತು ಲೇಖಕಿ ಮಾಲಿನಿ ಗೋಯಲ್ ಅವರು ಆಯೋಜಿಸಿದ್ದ 'ಫ್ರಮ್ ಕೋಡ್ ಟು ಕಲ್ಚರ್' ಪಾಡ್‌ಕ್ಯಾಸ್ಟ್ ಶೋನಲ್ಲಿ ಹೇಳಿದರು.ಹೆಬ್ಬಾಳ, ವೈಟ್‌ಫೀಲ್ಡ್ ಮೂಲಕ ಪ್ರಯಾಣಿಸುವ ಪ್ರಯಾಣಿರಿಕರಲ್ಲದೇ, ಬಾಗಲೂರು ಮತ್ತು ಬೇಗೂರಿನ ಬೆಂಗಳೂರಿನ ಪೂರ್ವ ಭಾಗಗಳ ನಿವಾಸಿಗಳು ಏರ್‌ಪೋರ್ಟ್ ಲಿಂಕ್ ರಸ್ತೆ ಎಂದು ಕರೆಯಲ್ಪಡುವ ಮತ್ತೊಂದು ರಸ್ತೆಯನ್ನು ಬಳಸುತ್ತಾರೆ. ಆದರೆ, ಗುಂಡಿಮಯ ರಸ್ತೆ ಮತ್ತು ರಾತ್ರಿಯಲ್ಲಿ ಬೀದಿ ದೀಪಗಳಲ್ಲದೇ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ರಸ್ತೆಗಳು ವಾಹನ ಸವಾರರ ಸಂಚಾರಕ್ಕೆ ಸೂಕ್ತವಲ್ಲ ಎಂದೇ ಹೇಳಬಹುದು. ಹೆಣ್ಣೂರು ಜಂಕ್ಷನ್, ಕೊತ್ತನೂರು, ಕೆ. ನಾರಾಯಣಪುರ, ಮಿತ್ತಗಾನಹಳ್ಳಿ ಜಂಕ್ಷನ್ ಮತ್ತು ಬಾಗಲೂರು ಜಂಕ್ಷನ್‌ನಲ್ಲಿ ದೊಡ್ಡ ಗುಂಡಿಗಳಿಂದಾಗಿ ಸ್ಥಳೀಯ ನಿವಾಸಿಗಳು ಈಗಾಲೇ ಪರದಾಡುತ್ತಿದ್ದಾರೆ. ಹೆಬ್ಬಾಳದ ಮೂಲಕ ವೈಟ್‌ಫೀಲ್ಡ್ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸುಮಾರು 1 ಗಂಟೆ 30 ನಿಮಿಷಗಳನ್ನು ಬೇಕಾಗುತ್ತದೆ, ಆದರೆ ಬಾಗಲೂರು ಮೂಲಕ ಸುಮಾರು 1 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಹೆಬ್ಬಾಳದ ಮೂಲಕ ಅಂಡರ್‌ಪಾಸ್‌ಗಳು ಮತ್ತು ಸೇವಾ ರಸ್ತೆಗಳು
ಇತ್ತೀಚೆಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಹೆಬ್ಬಾಳ ಮೂಲಕ ಏರ್‌ಪೋರ್ಟ್ ರಸ್ತೆಯಲ್ಲಿ ಆಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಅನಾವರಣಗೊಳಿಸಿದರು.
ಈ ನಿಟ್ಟಿನಲ್ಲಿ ಹೆಬ್ಬಾಳದ ಮಳೆನೀರು ಚರಂಡಿ ಸೇತುವೆಯನ್ನು ವಿಸ್ತರಿಸುವುದರ ಜೊತೆಗೆ ಹೆಬ್ಬಾಳ ಮೇಲ್ಸೇತುವೆಯಿಂದ ಮಿಲಿಟರಿ ಭೂಮಿ ವರೆಗೆ ರಸ್ತೆಯನ್ನು ವಿಸ್ತರಿಸಲು ಮತ್ತು ಸೇವಾ ರಸ್ತೆಯನ್ನು ನಿರ್ಮಿಸಲು NHAI ಯೋಜಿಸಿದೆ. ಜಕ್ಕೂರು ಏರೋಡ್ರೋಮ್ ಬಳಿ ಅಡಚಣೆಗಳನ್ನು ನಿವಾರಿಸಲು, ಯಲಹಂಕ ಸಿಗ್ನಲ್‌ನಿಂದ ಜಕ್ಕೂರು ಜಂಕ್ಷನ್‌ಗೆ ಹೊಸ ಸೇವಾ ರಸ್ತೆಯನ್ನು ಯೋಜಿಸಲಾಗಿದೆ. ಆದರೆ ಯಲಹಂಕ ಬೈಪಾಸ್‌ನಲ್ಲಿ ಕಾಫಿ ಡೇ ಬಳಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು ಹೆದ್ದಾರಿ ಪ್ರವೇಶವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ.
ಎನ್‌ಎಚ್ ಎಲಿವೇಟೆಡ್ ರಸ್ತೆಯ ಅಡಿಯಲ್ಲಿ ಪಾಲನಹಳ್ಳಿ ಮತ್ತು ಯು-ಟರ್ನ್ ನಿಬಂಧನೆಗಳಲ್ಲಿ ಪ್ರವೇಶ ಅಥವಾ ನಿರ್ಗಮನ ಬಿಂದುಗಳನ್ನು ಪರಿಚಯಿಸುವ ಕಾರ್ಯಸಾಧ್ಯತೆಯನ್ನು ಅಧಿಕಾರಿಗಳು ಅಧ್ಯಯನ ಮಾಡುತ್ತಾರೆ. ಇನ್ನು ಈ ಸುರಂಗ ಯೋಜನೆಯು 2025ರ ಮೊದಲಾರ್ಧದಲ್ಲಿ ಪ್ರಾರಂಭವಾಗಲಿದೆ. ಈ ಯೋಜನೆಯು ಬೆಂಗಳೂರಿನ ಎಲ್ಲಾ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುತ್ತದೆ ಎನ್ನಲಾಗ್ತಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications