ಪೋಷಕರೇ ಎಚ್ಚರ.. ಎಚ್ಚರ.. ಶಾಲೆಯಿಂದ ಬರುವಾಗ, ಹೋಗುವಾಗ ನಿಮ್ಮ ಮಕ್ಕಳ ಮೇಲೆ ಇರಲಿ ಗಮನ. ಇದೀಗ ಬೆಂಗಳೂರು ನಗರದಲ್ಲಿ (Bengaluru) ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ (Bengaluru School) ದುಷ್ಕರ್ಮಿಗಳು ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಶಾಲಾ ಮಂಡಳಿ ಪೋಷಕರಿಗೆ ಎಚ್ಚರವಹಿಸುವಂತೆ ಸೂಚನೆ ನೀಡಿದೆ.

ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬನಶಂಕರಿಯ (National Public School, Banashankari) ಪ್ರಾಂಶುಪಾಲರು ಇತ್ತೀಚೆಗೆ ವಿದ್ಯಾರ್ಥಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೋಷಕರಿಗೆ ಸುತ್ತೋಲೆಯೊಂದನ್ನು ಕಳುಹಿಸಿದ್ದಾರೆ. ಸದ್ಯ ಈ ಸುತ್ತೋಲೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪೋಷಕರನ್ನು ಭಯಪಡುವಂತೆ ಮಾಡಿದೆ.
ಹೌದು, ಪ್ರಾಂಶುಪಾಲರು ಕಳುಹಿಸಿದ ಸುತ್ತೋಲೆಯಲ್ಲಿ, ತಮ್ಮ ಶಾಲಾ ಆವರಣದಲ್ಲಿ ಯಾರೋ ಅಪರಿಚಿತ ಕಿಡಿಗೇಡಿಗಳು ಅಪಹರಿಸಲು ಯತ್ನಿಸಿದ ಘಟನೆಯ ಬಗ್ಗೆ ವಿವರಿಸಿದ್ದು, ಮಕ್ಕಳನ್ನು ಡ್ರಾಪ್ ಆಫ್ ಮತ್ತು ಪಿಕ್-ಅಪ್ ಸಮಯದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಏನಿದು ಘಟನೆ?
ಇತ್ತೀಚೆಗೆ ಒಬ್ಬ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಒಬ್ಬ ಅಜ್ಞಾತ ವ್ಯಕ್ತಿಯೊಬ್ಬ ವ್ಯಾನ್‌ನಲ್ಲಿ ಬಂದು ಮಂತ್ರಿ ಅಲ್ಪೈನ್ ಗೇಟ್ (ಶಾಲಾ ಹಿಂಭಾಗದ ಗೇಟ್) ಬಳಿ ಮಕ್ಕಳ ಬಳಿ ಬಂದು, ಚಾಕೋಲೇಟ್ ನೀಡಿ ಅಪಹರಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಇದನ್ನು ನೋಡಿದ ಹಿರಿಯ ವಿದ್ಯಾರ್ಥಿಯೊಬ್ಬ ತಕ್ಷಣ ಸೂಚನೆ ನೀಡಿದ್ದಾನೆ. ಆ ಬೆನ್ನಲ್ಲೇ ವ್ಯಾನ್ ಅಲ್ಲಿಂದ ತಕ್ಷಣ ಹೊರಟು ಹೋಗಿದೆ ಎಂದು ಹೇಳಲಾಗಿದೆ. ಈ ವರದಿ ಬೆನ್ನಲ್ಲೇ ಎಚ್ಚೆತ್ತ ಶಾಲಾ ಮಂಡಳಿ ಇದೀಗ ಪೋಷಕರು ಎಚ್ಚರ ವಹಿಸುವಂತೆ ಸೂಚನೆ ಹೊರಡಿಸಿದೆ.
ಘಟನೆಯ ಬೆನ್ನಲ್ಲೇ ಎಚ್ಚೆತ್ತ ಶಾಲಾ ಮಂಡಳಿ, ಭದ್ರತಾ ಸಿಬ್ಬಂದಿಗಳಿಗೂ ಎಚ್ಚರಿಕೆಯಿಂದ ಇರುವಂತೆ ಆದೇಶ ನೀಡಲಾಗಿದ್ದು, ಶಾಲಾ ಆವರಣದೊಳಗೆ ಮತ್ತು ಹೊರಗೆ ವಿದ್ಯಾರ್ಥಿಗಳ ಚಲನವಲನದ ಬಗ್ಗೆ ಗಮನ ಹರಿಸುವಂತೆ ಶಾಲಾ ಮಂಡಳಿ ಸೂಚನೆ ನೀಡಿದೆ.
ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಚನೆ:
- ಪೋಷಕರು ಡ್ರಾಪ್ ಆಫ್ ಮತ್ತು ಪಿಕ್ ಅಪ್ ಸಮಯದಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು ಮತ್ತು ಮಕ್ಕಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.
- ಮಕ್ಕಳು ಯಾವುದೇ ಅಪರಿಚಿತ ವ್ಯಕ್ತಿ, ಅನುಮಾನಾಸ್ಪದ ಚಲನವಲನ ಮತು ಶಾಲಾ ಸಿಬ್ಬಂದಿಯಲ್ಲದವರೊಂದಿಗೆ ಮಾತನಾಡದಂತೆ ಸೂಚನೆ ನೀಡಲಾಗಹಿದೆ.
- ಒಂದು ವೇಳೆ ಯಾರಾದರು ಮಾತಾಡಲು, ವಸ್ತುಗಳನ್ನು ನೀಡಲು ಬಂದರೂ ತಕ್ಷಣವೇ ಪೋಷಕರು, ಶಿಕ್ಷಕರು ಅಥವಾ ಶಾಲಾ ಭದ್ರತಾ ಸಿಬ್ಬಂದಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.
- ಅಲ್ಲದೇ ಮಕ್ಕಳೊಂದಿಗೆ ಸುರಕ್ಷತಾ ಜಾಗೃತಿ ಬಗ್ಗೆಯೂ ಅರಿವು ಮೂಸಿ, ಅಪರಿಚಿತರಿಂದ ದೂರುವಿರುವಂತೆ ತಿಳಿಸಬೇಕು ಎಂದು ಎಂದು ಸೂಚನೆ ನೀಡಿದೆ.
ಪ್ರಾಂಶುಪಾಲರ ಹೇಳಿಕೆ
"ನಿಮ್ಮ ಮಕ್ಕಳ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಈ ಘಟನೆಯ ನಂತರ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಪೋಷಕರ ಸಹಕಾರದೊಂದಿಗೆ ನಾವು ಎಲ್ಲಾ ಮಕ್ಕಳನ್ನೂ ಸುರಕ್ಷಿತವಾಗಿ ಇರಿಸುತ್ತೇವೆ" ಎಂದ ಪ್ರಾಂಶುಪಾಲರು ತಿಳಿಸಿದ್ದಾರೆ.


Click it and Unblock the Notifications