ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನ ನಿರ್ಮಿಸಲು ಸರ್ಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಆದ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಮತ್ರ ನಿಗಧಿಯಾಗುತ್ತಿಲ್ಲ. ನಿಲ್ದಾಣದ ನಿರ್ಮಾಣಕ್ಕೆ ಸೈಟ್ ಆಯ್ಕೆ ಹಂತ ಕೂಡ ಅಂತಮ ಘಟ್ಟದಲ್ಲಿದ್ದರೂ ಕೂಡ ಒಂದಲ್ಲ ಒಂದ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಸರ್ಕಾರ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನ ಶಾರ್ಟ್ಲಿಸ್ಟ್ ಮಾಡಿದೆ, ಆದ್ರೆ ಆ ಸ್ಥಳಗಳನ್ನ ಪರಶೀಲನೆ ಮಾಡಿದಾಗ ಒಂದಲ್ಲ ಒಂದು ತೊಡಕುಗಳು ಎದುರಾಗುತ್ತಿವೆ. ಹೀಗಾಗಿ ವಿಮಾನ ನಿಲ್ದಾಣ ಪ್ರಾದಿಕಾರ ಕೂಡ ಸ್ಥಳಗಳ ಆಯ್ಕೆಯಲ್ಲಿ ಸಧ್ಯಕ್ಕೆ ಗೊಂದಲದಲ್ಲಿದೆ. ಇನ್ನು ಸಲಹಾ ಸಂಸ್ಥೆಯಗಿರುವ ಐಡೆಕ್ ನಡೆಸಿದ ಅಧ್ಯಯನದ ನಡೆಸಿ ವಿಮಾನ ನಿಲ್ದಾಣಕ್ಕೆ ಏಳು ಸಂಭಾವ್ಯ ತಾಣಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ.

ಬೆಂಗಳೂರಿನಿಂದ ಬರೀ 35 ಕಿಲೋ ಮೀಟರ್ ದೂರದಲ್ಲಿರುವ ತಮಿಳುನಾಡಿನ ಹೊಸೂರಿನಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಕಾರ್ಯ ವಿಳಂಬವಗುತ್ತಿದ್ದು, ಇದು ನಗರದ ನೂತನ ವಿಾನ ನಿಲ್ದಾಣದ ಮೇಲೆ ಪರಿಣಾಮ ಬೀರಬಹುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.
ಈಗಾಗಲೇ ಐಡೆಕ್ ಅಧ್ಯಯನ ನಡೆಸಿ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ 7 ಸ್ಥಳಗಳನ್ನ ಈಗಾಗಲೇ ಅಂತಿಮಗೊಳಿಸಿದೆ. ಆದ್ರೂ ಕೂಡ ರಾಜ್ಯದಲ್ಲಿ ಸಚಿವರ ನಡುವಿನ ಭಿನ್ನಾಭಿಪ್ರಾಯಗಳಿಂದ ವಿಳಂಬಗಾಗಿತ್ತು, ಇದರ ಜೊತೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಉಪಚುನಾವಣೆ ಮತ್ತು ಚುನಾವಣೆಗಳಿಂದ ಕೆಲವು ಗೊಂದಲಗಳು ಎದುರಾಗಿದ್ದರಿಂದ ನಿರ್ಮಾಣದ ಕಾರ್ಯ ಸ್ಥಗಿತಗೊಂಡಿದೆ. ಈ ಎಲ್ಲದರ ಮಧ್ಯೆ ಈ ರಾಜಕೀಯ ಗೊಂದಲಗಳು ಬಹುಮಟ್ಟಿಗೆ ಬಗೆಹರಿದ ಹಿನ್ನೆಲೆ ಸರ್ಕಾರ ಸಧ್ಯಕ್ಕೆ ಯೋಜನೆಯತ್ತ ಗಮನಹರಿಸಿದೆ.
ನಿಲ್ದಾಣಕ್ಕಾಗಿ ನಿವೇಶನ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ ಎಂದು ಮೂಲಸೌಕರ್ಯ ಇಲಾಖೆ (ಐಡಿ) ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಗಲಾಟೆ ಮುಗಿಯುತ್ತಿದ್ದಂತೆ ಐಡಿ ಸಚಿವ ಎಂ.ಬಿ.ಪಾಟೀಲ್ ಈ ವಾರ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ನಿಲ್ದಾಣದ ಕಾರ್ಯದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಸ್ಥಳದ ಕುರಿತು ಆಂತರಿಕ ಭಿನ್ನಾಭಿಪ್ರಾಯಗಳು
ಆಗಸ್ಟ್‌ನಲ್ಲಿ, ಸರ್ಕಾರ ಏಳು ಸ್ಥಳಗಳನ್ನ ಪರಿಶೀಲನೆ ನಡೆಸಿದ ನಂತರ ಸ್ಥಳಗಳ ಆಯ್ಕೆಯ ವೇಳೆ ಒಂದಷ್ಟು ಆಂತರಿಕ ಭಿನ್ನಾಭಿಪ್ರಾಯಗಳನ್ನು ಎದುರಿಸುವಂತಾಯಿತು. ಅಲ್ಲದೆ ಗೃಹ ಸಚಿವ ಜಿ ಪರಮೇಶ್ವರ್ ಅವರು ತಮ್ಮ ಕ್ಷೇತ್ರದ ಸಮೀಪದ ತುಮಕೂರು ಬಳಿ ಇರುವ ಸ್ಥಳದಲ್ಲಿ ನಿಲ್ದಾಣವನ್ನ ನಿರ್ಮಿಸುವುದಾಗಿ ಹೇಳಿದ್ರೆ, ಇತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಮನಗರದ ಬಿಡದಿ, ಹಾರೋಹಳ್ಳಿಯಲ್ಲಿರುವ ನಿವೇಶನಗಳಿಗೆ ಹಚ್ಚಿನ ಆದ್ಯತೆ ನೀಡಿದ್ದರು ಹೀಗಾಗಿ ಸ್ಥಳವನ್ನ ನಿಗಧಿಗೊಳಸಲು ಒಂದಷ್ಟು ಭಿನ್ನಭಿಪ್ರಾಯಗಳನ್ನ ಎದುರಿಸುವಂತಾಯಿತು.
ಯಾವೆಲ್ಲಾ ಸೈಟ್‌ಗಳು ಶಾರ್ಟ್ ಲಿಸ್ಟ್ ಆಗಿವೆ?
ಸಲಹಾ ಸಂಸ್ಥೆಯ ಹಿಂದಿನ ಅಧ್ಯಯನಗಳು ಹೊಸ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನ ಶಾರ್ಟ್ಲಿಸ್ಟ್ ಮಾಡಿದೆ. ಆದ್ರೂ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಗೊಂದಲಗಳಿಂದಾಗಿ ನಿಲ್ದಾಣದ ಪ್ರಕ್ರಿಯೆ ವಿಳಂಬವಾಗ್ತಿದೆ. ಸಧ್ಯಕ್ಕೆ ಉಪಚುನಾವಣೆ ಅಂತಿಮಗೊಂಡಿದ್ದು, ಅಧಿಕಾರಿಗಳು ವೇಗವಾಗಿ ಈ ನಿಲ್ದಾಣದ ಕಾರ್ಯವನ್ನ ಆರಂಭಿಸಿದ್ದಾರೆ. ಹೆಗಳನ್ನಚ್ಚಿನ ವಿಳಂಬವಾಗದೇ ಸ್ಥಳವನ್ನು ಅಂತಿಮಗೊಳಿಸುವುದಾಗಿ ಸರ್ಕಾರ ತಿಳಿಸಿದೆ ಎಂದು ಮೂಲಸೌಕರ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ನಿಗಧಿಯಾಗಿರುವ ಪ್ರಮುಖ ಸ್ಥಳಗಳು
ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದ ಮೂರು ಸೈಟ್‌ಗಳನ್ನ ಪರಿಶೀಲನೆ ಮಾಡಲು ಮುಂದಾಗಿದೆ. ತುಮಕೂರು ಮತ್ತು ರಾಮನಗರದ ಸಮೀಪವಿರುವ ಸ್ಥಳಗಳನ್ನ ಪರಿಗಣಿಸಿ ಅವುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಆದರೆ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರವಾದ ಟ್ರಾಫಿಕ್ ಅನ್ನು ಕಡಿಮೆ ಮಾಡಲು ತಜ್ಞರು ಮತ್ತು ಮಧ್ಯಸ್ಥಗಾರರು ದಕ್ಷಿಣ ಬೆಂಗಳೂರು ಸೈಟ್ ಕಡೆಗೆ ಮಖಮಾಡಿದ್ದಾರೆ.
ತೊಡಕಾಗಿ ಮಾರ್ಪಟ್ಟಿದೆಯಾ ಸ್ಕೈಡೆಕ್ ಯೋಜನೆ?
ಹೆಮ್ಮಿಗೆಪುರಕ್ಕೆ ಯೋಜಿಸಲಾದ ಸ್ಕೈಡೆಕ್ ಯೋಜನೆ, ಈ ಪ್ರಕ್ರಿಯೆಗೆ ಬಹುದೊಡ್ಡ ತೊಡಕಾಗಿ ಮಾರ್ಪಟ್ಟಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಆಗುವ ಏರ್ ಟ್ರಾಫಿಕ್ ಕಾರ್ಯಾಚರಣೆಗಳಿಗೆ ಅಡ್ಡಿಯಾಗಬಹುದು. ಇನ್ನು ಈಕುರಿತು ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನ ಸಂಗ್ರಹಿಸಿದೆ. ಇದರಲ್ಲಿ 300ಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹವಾಗಿದೆ. ಅದರಲ್ಲಿ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, "ಸ್ಕೈಡೆಕ್‌ಗೆ ಬೇಕಾದ ಪರ್ಯಾಯ ಸ್ಥಳ ಇನ್ನೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಭವಿಷ್ಯದ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ರೂಪಿಸಲು ಬೇಕಾದ ಕಾರ್ಯತಂತ್ರ, ಸಾರ್ವಜನಿಕ ಮತ್ತು ವ್ಯವಸ್ಥಾಪನಾ ಆದ್ಯತೆಗಳನ್ನು ಜೋಡಿಸಲು ಸರ್ಕಾರವು ಕೆಲಸ ಮಾಡ್ತಿದೆ, ಈ ಮೂಲಕ ಸರ್ಕಾರದಿಂದ ಅತೀ ಶೀಘ್ರದಲ್ಲೇ ನಿಲ್ದಾಣದ ಕಾರ್ಯಗಳ ಬಗ್ಗೆ ನಿರೀಕ್ಷಿಸಲಾಗಿದೆ.
ಒಟ್ನಲ್ಲಿ ಈ ಎಲ್ಲಾ ಅಡತಡೆಗಳ ಮಧ್ಯೆ ಎರಡನೇ ವಿಮಾನ ನಿಲ್ದಾಣದ ಕಾಮಗಾರಿಯನ್ನ ಆರಂಭಕ್ಕೆ ಸೈಟ್‌ಗಳು ಶಾರ್ಟ್‌ಲಿಸ್ಟ್ ಆಗಿವೆ. ಇನ್ನೇನಿದ್ರು ಸಾರ್ವಜನಿಕರು ಕಾಮಗಾರಿ ಆರಂಭಕ್ಕೆ ದಿನಗಳನ್ನ ಮಾತ್ರ ಎಣಿಸಬೇಕಿದೆ. ಇನ್ನು ಇದಕ್ಕೆ ಎಷ್ಟೇ ತೊಡಕುಗಳಾದ್ರು ಕೂಡ ತ್ವರಿತವಾಗಿ ನಿಲ್ದಾಣದ ಕಾಮಗಾರಿ ಕಾರ್ಯವನ್ನ ಆರಂಭ ಮಾಡ್ತೇವೆ ಎಂದು ಸರ್ಕಾರ ಭರವಸೆಯನ್ನ ನೀಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications