ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ತೆರೆಯುವ ಕಾರ್ಯಕ್ರಮ ಮುಂದುವರಿದಿದೆ. ಎರಡನೇ ಏರ್ ಪೋರ್ಟ್ನತ್ತ ಚಿತ್ತ ಹರಿಸಿರುವ ಸರ್ಕಾರ ಅದಕ್ಕಾಗಿ ಅಗತ್ಯ ಕೆಲಸಗಳನ್ನು ಮಾಡುತ್ತಿದೆ. ಅದಕ್ಕಾಗಿ ಪ್ರಮುಖವಾಗಿ ಆಗಬೇಕಿರುವ ಕೆಲಸ ಎಂದರೆ, ಸ್ಥಳ ಗುರುತು ಪ್ರಕ್ರಿಯೆ ಹೀಗಾಗಿ ರಾಜ್ಯದ ಎರಡು ಕಡೆ ಸ್ಥಳ ಗುರುತಿಸಿ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರ. ಹೆಚ್‌ಎಎಲ್ ಏರ್ ಪೋರ್ಟ್ ಇದ್ದರು ಅದು ಸೇವೆ ನಿಲ್ಲಿಸಿ ಬಹಳ ವರ್ಷಗಳೇ ಕಳೆದಿವೆ. ಬೆಂಗಳೂರಿನಿಂದ ವಿಮಾನ ಪ್ರಯಾಣ ಬೆಳೆಸಬೇಕಿರೋ ಎಲ್ಲರೂ ಕೆಂಪೇಗೌಡ ವಿಮಾನ ನಿಲ್ದಾಣಕ್ಕೇ ತೆರಳಬೇಕಿದೆ. ಇದರಿಂದ ಯಲಹಂಕ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಅದಲ್ಲದೇ ಏರ್ ಪೋರ್ಟ್ ಬಳಿಯೂ ವಾಹನಗಳ ನಿಯಂತ್ರಣ ಮಾಡಲಾಗುತ್ತಿಲ್ಲ. ಹೀಗಾಗಿ ಎರಡನೇ ಏರ್ ಪೋರ್ಟ್ ಬೇಕೆಂಬ ಕೂಗು ಮೊದಲಿನಿಂದಲೂ ಇತ್ತು. ಈಗ ಸರ್ಕಾರ ಇದೇ ಕಾರ್ಯದಲ್ಲಿ ತೊಡಗಿದೆ.
ಇನ್ನು ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು ನಿನ್ನೆ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಸಲ್ಲಿಸಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ನಗರದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಪ್ರಯಾಣಿಕರ ಭಾರ ಮತ್ತು ವಿಮಾನ ಸಂಚಾರದ ಹೆಚ್ಚಳವನ್ನು ಗಮನದಲ್ಲಿ ಇಟ್ಟುಕೊಂಡು, ಈ ಯೋಜನೆಯನ್ನು ಸರ್ಕಾರ ಮುಂದಿಟ್ಟಿದೆ.
ಹೊಸ ಏರ್ ಪೋರ್ಟ್ಗೆ ಸ್ಥಳ ಗುರುತು:
ಸಚಿವ ಎಂ.ಬಿ.ಪಾಟೀಲ್ ಪ್ರಕಾರ ಸದ್ಯ ವಿಮಾನ ನಿಲ್ದಾಣಕ್ಕಾಗಿ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ನೆಲಮಂಗಲ-ಕುಣಿಹಲ್ ರಸ್ತೆ ಹಾಗೂ ಕನಕಪುರ ರಸ್ತೆ.. ಈ ಎರಡು ಸ್ಥಳಗಳು ಬೆಂಗಳೂರು ನಗರದಿಂದ ಸುಮಾರು 50 ಕಿಮೀ ದೂರದಲ್ಲಿದ್ದು, ಮುಖ್ಯ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಹೊಂದಿವೆ. ಇದರಿಂದ ವಿಮಾನ ನಿಲ್ದಾಣಕ್ಕೆ ತಲುಪುವುದು ಸುಲಭವಾಗಬಹುದು.
ಸಂಪರ್ಕ ವ್ಯವಸ್ಥೆ ಸುಲಭ:
ವಿಮಾನ ನಿಲ್ದಾಣಕ್ಕಾಗಿ ಆಯ್ಕೆ ಮಾಡಲಾದ ಈ ಎರಡೂ ಸ್ಥಳಗಳು, ಪ್ರಸ್ತುತ ಮೆಟ್ರೋ ಮಾರ್ಗದ ಕೊನೆಯ ನಿಲ್ದಾಣಗಳಿಗೆ ಹತ್ತಿರದಲ್ಲಿವೆ. ಈ ಎರಡೂ ಕಡೆಗಳಲ್ಲಿ ಮೆಟ್ರೋ ಸಂಪರ್ಕ ಲಭ್ಯವಿರುವ ಕಾರಣ, ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ತಲುಪಲು ಅನುಕೂಲವಾಗಬಹುದು. ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕವೂ ಇರುವುದರಿಂದ, ಬೆಂಗಳೂರಿನ ವಿವಿಧ ಭಾಗಗಳಿಂದ ಸುಲಭ ಪ್ರವೇಶ ಸಾಧ್ಯವಿದೆ.
ಏರ್ ಪೋರ್ಟ್ ಯೋಜನೆಯ ಮುಂದಿನ ಹಂತ:
ಸದ್ಯ ಏರ್ ಪೋರ್ಟ್ ಯೋಜನೆಯ ಪ್ರಸ್ತಾವನೆಯನ್ನು, ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಕಳುಹಿಸಲಾಗಿದೆ. ಅಧಿಕೃತವಾಗಿ ಇಲ್ಲಿ ಸ್ಥಳ ಪರಿಶೀಲನೆ ನಡೆಸಿ ತಮ್ಮ ಅನುಮೋದನೆ ನೀಡಲಿದ್ದಾರೆ. . ಈ ಪ್ರಕ್ರಿಯೆ ಮುಗಿದ ನಂತರ ಇಲ್ಲಿ ಅಧ್ಯಯನ ನಡೆಸಲಾಗುವುದು.
ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳಗಳ ಆಯ್ಕೆ ಹಲವು ಅಂಶಗಳನ್ನು ಪರಿಗಣಿಸಿ ಮಾಡಲಾಗಿದೆ. ಇದರಲ್ಲಿ ಪ್ರವಾಸಿ ಸಂಚಾರ, ವಿಮಾನಯಾನ ಕ್ಷೇತ್ರದ ವೃದ್ಧಿ, ಭೂಮಿ ಲಭ್ಯತೆ ಮತ್ತು ಸಾರಿಗೆ ಸಂಪರ್ಕ ಮುಂತಾದ ಅಂಶಗಳು ಪ್ರಾಧಾನ್ಯ ಪಡೆದಿವೆ ಎಂದು, ಸಚಿವ ಪಾಟೀಲ್ ಹೇಳಿದ್ದಾರೆ.
ಎರಡನೇ ವಿಮಾನ ನಿಲ್ದಾಣದ ಅಗತ್ಯವೇನು..?
ಈ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ, ಆಗಲೇ ಹೇಳಿದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆಯಾಗುತ್ತದೆ. ಹಾಗೂ ವಿಮಾನ ಸಂಚಾರವೂ ಹೆಚ್ಚಳವಾಗುತ್ತದೆ. ಆಂತರಿಕ ಮತ್ತು ಅಂತರಾಷ್ಟ್ರೀಯ ವಿಮಾನಗಳ ಹೆಚ್ಚಿನ ಹಾರಾಟವಾಗಲಿದೆ. ಅಲ್ಲದೇ ಏರ್ ಪೋರ್ಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಅಭಿವೃದ್ಧಿ ಆಗಲಿದೆ. ದೊಡ್ಡ ದೊಡ್ಡ ಯೋಜನೆಗಳಿಗೂ ಕೈ ಹಾಕುವ ಸಾಧ್ಯತೆ ಇದೆ.
ಈ ಯೋಜನೆಯಿಂದ ಬೆಂಗಳೂರು ಮತ್ತು ಕರ್ನಾಟಕಕ್ಕೆ ದೊಡ್ಡ ಮಟ್ಟದ ಮಟ್ಟದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಅವಕಾಶಗಳು ಲಭ್ಯವಾಗುತ್ತವೆ. ಇನ್ನೊಂದೆಡೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.


Click it and Unblock the Notifications