ಮಹಿಳೆಯರು ಕೆಲಸಕ್ಕಾಗಿ ಹೋಗುತ್ತಿರಲಿ ಅಥವಾ ಕಾಲೇಜು ವ್ಯಾಸಂಗವಾದ್ರೂ ಮಾಡುತ್ತಿರಲಿ, ಆದರೆ ಎಲ್ಲಿಗೆ ಹೋದರೂ ಸುರಕ್ಷಿತವಾಗಿರುವುದು ಬಹಳ ಮುಖ್ಯ. ಉದ್ಯೋಗ, ವ್ಯಾಸಂಗವೆಂದು ತಮ್ಮೂರು ತೊರೆದು ಕೆಲವೊಮ್ಮೆ ನಗರ ಸೇರಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ, ಸ್ವಾತಂತ್ರ್ಯ ಬಹಳ ಮುಖ್ಯವಾಗುತ್ತದೆ. ನಮ್ಮ ಬೆಂಗಳೂರು ಮಹಿಳೆಯರಿಗೆ ತುಂಬಾನೇ ಸೇಫ್ ನಗರ. ಹೀಗೆ ನಾವು ಹೇಳ್ತಾ ಇರೋದಲ್ಲ. ಹೌದು ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ಗಮನ ಸೆಳೆದು ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಮುಕುಟ ಪ್ರಾಯಕ್ಕೆ ಮತ್ತೊಂದು ಗರಿ ಸಿಕ್ಕಿದ್ದು ಭಾರತದಲ್ಲೇ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಿಳೆಯರ ಕೆಲಸಕ್ಕೆ ಅತ್ಯಂತ ಸುರಕ್ಷಿತ ತಾಣ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ (ಡಿಇಐ) ಪರಿಹಾರಗಳಲ್ಲಿ ಪ್ರಮುಖವಾದ ಸಂಸ್ಥೆ, "ಅವತಾರ್ ಗ್ರೂಪ್ "ಪ್ರಕಟಿಸಿದ ಮೂರನೇ ಆವೃತ್ತಿಯ 'ಟಾಪ್ ಸಿಟೀಸ್ ಫಾರ್ ವುಮೆನ್ ಇನ್ ಇಂಡಿಯಾ (ಟಿಸಿಡಬ್ಲ್ಯುಐ)' ಸೂಚ್ಯಂಕದಲ್ಲಿ ಬೆಂಗಳೂರು ಭಾರತದ ಅತ್ಯಂತ ಲಿಂಗ ಸಮಾನತೆಯ ನಗರವೆಂದು ಶ್ರೇಯಾಂಕ ಪಡೆದಿದೆ.

ದೇಶದ ಒಟ್ಟು 25 ನಗರಗಳ ಪೈಕಿ ದಕ್ಷಿಣ ಭಾರತದ 16 ನಗರಗಳು ಸ್ಥಾನ ಪಡೆದುಕೊಂಡಿವೆ. ಈ ಪೈಕಿ ಬೆಂಗಳೂರು ಇಡೀ ದೇಶದಲ್ಲೇ ಅಗ್ರ ಸ್ಥಾನದಲ್ಲಿರುವುದು ಕರ್ನಾಟಕಕ್ಕೆ ಹೆಮೆಯ ಸಂಗತಿಯಾಗಿದೆ. ಇನ್ನು ಉದ್ಯೋಗ ನಿರತ ಮಹಿಳೆಯರಿಗೆ ಅತ್ಯುತ್ತಮ ನಗರ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜಧಾನಿ 3ನೇ ಸ್ಥಾನದಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ 8ನೇ ಸ್ಥಾನದಲ್ಲಿದೆ.
2024 ರ ಭಾರತದಲ್ಲಿ ಮಹಿಳೆಯರಿಗೆ ಉತ್ತಮವಾದ ಟಾಪ್ 10 ನಗರಗಳ ಪಟ್ಟಿಯು ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ಚೆನ್ನ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಾಲ್ಲಿ ಕ್ರಮವಾಗಿ ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತ್ತಾ, ಅಹಮದಾಬಾದ್, ದೆಹಲಿ, ಗುರುಗ್ರಾಮ್, ಕೋಯಮತ್ತೂರು ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಬೆಂಬಲವನ್ನು ನೀಡುವ ನಗರಗಳಾಗಿ ಗುರುತಿಸಿಕೊಂಡಿದೆ.
ಮಹಿಳಾ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶಗಳು, ಮೂಲಭೂತ ಸೌಕರ್ಯಮತ್ತು ಆರೈಕೆಯ ಸೇರಿದಂತೆ ಇನ್ನು ಹಲವು ವಿಭಾಗಗಳಲ್ಲಿ, ಬೆಂಗಳೂರು ನಗರದಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ಅನುಕೂಲಕರ ಪರಿಸರವಿದ್ದು ಸುರಕ್ಷಿತ ಮತ್ತು ಸುಸ್ಥಿರ ನಗರ ಎಂದು ಅವತಾರ್ ಗ್ರೂಪ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಚೆನ್ನೈ ಮತ್ತು ಹೈದರಾಬಾದ್ ನಗರಗಳು ಕೂಡ ಇದ್ದು, ಈ ನಗರಗಳಲ್ಲೂ ಮಹಿಳೆಯರಿಗೆ ಉದ್ಯೋಗದ ಅವಕಾಶ ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ.
ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವತಾರ್ ಗ್ರೂಪ್‌ನ ಸಂಸ್ಥಾಪಕ-ಅಧ್ಯಕ್ಷೆ ಡಾ. ಸೌಂದರ್ಯ ರಾಜೇಶ್, ಮಹಿಳೆಯರಿಗೆ ಅವಕಾಶಗಳನ್ನು ರೂಪಿಸುವಲ್ಲಿ ಲಿಂಗ ಸಮಾನತೆಯ ನಗರಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. "ನಗರಗಳು ಅವಕಾಶಗಳ ಅಡಿಪಾಯವಾಗಿದೆ. ಅವು ಮಹಿಳೆಯರು ಹೇಗೆ ವಾಸಿಸುತ್ತಾರೆ, ಕೆಲಸ ಮಾಡುತ್ತಾರೆ ಮತ್ತು ಹೇಗೆ ಅಭಿವೃದ್ಧಿ ಹೊಂದುತ್ತಾರೆ ಎಂಬುದನ್ನು ರೂಪಿಸುತ್ತಾರೆ. ಅದ್ದರಿಂದ 2047 ರ ವೇಳೆಗೆ ವಿಕಸಿತ ಭಾರತದ ಕನಸನ್ನು ನನಸಾಗಿಸಲು, ಭಾರತೀಯ ಮಹಿಳಾ ವೃತ್ತಿಪರರು ಪುರುಷರಂತೆಯೇ ಯಶಸ್ಸನ್ನು ಸಾಧಿಸಬೇಕು. ಇದು ನಗರಗಳು ಮಹಿಳೆಯರ ಶಕ್ತಿಗಳನ್ನು ಗರಿಷ್ಠಗೊಳಿಸುವ ಪರಿಸರವನ್ನು ಒದಗಿಸಿದಾಗ ಮಾತ್ರ ಸಾಧ್ಯ ಈ ನಿಟ್ಟಿನಲ್ಲಿ ಅವತಾರ್‌ನ ವಾರ್ಷಿಕ ಸೂಚ್ಯಂಕ 'ಭಾರತದಲ್ಲಿ ಮಹಿಳೆಯರಿಗಾಗಿ ಟಾಪ್ ಸಿಟೀಸ್' ಡೇಟಾ-ಕೇಂದ್ರಿತ ಮತ್ತು ಸಾಕ್ಷ್ಯ ಆಧಾರಿತ ವಿಧಾನವನ್ನು ಬಳಸಿಕೊಂಡು ನಿಖರವಾಗಿ ಮಾಡುತ್ತದೆ" ಎಂದು ಅವರು ಹೇಳಿದರು.
ಬಹುತೇಕ ಎಲ್ಲಾ ವಿಭಾಗಗಳಲ್ಲಿ ಹೈದರಾಬಾದ್ ಮತ್ತು ಚೆನ್ನೈ ನಗರಗಳು ಬೆಂಗಳೂರಿಗೆ ಪೈಪೋಟಿ ನೀಡುತ್ತಿದ್ದು, ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ಬಳಿಕ ಬೆಂಗಳೂರು ನಗರವನ್ನು ಉದ್ಯೋಗ ನಿರತ ಮಹಿಳೆಯರಿಗಾಗಿ ಅತ್ಯುತ್ತಮ ನಗರ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಅವತಾರ್ ಗ್ರೂಪ್ ತಿಳಿಸಿದೆ. ರಾಜ್ಯವಾರು ವಿಶ್ಲೇಷಣೆಯಲ್ಲಿ, ಕೇರಳವು 20.89 ರ ಗರಿಷ್ಠ ಸರಾಸರಿ ಸಿಟಿ ಇನ್‌ಕ್ಲೂಷನ್ ಸ್ಕೋರ್‌ನೊಂದಿಗೆ ಮುಂಚೂಣಿಯಲ್ಲಿದೆ, ನಂತರ ತೆಲಂಗಾಣ 20.57 ಆಗಿದೆ. ಮಹಾರಾಷ್ಟ್ರ 19.93 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ 19.38 ಮತ್ತು 17.50 ಅಂಕಗಳೊಂದಿಗೆ ನಿಕಟವಾಗಿ ಅನುಸರಿಸುತ್ತವೆ. ಫೆಬ್ರವರಿಯಿಂದ ನವೆಂಬರ್ 2024 ರವರೆಗೆ ನಡೆಸಿದ ಅಧ್ಯಯನವು 60 ನಗರಗಳಲ್ಲಿ 1672 ಮಹಿಳೆಯರಿಂದ ಡೇಟಾವನ್ನು ಸಂಗ್ರಹಿಸಿದೆ. ಇದು ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (CMIE), ವಿಶ್ವ ಬ್ಯಾಂಕ್, ಅಪರಾಧ ದಾಖಲೆಗಳು ಮತ್ತು ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯ ಮಾಹಿತಿಯನ್ನು ಸಹ ಬಳಸಿಕೊಂಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications