ರಾಜಧಾನಿ ಬೆಂಗಳೂರು ಇಷ್ಟುದಿನ ಬಿಸಿಲ ಬೇಗೆಯಿಂದ ಕಂಗೆಟ್ಟು ಹೋಗಿತ್ತು. ಈ ಬೇಸಿಗೆಯ ಬೇಗೆ ಎಷ್ಟರ ಮಟ್ಟಿಗೆ ಬಿಸಿ ಮುಟ್ಟಿಸಿದೆ ಎಂದರೆ, ಮನೆಯಿಂದ ಹೊರಗೆ ಬರೋದಕ್ಕೂ ಚಿಂತಿಸುವಂತಾಗಿತ್ತು. ಅಲ್ಲದೇ ಹಲವು ಆರೋಗ್ಯದ ಸಮಸ್ಯೆಗಳನ್ನೂ ಸೃಷ್ಟಿಸಿತ್ತು. ಹಾಗೆಯೇ ಇದೀಗ ತಿಳಿದುಬಂದಿರುವ ಒಂದು ಶಾಕಿಂಗ್ ವಿಚಾರವೇನೆಂದರೆ, ಬೆಂಗಳೂರಿನಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ ಅನ್ನೋದು.

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ನ್ಯುಮೋನಿಯಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆ ಉಲ್ಬಣವಾಗಲು ಕಾರಣ ರೋಗ ನಿರೋಧಕ ಅಂಶ ಇಲ್ಲದೇ ಇರುವುದು, ಪರಿಸರದಲ್ಲಾಗುತ್ತಿರುವ ಬದಲಾವಣೆಗಳು ಹಾಗೂ ಆರೈಕೆಯಲ್ಲಿ ವಿಳಂಬ ತೋರಿಸುತ್ತಿರುವುದು ಎಂದು ಹೇಳುತ್ತಿದ್ದಾರೆ. ಹೀಗಾಗಿ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇದು ಅತ್ಯಂತ ಡೇಂಜರ್ ರೋಗವಾಗಿದ್ದು, ಜನರು ಈ ಬಗ್ಗೆ ಅತಿಯಾಗಿ ಗಮನ ಹರಿಸಬೇಕು.
ಇನ್ನು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಹವಾಮಾನ ಬದಲಾವಣೆಯನ್ನು ಗಣನೀಯವಾಗಿ ಕಾಣಬಹುದಾಗಿದೆ. ಮೊದಲೆಲ್ಲ ಚಳಿಗಾಲದಲ್ಲಿ ಕಂಡುಬರುತ್ತಿದ್ದ ನ್ಯುಮೋನಿಯಾ ಜ್ವರ, ಈಗ ಬೇಸಿಗೆಯಲ್ಲೇ ಬಂದಿರುವುದು ನಿಜಕ್ಕೂ ಆತಂಕಕಾರಿ ವಿಷಯ.ನಗರದಲ್ಲಿ ಉಷ್ಣತೆ ಹೆಚ್ಚಾಗುವುದರ ಜೊತೆಗೆ ವಾತಾವರಣದಲ್ಲಿ ತೇವಾಂಶದ ಅಸ್ಥಿರತೆ ಈ ರೋಗದ ಹರಡುವಿಕೆಗೆ ಅನುಕೂಲಕರ ಪರಿಸ್ಥಿತಿ ಒದಗಿಸುತ್ತದೆ.
ಅಂದಹಾಗೆ ಬೆಂಗಳೂರಿನಲ್ಲಿರುವ ವಿವಿಧ ಆಸ್ಪತ್ರೆಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನ್ಯುಮೋನಿಯಾ ಪ್ರಕರಣಗಳು ಶೇಕಡಾ 10-15 ರಷ್ಟು ಹೆಚ್ಚಾಗಿವೆ ಎನ್ನಲಾಗಿದೆ. ಅಂದರೆ ಮೊದಲೆಲ್ಲ ಸಾಮಾನ್ಯವಾಗಿ 1-2 ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದರೆ, ಈಗ ಈ ಸಂಖ್ಯೆ 15-20 ಕ್ಕೆ ಏರಿಕೆಯಾಗಿದೆ. ವೈದ್ಯರು ಹೇಳುವ ಪ್ರಕಾರ, ಈ ಪ್ರಕರಣಗಳ ಏರಿಕೆಗೆ ಹವಾಮಾನ ಬದಲಾವಣೆ ಮತ್ತು ನಗರದಲ್ಲಿ ಹೆಚ್ಚಿದ ಮಾಲಿನ್ಯ ಪ್ರಮುಖ ಕಾರಣಗಳಾಗಿವೆ. ಹೆಚ್ಚಿನ ಜನಸಂಚಾರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಚ್ಚಿದ ವಾತಾವರಣ ಇರುವುದು ಈ ಸೋಂಕಿನ ಹರಡುವಿಕೆಗೆ ಸಹಾಯ ಮಾಡುತ್ತಿದೆ.
ಇನ್ನು ಬೆಂಗಳೂರು ಒಂದು ಕಾಂಕ್ರೀಟ್ ಕಾಡು. ದಿನೇ ದಿನೆ ಇಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಒಂದು ಕಟ್ಟಡ ಮುಗಿಯಿತು ಎಂದರೆ ಮತ್ತೊಂದು ಕಟ್ಟಡ ತಲೆ ಎತ್ತಲು ಶುರುವಾಗುತ್ತದೆ. ದಿನೇ ದಿನೆ ಬಿಡುವಿಲ್ಲದೇ ಕಟ್ಟಡಗಳ ನಿರ್ಮಾಣ, ಅದರಿಂದ ಹೊರ ಹೊಮ್ಮುವ ಮಾಲಿನ್ಯವೂ ಈ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಅಲ್ಲದೇ ವಾಹನಗಳಿಂದ ಹೊರ ಹೊಮ್ಮುವ ಹೊಗೆಯಿಂದಲೂ ಮಾಲಿನ್ಯ ತೀವ್ರವಾಗಿ ಹದಗೆಡುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಧೂಳಿನ ಕಣಗಳು ಶ್ವಾಸಕೋಶದ ನಾಳಿಗಳನ್ನು ಕಿರಿದಾಗಿಸುತ್ತವೆ, ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿ ಒದಗಿಸುತ್ತವೆ. ಇದನ್ನು ನಿಯಂತ್ರಿಸುವ ಪ್ರಯತ್ನಗಳಿಲ್ಲದೆ, ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿ ಬೆಳೆಯಬಹುದು.
ನ್ಯುಮೋನಿಯಾದ ಲಕ್ಷಣಗಳು?
- ಜ್ವರ ಮತ್ತು ತೀವ್ರ ಬೆವರು
- ಹಸಿರು ಅಥವಾ ಹಳದಿ ಕಫದೊಂದಿಗೆ ಕೆಮ್ಮು
- ಉಸಿರಾಟದ ತೊಂದರೆ, ಎದೆನೋವು
- ದಣಿತ, ಹಸಿವಿನ ನಷ್ಟ
ಡಾ. ಪದ್ಮಾ ಅವರ ಪ್ರಕಾರ, ನ್ಯುಮೋನಿಯಾ ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಪ್ರಾರಂಭವಾಗಿ ನಂತರ ಬ್ಯಾಕ್ಟೀರಿಯಾದಿಂದ ತೀವ್ರಗೊಳ್ಳುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಸಮಸ್ಯೆ ಗಂಭೀರವಾಗಬಹುದು. ಇನ್ನು ಬ್ಯಾಕ್ಟೀರಿಯಾದ ನ್ಯುಮೋನಿಯಾ ಕೇಸ್‌ಗಳಲ್ಲಿ ಹೆಚ್ಚಿನ ಜ್ವರವಿರುತ್ತದೆ. ಈ ಕಾರಣದಿಂದ ಇದು 101 °F ಗಿಂತ ಹೆಚ್ಚಾಗಬಹುದು, ಜೊತೆಗೆ ತ್ವರಿತ ಉಸಿರಾಟ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ ಎನ್ನಲಾಗಿದೆ.
ಇನ್ನು ಈ ನ್ಯುಮೋನಿಯಾ ಹೆಚ್ಚಾಗಿ ಸೋಂಕು ಹರಡುವಿಕೆಯಿಂದ ಆರಂಭವಾಗುತ್ತದೆ. ಅದರಲ್ಲೂ ಡಯಾಬಿಟಿಸ್‌ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳದವರಿಗೆ ಮತ್ತು ರೋಗನಿರೋಧಕ ಶಮನಕಾರಿ ಚಿಕಿತ್ಸೆಯಲ್ಲಿರುವವರಿಗೂ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಯಾರಾದರೂ ಉಸಿರಾಟದ ತೊಂದರೆ, ಅಧಿಕ ಜ್ವರದಂತಹ ಅನುಭವ ಕಂಡರೆ ಅವರು ಆದಷ್ಟು ಬೇಗ ಚಿಕಿತ್ಸೆ ಪಡೆಯುವುದು ಉತ್ತಮ.
ಚಿಕಿತ್ಸಾ ವಿಧಾನಗಳು:
- ಬ್ಯಾಕ್ಟೀರಿಯಾ ಮೂಲದ ಸೋಂಕಿಗೆ ಪ್ರತಿಜೀವಕ ಚಿಕಿತ್ಸೆ
- ವೈರಸ್ ಸೋಂಕಿಗೆ ಆಂಟಿವೈರಲ್ ಔಷಧಿ
- ವಿಶ್ರಾಂತಿ, ಸಾಕಷ್ಟು ನೀರು ಸೇವನೆ, ಆಮ್ಲಜನಕ ಚಿಕಿತ್ಸೆ
ವೈದ್ಯರು ಪ್ರತಿಜೀವಕಗಳ ಅತಿಯಾಗಿ ಬಳಕೆಯಿಂದ ದೂರವಿರಲು ಸಲಹೆ ನೀಡುತ್ತಾರೆ. ಯಾವುದೇ ನ್ಯುಮೋನಿಯಾ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ತಡವಾದ ವೈದ್ಯಕೀಯ ಚಿಕಿತ್ಸೆ ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು.
ನ್ಯುಮೋನಿಯಾ ತಡೆಗಟ್ಟುವುದು ಹೇಗೆ..?
ಲಸಿಕೆ ಪಡೆಯುವುದು:
ಜ್ವರ, ಶಿತ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹಾಗೂ ಆಸ್ಪತ್ರೆಗೆ ಹೋಗಿ ನ್ಯುಮೋನಿಯಾ ಮತ್ತು ಫ್ಲೂ ಲಸಿಕೆಗಳನ್ನು ಪಡೆಯುವುದು ಉತ್ತಮ. ಈ ಮೂಲಕ ನ್ಯುಮೋನಿಯಾವನ್ನು ಮೊದಲ ಹಂತದಲ್ಲಿ ತಡೆಯಬಹುದು.
ನೈರ್ಮಲ್ಯ ಕಾಪಾಡುವುದು:
ಸದಾ ನಿಮ್ಮ ದೇಹ ಹಾಗೂ ನೀವು ವಾಸಿಸುವ ಸ್ಥಳವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಆಗಾ ಕೈ ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು ಉತ್ತಮ.
ಜನದಟ್ಟಣೆಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ:
ಅತಿಹೆಚ್ಚು ಜನರು ಸೇರಿರುವ ಜಾಗದಲ್ಲಿ ಹೋಗದೇ ಇರುವುದೇ ಉತ್ತಮ. ಏಕೆಂದರೆ ನ್ಯುಮೋನಿಯಾ ಸೋಂಕಿನ ಮೂಲಕವೂ ತಗಲುವ ರೋಗವಾಗಿದ್ದು, ಇದು ಯಾವಾಗ ಬೇಕಾದರೂ ನಿಮಗೆ ತಗಲಬಹುದು. ಹೀಗಾಗಿ ಹೆಚ್ಚು ಜನರಿರುವ ಸ್ಥಳಗಳಿಗೆ ಹೋಗುವುದಾದರೆ, ಮಾಸ್ಕ್ ಧರಿಸುವುದು ಉತ್ತಮ.
ಆಹಾರ ಮತ್ತು ನೀರಿನ ಸಮತೋಲನ:
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದರೆ ರೋಗ ತಡೆಗಟ್ಟುವುದು ಸುಲಭ. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಅತಿಮುಖ್ಯ. ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸುವುದು ಹಾಗೆಯೇ ನೀರಿನ ಮಟ್ಟ ಸಮತೋಲನದಲ್ಲಿ ಇಡುವುದು ಉತ್ತಮ.
ಧೂಮಪಾನ ತ್ಯಜಿಸುವುದು:
ಧೂಮಪಾನ ಶ್ವಾಸಕೋಶದ ಆರೋಗ್ಯ ಹಾಳುಮಾಡಬಹುದು. ಹೀಗಾಗಿ ಧೂಮಪಾನವನ್ನು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.
ಹೊಗೆಯ ಮಾಲಿನ್ಯದಿಂದ ದೂರವಿರುವುದು:
ವಾಹನದ ಹೊಗೆಯಿಂದ ದೂರವಿದ್ದು, ಸ್ವಚ್ಛವಾದ ವಾತಾವರಣದಲ್ಲಿರುವುದು ಉತ್ತಮ. ಏಕೆಂದರೆ ಇದು ಜ್ವರ, ಶೀತ, ಅಥವಾ ಯಾವುದೇ ಸೋಂಕಿಗೆ ಎಡೆಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಒಟ್ಟಿನಲ್ಲಿ ಬೆಂಗಳೂರಿನಲ್ಲಾಗುತ್ತಿರುವ ಹವಾಮಾನ ಬದಲಾವಣೆಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿವೆ. ಹೀಗಾಗಿ ಆರೋಗ್ಯ ಸಮಸ್ಯೆ ಕಂಡು ಬಂದರೆ ಪ್ರಾಥಮಿಕ ಲಕ್ಷಣಗಳನ್ನು ನಿರ್ಲಕ್ಷಿಸದೇ ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಹಾಗೂ ತಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದಲ್ಲದೇ ನಮ್ಮ ಸುತ್ತ ಮುತ್ತಲಿನವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ, ಅರಿವು ಮೂಡಿಸಿದರೆ ಸೋಂಕಿನಲ್ಲಿ ತಗಲುವ ಕಾಯಿಲೆಗಳನ್ನು ತಡೆಗಟ್ಟಬಹುದು. ಹಾಗೆಯೇ ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಕೂಡ ಈ ಬಗ್ಗೆ ಗಮನಹರಿಸಬೇಕು. ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಿ ಅದಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೆ ತರಬೇಕು.
ಇನ್ನು ಜನರಿಗೆ ಹೊಸ ತಂತ್ರಜ್ಞಾನಗಳ ಬಳಕೆ, ಆರೋಗ್ಯ ಶಿಕ್ಷಣ, ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ನ್ಯುಮೋನಿಯಾ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಭಾಗದ ಜವಾಬ್ದಾರಿಯನ್ನು ತೆಗೆದುಕೊಂಡರೆ, ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು. ಹೀಗೆ ಮೇಲೆ ನೀಡಿರುವ ಮಾಹಿತಿಗಳನ್ನು ತಿಳಿದು ತಮ್ಮ ಆರೋಗ್ಯವನ್ನು ತಾವೇ ಉತ್ತಮವಾಗಿಟ್ಟುಕೊಳ್ಳಬೇಕಾಗುತ್ತದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಕಂಡುಬಂದಕೂಡಲೇ ಎಚ್ಚೆತ್ತುಕೊಳ್ಳಬೇಕು. ವೈದ್ಯರನ್ನು ಭೇಟಿಯಾಗಿ ಆರೋಗ್ಯ ಸುಧಾರಿಸಿಕೊಳ್ಳುವಂತಹ ಸಲಹೆಗಳನ್ನು ಪಡೆಯಬೇಕು. ಹಾಗೂ ಈ ಮೇಲೆ ನೀಡಿರುವ ಎಲ್ಲಾ ಸಲಹೆಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಈ ಮೂಲಕ ಮಾತ್ರ ಆರೋಗ್ಯ ಕಾಪಾಡಿಕೊಂಡು ನ್ಯುಮೋನಿಯಾದಿಂದ ದೂರ ಉಳಿಯಲು ಸಾಧ್ಯ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Hebbal Tunnel Project: ಹೆಬ್ಬಾಳ 6 ಪಥದ ಸುರಂಗ ರಸ್ತೆಗೆ ಟೆಂಡರ್... 4 ಪ್ರಮುಖ ಕಂಪನಿಗಳಲ್ಲಿ ಬಿಡ್ಡಿಂಗ್ ಸ್ಪರ್ಧೆ!



Click it and Unblock the Notifications