ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರು ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ಬೆಲ್ಲಟ್ರಿಕ್ಸ್ ಏರೋಸ್ಪೇಸ್ ಸೆಪ್ಟೆಂಬರ್ 18ರ ಬುಧವಾರ ಸಿಲಿಕಾನ್ ಸಿಟಿಯಲ್ಲಿ ನಡೆದ ಸ್ಪೇಸ್ ಎಕ್ಸ್‌ಪೋ 2024 ರ ಉದ್ಘಾಟನಾ ದಿನದಂದು ಅಲ್ಟ್ರಾ-ಲೋ ಅರ್ಥ್ ಆರ್ಬಿಟ್‌ನಲ್ಲಿ (180 ಕಿಮೀ-250 ಕಿಮೀ) ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ವಿನೂತನ ಉಪಗ್ರಹವಾದ ಪ್ರಾಜೆಕ್ಟ್ -200 ಅನ್ನು ಬಿಡುಗಡೆಗೊಳಿಸಿದೆ.
ಈ ಕಕ್ಷೆಯು ಇಂದಿನ ಉಪಗ್ರಹ ಸಾಮರ್ಥ್ಯಗಳನ್ನು ಪರಿಣಮಕಾರಿಯಾಗಿ ಪರಿವರ್ತಿಸುತ್ತದೆ ಮತ್ತು ಉಪಗ್ರಹವು ಗ್ರಹದೊಂದಿಗೆ ಸಂಪರ್ಕಿಸುವ ವಿಧಾನವನ್ನು ಮರುರೂಪಿಸುತ್ತದೆ ಎಂದು ಸ್ಟಾರ್ಟ್ಅಪ್ ಹೇಳಿದೆ.

ಗೇಮ್ ಚೇಂಜರ್ ಪ್ರೊಪಲ್ಷನ್ ತಂತ್ರಜ್ಞಾನ
"ಪ್ರಾಜೆಕ್ಟ್ 200 ಸುಮಾರು 200 ಕಿ.ಮೀ.ನ ಕಕ್ಷೆಯಲ್ಲಿ ನವೀನ ಪ್ರೊಪಲ್ಷನ್ ಸಿಸ್ಟಮ್‌ನಿಂದ ಚಾಲಿತವಾಗಿರುವ ತಂತ್ರಜ್ಞಾನ ಮಿಷನ್ ಆಗಿದೆ. ಈ ಹೊಸ ತಂತ್ರಜ್ಞಾನ ಪರೀಕ್ಷೆಯೂ ಮುಂದೆ ಈ ಕ್ಶೇತ್ರದಲ್ಲಿ ಗೇಮ್ ಚೇಂಜರ್ ಗೆ ಕಾರಣವಾಗಬಹುದು. ಹೆಚ್ಚಿನ ರೆಸಲ್ಯೂಶನ್ ಭೂಮಿಯ ವೀಕ್ಷಣೆ, ದೂರಸಂಪರ್ಕ ಮತ್ತು ವೈಜ್ಞಾನಿಕ ಸಂಶೋಧನೆ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಲ್ಲಿಸಾಮರ್ಥ್ಯಗಳು ಬೆಳೆದರೆ ಕ್ರಾಂತಿಯನ್ನು ಉಂಟುಮಾಡಬಹುದು ಜೊತೆಗೆ ವೇಗ ಮತ್ತು ಕಾರ್ಯಕ್ಷಮತೆ ಹೆಚ್ಚಾಗಬಹುದು" ಎಂದು ಬೆಲ್ಲಟ್ರಿಕ್ಸ್ ಸ್ಟಾರ್ಟ್ಅಪ್ ಹೇಳಿದೆ.
ಬೆಲ್ಲಾಟ್ರಿಕ್ಸ್ ಏರೋಸ್ಪೇಸ್‌ನ ಸಹ-ಸಂಸ್ಥಾಪಕ, ಸಿಇಒ ಮತ್ತು ಸಿಟಿಒ ರೋಹನ್ ಎಂ.ಗಣಪತಿ ಮಾತನಾಡಿ, "ಸಾಂಪ್ರದಾಯಿಕವಾಗಿ, ಉಪಗ್ರಹಗಳನ್ನು 450 ಕಿಮೀ ಎತ್ತರದ ಕಕ್ಷೆಯಲ್ಲಿ ನಿಯೋಜಿಸಲಾಗುತ್ತದೆ. ಈ ಎತ್ತರವನ್ನು ಯಾಕೆ ಆಯ್ಕೆ ಮಾಡುತ್ತಾರೆ ಅಂದರೆ ಅನೇಕ ಪರಿಗಣನೆಗಳ ಮೇಲೆ ಇದು ಪ್ರಭಾವಿತವಾಗಿರುತ್ತದೆ. ಉದಾಹರಣೆಗೆ ಉಪಗ್ರಹ ಕಾರ್ಯಾಚರಣೆಗಳ ಮೇಲೆ ವಾತಾವರಣದ ಮೇಲ್ಮೈನ ಹಸ್ತಕ್ಷೇಪದ ಪರಿಣಾಮವನ್ನು ಕಡಿಮೆ ಮಾಡುವ ಕಾರಣದಿಂದ ಎತ್ತರದ ಕಕ್ಷೆಯಲ್ಲಿರಿಸಲಾಗುತ್ತದೆ. ಉಪಗ್ರಹದ ಸಾಮರ್ಥ್ಯವು 200 ಕಿಮೀಗಳಲ್ಲಿ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ತಿಳಿದಿದ್ದರೂ, ಪ್ರೊಪಲ್ಷನ್ ತಂತ್ರಜ್ಞಾನದ ಮೇಲಿನ ಮಿತಿಗಳು ಉಪಗ್ರಹಗಳು ಈ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತವೆ. ಈ ಕಾರಣದಿಂದ ಬೆಲ್ಲಟ್ರಿಕ್ಸ್ ಕಳೆದ ನಾಲ್ಕು ವರ್ಷಗಳಿಂದ ಇದನ್ನು ಪರಿಹರಿಸುವತ್ತ ಕೆಲಸ ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.
ಸುಧಾರಿತ ಸಾಮರ್ಥ್ಯ
ಪ್ರೊಪಲ್ಷನ್ ಯಾವಾಗಲೂ ಉಪಗ್ರಹದ ಹೃದಯವಾಗಿರುತ್ತದೆ. ಇದು ಒಂದು ರೀತಿ ಪಝಲ್ ನಂತೆ ಕಾರ್ಯ ನಿರ್ವಹಿಸುತ್ತದೆ. ಈ ಜಟಿಲತೆಯನ್ನು ಭೇದಿಸುವುದು ನಿರ್ಣಾಯಕ ಮತ್ತು ಪ್ರಮುಖವಾಗಿತ್ತು. ಆದರೆ ನಾವು propulsion ತಂತ್ರಜ್ಞಾನದಲ್ಲಿ ಒಂದು ಮಹತ್ವದ ಪ್ರಗತಿಯನ್ನು ಸಾಧಿಸಿದ್ದೇವೆ. ಇದು ಕೆಲವೇ ದಿನಗಳಲ್ಲಿ ನಿರ್ಗಮಿಸುವ ಬದಲು ಅದೇ ಕಕ್ಷೆಯಿಂದ ವರ್ಷಗಳವರೆಗೆ ಕಾರ್ಯನಿರ್ವಹಿಸಲು ಉಪಗ್ರಹಗಳನ್ನು ಅನುಮತಿಸುತ್ತದೆ. ನಾವು ಕೇವಲ ಪ್ರೊಪಲ್ಷನ್ ಪರಿಹಾರವನ್ನು ನಿರ್ಮಿಸುತ್ತಿಲ್ಲ, ಆದರೆ ಈ ಎತ್ತರದಲ್ಲಿ ಕಾರ್ಯನಿರ್ವಹಿಸಲು ಸಾಮರ್ಥ್ಯವಿರುವ ಹೊಂದಿರುವ ಪ್ರಥಮ ಉಪಗ್ರಹವನ್ನು ರೂಪಿಸುತ್ತಿದ್ದೇವೆ" ಎಂದು ಗಣಪತಿಯವರು ಹೇಳಿದ್ದಾರೆ.
ಈ ಎತ್ತರದಲ್ಲಿ, ಸಂವಹನ ಸುಪ್ತತೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಉಪಗ್ರಹದ ಸಾಮರ್ಥ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ, ಚಿತ್ರದ ರೆಸಲ್ಯೂಶನ್ 3X ರಷ್ಟು ಸುಧಾರಿಸುತ್ತದೆ, ಅದೇ ಸಮಯದಲ್ಲಿ ಉಪಗ್ರಹದ ವೆಚ್ಚವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂದು ಬೆಲಾಟ್ರಿಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಲ್ಲಟ್ರಿಕ್ಸ್ ಏರೋಸ್ಪೇಸ್ ಬಗ್ಗೆ:
ಬೆಲ್ಲಟ್ರಿಕ್ಸ್ ಏರೋಸ್ಪೇಸ್ ಭಾರತೀಯ ಖಾಸಗಿ ಏರೋಸ್ಪೇಸ್ ತಯಾರಕ ಮತ್ತು ಸಣ್ಣ ಉಪಗ್ರಹ ತಯಾರಿಕಾ ಕಂಪನಿಯಾಗಿದ್ದು , ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ . ಈ ಕಂಪನಿಯು 2015 ರಲ್ಲಿ ಸ್ಥಾಪನೆಯಾಯಿತು. ಬೆಲಾಟ್ರಿಕ್ಸ್ ಎಂಬ ಹೆಸರು ಲ್ಯಾಟಿನ್ ಬೆಲ್ಲಾಟ್ರಿಕ್ಸ್‌ನಿಂದ ಬಂದಿದ್ದು ರೆಡ್ ಸೂಪರ್‌ಜೈಂಟ್ ಸ್ಟಾರ್ ಬೆಲಾಟ್ರಿಕ್ಸ್ ನಿಂದ ಪ್ರಚೋದನೆ ಪಡೆದು ಈ ಹೆಸರು ಇರಿಸಲಾಗಿದೆ. ಈ ಸ್ಟಾರ್ಟ್ಅಪ್ ನ ಸ್ಥಾಪಕರು ಸ್ನೇಹಿತರಾದ ರೋಹನ್ ಎಂ ಗಣಪತಿ ಮತ್ತು ಯಶಸ್ ಕರಣಂ ಆಗಿದ್ದಾರೆ.


Click it and Unblock the Notifications