ಬೆಂಗಳೂರಿನಂತಹ ನಗರಗಳಲ್ಲಿ ಬದುಕಬೇಕೆಂದರೆ ಉತ್ತಮ ಸಂಬಳವೊಂದೇ ಮುಖ್ಯವಲ್ಲ. ಅದನ್ನು ನಿಭಾಯಿಸುವ ಕಲೆ ಇರಲೇಬೇಕು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಬದುಕು, ನೋಡೋಕೆ ಬಣ್ಣವಾಗಿರುತ್ತದೆ. ಆದರೆ ಅವರ ಕಷ್ಟ ಮಾತ್ರ ಅವರಿಗೇ ಗೊತ್ತು. ಒಳ್ಳೆ ಬಟ್ಟೆ ಹಾಕಿ, ಒಳ್ಳೆ ವಾಹನದಲ್ಲಿ ಓಡಾಡಿದರೆ ಮಾತ್ರ ಲೈಫ್ ಸೂಪರ್ ಆಗಿದೆ ಎಂದು ಹೇಳೋಕಾಗಲ್ಲ. ಹೀಗಾಗಿ ಬೆಂಗಳೂರಿನಂತಹ ದೊಡ್ಡ ಸಿಟಿಯಲ್ಲಿ ಬದುಕಬೇಕೆಂದ್ರೆ, ಉಳಿತಾಯದ ಕಲೆ ಇರಲೇಬೇಕು. ಮಿತವಾದ ಖರ್ಚು ಬದುಕಿಗೆ ಎಷ್ಟು ಉತ್ತಮ ಎಂಬುದನ್ನು, ಬಿಲಿಯನೇರ್ ಆದಂತಹ ಡಾ. ಎ. ವೇಲುಮಣಿ ಅವರೇ ವಿವರಿಸಿದ್ದಾರೆ.

ಹೌದು, ಬೆಂಗಳೂರು ಮೂಲದ ಎಂಜಿನಿಯರ್ ಒಬ್ಬರ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ, ಥೈರೋಕೇರ್ ಸಂಸ್ಥಾಪಕರಾದಂತಹ ಬಿಲಿಯನೇರ್ ಡಾ. ಡಾ.ವೇಲುಮಣಿ ಅವರು ಮಿತವ್ಯಯದ ಮಹತ್ವ ತಿಳಿಸಿದರು. ಬೆಂಗಳೂರಿನ ಆ ಟೆಕ್ಕಿ ತಿಂಗಳಿಗೆ 1.5 ಲಕ್ಷ ರೂ.ಗಳಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದರೂ ಕೂಡ, ಅವರ ಜೀವನ ಕಷ್ಟವಾಗಿತ್ತು. ಪ್ರತಿ ತಿಂಗಳು ಬಿಲ್‌ಗಳನ್ನು ಪಾವತಿಸಲು ಮತ್ತು ತಮ್ಮ ದಿನಚರಿಯನ್ನು ನಿರ್ವಹಿಸಲು ಹೆಣಗಾಡುತ್ತಿದ್ದರು. ಮಿತವ್ಯಯವಿಲ್ಲದಿದ್ದರೆ, ಜೀವ ತುಂಬಾ ಕಷ್ಟದಲ್ಲಿರುತ್ತದೆ. ನೀವು ಎಷ್ಟು ಯಶಸ್ಸು ಗಳಿಸುತ್ತೀರಿ ಎಂಬುದು ಮುಖ್ಯವಲ್ಲ. ನಿಮಗೆಷ್ಟು ಕಡಿಮೆ ಬೇಕು ಎಂಬುದನ್ನು ಅರಿಯುವುದು ಮುಖ್ಯ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಪೋಸ್ಟ್‌ಗೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾದ ಯಶಸ್ಸನ್ನು ಆದಾಯದಿಂದ ಮಾತ್ರ ಅಳೆಯಲಾಗುವುದಿಲ್ಲ ಎಂದಿದ್ದಾರೆ. ಇನ್ನೂ ಕೆಲವು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಿರ್ಮಿಸುವ ಮೂಲಕ ನಿಜವಾದ ಯಶಸ್ಸನ್ನು ಅಳೆಯಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಬೆಂಗಳೂರು ಸೇರಿ ಮೊದಲಾದ ನಗರಗಳಲ್ಲಿ ಉತ್ತಮ ಜೀವನ ನಡೆಸಬೇಕೆಂದರೆ, ಸಂಬಳ ಸಾಕಾಗುವುದಿಲ್ಲ. ಹಣದ ನಿರ್ವಹಣೆ ಬಹಳ ಮುಖ್ಯವಾಗಿರುತ್ತದೆ. ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಜೀವನ, ವೈಭವದಿಂದಿರುವಂತೆ ಕಂಡರೂ ಅವರು ಎದುರಿಸುವ ಆರ್ಥಿಕ ಒತ್ತಡ ಮತ್ತು ಖರ್ಚುಗಳ ತೊಡಕು ಯಾರಿಗೂ ಕಾಣುವುದಿಲ್ಲ. ಒಳ್ಳೆಯ ಬಟ್ಟೆ ಹಾಕಿದರೂ, ಬೆಲೆಬಾಳುವ ವಾಹನದಲ್ಲಿ ಓಡಿದರೂ, ಅದು ಸಂತೃಪ್ತ ಜೀವನದ ಚಿಹ್ನೆಯಾಗುವುದಿಲ್ಲ. ಆದ್ದರಿಂದ, ಈ ನಗರದಲ್ಲಿ ಯಶಸ್ವಿಯಾಗಿ ಬದುಕಬೇಕೆಂದರೆ, ಉಳಿತಾಯದ ಮಹತ್ವವನ್ನು ಅರಿಯಬೇಕು.
ಇನ್ನು ಡಾ. ಎ.ವೇಲುಮಣಿ ಅವರು ಹೇಳಿದ್ದು ಅಕ್ಷರಶಃ ಸತ್ಯ. ಏಕೆಂದರೆ ಬೆಂಗಳೂರು ಒಂದು ದುಬಾರಿ ನಗರ. ಇಲ್ಲಿ ಪ್ರೀಮಿಯಂ ಪ್ರದೇಶಗಳಲ್ಲಿ ಬಾಡಿಗೆಯೇ ₹55,000 ಅಥವಾ ಕಡಿಮೆ ಮಾಲಿಗೆಗಳಲ್ಲಿ ₹27,000 ಇರುತ್ತದೆ. ಇನ್ನು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಲ್ಲದೇ ಅನಿರೀಕ್ಷತಿ ವೈದ್ಯಕೀಯ ಖರ್ಚುಗಳು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೊರೆ ಎನ್ನಬಹುದಾಗಿದೆ. ದಿನಸಿ, ಸಾರಿಗೆ, ಮನರಂಜನೆ ಇವೆಲ್ಲವೂ ಹೆಚ್ಚುತ್ತಿರುವ ಬೆಲೆಯಲ್ಲಿ ಸುಲಭವಲ್ಲ.
ಹೀಗಾಗಿ ಬೆಂಗಳೂರಿನಂತಹ ಮಹಾನಗರಿಯಲ್ಲಿ ಎಷ್ಟೇ ಸಂಯೋಜಿತ ವೇತನವಿದ್ದರೂ, ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡರೆ ಕೆಲವು ತಿಂಗಳಲ್ಲಿ ಉಳಿತಾಯ ಮುಗಿಯುತ್ತದೆ. ಅಲ್ಲದೇ ಇಲ್ಲಿ ಆರ್ಥಿಕ ಸಂಕಷ್ಟವೂ ಉಂಟಾಗುತ್ತದೆ. ಉದ್ಯೋಗ ಭದ್ರತೆ ಇಲ್ಲದಿರುವುದರಿಂದ, ನಿರಂತರವಾಗಿ ಹೊಸ ಕೌಶಲ್ಯ ಕಲಿಯುವ ಒತ್ತಡ, ಹೆಚ್ಚಿನ ಆದಾಯ ಪಡೆಯುವ ಲೆಕ್ಕಾಚಾರ, ಖರ್ಚು ನಿಯಂತ್ರಣಇವೆಲ್ಲವೂ ಮಾನಸಿಕ ಶಾಂತಿಗೆ ಅಡ್ಡಿ ಉಂಟುಮಾಡುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಮಿತವ್ಯಯ ಜೀವನ ಇರಲೇಬೇಕು.
ಹೀಗಾಗಿ ಬೆಂಗಳೂರಿನ ನಿವಾಸಿಗಳು, ಸಂಪಾದನೆ ಹೆಚ್ಚು ಮಾಡಿಕೊಂಡರೆ ಸಾಲದು. ಜೀವನ ನಡೆಸೋಕೆ ಖರ್ಚುಗಳನ್ನು ಕೂಡ ಮಿತಿಯಲ್ಲಿ ಇರಿಸಿಕೊಳ್ಳಬೇಕು. ಖರ್ಚುಗಳನ್ನು ನಿಯಂತ್ರಿಸಿ ಉಳಿತಾಯ ಮಾಡಿಕೊಂಡು, ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿಕೊಂಡರೆ ಆರ್ಥಿಕ ಭದ್ರತೆಯೂ ಇರುತ್ತದೆ. ಆಧುನಿಕ ನಗರ ಜೀವನದಲ್ಲಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಮುಖ್ಯ. ಅಗತ್ಯ ಮತ್ತು ಐಷಾರಾಮಿ ಖರ್ಚುಗಳ ನಡುವೆ ಭೇದ ಮಾಡಬೇಕು. ಅನಿರೀಕ್ಷಿತ ಆರ್ಥಿಕ ತೊಂದರೆಗಳಾದ ಆರೋಗ್ಯ ತುರ್ತು ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವುದು ಮುಂತಾದ ಸಂದರ್ಭಗಳಲ್ಲಿ ಬಳಕೆಗೆ ಮೂಡಿಸುವಂತಹ ತುರ್ತು ನಿಧಿ ಇರಬೇಕು. ಕನಿಷ್ಟ 6-12 ತಿಂಗಳ ವೆಚ್ಚಗಳನ್ನು ಸಮರ್ಪಕವಾಗಿ ಉಳಿಸಿಕೊಳ್ಳುವುದು ಉತ್ತಮ.
ಒಟ್ಟಿನಲ್ಲಿ ಬೆಂಗಳೂರಿನಂಥ ಮಹಾನಗರದಲ್ಲಿ ಹೆಚ್ಚು ಸಂಪಾದನೆ ಇದ್ದರೂ, ಆರ್ಥಿಕ ಭದ್ರತೆ ಗ್ಯಾರಂಟಿ ಅಲ್ಲ. ಜೀವನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದರೆ, ಮಿತವ್ಯಯ, ಹೂಡಿಕೆ ಮತ್ತು ಸುಧಾರಿತ ಹಣಕಾಸು ವ್ಯವಸ್ಥಾಪನೆ ಕಡ್ಡಾಯ!


Click it and Unblock the Notifications