ಬೇಸಿಗೆ ಕಾಲ ಬಂತು ಅಂದರೆ ಬೆಂಗಳೂರಿನ ಜನರ ಕಷ್ಟ ಯಾರಿಗೂ ಬೇಡ. ಒಂದೆಡೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾದರೆ ಮತ್ತೊಂದೆಡೆ, ಅತಿಹೆಚ್ಚು ತಾಪಮಾನ ಮೈ ಸುಡುತ್ತದೆ. ಬೇಸಿಗೆಯ ಆರಂಭದಲ್ಲೇ ಮಹಾನಗರಿ ಬೆಂಗಳೂರು ಸೂರ್ಯನ ಕೆಂಗಣ್ಣಿಗೆ ಗುರಿಯಾಗಿದೆ. ಅಂದರೆ ಆರಂಭದಲ್ಲೇ ಹಗಲಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮೀರಿದೆ. ಕಳೆದ ಎರಡು ದಶಕಗಳಲ್ಲಿ ಆರು ವರ್ಷಗಳ ಬೇಸಿಗೆ ಕಾಲ ಕಠಿಣವಾಗಿ ಬೆಂಗಳೂರಿನ ಜನರನ್ನು ಕಾಡಿದೆ ಎನ್ನಲಾಗುತ್ತಿದೆ.
ಇನ್ನು 2016ರಲ್ಲಿ 76 ದಿನಗಳು ಅತಿಹೆಚ್ಚು ತಾಪಮಾನ ಅನುಭವಿಸಿದ ದಿನಗಳು ಎನ್ನಲಾಗಿದೆ.ಅಂದರೆ ವರ್ಷದಲ್ಲಿ ಉಷ್ಣಾಂಶ ನಿಜಕ್ಕೂ ಹೆಚ್ಚಾಗಿತ್ತು. ಏಕೆಂದರೆ ಜಗತ್ತಿನ ಹಲವು ಭಾಗಗಳಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಇತ್ತು. ಹೀಗಾಗಿ ಅದು ನಮ್ಮ ಮೇಲೂ ಪ್ರಭಾವ ಬೀರಿತ್ತು. ಜಾಗತಿಕ ತಾಪಮಾನ ಹೆಚ್ಚಾದಂತೆ ಬಿಸಿಲಿನಿಂದ ಕೂಡಿದ ಹವಾಮಾನ ದೌರ್ಬಲ್ಯಗಳು ಕೂಡ ಹೆಚ್ಚಾದವು. ಇದರಿಂದ ಮಾನವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತು. ಅದಲ್ಲದೇ ಕೃಷಿ ಮೇಲೂ ಬೇಸಿಗೆಯ ಕರಿ ನೆರಳು ಬಿದ್ದಿತ್ತು.

ಅಂದಹಾಗೆ ಎಕ್ಸ್ ಖಾತೆಯಲ್ಲಿ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿರುವ ಪ್ರಕಾರ, ಕರ್ನಾಟಕದಲ್ಲಿ.. ಅದರಲ್ಲೂ ಬೆಂಗಳೂರಿನಲ್ಲಿ 2020 ಮತ್ತು 2023ರ ನಡುವೆ ಬೇಸಿಗೆಯ ಬೇಗೆ ತುಲನಾತ್ಮಾಕವಾಗಿ ಸೌಮ್ಯವಾಗಿತ್ತು ಎನ್ನಲಾಗಿದೆ. ಆದರೆ 2024ರಲ್ಲಿ 68 ದಿನಗಳ ಕಾಲ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಡಿದೆ. ಹಾಗೆಯೇ 2014ರಲ್ಲಿ 71 ದಿನಗಳ ಕಾಲ ಕಠಿಣ ಉಷ್ಣಾಂಶ, 2019ರಲ್ಲಿ 74 ದಿನಗಳ ಕಾಲ ಕಠಿಣ ಉಷ್ಣಾಂಶ ಎದುರಾಗಿತ್ತು ಎನ್ನಲಾಗಿದೆ.
ಇನ್ನು ಕಳೆದ 20 ವರ್ಷಗಳಿಂದ ಬೆಂಗಳೂರು ಬೇಸಿಗೆ ಕಾಲದಲ್ಲಿ, ಸರಾಸರಿ 48 ದಿನಗಳ ಕಾಲ ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿದೆ. ಇದರ ನಡುವೆ ತಜ್ಞರು ಹೇಳುವುದೇನೆಂದರೆ, ಬೆಂಗಳೂರಿನಲ್ಲಿ ಬೇಸಿಗೆಯ ಮಳೆ ಕೂಡ ಅತಿಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಈ ಮಳೆಯ ಭವಿಷ್ಯವನ್ನು ಏಪ್ರಿಲ್‌ನಲ್ಲಿ ಅಂತಿಮವಾಗಿ ನಿರ್ಧಾರವಾಗುತ್ತದೆ ಎಂದು ಕರ್ನಾಟಕ ಹವಾಮಾ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಇತ್ತ LACD, ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರಾದ ರಾಜವೇಲ್ ಮಾಣಿಕ್ಕಂ ಅವರು, ಕರ್ನಾಟಕದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಅಂದರೆ ರಾಜ್ಯದಲ್ಲಿ ದಕ್ಷಿಣ ಮತ್ತು ದಕ್ಷಿಣ ಪೂರ್ವದ ಗಾಳಿ ಬೀಸುವುದರಿಂದ ತಾಪಮಾನ ಪರಿವರ್ತನೆಗಳನ್ನು ಪ್ರಭಾವಿಗೊಳಿಸುತ್ತವೆ ಎಂದಿದ್ದಾರೆ. ಅದರಂತೆ ಮಹನಾಗರಿ ಬೆಂಗಳೂರು ವರ್ಷದಿಂದ ವರ್ಷಕ್ಕೆ ಅತಿಹೆಚ್ಚು ತಾಪಮಾನವನ್ನು ಎದುರಿಸುತ್ತಲೇ ಇದೆ. ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 34 ರಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಅಂತಲೂ ಹೇಳಿದ್ದಾರೆ.
ಅಲ್ಲದೇ ರಾಜವೇಲ್ ಮಾಣಿಕ್ಕಂ ಅವರ ಪ್ರಕಾರ, ಮಧ್ಯಮ ದಕ್ಷಿಣ ಮತ್ತು ಆಗ್ನೇಯ ಮಾರುತಗಳು ರಾಜ್ಯದ, ಹವಾಮಾನ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತಿವೆ ಎನ್ನಲಾಗಿದೆ. ಅಂದರೆ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 17-20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದಾದರೆ ಚಿಕ್ಕಮಗಳೂರು, ಹಾಸನ, ಮಡಿಕೇರಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಮುಂತಾದ ಪ್ರದೇಶಗಳಲ್ಲಿ ಇದೇ ರೀತಿಯ ಪ್ರವೃತ್ತಿಗಳು ಕಂಡುಬರುತ್ತಿವೆ ಎಂದು ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಅಂದಹಾಗೆ ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಸೀಸನ್ ಆಗಿರಲಿ ಅದರ ತೀವ್ರತೆ ಒಂದು ಪಟ್ಟು ಹೆಚ್ಚಾಗಿಯೇ ಇರುತ್ತದೆ. ಉದಾಹರಣೆಗೆ ಬೇಸಿಗೆ ಕಾಲದಲ್ಲಿ ಬಿಸಿಲಿನ ತೀವ್ರತೆಯಿಂದ ಚರ್ಮದ ಸಮಸ್ಯೆ ಆಗುವುದು, ಬೆವರು ಹೆಚ್ಚಾಗುವುದು, ದಾಹ ಹೆಚ್ಚಾಗುವುದು ಸಾಮಾನ್ಯ. ಅದರಂತೆ ಚಳಿಗಾಲದಲ್ಲೂ ತೀವ್ರತೆ ಹೆಚ್ಚಾಗುವ ಕಾರಣ, ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳು ಉಲ್ಬಣವಾಗಿರುತ್ತವೆ. ಇನ್ನು ಮಳೆಗಾಲ ಬಂದರೆ ಬೇರೆಯದ್ದೇ ಸಮಸ್ಯೆ. ಕಾಂಕ್ರೀಟ್ ಕಾಡಿನಂತಿರುವ ಬೆಂಗಳೂರಿನಲ್ಲಿ ಮಳೆ ನೀರು ಹಾದು ಹೋಗಲು ಸರಿಯಾದ ದಾರಿಯಿಲ್ಲದೇ, ಲೇಔಟ್‌ಗಳ ತುಂಬೆಲ್ಲ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ ತಗ್ಗುಪ್ರದೇಶಗಳಲ್ಲಿರುವ ಮನೆಗಳು ಕೂಡ ಜಲಮಯವಾಗುತ್ತವೆ. ಮಳೆಗಾಲದಲ್ಲಿ ಬೆಂಗಳೂರು ನಿವಾಸಿಗಳು ಮನೆಯೊಳಗೆ ಇರುವುದಕ್ಕೂ ಕಷ್ಟ ಅನುಭವಿಸುತ್ತಾರೆ. ಹೀಗೆ ಬೆಂಗಳೂರಿನ ಜನರು ಎಲ್ಲಾ ಕಾಲದಲ್ಲೂ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಾರೆ.


Click it and Unblock the Notifications