ಬೆಂಗಳೂರಿಗೆ ಶೀಘ್ರ ರಿಂಗ್ ರೋಡ್, ಸುರಂಗ ಮಾರ್ಗ, ಮೆಟ್ರೋ ಯೆಲ್ಲೋ ಲೈನ್ ಲಭ್ಯ; ತಗ್ಗಲಿದೆ ಸಂಚಾರ ದಟ್ಟಣೆ

ಹೊಸ ವರ್ಷದ ಆರಂಭದೊಂದಿಗೆ ಬೆಂಗಳೂರು ಕೂಡಾ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರಕ್ಕೆ ಕಪ್ಪು ಚುಕ್ಕಿಯಂತೆ ಕಾಡುವ ಟ್ರಾಫಿಕ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ಹೌದು ಬೆಂಗಳೂರಿನಲ್ಲಿ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ೨೦೨೫ರ ಈ ವರ್ಷ, ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯನ್ನು ರೂಪಾಂತರಿಸುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಸಂಪೂರ್ಣವಾಗಿ ಕಾರ್ಯಾರಂಭವಾಗುವುದು ನಿಚ್ಚಳವಾಗಿದೆ.

ದಟ್ಟಣೆ  ಬೆಂಗಳೂರಿಗೆ ಹೊಸ ರೂಪ: ದಟ್ಟಣೆ ಕಡಿಮೆ, ಸುಗಮ ಸಂಚಾರ

ಅದರಲ್ಲೂ ಪ್ರಮುಖವಾಗಿ ರಿಂಗ್ ರೋಡ್ ಮತ್ತು ಮತ್ತು ಸುರಂಗ ಮಾರ್ಗ ಯೋಜನೆಗಳು ಸೇರಿದಂತೆ ಇತರ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡಲು, ಸಂಪರ್ಕವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೆಂಗಳೂರಿನ ಕೆಲವು ಗಮನಾರ್ಹ ಯೋಜನೆಗಳ ಪೈಕಿ ಮೆಟ್ರೋ ರೈಲು ಜಾಲದ ವಿಸ್ತರಣೆಯಿಂದ ಹಿಡಿದು ಸುರಂಗ ಮಾರ್ಗಗಳು ಮತ್ತು ರಿಂಗ್ ರಸ್ತೆಗಳ ನಿರ್ಮಾಣವನ್ನು ಒಳಗೊಂಡಿವೆ.

ಈ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಹಳದಿ ಮೆಟ್ರೋ ಮಾರ್ಗದ ಪೂರ್ಣಗೊಳಿಸುವಿಕೆ, ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ಮಾರ್ಗ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ (ಬಿಎಸ್‌ಆರ್‌ಪಿ), ಬೆಂಗಳೂರು ಸಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಮತ್ತು ಬೆಂಗಳೂರು ಪೆರಿಫಿರಲ್ ರಿಂಗ್ ರೋಡ್ (ಪಿಆರ್‌ಆರ್) ಒಳಗೊಂಡಿವೆ.

ಶೀಘ್ರ ನಮ್ಮ ಮೆಟ್ರೋ 'ಯೆಲ್ಲೋ ಲೈನ್'‌ ಸೇವೆ

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿ.ಎ೦.ಆರ್.ಸಿ.ಎಲ್) ಮಾಹಿತಿಯ ಪ್ರಕಾರ, ಹಳದಿ ಮಾರ್ಗ ಮೆಟ್ರೋ 2025 ರ ಜನವರಿ ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ. ಆದರೆ ಸಂಸದ ತೇಜಸ್ವಿ ಸೂರೂ ಅವರು ನೀಡದ ಮಾಹಿತಿ ಪ್ರಕಾರ ಮೊದಲ ಮೂರು ರೈಲು ಬೆಂಗಳೂರು ತಲುಪಿದ ಬಳಿಕ ಎಲ್ಲೋ ಮಾರ್ಗ ಕಾರ್ಯಚರಣೆ ಮಾಡಲಾಗುತ್ತದೆ ಎಂದಿದ್ದಾರೆ.

ಜ.6 ರಂದು ಮೊದಲ ರೈಲು ನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಬರಲಿದೆ. ಏಪ್ರಿಲ್‌ನಲ್ಲಿ ಮೂರನೇ ರೈಲು ತಿತಾಗಢ ರೈಲ್ ಸಿಸ್ಟಮ್ಸ್‌ ಕಳುಹಿಸುವ ಕಾರಣ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಯೆಲ್ಲೋ ಮಾರ್ಗ ಕಾರ್ಯಾಚರಣೆ ಮಾಡಬಹುದು. ಇನ್ನು ಡೀಪೋದೊಳಗೆ ಹಲವಾರು ಪರೀಕ್ಷೆಗಳು ಪೂರ್ಣಗೊಂಡಿದ್ದು, ಈ ಲೈನ್‌ನ ಒಟ್ಟು ಉದ್ದವು 18.82 ಕಿ.ಮೀ. ಇದ್ದು, ಇದರಲ್ಲಿ 16 ನಿಲ್ದಾಣಗಳಿವೆ.

ಸುರಂಗ ಮಾರ್ಗ ಜಾಲ

ಬೆಂಗಳೂರು ಶೀಘ್ರದಲ್ಲೇ ಸುರಂಗ ಮಾರ್ಗ ಜಾಲಕ್ಕೂ ತೆರೆದುಕೊಳ್ಳಲಿದೆ. ಉತ್ತರದ ಹೆಬ್ಬಾಳ ಫ್ಲೈಓವರ್‌ನಿಂದ ದಕ್ಷಿಣದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕಿಸುವ 40 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಜಾಲದ 18 ಕಿಲೋಮೀಟರ್ ಉತ್ತರ-ದಕ್ಷಿಣ ಕಾರಿಡಾರ್‌ ಸುರಂಗ ರಸ್ತೆ ಈ ವರ್ಷದಲ್ಲೇ ವಾಹನ ಸವಾಸ್ರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಸುರಂಗ ಯೋಜನೆಯ ಮೊದಲ ಹಂತವು ಹೆಬ್ಬಾಳ್‌ನಲ್ಲಿರುವ ಎಸ್ಟೀಮ್ ಮಾಲ್ ಜಂಕ್ಷನ್ ಮತ್ತು ಸಿಲ್ಕ್ ಬೋರ್ಡ್‌ನಲ್ಲಿರುವ ಕೆಎಸ್‌ಆರ್‌ಪಿ ಆವರಣದ ನಡುವಿನ ಉತ್ತರ-ದಕ್ಷಿಣ ಕಾರಿಡಾರ್ ಅನ್ನು ಒಳಗೊಂಡಿರುತ್ತದೆ.

ಸಬ್ ಅರ್ಬನ್ ರೈಲು ಯೋಜನೆ

ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಬೆಂಗಳೂರಿನಲ್ಲಿ ಶೀಘ್ರದಲ್ಲೇ ತೆರೆಯಲಿದೆ. ಯೋಜನೆಯ ಒಟ್ಟು ಉದ್ದ 148.17 ಕಿ.ಮೀ. ಮತ್ತು ಇದು ನಾಲ್ಕು ಕಾರಿಡಾರ್‌ಗಳು, 58 ನಿಲ್ದಾಣಗಳು ಮತ್ತು ಕೆ-ರೈಡ್ ನಿರ್ವಹಿಸುವ ಎರಡು ಡೀಪೋಗಳನ್ನು ಒಳಗೊಂಡಿದೆ.

ಬೆಂಗಳೂರು ರಿಂಗ್ ರೋಡ್ ಯೋಜನೆ

ಬೆಂಗಳೂರು ನಗರದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಹೆದ್ದಾರಿ 'ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌' (ಎಸ್‌ಟಿಆರ್‌ಆರ್‌) ಕಾಮಗಾರಿ ಬರದಿಂದ ಸಾಗುತ್ತಿದ್ದು, ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಯು ಬೆಂಗಳೂರಿನ ಸುತ್ತಲಿನ 12 ಪಟ್ಟಣಗಳನ್ನು ಸಂಪರ್ಕಿಸುವ 280.8 ಕಿ.ಮೀ. ಉದ್ದದ ನಿಯಂತ್ರಿತ ಪ್ರವೇಶದ ತ್ವರಿತ ಮಾರ್ಗವಾಗಿದೆ ಮತ್ತು ಇದು NH-948A ಭಾಗವಾಗಿದೆ. ಪಿಎಂ ಮೋದಿ ಅವರು ಮಾರ್ಚ್ 2024 ರಲ್ಲಿ ಈ ಯೋಜನೆಯ 80 ಕಿ.ಮೀ. ವಿಭಾಗವನ್ನು (ದಾಬಸ್ ಪೇಟೆ - ಹೊಸಕೋಟೆ) ಉದ್ಘಾಟಿಸಿದ್ದಾರೆ.

ಈ ಯೋಜನೆಯನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತಿದ್ದು, ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸುವ ಗಡುವನ್ನು ಹೊಂದಿದೆ. ಒಮ್ಮೆ ಪೂರ್ಣಗೊಂಡ ನಂತರ, ಈ ರಿಂಗ್ ರಸ್ತೆಯು ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ಜೊತೆಗೆ ಸೇರುತ್ತದೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಪರಿಸರ ಸೂಕ್ಷ್ಮ ವಲಯಗಳ ಮೂಲಕ ಎತ್ತರದ ರಸ್ತೆಯಾಗಿ ಹಾದುಹೋಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+