ಬೆಂಗಳೂರು ಶರವೇಗದಲ್ಲಿ ಅಭಿವೃದ್ದಿ ಕಾಣುತ್ತಿರುವ ನಗರ. ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಜನದಟ್ಟನೆ ಅಧಿಕವಾಗಿದ್ದು ಈಗಾಗಲೇ ರಾಜ್ಯಸರ್ಕಾರ ಬೆಂಗಳೂರಿಗೆ ಮತ್ತೊಂದು ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು ಇದಕ್ಕಾಗಿ ವಿಸ್ತೃತಾ ಯೋಜನೆ ವರದಿ ಸಿದ್ದಪಡಿಸುವ ತಯಾರಿಯಲ್ಲಿದೆ. ಹೀಗಿರುವಾಗ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಜನದಟ್ಟಣೆ , ಒತ್ತಡ ಎಷ್ಟಿರಬಹುದು ಎಂದು ನೀವೇ ಯೋಚಿಸಿ ನೋಡಿ.
ಇದಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯೂ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು , ಬೆಂಗಳೂರು ಹೊರವಲಯದಲ್ಲಿ ಎರಡು ರೈಲ್ವೆ ಟರ್ಮಿನಲ್ಗಳನ್ನು ತೆರೆಯಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ.. ಇದರ ಜೊತೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಪ್ಲ್ಯಾಟ್ ಫಾರಂ ಗಳನ್ನು ಸೇರಿಸಲು ಮುಂದಾಗಿದೆ.

ಈ ಬಗ್ಗೆ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದ್ದು, "ಕರ್ನಾಟಕದ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿರುವ ಕೆಎಸ್‌ಆರ್ ಬೆಂಗಳೂರು 1,500 ಕೋಟಿ ರೂಪಾಯಿಗಳ ಪುನರಾಭಿವೃದ್ಧಿ ಯೋಜನೆ ಮತ್ತು 180 ಕೋಟಿ ರೂಪಾಯಿ ವೆಚ್ಚದ ಎರಡು ಪ್ಲಾಟ್‌ಫಾರ್ಮ್‌ಗಳ ಸೇರ್ಪಡೆಯೊಂದಿಗೆ ಇನ್ಮುಂದೆ ಜನ ದಟ್ಟಣೆಯಿಂದ ಮುಕ್ತವಾಗುವ ಎಲ್ಲಾ ಸಾಧ್ಯತೆಗಳಿವೆ" ಎಂದು ಹೇಳಿದ್ಡಾರೆ.
ನಗರದ ರೈಲ್ವೆ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮತ್ತು ಅಸ್ತಿತ್ವದಲ್ಲಿರುವ ನಿಲ್ದಾಣಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ರೈಲ್ವೆ ಇಲಾಖೆ ಇದನ್ನು ನಿಭಾಯಿಸಲು ಕೆ.ಎಸ್.ಆರ್. ಬೆಂಗಳೂರು ಮತ್ತು ಯಶವಂತಪುರದಲ್ಲಿ ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸುವುದು, ಹೊಸ ಟರ್ಮಿನಲ್‌ಗಳನ್ನು ನಿರ್ಮಿಸುವುದು ಮತ್ತು ಕೆ.ಎಸ್.ಆರ್. ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕ್ಯಾಂಟನ್ಮೆಂಟ್‌ಗಳನ್ನು ಮರು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಎಲ್ಲಿ ಹೊಸ ಟರ್ಮಿನಲ್?
ಹೈದರಾಬಾದ್ ಇತ್ತೀಚೆಗೆ ಚಾರ್ಲಪಲ್ಲಿಯಲ್ಲಿ ಹೊಸ ರೈಲ್ವೆ ಟರ್ಮಿನಲ್ ಅನ್ನು ಪಡೆದುಕೊಂಡಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಬೆಂಗಳೂರಿಗೆ ಹೊಸ ಟರ್ಮಿನಲ್‌ಗಳ ಅಗತ್ಯವಿದೆ. ನಾವು ಮೊದಲಿಗೆ ವೈಟ್‌ಫೀಲ್ಡ್‌ನಲ್ಲಿ ಪರಿಗಣಿಸಿದ್ದೆವು ಆದರೆ ಅಲ್ಲಿ ಭೂಮಿ ಲಭ್ಯವಿಲ್ಲ. ನಾವು ದೇವನಹಳ್ಳಿಯಲ್ಲಿ 400 ಎಕರೆ ಭೂಮಿಯಲ್ಲಿ ಒಂದು ಟರ್ಮಿನಲ್ ನಿರ್ಮಿಸಲು ಯೋಜಿಸುತ್ತಿದ್ದೇವೆ. ರಾಮನಗರ, ಮಾಗಡಿ ಅಥವಾ ನೆಲಮಂಗಲದಲ್ಲಿ ಇನ್ನೊಂದು ಟರ್ಮಿನಲ್ ನಿರ್ಮಿಸುವ ಬಗ್ಗೆಯೂ ನಾವು ಪರಿಶೀಲಿಸುತ್ತಿದ್ದೇವೆ" ಎಂದು ಸಚಿವರು ವಿವರಿಸಿದ್ದಾರೆ. ಹೊಸ ರೈಲ್ವೆ ಸ್ಟೇಷನ್ ಕಾಮಗಾರಿಗೆ ತಯಾರಿ ಪ್ರಾರಂಭವಾಗಿದ್ದು ಸದ್ಯ ಅಧಿಕಾರಿಗಳಿಂದ ಜಾಗ ಗುರುತಿಸುವ ಕೆಲಸ ಆಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಜನ ದಟ್ಟಣೆ ತಪ್ಪಿಸುವಲ್ಲಿ ಈ ಟರ್ಮಿನಲ್ಗಳು ಸಹಕಾರಿಯಾಗಲಿವೆ ಎಂದು ಹೇಳಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ, ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿಯಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆ ಇದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications