ಈ ಭಾರಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಚಳಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಶಕಗಳ ನಂತರ ಡಿಸೆಂಬರ್ ತಿಂಗಳಿನಲ್ಲಿ ಭಾರಿ ಪ್ರಮಾಣದ ಚಳಿ ದಾಖಲಾಗಿದೆ ಎನ್ನಲಾಗ್ತಿದೆ. ಅದರಲ್ಲೂ ಈ ವಾರ ಚಳಿ ಪ್ರಮಾಣ 10 °C ಗೆ ಇಳಿಯುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಬಾರಿ ದಾಖಲಾದ ಚಳಿ ಪ್ರಮಾಣ 2010ರ ತಾಪಮಾನಕ್ಕಿಂತ ಕಡಿಮೆ ಇದ್ದು, 2011 ದಾಖಲೆಯನ್ನ ಕೂಡ ಮೀರಿಸುವಂತಹ ಚಳಿ ಈ ಬಾರಿ ದಾಖಲಾಗಿದೆ ಎಂದು ಭಾರತೀಯ ಹಾವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕನಿಷ್ಠ ತಾಪಮಾನ ಸುಮಾರು 15.7 °C ಇರುತ್ತದೆ. ಆದ್ರೆ ಈ ಬಾರಿ ತಾಪಮಾನ ಇಳಿಕೆಯಾಗಿದ್ದು, ಈ ಬಾರಿ ನಗರದಲ್ಲಿ ಕನಿಷ್ಠ 15.5 °C ದಾಖಲಾಗಿದೆ. ಇನ್ನು HAL ವಿಮಾನ ನಿಲ್ದಾಣ ಪ್ರದೇಶದಲ್ಲಿ 14.7 °C ಚಳಿ ದಾಖಲಾಗಿದ್ದು, ಹಾಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಪಮಾನವು 14.5 °Cಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಚಳಿ ದಾಖಲಾಗುವ ಸಾಧ್ಯೆತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಹಗಲಿನಲ್ಲಿ ಸುಮಾರು 27 °C ತಾಪಮಾನ ಇರಲಿದ್ದು, ಬೆಳಿಗ್ಗೆ ವೇಳೆ ಮಂಜು ಕವಿದ ವಾತವರಣ ಇರಲಿದೆ ಎನ್ನಲಾಗ್ತಿದೆ. ಹಾಗೆ ರಾತ್ರಿ ತಾಪಮಾನ 16 °Cಗೆ ಇಳಿಯುವ ನಿರೀಕ್ಷೆ ಇದೆ.
ತಾಪಮಾನ ಇಳಿಕೆಗೆ ಕಾರಣವೇನು?
ಈ ಬಾರಿ ಕರ್ನಾಟಕದಲ್ಲಿ ಹವಾಮನದಲ್ಲಿ ಭಾರಿ ವ್ಯತ್ಯಸಗಳು ಉಂಟಾದವು. ಅಲ್ಲದೆ ಕರಾವಳಿ ಭಾಗದಲ್ಲಿ ಚಂಡಮಾರುತಗಲಿಂದಾಗಿ ನಿರಂತರ ಮಳೆಯನ್ನ ಎದುರಿಸುವಂತಾಯಿತು. ಜೊತೆಗೆ ಇದರಿಂದಾಗಿ ಭಾರಿ ಪ್ರಮಾಣದ ಮಳೆ ಕೂಡ ದಾಖಲಾಗಿತ್ತು. ಈ ಹಿನ್ನೆಲೆ, ಇದು ಗಮನಾರ್ಹವಾಗಿ ತಾಪಮಾನ ಕುಸಿತಕ್ಕೆ ಕಾರಂವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತೋಯ ಹಾವಮಾನ ಇಲಾಖೆಯ ಐತಿಹಾಸಿಕ ಮಾಹಿತಿಯ ಪ್ರಕಾರ, ಈ ಹಿಂದೆ ಜನವರಿ 13, 1884 ರಂದು ಪಾದರಸವು(ಮರ್‌ಕ್ಯೂರಿ) 7.8 °C ಗೆ ಕುಸಿದಾಗ, ಬೆಂಗಳೂರಿನಲ್ಲಿ ಅತ್ಯಂತ ಶೀತ ತಾಪಮಾನ ದಾಖಲಾಗಿತತು ಎಂದು ಹವಾಮಾನ ಇಲಾಖೆ ತಿಳಿಸಿದ.
ಈ ಹಿಂದೆ ತಾಪಮಾನವು ಸಾಂದರ್ಭಿಕವಾಗಿ 9 °C ನಿಂದ 10 °C ವರೆಗೆ ಕಡಿಮೆಯಾಗಿದೆ, ಆದರೂ ಈ ನಿದರ್ಶನಗಳು ಅಪರೂಪ. ಇನ್ನು ನಗರಗಳಲ್ಲಿ ಜನವರಿ 2013 ರಲ್ಲಿ 8.3 °C ದಾಖಲಾಗಿತ್ತು. ಇದು ವರ್ಷಗಳಲ್ಲೇ ದಾಖಲಾದ ಅತ್ಯಂತ ತಂಪಾದ ತಾಪಮಾನ ಎಂದು ಹೇಳಲಾಗ್ತಿದೆ.
ಕಳೆದ ದಶಕದಲ್ಲಿ, ವಿಶೇಷವಾಗಿ ಉತ್ತರ ಭಾರತದಾದ್ಯಂತ ಹರಡುವ ಸಾಂದರ್ಭಿಕ ಶೀತ ಅಲೆಗಳ ಕಾರಣದಿಂದಾಗಿ ಹವಾಮಾನದ ಮಾದರಿಗಳಲ್ಲಿನ ಬದಲಾವಣೆಗಳನ್ನ ನಾವು ಕಾಣಬಹದು. ಅದಲ್ಲದೆ, ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ತಾಪಮಾನವು ಸಾಮಾನ್ಯವಾಗಿ ಹೆಚ್ಚರುತ್ತದೆ. ಉದಾಹರಣೆಗೆ ದೆಹಲಿ ಅಥವಾ ಶಿಮ್ಲಾಗಳಲ್ಲಿ 0°C ತಾಪಮಾನ ಕೂಡ ದಾಖಲಾಗಿದೆ.
ಬೆಂಗಳೂರು ಪ್ರಸ್ತುತ ಹವಾಮಾನ
ಸಧ್ಯಕ್ಕೆ ಬೆಂಗಳೂರಿನಲ್ಲಿ 23.61 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಮುಂಬರುವ ದಿನಗಳಲ್ಲಿ ಕನಿಷ್ಠ 15.3 ° C ಮತ್ತು ಗರಿಷ್ಠ 25.59 ° C ಆಗುವ ಮುನ್ಸೂಚನೆ ಇದೆ. ನಗರದ 34% ರಷ್ಟು ತೇವ ಇದ್ದು, ಗಂಟೆಗೆ 34 ಕಿ.ಮೀ. ಗಾಳಿಯ ವೇಗವನ್ನ ಹೊಂದಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 169 ಆಗಿದ್ದು, ಇದು ಮಧ್ಯಮ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತದೆ. ನಗರದ ನಿವಾಸಿಗಳು ಈ ವಾರ ಅತ್ಯಂತ ಚಳಿಯನ್ನ ನಿರೀಕ್ಷಿಸಬಹುದು, ಡಿಸೆಂಬರ್‌ನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿ ಮಂದಿ ಮಂಬರುವ ದಿನಗಳಲ್ಲಿ ಭಾರಿ ಚಳಿಯನ್ನ ಎದುರಿಸುವ ಮನ್ಸೂಚನೆ ಇದೆ. ಅದರಲ್ಲೂ ಬೆಂಗಳೂರು ನಗರ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸಾಮಾನ್ಯವಾಗಿ ಚಳಿ ್ರಾಣ ಹೆಚ್ಚಿರುತ್ತದೆ. ಅದರಲ್ಲೂ ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದಲ್ಲಿ ಭಾರಿ ಚಳಿಯನ್ನ ಎದುರಿಸುವಂತಾಗದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಶೀತ ಋತುವಿನಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಂಡಿದೆ, ತಾಪಮಾನವು ಕೆಲವೊಮ್ಮೆ ಹಿಂದೆ ಇದ್ದಂತೆ ಕಡಿಮೆಯಾಗುವುದಿಲ್ಲ. ಆದಾಗ್ಯೂ, ಚಳಿ ಪ್ರಮಾಣ ಹೆಚ್ಚಿರಲಿದೆ. ವಿಶೇಷವಾಗಿ ಚಳಿಗಾಲದ ಆರಂಭದಲ್ಲಿ. ಹಾಗೆ ಬೆಂಗೂರು ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ (3,000 ಅಡಿ) ಎತ್ತರದಲಲಿದ್ದು, ದಕ್ಷಿಣ ಭಾರತದ ಇತರ ಬಯಲು ಪ್ರದೇಶಗಳಿಗೆ ಹೋಲಿಸಿದರೆ ಅದರ ಅತೀ ಹೆಚ್ಚು ತಂಪಾದ ಹವಾಮಾನವನ್ನ ಹೊಂದಿದೆ.
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications