ಸಿಲಿಕಾನ್ ಸಿಟಿ ಬೆಂಗಳೂರು ಐಟಿ ವಲಯದ ದೈತ್ಯ ನಗರ..ಎಲ್ಲಿಯೂ ಸಲ್ಲದವರು ಬೆಂಗಳೂರಿನಲ್ಲಿ ಸಲ್ಲುವರು. ಅದಕ್ಕೆ ಬೆಸ್ಟ್ ಉದಾಹರಣೆಯೇ ಇಂದಿನ ಐಟಿ ಕ್ಷೇತ್ರದ ಬೆಳವಣಿಗೆ. ಇದು ಕೇವಲ ಒಂದು ಊರಲ್ಲ. ಯಾರೇ ಎಲ್ಲಿಂದಲೇ ಬಂದರೂ ಮಡಿಲು ನೀಡುವ ನಗರ. ದುಡಿಮೆಗೆ ಬುನಾದಿ ಹಾಕಿ ಕೊಡುವ ಬೆಂಗಳೂರಿನಲ್ಲಿ, ಬದುಕು ಸ್ವಲ್ಪ ಕಷ್ಟವೇ..ಆದರೆ ಅದನ್ನೆಲ್ಲ ಮೆಟ್ಟಿ ನಿಲ್ಲುವವರಿಗೆ ಬೆಂಗಳೂರು ಎಂದಿಗೂ ಸೋಲಿಸಲ್ಲ. ಇದೇ ಬೆಂಗಳೂರು ಈಗ ಮತ್ತೊಂದು ಸಾಧನೆಯನ್ನು ಮಾಡಿ, ದೆಹಲಿಯನ್ನೂ ಮೀರಿಸಿದೆ.

ಹೌದು, ಅದೇನೆಂದರೆ 2025ರ ಮೊದಲಾರ್ಧದದಲ್ಲಿ ಬೆಂಗಳೂರು ಉತ್ತುಂಗಕ್ಕೇರಿದೆ. ಸ್ಟಾರ್ಟ್‌ಅಪ್‌ಗಳಿಗೆ ಬಂದ ಹೂಡಿಕೆಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಹೊಸ ಸಂಸ್ಥೆಗಳಿಗೆ ಬಂಡವಾಳ ಗಳಿಕೆಯಲ್ಲಿ ಬೆಂಗಳೂರು ಮತ್ತೆ ತಾನೇ ಹಿಂದಿನ ಥರ ಮುಂಚೂಣಿಗೆ ಬಂದಿರುವುದು ಸ್ಪಷ್ಟವಾಗಿದೆ. 2025ರ ಜನೆವರಿಯಿಂದ ಜೂನ್ ವರೆಗೆ, ಬೆಂಗಳೂರು ಒಟ್ಟಾರೆ $3.9 ಬಿಲಿಯನ್ ಡಾಲರ್ ಹೂಡಿಕೆಯನ್ನು ಸೆಳೆದಿದೆ, ಇದು ಭಾರತದಲ್ಲಿ ನಡೆದ ಒಟ್ಟು ಹೂಡಿಕೆ ಒಪ್ಪಂದದ 40%ಕ್ಕಿಂತ ಹೆಚ್ಚು ಎನ್ನಲಾಗಿದೆ.
ಪ್ರಮುಖ ನಗರಗಳ ಪೈಕಿ ಬೆಂಗಳೂರು ಮುಂದಿನ ಸಾಲಿಗೆ:
ಬೆಂಗಳೂರು - 3.9 ಬಿಲಿಯನ್ ಡಾಲರ್
ದೆಹಲಿ NCR - 2.2 ಬಿಲಿಯನ್ ಡಾಲರ್
ಮುಂಬೈ - 1.3 ಬಿಲಿಯನ್ ಡಾಲರ್
ಈ ಅಂಕಿಅಂಶಗಳು ಬೆಂಗಳೂರನ್ನು ತಂತ್ರಜ್ಞಾನ ಕೇಂದ್ರವಾಗಿ ಇನ್ನಷ್ಟು ಬಲಪಡಿಸುತ್ತಿವೆ. ಮುಂಬೈ, ದೆಹಲಿ NCR ಅನ್ನು ಹಿಮ್ಮೆಟ್ಟಿಸಿ ಮತ್ತೆ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
ಕರ್ನಾಟಕದಲ್ಲಿ ಹೂಡಿಕೆಗೆ ಅನುಕೂಲಕರ ಪರಿಸರ:
ಬೆಂಗಳೂರು ಮತ್ತೊಮ್ಮೆ ಮುಂಚೂಣಿಗೆ ಬರಲು ಕಾರಣವೆಂದರೆ ಇಲ್ಲಿಯ ಆಧುನಿಕ ತಂತ್ರಜ್ಞಾನ ಕೇಂದ್ರಗಳು, ಸರ್ಕಾರದ ಬೆಂಬಲ, ಮತ್ತು ಅಭಿವೃದ್ಧಿಗೆ ಮಂಚವಾಗುವ ಪರಿಸರ. StartUp Karnataka, K-Tech ಮುಂತಾದ ಯೋಜನೆಗಳು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಇನ್ನೂ, ಬೆಂಗಳೂರಿನಲ್ಲಿ ಲಭ್ಯವಿರುವ ತಂತ್ರಜ್ಞರು, ವ್ಯಾಪಕ ಮಾರುಕಟ್ಟೆ, ಮತ್ತು ಬೃಹತ್ ಐಟಿ ಪ್ಲಾಟ್‌ಫಾರ್ಮ್‌ಗಳು ಹೊಸ ಕಂಪನಿಗಳ ಬೆಳವಣಿಗೆಗೆ ಸಹಕಾರಿಯಾಗಿವೆ.
ಜಾಗತಿಕ ಬಿಕ್ಕಟ್ಟಿನ ನಡುವೆ ಕರ್ನಾಟಕದ ಯಶಸ್ಸು:
ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ, ಬಡ್ಡಿದರ ಏರಿಕೆ, ಹಾಗೂ ಹೂಡಿಕೆಯಲ್ಲಿ ಆಳವಾದ ಆಪ್ತತೆ ಇದ್ದರೂ, ಕರ್ನಾಟಕ ಮಾತ್ರ ತನ್ನ ಸ್ಥಿರತೆಯೊಂದಿಗೆ ಮುಂದುವರೆದಿದೆ. ಇದು ಸರ್ಕಾರದ ನಿಲುವು, ಹಾಗೂ ಇಂಡಸ್ಟ್ರಿಯ ನಿಟ್ಟಿನಲ್ಲಿ ನಿರ್ಮಿತ ಅಭ್ಯಾಸಗಳಿಂದ ಸಾಧ್ಯವಾಗಿದೆ.
ಬೆಂಗಳೂರು ಈಗಾಗಲೇ ಹೊಸ ಬಂಡವಾಳವನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗತಿಕ ಹೂಡಿಕೆದಾರರು ತಮ್ಮ ಗಮನವನ್ನು ಇಲ್ಲಿ ಹರಿಸುವ ನಿರೀಕ್ಷೆಯಿದೆ. ಇದು ರಾಜ್ಯದ ಆರ್ಥಿಕತೆಗೆ ಹೊಸ ಚೇತನ ನೀಡಲಿದೆ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. 2025ರ ಮೊದಲಾರ್ಧದ ಅಂಕಿ ಅಂಶಗಳು ತೋರಿಸುತ್ತಿರುವುದು ಏನೆಂದರೆ - ಬೆಂಗಳೂರು ರಾಷ್ಟ್ರದ ಸ್ಟಾರ್ಟ್‌ಅಪ್ ಯಶಸ್ಸಿನ ಹೃದಯವಾಗಿದೆ. ಕರ್ನಾಟಕದ ತಂತ್ರಜ್ಞಾನ ಚಟುವಟಿಕೆ, ಸರ್ಕಾರದ ಬೆಂಬಲ, ಮತ್ತು ಯುವ ಪ್ರತಿಭೆಗಳ ಶಕ್ತಿಯಿಂದಾಗಿ, ದೇಶದ ಆರ್ಥಿಕ ಭವಿಷ್ಯ ಇಂದಿಗೂ ಇಲ್ಲಿಯ ಚಿಂತನೆಯಲ್ಲಿದೆ.


Click it and Unblock the Notifications