ಸೋಷಿಯಲ್ ಮೀಡಿಯಾ (Social Media) ಬಂದಮೇಲೆ ಏನೆಲ್ಲಾ, ಯಾವ ಸಂದರ್ಭದಲ್ಲಿ ವೈರಲ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ವಿಷಯಗಳಂತೂ ಕೊನೆಗೆ ಭಾರೀ ಚರ್ಚೆಗೆ ಗುರಿಯಾಗುತ್ತದೆ. ಅದೇ ರೀತಿ ಇದೀಗ ಇಲ್ಲೊಂದು ಯುವತಿಯ ಸರ್‌ನೇಮ್ ಚರ್ಚೆಗೆ ಗ್ರಾಸವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಆ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ಇದೀಗ ಕೊನೆಗೂ ವೀಕ್ಷಕರ ಪ್ರಶ್ನೆಗೆ ಆಕೆಯೇ ಉತ್ತರ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಯಾರದ್ದೇ ಹೆಸರಿರಲಿ, ಅದರ ಜೊತೆಗಿರುವ ಉಪನಾಮಗಳಿಗೆ ಅದರದ್ದೇ ಆದ ಕಥೆಗಳಿರುತ್ತದೆ.. ಇತ್ತೀಚೆಗೆ, ವಿಪ್ರ ಬೆಂಗಳೂರು ಎಂಬ ಯುವತಿಯ ಹೆಸರು ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಬೆಂಗಳೂರಿನಲ್ಲಿ ಬೆಳೆದ ವಿಪ್ರ, ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ನಗರದೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದರು. ಆದರೆ, 'ಬೆಂಗಳೂರು' ಎಂಬ ಅವರ ಉಪನಾಮದ ಮೂಲದ ಬಗ್ಗೆ ಅನೇಕರಿಗೆ ಪ್ರಶ್ನೆ ಮೂಡಿತ್ತು.
ವಿಡಿಯೋದಲ್ಲಿ, ವಿಪ್ರ ತಮ್ಮ ಕುಟುಂಬ, ವೈಯಕ್ತಿಕ ಗುರುತು ಹಾಗೂ ಈ ಅಡ್ಡಹೆಸರಿನ ಹಿಂದಿನ ಕಾರಣವನ್ನು ಸರಳವಾಗಿ ವಿವರಿಸಿದ್ದಾರೆ. ಈ ವಿಶಿಷ್ಟ ಕಲ್ಪನೆಯು ತಮ್ಮ ಅಜ್ಜನವರಿಂದಲೇ ಬಂದಿದ್ದು ಎಂದು ಅವರು ಹೇಳಿದ್ದಾರೆ.
ಅಜ್ಜನವರ ಚಿಂತನೆಯ ಬಗ್ಗೆ ವಿಪ್ರ ಹೇಳಿದ್ದೇನು?
"ನಾನು ಹಿಂದಿನ ವಿಡಿಯೋದಲ್ಲಿ ನನ್ನ ಅಡ್ಡಹೆಸರನ್ನು ಹೇಳಿದ್ದೆ? ಅದು ಬೆಂಗಳೂರು ಏಕೆ ಎಂದು ಬಹುಶಃ ನಾನು ವಿವರಿಸಬೇಕು. ನನ್ನ ಅಜ್ಜನವರು ತಮ್ಮ ಮಕ್ಕಳಿಗೆ ಅಡ್ಡಹೆಸರನ್ನು ಇಟ್ಟಿರಲಿಲ್ಲ; ಅಂದರೆ ನನ್ನ ತಂದೆಗೆ. ಅಡ್ಡಹೆಸರು, ಹಿನ್ನೆಲೆ, ಸ್ಥಾನಮಾನ ಇವೆಲ್ಲದರ ಆಧಾರದ ಮೇಲೆ ಜನರು ಅವರನ್ನು ನಿರ್ಣಯಿಸುತ್ತಾರೆ ಎಂದು ಅವರು ನಂಬಿದ್ದರು. ಅಲ್ಲಿಂದ ಇದು ಪ್ರಾರಂಭವಾಯಿತು." ಎಂದು ಹೇಳಿದ್ದಾರೆ.
ಉಪನಾಮಗಳು ಸಾಮಾನ್ಯವಾಗಿ ಜಾತಿ, ಹಿನ್ನೆಲೆ, ಸಾಮಾಜಿಕ ಸ್ಥಿತಿ ಅಥವಾ ಧಾರ್ಮಿಕತೆಯನ್ನು ಸೂಚಿಸುತ್ತದೆ. ಇದರಿಂದಾಗಿ ಜನರು ಮುಂಚಿತವಾಗಿ ತೀರ್ಮಾನಕ್ಕೆ ಬರುತ್ತಾರೆ ಮತ್ತು ಅದು ಮಕ್ಕಳ ಅಡ್ಡಿಯಾಗಬಹುದು ಎಂದು ಅವರು ನಂಬಿದ್ದರು. ಅದೇ ಕಾರಣದಿಂದ ಈ ರೀತಿ ಹೆಸರು ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬದವರು ಅರ್ಥಪೂರ್ಣ ಹಾಗೂ ಸರಳವಾದ ಉಪನಾಮವನ್ನು ಆಯ್ಕೆ ಮಾಡಿಕೊಂಡರು. ವಿಪ್ರ ಹೀಗೆ ಹೀಗೆ ಹೇಳುತ್ತಾರೆ, "ನಾನು ಹುಟ್ಟಿದಾಗ, ಉಪನಾಮ ಹೊಂದುವುದು ಕಡ್ಡಾಯವಾಗಿತ್ತು. ನಾನು ಬೆಂಗಳೂರಿನಲ್ಲಿ ಹುಟ್ಟಿದ ಕಾರಣ, ಅಂದಿನ 'Bangalore' ನನ್ನ ಉಪನಾಮವಾಯಿತು." ಎಂದು ಹೇಳಿದರು. ಹೀಗೆ ವಿಪ್ರ ಹುಟ್ಟಿ, ಬೆಳೆದ ಬೆಂಗಳೂರು ನಗರವೇ ಅವರ ಅಧಿಕೃತ ಗುರುತಿನ ಭಾಗವಾಯಿತು.
ವಿಡಿಯೋ ಅಪ್‌ಲೋಡ್ ಆದ ಕೂಡಲೇ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ವೀಕ್ಷಕರು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಅದನ್ನು 'ಬೆಂಗಳೂರು' ಎಂದು ಬದಲಾಯಿಸಲು ಮನವಿ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ವಿಪ್ರ ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು ಮೊದಲ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದರೆ, ಕ್ಲಾರಿಟಿ ಕೊಟ್ಟ ವಿಡಿಯೋ 50 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.


Click it and Unblock the Notifications