ಕಳೆದ ಕೆಲವೊಂದಿಷ್ಟು ದಿನಗಳ ಹಿಂದೆ ಬಿಬಿಎಂಪಿಯು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಶುಲ್ಕವನ್ನು ತೆಗೆದುಕೊಳ್ಳಲಿದೆ. ಈ ನೀತಿ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ ಎನ್ನಲಾಗಿತ್ತು. ಇದೀಗ ಏಪ್ರಿಲ್ ಕೂಡ ಬಂದಾಗಿದ್ದು ಬೆಂಗಳೂರು ನಗರ ನಿವಾಸಿಗಳ ಜೇಬಿಗೆ, ಇನ್ಮುಂದೆ ಹೆಚ್ಚಿನ ಬರೆ ಬೀಳುವುದಂತೂ ಸತ್ಯ. ಇಂದಿನಿಂದ ಎಲ್ಲಾ ಬೆಂಗಳೂರು ನಿವಾಸಿಗಳು ಘನತ್ಯಾಜ್ಯ ನಿರ್ವಹಣೆ ಬಳಕೆದಾರ ಶುಲ್ಕವನ್ನು ಪಾವತಿಸಬೇಕಿದೆ.

ಹೌದು, ಈ ಯೋಜನೆಯು ಎಲ್ಲಾ ಆಸ್ತಿ ಮಾಲೀಕರಿಂದ ತ್ಯಾಜ್ಯ ನಿರ್ವಹಣೆಗೆ ಶ್ರೇಷ್ಠ ಕೊಡುಗೆಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. ಆಸ್ತಿ ಹೊಂದಿರುವ ಮಾಲೀಕರು, ತಮ್ಮ ಆಸ್ತಿ ಗಾತ್ರಕ್ಕೆ ಅನುಗುಣವಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂದರೆ ಇನ್ನುಮುಂದೆ ಬೆಂಗಳೂರಿನಲ್ಲಿ 600 ಚದರ ಅಡಿ ವರೆಗೆ ಆಸ್ತಿ ಹೊಂದಿರುವ ಮಾಲೀಕರು, ₹10 ತಿಂಗಳ ಶುಲ್ಕವನ್ನು ಪಾವತಿಸುವರು, ಮತ್ತು 4,000 ಚದರ ಅಡಿಗಿಂತ ಹೆಚ್ಚಿನ ಆಸ್ತಿಗಳಿಗೆ ₹400 ವಿಧಿಸಲಾಗುತ್ತದೆ.
ನಗರಾಭಿವೃದ್ಧಿ ಇಲಾಖೆಯು ಈ ಬಳಕೆದಾರ ಶುಲ್ಕವನ್ನು ಬೆಂಗಳೂರಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸುವ ಮೂಲಕ ಅನುಮೋದನೆ ನೀಡಿದೆ. ಆದರೆ, BSWML ಈಗಾಗಲೇ ಘನ ತ್ಯಾಜ್ಯ ನಿರ್ವಹಣಾ ಸೆಸ್ ಹೆಸರಿನಲ್ಲಿ ತೆರಿಗೆ ಸಂಗ್ರಹಿಸುತ್ತಿರುವುದರಿಂದ, ಈ ಹೊಸ ಬಳಕೆದಾರ ಶುಲ್ಕ ಅವಶ್ಯಕತೆ ಇಲ್ಲ ಎಂದು ಹಲವರು ಅಸಹಮತಿ ವ್ಯಕ್ತಪಡಿಸಿದ್ದಾರೆ.ಈ ಹೊಸ ನೀತಿಯ ಪ್ರಕಾರ, ಅಪಾರ್ಟ್‌ಮೆಂಟ್ ಸಂಕೀರ್ಣಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ಸಂಸ್ಕರಣೆಗೆಂದು ಅದರದ್ದೇ ಆದ ಯಾವುದೇ ನೋಂದಾಯಿತ ಏಜೆನ್ಸಿ ಹೊಂದಿಲ್ಲ. ತಮ್ಮದೇ ಆದ ನೋಂದಾಯಿತ ಏಜೆನ್ಸಿ ಹೊಂದಿಲ್ಲದಿದ್ದರೆ, ತ್ಯಾಜ್ಯ ನಿರ್ವಹಣೆಗೆ ಪ್ರತಿ ಕಿಲೋಗ್ರಾಂ ₹12 ಶುಲ್ಕ ವಿಧಿಸಲಾಗುತ್ತದೆ. ಇದು ದೊಡ್ಡ ವಾಣಿಜ್ಯ ಸಂಸ್ಥೆಗಳ ಮೇಲೆ ಹೆಚ್ಚು ಆರ್ಥಿಕ ಹೊರೆ ತರಲಿದೆ.
ಬೆಂಗಳೂರು ನಗರದ ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಗೆ ₹1,400 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿದೆ. ಈ ಯೋಜನೆಯ ಅಡಿಯಲ್ಲಿ, ನಗರದ ಪ್ರಮುಖ ತ್ಯಾಜ್ಯ ನಿರ್ವಹಣಾ ಕೇಂದ್ರಗಳನ್ನು ಪರಿಷ್ಕರಿಸಲು ಮತ್ತು ಹೊಸ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
1. ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ವಿಸ್ತರಣೆ:
ಬೆಂಗಳೂರಿನಲ್ಲಿ 27 ಹೊಸ ತ್ಯಾಜ್ಯ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ನಗರದ ಹಲವು ಕಡೆಗಳಲ್ಲಿ ತ್ಯಾಜ್ಯವನ್ನು ತಾತ್ಕಾಲಿಕವಾಗಿ ಸಂಗ್ರಹಿಸಿ, ಸೂಕ್ತ ಪ್ರಕ್ರಿಯೆಗೆ ಒಳಪಡಿಸಲು ಈ ಕೇಂದ್ರಗಳು ಸಹಾಯ ಮಾಡುತ್ತವೆ. ಇದರಿಂದ ಅನಧಿಕೃತ ತ್ಯಾಜ್ಯ ಸಿಡುಕು ಪ್ರದೇಶಗಳ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ.
2. ತ್ಯಾಜ್ಯ ಮರುಪಡೆಯುವಿಕೆ ಸೌಲಭ್ಯಗಳು:
₹104 ಕೋಟಿ ವೆಚ್ಚದಲ್ಲಿ ಪ್ರತಿ ದಿನ 1,226 ಮೆಟ್ರಿಕ್ ಟನ್ ತ್ಯಾಜ್ಯವನ್ನು ಮರುಪಡೆಯುವ ಸಾಮರ್ಥ್ಯ ಹೊಂದಿರುವ ಹೊಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಬೇರೆ ಬೇರೆ ರೀತಿಯ ತ್ಯಾಜ್ಯಗಳನ್ನು ವಿಂಗಡಿಸಿ, ಪುನಃಬಳಕೆ ಮಾಡಬಹುದಾದ ವಸ್ತುಗಳನ್ನು ಮರುಪಡೆಯಲಾಗುತ್ತದೆ. ಈ ಮೂಲಕ ನಗರದಲ್ಲಿ ತ್ಯಾಜ್ಯ ಡಂಪ್‌ಯಾರ್ಡ್‌ಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಬಹುದು.
3. ಜೈವಿಕ-CNG ಉತ್ಪಾದನಾ ಘಟಕ:
ಇನ್ನು ಈ ಯೋಜನೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರ ಭಾಗವಾಗಿ 50 MTPD ಸಾಮರ್ಥ್ಯದ ಜೈವಿಕ-CNG ಉತ್ಪಾದನಾ ಘಟಕ ಆರಂಭಗೊಳ್ಳಲಿದೆ. ಈ ಪರಿಸರ ಸ್ನೇಹಿ ಘಟಕದಲ್ಲಿ ಆರ್ಗ್ಯಾನಿಕ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. ಹಾಗೂ ಅದನ್ನು ಕಂಪ್ರೆಸ್ಸಡ್ ನ್ಯಾಚುರಲ್ ಗ್ಯಾಸ್‌ಗೆ ಪರಿವರ್ತನೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಪೂರಕವಾದ ಪರಿಸರ ಸ್ನೇಹಿ ಇಂಧನ ಉತ್ಪಾದನೆ ಸಾಧ್ಯವಾಗುತ್ತದೆ. 300 MTPD ಸಾಮರ್ಥ್ಯದ ದೊಡ್ಡ ತ್ಯಾಜ್ಯ ಸಂಸ್ಕರಣಾ ಘಟಕ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಜೊತೆಗೂಡಿ ಆರಂಭಗೊಳ್ಳಲಿದೆ. ಇದರಿಂದ ಮೇಲ್ಮಟ್ಟದ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಮತ್ತು ಇಂಧನ ಉತ್ಪಾದನೆಯು ಬಲಪಡಲಿದೆ.


Click it and Unblock the Notifications