ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ ಕಸದ ನಿರ್ವಹಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಣ ಕಸ ಹಸಿ ಕಸ ಎರಡರ ನಿರ್ವಹಣೆ ಮಾಡಲು ಹೆಣಗಾಡುತ್ತಿದ್ದಾರೆ. ಗೆದ್ದಲಹಳ್ಳಿಯ ವಾರ್ಡ್ ಸಂಖ್ಯೆ 23ರ ಒಣತ್ಯಾಜ್ಯ ಕೇಂದ್ರದಲ್ಲಿ (DWCC) ರಾಶಿ ರಾಶಿ ಕಸ ಸಂಗ್ರಹವಾಗ್ತಿದೆ. ನಗರದಲ್ಲಿ ಒಣ ತ್ಯಾಜ್ಯ ನಿರ್ವಹಣೆ ಕುರಿತು ಜನರು ಕಳವಳ ವ್ಯಕ್ತಪಡಿಸುವಂತಾಗಿದೆ. ಆದ್ರೆ ವಾಸ್ತವವಾಘಿ ಇದೊಂದು ಸವಾಲಾಗಿ ಪರಿಣಮಿದಿದೆ.
ಹೌದು, ಬೆಂಗಳೂರಿನಲ್ಲಿ ಬಂದು ನೆಲೆಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಹಲವು ಉದ್ಯೋಗವಕಾಶಗಳನ್ನ ಕಲ್ಪಿಸುವುದರಿಂದ ದೇಶದ ಮೂಲೆ ಮೂಲೆಯಿಂದ ಜನ ಇಲ್ಲಿಗೆ ಬರುತ್ತಾರೆ. ಎಷ್ಟೋ ಜನರು ಉದ್ಯೋಗಕ್ಕಾಗಿ ಬಂದವರು ಬೆಂಗಳೂರಿನಲ್ಲೇ ಉಳಿದುಬಿಡುತ್ತಾರೆ. ಹೀಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಯಥೇಚ್ಛವಾಗಿ ಕಸ ಸಂಗ್ರಹಣೆ ಆಗ್ತಿದೆ. ಇನ್ನು ಇದರ ನಿರ್ವಹಣೆ ದಿನದಿನಕ್ಕೂ ಸವಾಲಾಗ್ತಿದೆ.

ಇದರ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ, ಹೊರ ರಾಜ್ಯಕ್ಕೆ ಹೋಗುತ್ತಿದ್ದ ಒಣ ತ್ಯಾಜ್ಯ ಕಳೆದ ಮೂರು ತಿಂಗಳಿನಿಂದ ಖರೀದಿದಾರರಿಲ್ಲದೆ ನಿಂದು ಹೋಗಿದೆ. ಇದರಿಂದಾಗಿ ಹಲವಾರು ಕೇಂದ್ರಗಳಲ್ಲಿ ಸಂಗ್ರಹವಾಗಿರುವ ಒಣ ತ್ಯಾಜ್ಯ ಹಾಗೆ ಉಳಿದಿದೆ.
ಇನ್ನು ತಜ್ಞರು ಹೇಳುವ ಪ್ರಕಾರ ಕಚ್ಚಾ ಬೆಲೆ ಇಳಿಕೆಯಾದಾಗ ಜಾಕತಿಕವಾಗಿ ಮರುಬಳಕೆ ಉತ್ಪಾದನೆಗಳ ಮೇಲೆ ಇದು ಹೊಡೆತ ಬೀಳುತ್ತದೆ. ಆಗ ಪ್ಲಾಸ್ಟಿಕ್ ಬೆಲೆ ಕೂಡ ಅಗ್ಗವಾಗುತ್ತದೆ. ಇಂತಹ ಹಲವು ಕಾರಣಗಳಿಂದಾಗಿ ಮರು ಉತ್ಪಾದನೆಗೆ ಒಣ ತ್ಯಾಜ್ಯವನ್ನ ಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯಾಗುತ್ತದೆ.
ದೊಮ್ಮಲೂರಿನ DWCC ಆಯೋಜಕರು, ಬಿಬಿಎಂಪಿಯ DWCC ಆಪರೇಟರ್‌ಗಳಿಗೆ ಹಣ ನೀಡದಿರುವುದೆ ಈ ಒಣ ತ್ಯಾಜ್ಯ ನಿರ್ವಹಣೆಗೆ ಸಮಸ್ಯೆಯಾಗಿ ಬಿಟ್ಟಿದೆ. ಇನ್ನು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಬಿಬಿಎಂಪಿಯೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳಿದರು.
ಇನ್ನೊಂದು ವಿಚಾರವೇನೆಂದ್ರೆ ಸಂಗ್ರಹಿಸಿದ ಒಣ ತ್ಯಾಜ್ಯದಲ್ಲಿ ಕೇವಲ 40% ಮಾತ್ರ ಮರುಬಳಕೆಗೆ ಹೋಗುತ್ತದೆ. ಬಹುಪದರದ ಪ್ಲಾಸ್ಟಿಕ್‌ಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಇತರ ತ್ಯಾಜ್ಯಗಳು ಮರುಬಳಕೆ ಮಾಡಲು ಬರುವುದಿಲ್ಲ. DWCCಗಳಲ್ಲಿ ಸಂಗ್ರಹಣೆಗಿರು ಈ ತ್ಯಾಜ್ಯಗಳು ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗಳು. ಇನ್ನು ಈ ತ್ಯಾಜ್ಯಗಳನ್ನ ಬಿಡದಿಯಲ್ಲಿನ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ತ್ಯಾಜ್ಯದಿಂದ ಶಕ್ತಿ (WTE) ಸ್ಥಾವರಕ್ಕೆ ತ್ಯಾಜ್ಯದಿಂದ ಪಡೆದ ಇಂಧನಕ್ಕಾಗಿ (RDF) ಕಳುಹಿಸಲಾಗುತ್ತದೆ.
ಕಸ ನಿರ್ವಹಣೆಗೆ ಪ್ರಸ್ತುತ ಸಮಸ್ಯೆಗಳೇನು?
ಬೆಂಗಳೂರಿನ ಹಲವು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ಒಣ ತ್ಯಾಜ್ಯವನ್ನ ಸಂಗ್ರಹಿಸುತ್ತಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಾರೆ. ಇದಕ್ಕೆ ಪ್ರಮುಖವಾಗಿ ಹಣಕಾಸಿನ ಸಮಸ್ಯೆ ಎದುರಾಗುತ್ತಿದೆ. ತ್ಯಾಜ್ಯ ತೆಗೆಯುವ ಸಂಸ್ಥೆಗಳನ್ನ ಉತ್ತೇಜಿಸಲು ಹಾಗೆ ಸ್ವಾಲಂಬಿಗಳಾಗಿ ಮಾಡಲು ಬಿಬಿಎಂಪಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್‌ನ ಪ್ರಕಾರ ಆರು ತಿಂಗಳವರೆಗೆ ಒಣ ತ್ಯಾಜ್ಯವನ್ನ ಸಂಗ್ರಹ ಮಾಡಲು ವಾಹನ ಹಾಗು ಹಣವನ್ನ ಒದಗಿಸಬೇಕಿತ್ತು. ಈ ಮೂಲಕ DWCC ಆಪರೇಟರ್‌ಗಳು ಸ್ವಯಂ-ಸಮರ್ಥತೆಯನ್ನು ಸಾಧಿಸಬೇಕಾಗಿತ್ತು ಮತ್ತು ಎಲ್ಲವನ್ನೂ ಸರಿಯಾಗಿ ನಿರ್ವಹಿಸಬೇಕಾಗಿತ್ತು.
ಆದ್ರೆ ಆ ಆರು ತಿಂಗಳಲ್ಲಿ ಕೆಲವು ಕೇಂದ್ರಗಳು ಮಾತ್ರ ತಮಗೆ ದೊರೆತ ಒಣತ್ಯಾಜ್ಯವನ್ನ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಆದ್ರೆ ಕೆಲವು ಕೇಂದ್ರಗಳು ಮಾತ್ರ ವಿಫಲವಾಗಿವೆ. 198 ವಾರ್ಡ್‌ಗಳಲ್ಲಿ ಬರೀ 30-35 ಕೇಂದ್ರಗಳು ಮಾತ್ರ ಸರಿಯಾದ ರೀತಿಯಲ್ಲಿ ಕಾರ್ಯವನ್ನ ನಿರ್ವಹಿಸಿವೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ 160ಕ್ಕೂ ಹೆಚ್ಚು DWCCಗಳಿವೆ. ಆದ್ರೂ ಕೂಡ, ಇವುಗಳು ನಿರ್ವಹಣೆಗೆ ಸಾಕಾಗುವುದಿಲ್ಲ. ಕಸದ ಗುತ್ತಿಗೆದಾರರು ಪ್ರತಿದಿನ ಸಂಗ್ರಹವಾಗುವ ಮಿಶ್ರ ಅಥವಾ ಒಣ ತ್ಯಾಜ್ಯವನ್ನು ವಿಂಗಡಿಸಲು ಮತ್ತು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶ, ಉಪಕರಣಗಳು ಮತ್ತು ಸಿಬ್ಬಂದಿಗಳು ಇಲ್ಲದಿರುವುದು ಕಸದ ನಿರ್ವಹಣೆ ಸಮಸ್ಯೆಯ ಮುಖ್ಯ ಕಾರಣವಾಗಿದೆ. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಕಸವನ್ನು ಸುಡುವುದಕ್ಕೆ ಮುಂದಾಗುತ್ತಾರೆ.
ಈ ಸಮಸ್ಯೆಯನ್ನ ತಡೆಯುವುದು ಹೇಗೆ?
ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹ ನಿರ್ವಹಣೆ ಹಲವು ಸವಾಲುಗಳನ್ನ ಎದುರಿಸುತ್ತಿದೆ. ಹೀಗಾಗಿ ಸಂಗ್ರಹಣಾ ಕೇಂದ್ರಗಳಲ್ಲಿ ತ್ಯಾಜ್ಯ ರಾಶಿ ಹಾಗೆ ಉಳಿದಿದೆ. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು, ಸಿಬ್ಬಂದಿ ಕೊರತೆ, ಸಂಪನ್ಮೂಲಗಳ ಕೊರತೆ ಸೇರಿದಂತೆ ಹತ್ತು ಹಲವು ಕಾರಣದಿಂದಾಗಿ ತ್ಯಾಜ್ಯ ಸಂಗ್ರಹಣೆಯನ್ನು ಸಮಯಕ್ಕೆ ಸರಿಯಾಗಿ ಮಾಡಲಾಗುವುದಿಲ್ಲ.
ಅಲ್ಲದೆ ಅನೇಕ ನಿವಾಸಿಗಳು ತ್ಯಾಜ್ಯವನ್ನು ಹಸಿ ಕಸ ಹಾಗೆ ಒನ ಕಸ ಎಂದು ಸರಿಯಾ ರೀತಿಯಲ್ಲಿ ವಿಂಗಡಸುವುದಿಲ್ಲ ಇದರಿಂದಾಗಿ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ತ್ಯಾಜ್ಯ ಸಂಗ್ರಹಕರ ಮೇಲೆ ಹೊರೆ ಆಗುತ್ತದೆ. ಸಂಗ್ರಹಣಾ ಕೇಂದ್ರಗಳಲ್ಲಿ ವಿಂಗಡಣೆ ಪ್ರಕ್ರಿಯೆ ಕೂಡ ನಿಧಾನವಾಗುತ್ತದೆ. ಹೀಗಾಗಿ ನಿವಾಸಿಗಳು ಸರಿಯಾದ ರೀತಿಯಲ್ಲಿ ಕಸವನ್ನ ವಿಂಗಡಿಸುವುದರಿಂದ ಇಂತಹ ಸಮಸ್ಯೆಗಳು ಮುಂದೆ ಬಾರದಂತೆ ತಡೆಯಬಹುದು.


Click it and Unblock the Notifications