ನಗರದಲ್ಲಿ ಹೆಚ್ಚುತ್ತಿವೆ ವಂಚನೆ ಪ್ರಕರಣ; ಕ್ಯಾಬ್‌ ಡ್ರೈವರ್‌ಗಳಿಗೆ ಹಣ ಪಾವತಿಸುವಾಗ ಇರಲಿ ಎಚ್ಚರ!

ಈಗಂತೂ ನಾವು ಅನುಕೂಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನಗಳನ್ನ ಬಳಸುತ್ತೇವೆ. ಪ್ರಾಣಿಸಲು, ಆಹಾರಕ್ಕಾಗಿ ಹೀಗೆ ಹಲವು ಕಡೆ ತಂತ್ರಜ್ಞಾನವನ್ನ ಬಳಕೆ ಮಾಡುತ್ತೇವೆ. ಅದರಲ್ಲು ಈಗ ಪ್ರಯಾಣಕ್ಕಾಗಿ ಹಲವು ಆಪ್‌ಗಳು ಬಂದಿರುವುದರಿಂದ ಪ್ರತಿಯೊಬ್ಬರು ಕೂಡ ಆ ಆಪ್‌ಗಳ ಮೂಲಕ ಬೈಕ್‌, ಆಟೋ, ಕಾರುಗಳನ್ನ ಬುಕ್‌ ಮಾಡಿಕೊಂಡು ಬೇರೆ ಬೇರೆ ಪ್ರದೇಶಗಳಿಗೆ ತೆರಳುತ್ತಾರೆ.

ಹೀಗಿರುವಾಗ ಬೆಂಗಳೂರು ನಿವಾಸಿಯೊಬ್ಬರು ತಾವು ಕ್ಯಾಬ್‌ ಬುಕ್‌ ಮಾಡಿಕೊಂಡು ತೆರಳುತ್ತಿದ್ದಾಗ ಅವರಿಗಾದಂತ ಅನುಭವದ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಜನರನ್ನ ಯಾಮಾರಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ಹೇಳಿದ್ದಾರೆ. ಕ್ಯಾಬ್‌ನಲ್ಲಿ ಪ್ರಯಾಣ ಮಾಡುವ ವೇಳೆ ಡ್ರೈವರ್‌ಗಳು ಜನರ ಬಳಿ ಹೇಗೆ ಮೋಸ ಮಾಡಿ ಹಣವನ್ನ ಕೀಳುತ್ತಾರೆ ಎನ್ನುವುದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ನಾವು ವಂಚನೆಗೊಳಗಾದ ಶಾಂತವಾಗಿ ಯೋಚಿಸಿ ಅದರಿಂದ ಪಾರಗಬೇಕು. ಜೊತೆಗೆ ನಾವು ಪ್ರಯಾಣಿಸುವ ವೇಳೆ ಎಚ್ಚರಿಕೆಯಿಂದಿದ್ದರೆ ಇಂತಹ ಮೋಸಗಳಿಂದ ನಾವು ಪಾರಾಗಬಹುದು ಎನ್ನುವುದಕ್ಕೆ ಇವರ ಕಥೆ ಮಾದರಿಯಾಗಲಿದೆ.

ಕ್ಯಾಬ್‌ ಡ್ರೈವರ್‌ಗಳಿಗೆ ಹಣ ಪಾವತಿಸುವಾಗ ಎಚ್ಚರಿಕೆ ಇರಲಿ!

ಬೆಂಗಳೂರು ನಿವಾಸಿಯೊಬ್ಬರು ಸೆಂಟ್ರಲ್‌ ಕಾಲೇಜಿನಿಂದ ಹೂಡಿಗೆ ಹೋಗಲು ರಾಪಿಡೋದಲ್ಲಿ ಕ್ಯಾಬ್‌ ಬುಕ್‌ ಮಾಡಿ ಅದರಲ್ಲಿ 385 ರೂ. ದರದ ಸೇವೆಯನ್ನ ಆಯ್ಕೆಮಾಡಿದ್ದರು. ಜೊತೆಗೆ ಆ ಚಾಲಕನಿಗೆ 2.6 ಕಡಿಮೆ ರೇಟಿಂಗ್‌ ಇರುವುದನ್ನು ಕೂಡ ಅವರು ಗಮನಿಸಿದ್ದರು. ಇದರಿಂದಾಗಿ ಮೊದಲು ಕಳವಳ ಉಂಟಾದರೂ ಕೂಡ ನಂತರ ಮಳೆ ಹಾಗೆ ಹತ್ತಿರ ಯಾವುದೇ ಕ್ಯಾಬ್‌ ಇಲ್ಲದ ಕಾರಣ ಅದೇ ಕ್ಯಾಬ್‌ಅನ್ನು ಬುಕ್‌ ಮಾಡಿದ್ದರು.

ಇನ್ನು ಅವರು ಸ್ಥಳವನ್ನ ತಲುಪಿದಾಗ ಚಾಲಕ 600ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಸಾಕ್ಷಿಯಾಗಿ ಸ್ಕ್ರೀನ್‌ಶಾಟ್‌ಗಳನ್ನ ತೋರಿಸಿ ಹಣ ನೀಡುವಂತೆ ಆಗ್ರಹಿಸಿದನು. ತಕ್ಷಣ ಪ್ರಯಾಣಿಕರು ಅದು ಹಿಂದಿನ ರೈಡ್‌ದೆಂದು ಗುರುತಿಸಿದರು. ಹಾಗೆ ಅವರ ಅಪ್ಲಿಕೇಶನ್‌ಅನ್ನು ಪರಿಶೀಲನೆ ಮಾಡಿದ್ರು. ಅದರಲ್ಲಿ ಯಾವುದೇ ಬದಲಾವಣೆಗಳು ಇಲ್ಲದೇ ಇನ್ನೂ ಪ್ರಯಾಣಿಸುತ್ತಿದ್ದಾರೆ ಎನ್ನುವಂತೆ ತೋರಿಸುತ್ತಿತ್ತು.

ಪ್ರಯಾಣಿಕರನ್ನ ದಾರಿ ತಪ್ಪಿಸಲು ಪ್ರಯತ್ನಿಸಿದ ಚಾಲಕ

ಚಾಲಕ ತನ್ನ ಖಾತೆಯಿಂದ ಲಾಗ್ ಔಟ್ ಮಾಡಿ ಬೇರೊಂದಕ್ಕೆ ಲಾಗ್ ಇನ್ ಮಾಡಿದ. ಆಗ ಪ್ರಯಾಣದ ಇತಿಹಾಸ ಕಾಲಿ ಇತ್ತು, ಹೀಗಾಗಿ ಅದನ್ನೇ ಸಾಕ್ಷಿಯಾಗಿ ಪ್ರಸ್ತುತಪಡಿಸಿ ಮತ್ತೆ ಪ್ರಯಾಣಿಕರು ಹೆಚ್ಚು ಹಣ ನೀಡುವಂತೆ ಆಗ್ರಹಿಸಿದ. ಸರ್ವರ್ ಸಮಸ್ಯೆಯೆಂದು ಹೇಳಿ ಅದನ್ನೇ ನೆಪವಾಗಿಟ್ಟುಕೊಂಡು ಅಧಿಕ ಹಣವನ್ನ ಒತ್ತಾಯಿಸುತ್ತಲೇ ಇದ್ದರು. ಹಗರಣವನ್ನು ಗುರುತಿಸಿದ ಪ್ರಯಾಣಿಕರು ಮತ್ತೆ ಸಾಕ್ಷಿಗಳನ್ನಿಟ್ಟು ಮಾತನಾಡಲು ಆರಂಭಿಸಿದರು. ಪರಿಸ್ಥಿತಿ ಹದಗೆಡಲು ಬಿಡದೇ ಚಾಲಕನ ವಿವರಣೆಯೊಂದಿಗೆ ಅವರು ಸಹಾನುಭೂತಿಯಿಂದಲೇ ವರ್ತಿಸಿದರು.

ನಾನು ಇಷ್ಟು ಹೊತ್ತು ನಿಮಗೆ ವಿವರಣೆಯನ್ನ ನೀಡಿದ್ದೇನೆ ನಾವು ನನ್ನ ಅಪ್ಲೀಕೇಶನ್‌ನಲ್ಲಿ ತೋರಿಸಿದ ಹಣವನ್ನೇ ನಾನು ಅಂತಿಮವಾಗಿ ಪಾವತಿಸುತ್ತೇನೆ. ಅದು ರೂ 1,000 ಆಗಿದ್ದರೂ ಸಹ ನಾನು ಪಾವತಿಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ ಬಗ್ಗೆ ತಮ್ಮ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅವರು ಅಪ್ಲಿಕೇಶನ್‌ನಿಂದ ಲಾಗ್ ಇನ್ ಮಾಡಿ ಮತ್ತೆ ಲಾಗ್‌ ಔಟ್ ಆಗಿದ್ದರು. ತನ್ನ ಮನೆಯ ವೈಫೈ ಕನೆಕ್ಟ್‌ ಮಾಡಿಕೊಂಡರು ಹಾಗೆ Rapidoನ SOS ಸೇವೆಗೆ ಕರೆ ಮಾಡುವಂತೆ ನಟಿಸಿದರು.

20 ನಿಮಿಷಗಳ ವಾದದ ನಂತರ ಅವರು 385 ರೂಗಳನ್ನು ಈಗ ಪಾವತಿಸುತ್ತೇನೆ ಹಾಗೆ ತಮ್ಮ ಅಪ್ಲಿಕೇಶನ್ ಅಪ್‌ಡೇಟ್‌ ಮೇಲೆ ಉಳಿದ ಮೊತ್ತವನ್ನು Google Pay ಮೂಲಕ ಕಳುಹಿಸುತ್ತೇನೆ ಎಂದರು. ಚಾಲಕ ಒಲ್ಲದ ಮನಸ್ಸಿನಿಂದ ಮೂಲ ದರವನ್ನು ಸ್ವೀಕರಿಸಿ ಹೊರಟು ಹೋದ. ಸ್ವಲ್ಪ ಸಮಯದ ನಂತರ, ಅಪ್ಲಿಕೇಶನ್ 385 ರೂ. ಎಂದು ನಿಖರವಾದ ದರವನ್ನ ತೋರಿಸಿತು.

ರೆಡ್ಡಿಟ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಈ ಪ್ರಯಾಣಿಕರ ಕಥೆಯು ರೆಡ್ಡಿಟ್‌ನಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಬಳಕೆದಾರರು ಅವರ ಶಾಂತ ವರ್ತನೆ ಮತ್ತು ಚಾತುರ್ಯವನ್ನು ಅಭಿನಂದಿಸಿದರು.
ಒಬ್ಬ ಬಳಕೆದಾರ, ಈ ರೀತಿಯ ವಂಚನೆಗಳು ಸಂಭವಿಸುವುದು ದುರದೃಷ್ಟಕರ, ಆದರೆ ನೀವು ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ಚಾಲಕನಿಗೆ ಪಾಠ ಕಲಿಸಿದ್ದೀರಿ ಎಂದರು. ಮತ್ತೊಬ್ಬರು, ಪರಿಸ್ಥಿತಿಯನ್ನು ನಿಭಾಯಿಸುವ ನಿಮ್ಮ ವಿಧಾನವು ಪ್ರಶಂಸನೀಯವಾಗಿದೆ. ಚಾಲಕನ ವಿರುದ್ಧ ದೂರು ದಾಖಲಿಸುವುದರಿಂದ ಇತರರಿಗೆ ಇದೇ ರೀತಿಯ ಘಟನೆ ಎದುರಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಹಾಗೆ ಇನ್ನು ಕೆಲವರು ಕಡಿಮೆ ದರದ ಚಾಲಕರಿಗೆ ಆಗುವಂತಹ ಅಪಾಯಗಳ ಬಗ್ಗೆಹೇಳಿದರು. ಅಂತಹ ಪ್ರಯಾಣದ ಸಮಯದಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕೆಂದು ಈ ಕಥೆ ಒತ್ತಿಹೇಳುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+