ಫ್ಲಿಪ್ ಕಾರ್ಟ್‌ನಲ್ಲಿ ಸದ್ಯ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡು ಖುಷಿ ಪಡುತ್ತಿದ್ದಾರೆ. ಆದರೆ ಬೆಂಗಳೂರಿನ ಓರ್ವ ಮಹಿಳೆಗೆ ಈ ಮೂಲಕ ನಿರಾಸೆ ಆಗಿದೆ. ಹಾಗಿದ್ದರೆ ಆಗಿದ್ದೇನು? ಇಲ್ಲಿದೆ ವರದಿ.
ಬೆಂಗಳೂರಿನ ಒಬ್ಬ ಮಹಿಳೆ ಫ್ಲಿಪ್ ಕಾರ್ಟ್‌ನಲ್ಲಿನ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಐಪೋನ್-15 ಬುಕ್ ಮಾಡುತ್ತಾರೆ. ಅದು ಸಹ 256 ಇಂಟರ್ನಲ್ ಸ್ಟೋರೇಜ್ ಇರುವ ಮೊಬೈಲ್. ಈ ಮಹಿಳೆ ಪಾರದರ್ಶಕತೆಯನ್ನು ಖಚಿತ ಪಡಿಸಿಕೊಳ್ಳಲು ಓಪನ್ ಬಾಕ್ಸ್ ಡಿಲಿವರಿ (OBD) ಆಯ್ಕೆ ಮಾಡಿದ್ದಾರೆ. ಆದರೆ ಡಿಲಿವರಿ ಮನುಷ್ಯ ಓಪನ್ ಬಾಕ್ಸ್ ಡಿಲಿವರಿ ಮಾಡಲು ನಿರಾಕರಿಸಿದ್ದಾನೆ. ಡಿಲಿವರಿ ಮನುಷ್ಯ ತಾನು ತಂದಿದ್ದ ಪಾರ್ಸಲ್ ಮಹಿಳೆಗೆ ನೀಡಿದ್ದಾನೆ.

ಬಾಕ್ಸ್ ಓಪನ್ ಮಾಡಲು ನಿರಾಕರಣೆ
ಈ ದೃಶ್ಯವನ್ನು ಅವರ ಸಹೋದರಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ. ಈ ದೃಶ್ಯದಲ್ಲಿ ಡಿಲಿವರಿ ಹುಡುಗ ಪ್ಯಾಕೇಜ್ ಓಪನ್ ಮಾಡಲು ಹಿಂದೇಟು ಹಾಕಿರುವುದು ಸೆರೆಯಾಗಿದೆ. ಪಾರ್ಸಲ್ ಆರ್ಡರ್ ಮಾಡಿದವರು ಒಳಗಡೆ ಏನಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳದೇ ಪಾರ್ಸಲ್ ಪಡೆಯಲು ನಿರಾಕರಿಸಿದ್ದಾರೆ.
ಫ್ಲಿಪ್ ಕಾರ್ಟ್ ಸ್ಕ್ಯಾಮ್ ಹುಷಾರಾಗಿರಿ ಎಂದು ರೆಡ್‌ಇಟ್ ಪೋಸ್ಟ್ ವರದಿ ಮಾಡಿದೆ. ನನ್ನ ಸಹೋದರಿ ಐಫೋನ್15 ಫ್ಲಿಪ್ ಕಾರ್ಟ್‌ನಲ್ಲಿ ಆರ್ಡ್ ಮಾಡಿದ್ದರು. ಅದು ಸಹ ಓಪನ್ ಬಾಕ್ಸ್ ಡಿಲಿವರಿ ಎಂದು ನಮೂದಿಸಿದ್ದರು. ಅಲ್ಲದೆ ಡಿಲಿವರಿ ಮನುಷ್ಯ ದೊಡ್ಡ ಪ್ಯಾಕೇಜ್ ತಂದಿದ್ದ. ನಾವು ತಿಳಿಸಿದಂತೆ ಆತ ಬಾಕ್ಸ್ ಓಪನ್ ಮಾಡಲಿಲ್ಲ. ಅವನು ಈ ಬಾಕ್ಸ್ ಹೀಗೆ ಪಡೆಯಿರಿ ಎಂದು ಒತ್ತಾಯಿಸಿದ್ದಾನೆ ಎಂದು taau_47 ಬರೆದುಕೊಂಡಿದ್ದಾರೆ.

ಡಿಲಿವರಿ ಬಾಯ್ ಬೇರೆಯವರಿಗೆ ಕಾಲ್ ಮಾಡಿ ನೀಡಿದ್ದಾನೆ. ಆತ ನಮ್ಮ ಬಳಿ ನೀವು ಹೇಳುತ್ತಿರುವ ಆಯ್ಕೆಗಳು ಇಲ್ಲ ಎಂದು ತಿಳಿಸಿದ್ದಾರೆ. ಹೀಗೆ ರೆಕಾರ್ಡ್ ಮಾಡಿದನ್ನು ಕಂಡು ಡಿಲಿವರಿ ಬಾಯ್ ಥಂಡಾ ಹೊಡೆದಿದ್ದಾನೆ. ಅಲ್ಲದೆ ರೆಕಾರ್ಡ್ ಮಾಡುತ್ತಿರುವುದಾಗಿ ತನ್ನ ಜೊತೆಗಾರನಿಗೂ ಹೇಳಿದ್ದಾನೆ. ಅಲ್ಲದೆ ಈ ಪ್ಯಾಕೇಜ್ ಪಡೆಯಲು ತಾವು ನಿರಾಕರಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.
ಇನ್ನು ರಿಡಿಟ್‌ಪೋಸ್ಟ್‌ನಲ್ಲಿ ಮತ್ತೊಬ್ಬ ಬಳಕೆದಾರ ಮತ್ತೊಂದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನಾನು ಒಂದು ಚಿಕ್ಕ ವಸ್ತುವನ್ನು ಆರ್ಡರ್ ಮಾಡಿದ್ದೆ. ಡಿಲಿವರಿ ಬಾಯ್ ಅದನ್ನು ತೆರೆದು ತೋರಿಸಲು ಒಪ್ಪಿದ. ಹೀಗಾಗಿ ನಾನು ಬುಕ್ ಮಾಡಿದ್ದ ಡಿಲಿವರಿ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಎಚ್ಚರವಹಿಸಿ
ಇ ಕಾಮರ್ಸ್ ವೆಬ್ ಸೈಟ್‌ಗಳಲ್ಲಿ ಭಾರೀ ಸೇಲ್ ನಡೆಯುತ್ತಿದೆ. ಈ ಸೇಲ್‌ಗಳಲ್ಲಿ ಗ್ರಾಹಕ ತನಗೆ ಇಷ್ಟವಾದ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾನೆ. ಇನ್ನು ಕಡಿಮೆ ಬೆಲೆಯ ವಸ್ತುಗಳು ಲೇಟ್ ಆಗಿ ಡಿಲಿವರಿ ಆಗುತ್ತಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಗ್ರಾಹಕರು ಇನ್ನು ವಸ್ತುಗಳನ್ನು ಡಿಲಿವರಿ ಪಡೆಯುವಾಗ ಎಚ್ಚರವಹಿಸಿ. ಬಾಕ್ಸ್ ಓಪನ್ ಮಾಡಿ, ನೀವು ಆರ್ಡರ್ ಮಾಡಿದ ವಸ್ತು ಇದೇನಾ ಎಂದು ಖಚಿತ ಪಡಿಸಿಕೊಳ್ಳಿ. ಬಳಿಕ ವಸ್ತುವನ್ನು ಪಡೆಯಿರಿ.


Click it and Unblock the Notifications